ಅಫ್ಗಾನ್‌ ಮಹಿಳೆಯರು ಮತ್ತೊಬ್ಬರಿಗೆ ಕೇಳುವಂತೆ ಜೋರಾಗಿ ಪ್ರಾರ್ಥನೆ ಮಾಡುವಂತಿಲ್ಲ…!

ಅಫ್ಗಾನಿಸ್ತಾನ ಮಹಿಳೆಯರು ಜೋರಾಗಿ ಪ್ರಾರ್ಥನೆ ಮಾಡುವುದು ಮತ್ತು ಇತರ ಮಹಿಳೆಯರ ಮುಂದೆ ಕುರಾನ್‌ ಪಠಣ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ. ವರ್ಜೀನಿಯಾ ಮೂಲದ ಅಫ್ಘಾನಿಸ್ತಾನದ ಸುದ್ದಿ ವಾಹಿನಿಯ ವರದಿಯ ಪ್ರಕಾರ ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಗಟ್ಟಿಯಾಗಿ ಪ್ರಾರ್ಥಿಸುವಂತಿಲ್ಲ ಎಂದು ಹೊಸ ನಿಯಮವನ್ನೂ ಜಾರಿಗೆ ತರಲಾಗಿದೆ. ಅಮು ಟಿವಿ ಪ್ರಕಾರ, ಸದ್ಗುಣ ಪ್ರಚಾರ ಮತ್ತು ದುಷ್ಕೃತ್ಯಗಳ ತಡೆಗಟ್ಟುವಿಕೆ … Continued

ಗಡ್ಡ ಬೆಳೆಸದ ಕಾರಣಕ್ಕೆ 280ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ವಜಾಗೊಳಿಸಿದ ತಾಲಿಬಾನ್ ನೈತಿಕ ಸಚಿವಾಲಯ

ಕಾಬೂಲ್: ತಾಲಿಬಾನ್‌ನ ನೈತಿಕತೆ ಸಚಿವಾಲಯವು ಗಡ್ಡವನ್ನು ಬೆಳೆಸದ ಕಾರಣಕ್ಕಾಗಿ ಭದ್ರತಾ ಪಡೆಯ 280 ಕ್ಕೂ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ ಮತ್ತು ಕಳೆದ ವರ್ಷದಲ್ಲಿ “ಅನೈತಿಕ ಕೃತ್ಯ”ಗಳಿಗಾಗಿ ಅಫ್ಘಾನಿಸ್ತಾನದಲ್ಲಿ 13,000 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಬಂಧಿತರಲ್ಲಿ ಅರ್ಧದಷ್ಟು ಜನರನ್ನು 24 ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. … Continued

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ವ್ಯಭಿಚಾರ ನಡೆಸಿದರೆ ಸಾರ್ವಜನಿಕವಾಗಿ ಕಲ್ಲೆಸೆದು ಸಾಯಿಸುವ ಶಿಕ್ಷೆ : ತಾಲಿಬಾನ್‌ ಮುಖ್ಯಸ್ಥರ ಘೋಷಣೆ

ತಾಲಿಬಾನ್ ಅಫ್ಘಾನಿಸ್ತಾನವನ್ನು ಮತ್ತೆ ಕರಾಳ ಯುಗಕ್ಕೆ ಕೊಂಡೊಯ್ಯಬಹುದೆಂಬ ಆತಂಕಗಳು ನಿಜವಾಗಬಹುದು. ತಾಲಿಬಾನ್ ಮುಖ್ಯಸ್ಥ ಮುಲ್ಲಾ ಹಿಬತುಲ್ಲಾ ಅಖುಂದ್ಜಾದಾ ಅವರು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ವ್ಯಭಿಚಾರ ನಡೆಸಿದರೆ ಸಾರ್ವಜನಿಕವಾಗಿ ಥಳಿಸಿ ಕಲ್ಲೆಸೆದು ಕೊಲ್ಲಲಾಗುವುದು ಎಂದು ಸರ್ಕಾರಿ ದೂರದರ್ಶನದಲ್ಲಿ ಧ್ವನಿ ಸಂದೇಶದಲ್ಲಿ ಪ್ರಕಟಿಸಿದ್ದಾರೆ. ಅವರು ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ವಿರುದ್ಧ ಹೋರಾಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು ಎಂದು ದಿ ಟೆಲಿಗ್ರಾಫ್ ವರದಿ … Continued

ಇಬ್ಬರು ಕೊಲೆ ಅಪರಾಧಿಗಳನ್ನು ಸ್ಟೇಡಿಯಂನಲ್ಲಿ ನೂರಾರು ಜನರ ಎದುರು ಗಲ್ಲೆಗೇರಿಸಿದ ತಾಲಿಬಾನ್‌..!

ಘಜ್ನಿ (ಅಫ್ಘಾನಿಸ್ತಾನ) : ತಾಲಿಬಾನ್ ಅಧಿಕಾರಿಗಳು ಗುರುವಾರ ಪೂರ್ವ ಅಫ್ಘಾನಿಸ್ತಾನದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕೊಲೆ ಆರೋಪಿಗಳಿಬ್ಬರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದಾರೆ ಎಂದು ವರದಿಯಾಗಿದೆ. ತಾಲಿಬಾನ್ ಸುಪ್ರೀಂ ಲೀಡರ್ ಹಿಬತುಲ್ಲಾ ಅಖುಂದ್ಜಾದಾ ಸಹಿ ಮಾಡಿದ ಡೆತ್ ವಾರಂಟ್ ಅನ್ನು ಸುಪ್ರೀಂ ಕೋರ್ಟ್ ಅಧಿಕಾರಿ ಅತೀಕುಲ್ಲಾ ದರ್ವಿಶ್ ಗಟ್ಟಿಯಾಗಿ ಓದಿದ ನಂತರ ಘಜ್ನಿ ನಗರದಲ್ಲಿ ಇಬ್ಬರನ್ನೂ ಹಿಂಭಾಗಕ್ಕೆ ಗುಂಡು ಹಾರಿಸಿ … Continued

ವೀಡಿಯೊ…. : ಎಕೆ-47 ರೈಫಲ್‌ ಹಿಡಿದುಕೊಂಡು ಸ್ಕೇಟಿಂಗ್ ಮೇಲೆ ಕಾಬೂಲ್ ರಸ್ತೆಗಳಲ್ಲಿ ಗಸ್ತು ತಿರುಗುತ್ತಿರುವ ತಾಲಿಬಾನಿಗಳು | ವೀಕ್ಷಿಸಿ

ಅಫ್ಘಾನಿಸ್ತಾನದ ತಾಲಿಬಾನ್ ಎಕೆ-47 ರೈಫಲ್‌ಗಳನ್ನು ಹೊತ್ತುಕೊಂಡು ರೋಲರ್‌ ಬ್ಲೇಡ್‌ಗಳ ಮೇಲೆ ಕಾಬೂಲ್‌ನ ಬೀದಿಗಳಲ್ಲಿ ಗಸ್ತು ತಿರುಗುತ್ತಿರುವುದು ಕಂಡುಬಂದಿದೆ. ಅಂತರ್ಜಾಲದಲ್ಲಿ ವೈರಲ್‌ ಆಗಿರುವ ವೀಡಿಯೊದಲ್ಲಿ, ತಾಲಿಬಾನ್ ಸದಸ್ಯರು ಚಲಿಸುವ ಟ್ರಕ್ ಜೊತೆಗೆ ಟ್ರಾಫಿಕ್ ನಡುವೆ ಸ್ಕೇಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ ಸದಸ್ಯರು ಮರೆಮಾಚುವ ಸೂಟ್‌ಗಳನ್ನು ಧರಿಸಿದ್ದರು ಮತ್ತು ರಸ್ತೆಯಲ್ಲಿ ಸಂಚಾರವನ್ನು ನಿರ್ದೇಶಿಸುತ್ತಿದ್ದರು. ಕಾಬೂಲ್ … Continued

ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಬುರ್ಕಾ ಕಡ್ಡಾಯ ಮಾಡಿದ ತಾಲಿಬಾನ್‌

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರವು ಮಹಿಳೆಯರಿಗೆ ಕಠಿಣ ನಿರ್ಬಂಧನೆ ವಿಧಿಸಿದೆ. ಮಹಿಳೆಯರು ಹಾಗೂ ಯುವತಿಯರು ಸಾರ್ವಜನಿಕ ಸ್ಥಳ ಸೇರಿದಂತೆ ದಿನನಿತ್ಯದ ಜೀವನದಲ್ಲಿ ಕಡ್ಡಾಯವಾಗಿ ಬುರ್ಖಾ ಧರಿಸಲು ಕಠಿಣ ಆದೇಶ ಜಾರಿಗೆ ತಂದಿದೆ.ಪ್ರತಿ ಮಹಿಳೆಯರು ಕಡ್ಡಾಯವಾಗಿ ಮೈ ಸಂಪೂರಣವಾಗಿ ಮುಚ್ಚಿಕೊಳ್ಳುವ ಬುರ್ಖಾ ಧರಿಸಬೇಕು ಎಂದು ಸೂಚಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಡಳಿತ ಮಹಿಳೆಯರಿಗೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಶಾಲೆಗಳಲ್ಲಿ … Continued

ಮಹಿಳೆಯರು ಏಕಾಂಗಿಯಾಗಿ ವಿಮಾನ ಪ್ರಯಾಣ ಮಾಡುವಂತಿಲ್ಲ: ತಾಲಿಬಾನ್‌ನಿಂದ ಮತ್ತೊಂದು ಫತ್ವಾ..!

ಅಪ್ಘಾನಿಸ್ತಾನ: ಆಪ್ಘಾನಿಸ್ತಾನದಲ್ಲಿ ಮಹಿಳೆಯರ ವಿರುದ್ಧ ತಾಲಿಬಾನ್ ಮತ್ತೊಂದು ನಿರ್ಬಂಧ ವಿಧಿಸಿದೆ. ಮಹಿಳೆಯರು ಇನ್ಮುಂದೆ ಏಕಾಂಗಿಯಾಗಿ ವಿಮಾನಯಾನ ಪ್ರಯಾಣ ಮಾಡುವಂತಿಲ್ಲ ಎಂದು ತಾಲಿಬಾನ್ ಹೊಸ ಫತ್ವಾ ಹೊರಡಿಸಿದೆ. ಪುರುಷರ ರಕ್ಷಣೆಯಿಲ್ಲದೇ ಮಹಿಳೆಯರು ಒಂಟಿಯಾಗಿ ವಿಮಾನದಲ್ಲಿ ಪ್ರಯಾಣ ಮಾಡುವಂತಿಲ್ಲ ಎಂದು ಹೇಳಿರುವ ತಾಲಿಬಾನ್‌ ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಕೊನೆಯ ಅವಕಾಶವನ್ನು ಸೋಮವಾರದವರೆಗೆ ಮಾತ್ರ ನೀಡಿದೆ. ಆನಂತರ ಯಾವುದೇ … Continued

ಹೆಲಿಕಾಪ್ಟರ್‌ನಿಂದ ನೇತಾಡಿದ್ದು ಧ್ವಜ ಸ್ಥಾಪಕ ವ್ಯಕ್ತಿ ಹೊರತು ಮೃತದೇಹವಲ್ಲ: ಅಫ್ಘಾನ್ ಪತ್ರಕರ್ತ

ಕಾಬೂಲ್: ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಮೇಲೆ ಗಸ್ತು ತಿರುಗುತ್ತಿದ್ದ ಅಮೆರಿಕಾ ನಿರ್ಮಿತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಲ್ಲಿ ನೇತಾಡಿದ್ದು ಧ್ವಜ ಸ್ಥಾಪಕ ವ್ಯಕ್ತಿ ಹೊರತು ಮೃತದೇಹವಲ್ಲ ಎಂದು ಅಫ್ಘಾನ್ ಪತ್ರಕರ್ತ ಸ್ಪಷ್ಟಪಡಿಸಿದ್ದಾರೆ. ಹೆಲಿಕಾಪ್ಟರ್ ನಲ್ಲಿ ವ್ಯಕ್ತಿಯೋರ್ವ ನೇತಾಡುತ್ತಿದ್ದ ವಿಡಿಯೋ ತುಣುಕು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಆ ವ್ಯಕ್ತಿ ಸತ್ತಿದ್ದಾನೋ ಅಥವಾ ಬದುಕಿದ್ದಾನೋ … Continued

ಅಫಘಾನ್‌ ಬಿಕ್ಕಟ್ಟು: ಮಹಿಳಾ ನಿರೂಪಕಿಗೆ ನೀನು ಮಹಿಳೆ ಮನೆಗೆ ತೆರಳು ಎಂದ ತಾಲಿಬಾನ್‌

ಕಾಬೂಲ್: ಅಪ್ಘಾನಿಸ್ತಾನ್ ದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನಿರೂಪಕಿ ಈಗ ತಾಲಿಬಾನಿಂದಾಗಿ ಕೆಲಸ ಕಳೆದುಕೊಂಡಿದ್ದಾರ. ಹೀಗೆಂದು ಅವರು ಸಾಮಾಜಿ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ನೀನು ಮಹಿಳೆ. ಆದ್ದರಿಂದ ಕೆಲಸ ಮಾಡುವುದು ಬೇಡ, ಮನೆಗೆ ತೆರಳು ಎಂದು ತಾಲಿಬಾನ್ ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ನಿರೂಪಕಿ ನಮಗೆ ಸಹಾಯ ಮಾಡಿ ಎಂದು … Continued