ಮಾನ್ಸೂನ್ ಅಧಿವೇಶನದುದ್ದಕ್ಕೂ ಸಂಸತ್ತಿನ ಹೊರಗೆ ಪ್ರತಿಭಟನೆ: ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧಾರ

ನವದೆಹಲಿ: ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪ್ರತಿದಿನ ರೈತರ ಸಮೂಹ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಭಾನುವಾರ ಪ್ರಕಟಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಪ್ರತಿನಿಧಿಗಳು, ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವಂತೆ ಒತ್ತಾಯಿಸಿ ಸಂಸತ್ತಿನ ಎಲ್ಲ ಪ್ರತಿಪಕ್ಷಗಳ ಸಂಸದರಿಗೆ ಈ ಬಗ್ಗೆ ಸಂಸತ್ತಿನಲ್ಲಿ ಧ್ವಿ ಎತ್ತಬೇಕು ಹಾಗೂ ಪ್ರತಿಭಟಿಸಬೇಕು … Continued

ಕೋವಿಡ್‌ ಸಾಂಕ್ರಾಮಿಕದ ಮಧ್ಯೆ ಭಾರತದ ಅಗ್ರ ಏಳು ನಗರಗಳಲ್ಲಿ ಮನೆ ಮಾರಾಟದಲ್ಲಿ ಶೇ.23 ರಷ್ಟು ಹೆಚ್ಚಳ: ವರದಿ

ಮುಂಬೈ: 2021ರ ಮೊದಲ ಐದು ತಿಂಗಳಲ್ಲಿ ದೇಶದ ಅಗ್ರ ಏಳು ನಗರಗಳಲ್ಲಿ ಮನೆ ಮಾರಾಟವು ಶೇಕಡಾ 23 ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಕೋಲ್ಕತ್ತಾದಲ್ಲಿ ಇದೇ ಅವಧಿಯಲ್ಲಿ ಶೇಕಡಾ 11 ರಷ್ಟು ಕುಸಿತ ಕಂಡಿದೆ ಎಂದು ಪ್ರಾಪ್ ಎಕ್ವಿಟಿ ಬಿಡುಗಡೆ ಮಾಡಿದ ವರದಿಯಲ್ಲಿ ತೋರಿಸಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಪುಣೆ ಕಳೆದ … Continued

ಕಟ್ಟುನಿಟ್ಟಾದ ಲಾಕ್‌ಡೌನ್ ಹೊರತಾಗಿಯೂ ಈ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಾಜ್ಯಕ್ಕೆ 55.41% ಹೆಚ್ಚಿನ ಅಬಕಾರಿ ಆದಾಯ..!

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಸೋಂಕಿನ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಸಮಯದಲ್ಲಿ ಕೆಲವು ಗಂಟೆಗಳ ಕಾಲ ಮದ್ಯದಂಗಡಿಗಳನ್ನು ತೆರೆದಿರುವುದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆರ್ಥಿಕ ಕುಸಿತದ ನಡುವೆ ಗಮನಾರ್ಹ ಪ್ರಮಾಣದ ಆದಾಯವನ್ನು ಗಳಿಸಲು ಸಹಾಯ ಮಾಡಿದೆ. 2020-21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021-22ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯವು 2,122.90 ಕೋಟಿ ರೂ. … Continued

ಹನಿಟ್ರ್ಯಾಪಿನಲ್ಲಿ 30 ಲಕ್ಷ ರೂ. ಕಳೆದುಕೊಂಡ ಯುವಕನಿಂದ ದೂರು : ಯುವತಿ ಬಂಧನ, ಆರು ಜನರು ನಾಪತ್ತೆ

ಪುತ್ತೂರು : ಸೇಲ್ಸ್‌ಮ್ಯಾನ್ ಆಗಿರುವ ವ್ಯಕ್ತಿಯೊಬ್ಬ ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಹಣ ಕಳೆದುಕೊಂಡ ವ್ಯಕ್ತಿ ಈಗ 7 ಜನರು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಈ ಸಂಬಂಧ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಇಬ್ರಾಹಿಂ ಎಂಬುವವವರ ಪುತ್ರ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ … Continued

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಿಗೆ 15 ತಿಂಗಳು ಜೈಲು ಶಿಕ್ಷೆ

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ ವಿಧಿಸಲಾಗಿರುವ ಶಿಕ್ಷೆ ಅನುಭವಿಸಲು ಸ್ವಯಂ ಶರಣಾಗಲು ನಿರಾಕರಿಸಿರುವುದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ. ಜುಮಾ ಅವರ ಮೇಲಿರುವ ಭ್ರಷ್ಟಚಾರ ಪ್ರಕರಣಗಳಿಗೆ ಸಂಬಂಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯ 15 ತಿಂಗಳ ಶಿಕ್ಷೆ ವಿಧಿಸಿದೆ. ಈ ನಡುವೆ ತಮ್ಮ ವಿರುದ್ಧ ನೀಡಲಾಗಿರುವ ತೀರ್ಪನ್ನು ಮರು ಪರಿಶೀಲಿಸುವಂತೆ … Continued

ದೇಶದಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಮತ್ತೆ ಏರಿಕೆ

ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಭಾನುವಾರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ 36 ಪೈಸೆ ಮತ್ತು ಡೀಸೆಲ್ 17 ಏರಿಕೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಭಾನುವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಗಳ … Continued

ಅಪರೂಪದ ಕಾಯಿಲೆಯಿಂದಾಗಿ ಕಲ್ಲಿನಂತಾಗುತ್ತಿರುವ ಬ್ರಿಟನ್ನಿನ 5 ತಿಂಗಳ ಹೆಣ್ಣು ಮಗು..!

ಸ್ನಾಯುಗಳನ್ನು ಮೂಳೆಗಳಾಗಿ ಪರಿವರ್ತಿಸುವ ಅತ್ಯಂತ ಅಪರೂಪದ ಆನುವಂಶಿಕ ಸ್ಥಿತಿಯಿಂದಾಗಿ ಬ್ರಿಟನ್ನಿನ ಐದು ತಿಂಗಳ ಹೆಣ್ಣು ಮಗು “ಕಲ್ಲಿಗೆ ತಿರುಗುತ್ತಿದೆ”. ಲೆಕ್ಸಿ ರಾಬಿನ್ಸ್ ಜನವರಿ 31 ರಂದು ಜನಿಸಿದ್ದಾಳೆ ಮತ್ತು ಬೇರೆ ಯಾವುದೇ ಸಾಮಾನ್ಯ ಮಗುವಿನಂತೆ ಕಾಣುತ್ತಿದ್ದಳು. ಇದನ್ನು, ಹೊರತುಪಡಿಸಿ ಅವಳ ಹೆಬ್ಬೆರಳು ಚಲಿಸಲಿಲ್ಲ ಮತ್ತು ದೊಡ್ಡ ಕಾಲ್ಬೆರಳುಗಳನ್ನು ಹೊಂದಿದ್ದಳು. ಹೀಗಾಗಿ ಆಕೆಯ ಸಂಬಂಧಪಟ್ಟ ಪೋಷಕರು ಆಕೆಯನ್ನು … Continued

ಆನ್‌ಲೈನ್ ತರಗತಿಗಳಿಗಾಗಿ ಮಹಾರಾಷ್ಟ್ರದ ಗ್ರಾಮದಲ್ಲಿ “ನೆಟ್‌ವರ್ಕ್ ಮರ ಏರುವ ವಿದ್ಯಾರ್ಥಿಗಳು..!

ಗೊಂಡಿಯಾ(ಮಹಾರಾಷ್ಟ್ರ): ದುರ್ಬಲ ಮೊಬೈಲ್ ಇಂಟರ್ನೆಟ್ ಸಂಪರ್ಕವು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಆನ್‌ಲೈನ್ ತರಗತಿಗಳಿಗೆ ನಿರಂತರ ನೆಟ್‌ವರ್ಕ್‌ ಹುಡುಕುವ ಸಲುವಾಗಿ “ಮರ ಏರುವಂತೆ ಮಾಡಿದೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಿಗುವುದು ಒಂದು ಸವಾಲಾಗಿದೆ, ಇದು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ನಿರೂಪಣೆಗೆ ವಿರುದ್ಧವಾಗಿದೆ. 18 ಕಿ.ಮೀ ದೂರದಲ್ಲಿರುವ ಅತುಲ್ ಗೊಂಡಲೆ ಎಂಬ … Continued

ಜೀವಂತ ಹಾವು ಕೊರಳಿಗೆ ಸುತ್ತಿಕೊಂಡು ಸೈಕಲ್ಲಿನಲ್ಲಿ ಹೊರಟ ವ್ಯಕ್ತಿ..!

ಬೆಳಗಾವಿ: ತಾಲೂಕಿನ ಹಂಗರಗಾ ಗ್ರಾಮದಲ್ಲಿ ಮನೆಗೆ ಬಂದಿದ್ದ ಹಾವನ್ನು ತನ್ನ ವ್ಯಕ್ತಿಯೋರ್ವ ಕೊರಳಿಗೆ ಹಾಕಿಕೊಂಡು ಊರೆಲ್ಲಾ ಸೈಕಲ್ ಮೇಲೆ ಸವಾರಿ ಮಾಡುವ ಮೂಲಕ ಎಲ್ಲರನ್ನೂ ನಿಬ್ಬೆರಗಿಸುವಂತೆ ಮಾಡಿದ್ದಾನೆ. ಅಜ್ಜ ಕೊರಳಲ್ಲಿ ಹಾವನ್ನು ಸುತ್ತಿಕೊಂಡು ಬಿಂದಾಸ್ ಆಗಿ ಸೈಕಲ್ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶನಿವಾರ ಮಧ್ಯಾಹ್ನ ತಾಲೂಕಿನ … Continued

ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಎರಡು ದಿನ ಮಳೆ

ಬೆಂಗಳೂರು: ಕರ್ನಾಟಕದಲ್ಲಿ ಮಳೆ ವಾರ ಕಾಲ ಬಿಡುವು ನೀಡಿದೆ. ಈಗ ಮತ್ತೆ ಮಳೆ ಆರಂಭವಾಗಿದ್ದು, ಮತ್ತೆರಡು ದಿನ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಲೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನಿಂದ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮಳೆಯ ಜೋರಾಗಲಿದೆ. ಕ . ಇನ್ನೆರಡು ದಿನ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಯಿದೆ. ದಕ್ಷಿಣ … Continued