ಮದ್ವೆ ಮುಗಿಸಿ ಹಿಂದಿರುಗುವಾಗ ಬಸ್​ ಪಲ್ಟಿ: ಇಬ್ಬರ ಸಾವು, 15ಕ್ಕೂ ಹೆಚ್ಚು ಮಂದಿ ತೀವ್ರ ಗಾಯ

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ತಾಲೂಕು ಘಾಟಿ ಬಳಿ ಶನಿವಾರ ತಡರಾತ್ರಿ ಖಾಸಗಿ ಬಸ್ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡ ಘಟನೆ ವರದಿಯಾಗಿದೆ. ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ರಸ್ತೆಯ ಮಧ್ಯೆ ಮಾಕಳಿ ಬೆಟ್ಟದ ಬಳಿ ಘಟನೆ ನಡೆದಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಚಾಲಕನ … Continued

ಸೂರತ್‌ನ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಇಬ್ಬರು ಸಾವು, 125ಕ್ಕೂ ಹೆಚ್ಚು ಜನರ ರಕ್ಷಣೆ

ಸೂರತ್: ಸೂರತ್‌ನ ಮಾಸ್ಕ್ ತಯಾರಿಕಾ ಕಾರ್ಖಾನೆಯಲ್ಲಿ ಇಂದು (ಸೋಮವಾರ) ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು 125ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಸೂರತ್‌ನ ಕಡೋದರದ ವರೇಲಿ ಎಂಬಲ್ಲಿರುವ ಕಾರ್ಖಾನೆಯಲ್ಲಿ ಇಂದು ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಆಗಮಿಸಿರುವ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದು, ಈ ವರೆಗು 125ಕ್ಕೂ ಹೆಚ್ಚು ಜನರನ್ನು … Continued

ಬೆಂಗಳೂರು:ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್​​ನಲ್ಲಿ ಬೆಂಕಿ ಅನಾಹುತ, ಇಬ್ಬರು ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮತ್ತೊಂದು ಅವಘಡ ನಡೆದಿದೆ. ಬೆಂಗಳೂರು ನಗರದ ದೇವರಚಿಕ್ಕನಹಳ್ಳಿ ಬಳಿ ಘಟನೆ ನಡೆದಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತಾಯಿ ಲಕ್ಷ್ಮೀದೇವಿ (82), ಪುತ್ರಿ ಭಾಗ್ಯ ರೇಖಾ (59) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.  210 ನೇ ಫ್ಲ್ಯಾಟ್‌ನಲ್ಲಿದ್ದ ತಾಯಿ ಹಾಗೂ ಮಗಳು ಸಜೀವದಹನ ಆಗಿದ್ದಾರೆ ಎನ್ನಲಾಗಿದೆ. ಅಪಾರ್ಟ್ಮೆಂಟ್‍ ಒಳಗೆ … Continued

ಬೈಕ್‌ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ: ಇಬ್ಬರು ಯುವರು ಸಾವು

ಹುಬ್ಬಳ್ಳಿ: ಉಣಕಲ್ ಕೆರೆ ಬಳಿಯ ಪ್ರೆಸಿಡೆಂಟ್ ಹೊಟೆಲ್ ಹತ್ತಿರ ವೇಗವಾಗಿ ಹೋಗುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ. ಬುಧವಾರ ಮಧ್ಯರಾತ್ರಿ ೧ ಗಂಟೆಗೆ ಸುಮಾರಿಗೆ ವೇಗವಾಗಿ ಹೋಗುತ್ತಿರುವಾಗ ಬೈಕ್ ನಿಯಂತ್ರಣ ತಪಿ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಯಕಿನಲ್ಲಿ ಸವಾರಿ … Continued

ಬೆಂಗಳೂರು ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಾಯ

ಬೆಂಗಳೂರು: ಬೆಂಗಳೂರು: ಬೆಂಗಳೂರಿನ ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದ ವರದಿಯಾಗಿದೆ. ನಗರದ ಮಾಗಡಿ ರಸ್ತೆಯ 5ನೇ ಕ್ರಾಸ್ ನಲ್ಲಿ ಇರುವ ಎಂ ಎಂ ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿರುವ ಘಟನೆಯಲ್ಲಿ ಸಜೀವವಾಗಿ ದಹನಗೊಂಡವರನ್ನು ಬಿಹಾರ ಮೂಲದ ಮನೀಷ ಮತ್ತು … Continued

ಮೋಹರಂ ಆಚರಣೆ ವೇಳೆ ವಿದ್ಯುತ್ ಅವಘಡ:ಇಬ್ಬರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ಅವಘಡ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಹಸನ್ ಸಾಬ್ ಮುಲ್ಲಾ (55) ಹಾಗೂ ಹುಲಿಗೆಮ್ಮ (25) ಎಂದು ಗುರುತಿಸಲಾಗಿದೆ. ಮೋಹರಂ ಆಚರಣೆಯ ಸಂದರ್ಭದಲ್ಲಿ ದೇವರನ್ನ ಭೇಟಿಗೆ ಕರೆದೊಯ್ಯುವ ಸಂದರ್ಭದಲ್ಲಿ ವಿದ್ಯುತ್ ತಂತಿ ದೇವರ ಪಂಜಾಕ್ಕೆ ತಗುಲಿದ … Continued

ಹಂಚಿನಾಳ: ಸಿಡಿಲು ಬಡಿದು ಇಬ್ಬರು ಸಾವು

ಬೆಳಗಾವಿ :ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಗುಡುಮಕೇರಿ ಗ್ರಾಮದವರಾದ ಇವರಿಬ್ಬರೂ ಕುರಿಗಾಹಿಗಳಾಗಿದ್ದು ಕುರಿ ಮೇಯಿಸಲು ಹಂಚಿನಾಳಕ್ಕೆ ಹೋದಾಗ ಸಂಜೆ ಸುಮಾರಿಗೆ ಭಾರಿ ಮಳೆ, ಗಾಳಿ ಆರ್ಭಟಿಸಿದೆ. ಆ ಸಂದರ್ಭದಲ್ಲಿ ಸಿಡಿಲು ಬಡಿತಕ್ಕೆ ಇವರಿಬ್ಬರು ಮೃತಪಟ್ಟಿದ್ದಾರೆ. ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ತೀವ್ರ ಶೋಕ ವ್ಯಕ್ತಪಡಿಸಿದ್ದು ಸರಕಾರದಿಂದ ಈ … Continued