ಸೆಪ್ಟೆಂಬರ್‌ 15ರಿಂದ ವಾಹನಗಳಿಗಾಗಿ ಹೊಸ BH ಸಂಖ್ಯೆ ಸರಣಿ ಜಾರಿಗೆ: ಅದು ಜನರಿಗೆ ಹೇಗೆ ಅನುಕೂಲ?

ನವದೆಹಲಿ: ಭಾರತದ ರಾಜ್ಯಗಳಾದ್ಯಂತ ತಡೆರಹಿತ ವರ್ಗಾವಣೆ ಖಚಿತಪಡಿಸಿಕೊಳ್ಳಲು ಕೇಂದ್ರವು ಹೊಸ ವಾಹನ ನೋಂದಣಿ ಸರಣಿಯನ್ನು ಪರಿಚಯಿಸಿದೆ. BH (ಭಾರತ್ ಸರಣಿ) ಎಂದು ಕರೆಯಲ್ಪಡುವ ಇದು ವಾಹನ ಮಾಲೀಕರು ಒಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಮರು ನೋಂದಣಿ ಪ್ರಕ್ರಿಯೆಯಿಂದ ಅವರನ್ನು ಮುಕ್ತಗೊಳಿಸುತ್ತದೆ. ಈ ಸರಣಿಯನ್ನು ರಸ್ತೆ ಸಾರಿಗೆ ಸಚಿವಾಲಯ ಪರಿಚಯಿಸಿದೆ ಮತ್ತು ಕೇಂದ್ರ ಸರ್ಕಾರದಿಂದ … Continued

ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣ: ಐವರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

ಮೈಸೂರು: ಐದು ದಿನಗಳ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಐವರು ಆರೋಪಿಗಳನ್ನ ಪೊಲೀಸರು ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ನಿನ್ನೆ ರಾತ್ರಿ ಮೈಸೂರಿನ ಮೂರನೇ ಜೆಎಂಎಫ್​ಸಿ ನ್ಯಾಯಾಲಯಯವು ಈ ಆರೋಪಿಗಳನ್ನ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ರಾಷ್ಟ್ರಾದ್ಯಂತ ಸಂಚಲನ ಮೂಡಿಸಿರುವ ಈ ಪ್ರಕರಣದಲ್ಲಿ ಪೊಲೀಸರು ಬಹಳ ಎಚ್ಚರಿಕೆಯಿಂದ ತನಿಖೆ … Continued

ಕಾಬೂಲ್‌’: ಮುಂದಿನ 36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ದಾಳಿ ಸಾಧ್ಯತೆ ಎಚ್ಚರಿಕೆ ನೀಡಿದ ಬಿಡೆನ್

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಂದಿನ 24-36 ಗಂಟೆಗಳಲ್ಲಿ ಮತ್ತೊಂದು ಭಯೋತ್ಪಾದಕ ದಾಳಿಯ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಕೆ ನೀಡಿದ್ದಾರೆ. ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಹೆಚ್ಚಾಗಿದೆ. ಮುಂದಿನ 24-36 ಗಂಟೆಗಳಲ್ಲಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ನಮ್ಮ ಕಮಾಂಡರ್‌ಗಳು ನನಗೆ ಮಾಹಿತಿ ನೀಡಿದ್ದಾರೆ. ನಮ್ಮ ಪುರುಷರು … Continued

ಇಂದಿನಿಂದ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ: 12 ಜಿಲ್ಲೆಗಳಲ್ಲಿ ಹೈ ಅಲರ್ಟ್

ಬೆಂಗಳೂರು: ಬಂಗಾಳ ಉಪ ಸಾಗರದ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ಆ.29ರಿಂದ ಸೆ.1ರ ವರೆಗೆ ರಾಜ್ಯದ 12 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ.29ರಂದು ಆರೆಂಜ್ ಅಲರ್ಟ್ ಹಾಗೂ 30ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಮೈಸೂರು, ಕೊಡಗು, ಚಾಮರಾಜನಗರ, ಕಲಬುರ್ಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ … Continued

ಪ್ಯಾರಾ ಒಲಿಂಪಿಕ್ಸ್: ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ ಪಟೇಲ್

ಟೋಕಿಯೊ: ಟೇಬಲ್ ಟೆನಿಸ್ ಪ್ಯಾರಾ ಒಲಿಂಪಿಕ್ ತಾರೆ ಭಾವಿನಾಬೆನ್ ಪಟೇಲ್ ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಟೇಬಲ್‌ ಟೆನಿಸ್‌ ಅಂತಿಮ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಚೀನಾದ ಯಿಂಗ್ ಜೌ ಎದುರು ಸೋತರು. ಅಂತಿಮ ಸ್ಕೋರ್ 7-11 5-11 6-11 (0-3) ನಲ್ಲಿ ನಿಂತಿದೆ, ಟೋಕಿಯೊದಲ್ಲಿ … Continued

ತಮ್ಮ ಪಡೆಗಳು ಪಂಜಶೀರ್ ಕಣಿವೆ ಪ್ರವೇಶಿಸಿವೆ- ತಾಲಿಬಾನ್, ಯಾರೂ ಪ್ರವೇಶಿಸಿಲ್ಲ: ಅಹ್ಮದ್ ಮಸೂದ್ ಬೆಂಬಲಿಗರು

ಕಾಬೂಲ್: ಉತ್ತರ ಅಫ್ಘಾನಿಸ್ತಾನದ ಪಂಜ್‌ಶಿರ್ ಕಣಿವೆಯನ್ನು ತಮ್ಮ ಪಡೆಗಳು ಪ್ರವೇಶಿಸಿವೆ ಎಂದು ತಾಲಿಬಾನ್ ಶನಿವಾರ ಹೇಳಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಯಾವುದೇ ಹೋರಾಟ ನಡೆಯಲಿಲ್ಲ, ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಮುಜಾಹಿದ್ದೀನ್ಗಳು ಯಾವುದೇ ಪ್ರತಿರೋಧವನ್ನು ಎದುರಿಸದೆ ವಿವಿಧ ದಿಕ್ಕುಗಳಿಂದ ಮುಂದುವರಿದರು. ಇಸ್ಲಾಮಿಕ್ ಎಮಿರೇಟ್ ಪಡೆಗಳು ವಿವಿಧ ದಿಕ್ಕುಗಳಿಂದ ಪಂಜ್‌ಶಿರ್‌ಗೆ ಪ್ರವೇಶಿಸಿವೆ “ಎಂದು ತಾಲಿಬಾನ್‌ನ ಸಾಂಸ್ಕೃತಿಕ … Continued

ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು, ಆದರೆ ಆಸ್ಪತ್ರೆ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳವಿಲ್ಲ ..ಯಾಕೆ-ಏನು..?

ಆಗಸ್ಟ್ 1 ರಂದು ಕೇರಳವು 20,000ಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿತು. ಸೋಂಕಿತರಲ್ಲಿ, ಸುಮಾರು 2,400 ಜನರಿಗೆ ಆಸ್ಪತ್ರೆಗೆ ಅಗತ್ಯವಿತ್ತು. ಆಗಸ್ಟ್ 25 ರಂದು, ಕೊರೊನಾವೈರಸ್ ಹರಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಕೇರಳವು 31,000ಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ದೊಡ್ಡ ಏರಿಕೆಯನ್ನು ವರದಿ ಮಾಡಿದೆ. ಆದಾಗ್ಯೂ, ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ … Continued

ಜಮೀನು ಜಗಳ : ಜಮಖಂಡಿಯಲ್ಲಿ ನಾಲ್ವರ ಸಹೋದರರ ಭೀಕರ ಹತ್ಯೆ

ಬಾಗಲಕೋಟೆ : ಮಾರಕಾಸ್ತ್ರಗಳಿಂದ ಕೊಚ್ಚಿ ನಾಲ್ವರು ಸಹೋದರರನ್ನು ಬರ್ಬರವಾಗಿ ಕೊಲೆ ಮಾಡಿದ  ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರಖಂಡಿಯಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹಣಮಂತ  (45), ಬಸವರಾಜ   (37), ಈಶ್ವರ   (35) ಮತ್ತು ಮಲ್ಲಪ್ಪ  (33) ಕೊಲೆಯಾದ ಸಹೋದರರು ಎಂದು ಗುರುತಿಸಲಾಗಿದೆ. ತೋಟದ … Continued

ಮೊದಲ ದಿನದ ಸಿಇಟಿ ಯಶಸ್ವಿ: ಜೀವಶಾಸ್ತ್ರಕ್ಕೆ 80.48%, ಗಣಿತ ಪರೀಕ್ಷೆಗೆ 93.90% ಹಾಜರಿ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆದ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೊದಲ ದಿನ ಶನಿವಾರ ಯಶಸ್ವಿಯಾಗಿ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ,ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಪರೀಕ್ಷೆಗೆ ನೋಂದಣಿ ಮಾಡಿಸಿದ್ದ ಒಟ್ಟು 2,01,834 ಅಭ್ಯರ್ಥಿಗಳಲ್ಲಿ, 1,62,439 (80.48%) ಅಭ್ಯರ್ಥಿಗಳು ಜೀವಶಾಸ್ತ್ರ ವಿಷಯಕ್ಕೆ ಮತ್ತು 1,89,522 (92.90%) ಅಭ್ಯರ್ಥಿಗಳು ಗಣಿತ ವಿಷಯಕ್ಕೆ … Continued

ಎಂಥಾ ಲೋಕವಯ್ಯಾ..:ಗುಂಪಿನ ಕ್ರೌರ್ಯಕ್ಕೆ ಅಮಾಯಕನೊಬ್ಬ ಬಲಿ; ಕಳ್ಳತನದ ಸಂಶಯಕ್ಕೆ ಪಿಕಪ್ ವ್ಯಾನ್‌ಗೆ ಕಟ್ಟಿ ಎಳೆದರು..! ವಿಡಿಯೋ ವೈರಲ್‌

ಜವಾದ್ (ಮಧ್ಯಪ್ರದೇಶ): ಜನರ ಗುಂಪೊಂದು ಕ್ರೌರ್ಯವನ್ನು ನಡೆಸಿದ್ದು ಗುರುವಾರ ಜಿಲ್ಲಾ ಕೇಂದ್ರದಿಂದ 70 ಕಿಮೀ ದೂರದಲ್ಲಿರುವ ಜೆಟ್ಲಿಯಾ ಗ್ರಾಮದಲ್ಲಿ 45 ವರ್ಷದ ವ್ಯಕ್ತಿಯ ಸಾವಿಗೆ ಕಾರಣವಾಗಿದೆ. ಇದು ಶನಿವಾರ ಬೆಳಕಿಗೆ ಬಂದಿದ್ದು, ಘಟನೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಅನುಮಾನಿಸಿ ಗ್ರಾಮಸ್ಥರು ಆತನನ್ನು ಥಳಿಸಿದರು ಮತ್ತು … Continued