ಕರ್ನಾಟಕದಲ್ಲಿ ಶನಿವಾರ 1,229 ಮಂದಿಗೆ ಕೊರೊನಾ ಹೊಸ ಸೋಂಕು, ಬೆಂಗಳೂರಿನಲ್ಲಿ ಸಾವಿಲ್ಲ..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು (ಶನಿವಾರ) ಸೋಂಕಿನಿಂದ ಯಾವುದೇ ಸಾವಿನ ವರದಿಯಾಗಿಲ್ಲ .ರಾಜ್ಯದಲ್ಲಿ ಶನಿವಾರ 1,229 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ 1,289 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಬಾಗಲಕೋಟೆ,ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಜೊತೆಗೆ ರಾಜ್ಯದಲ್ಲಿ … Continued

ಬಿಜೆಪಿ ಸಭೆ ವಿರೋಧಿಸಿ ಕರ್ನಲ್ ಕಡೆಗೆ ತೆರಳುತ್ತಿದ್ದ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್: 10 ಮಂದಿಗೆ ಗಾಯ; ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ ರೈತರು

ಚಂಡೀಗಡ: ಶನಿವಾರ ಕರ್ನಲ್‌ನ ಘರೌಂಡಾ ಟೋಲ್ ಪ್ಲಾಜಾದಲ್ಲಿ ಹರಿಯಾಣ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಇದರ ನಂತರ, ರೈತರ ಸಂಘಟನೆ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (SKM) ಹರಿಯಾಣದಾದ್ಯಂತ ಎಲ್ಲ ಹೆದ್ದಾರಿಗಳು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಬಂಧಿಸುವಂತೆ ರೈತರಿಗೆ ಕರೆ ನೀಡಿತು. ಘಟನೆಯ ಕುರಿತು, ಎಸ್‌ಕೆಎಂನ ದರ್ಶನ್ ಪಾಲ್, “ಶಾಂತಿಯುತ … Continued

ಬಾಲಿವುಡ್‌ ನಟ ಅರ್ಮಾನ್ ಕೊಹ್ಲಿ ನಿವಾಸದ ಮೇಲೆ ಎನ್‌ಸಿಬಿ ದಾಳಿ

ಮುಂಬೈ: ಬಾಲಿವುಡ್‌ ನಟ ಅರ್ಮಾನ್ ಕೊಹ್ಲಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಡ್ರಗ್ಸ್ ಸಂಬಂಧಿತ ಪ್ರಕರಣದಲ್ಲಿ ಅವರ ಮನೆಯ ಮೇಲೆ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (Narcotics Control Bureau ) ಅಧಿಕಾರಿಗಳು ಶನಿವಾರ (August 28,) ಮುಂಬೈನಲ್ಲಿ ದಾಳಿ ನಡೆಸಿದರು. ಸದ್ಯ ಎನ್‌ಸಿಬಿ ಅಧಿಕಾರಿಯೊಬ್ಬರು ಪ್ರಸ್ತುತ ನಟನ ನಿವಾಸದಲ್ಲಿ ಶೋಧಗಳು ನಡೆಯುತ್ತಿವೆ ಎಂದು ದೃಢಪಡಿಸಿದರು, ಆದರೆ ಪ್ರಕರಣದ … Continued

ಕರ್ನಾಟಕದಲ್ಲಿ ವಾರಕ್ಕೆ ಒಂದು ದಿನ ‘ಲಸಿಕಾ ಉತ್ಸವ’

ಚಿಕ್ಕಬಳ್ಳಾಪುರ: ಕೋವಿಡ್ ಲಸಿಕೆಯನ್ನು ತ್ವರಿತವಾಗಿ ನೀಡುವ ಉದ್ದೇಶದಿಂದ ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ನಾಡಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕಾ ಉತ್ಸವದಂದು 15ರಿಂದ 20 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ. … Continued

ಕುಮಟಾದ ಎರಡು ಸಿಇಟಿ ಕೇಂದ್ರಗಳಲ್ಲಿ ಮೊದಲನೇ ದಿನ ಸುಗಮವಾಗಿ ನಡೆದ ಪರೀಕ್ಷೆ

ಕುಮಟಾ; ತಾಲೂಕಿನಲ್ಲಿ ಎರಡು ಸಿಇಟಿ ಪರಿಕ್ಷಾ ಕೇಂದ್ರಗಳಿದ್ದು ಡಾ.ಎ.ವಿ.ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ೨೬೪ ವಿದ್ಯಾರ್ಥಿಗಳು ಪರೀಕ್ಷೆಬರೆಯಲು ಅನುಮತಿ ಪಡೆದಿದ್ದಾರೆ. ಮುಂಜಾನೆ ಅವಧಿಯ ಜೀವಶಾಸ್ತ್ರ ಪರಿಕ್ಷೆಯಲ್ಲಿ ೬೯ ವಿದ್ಯಾರ್ಥಿಗಳು ಗೈರುಹಾಜರಾಗಿದ್ದು ೧೯೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಧ್ಯಾಹ್ನ ಗಣಿತ ಪರೀಕ್ಷೆಯಲ್ಲಿ ಕೇವಲ ೬ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಬೆಣ್ಣೆ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೭೬ ಪರೀಕ್ಷಾರ್ಥಿಗಳಿದ್ದು … Continued

ಇದೆಂಥ ಅತಿರೇಕ…10 ವಾರಗಳಲ್ಲಿ ಕೋವಿಡ್ -19 ಲಸಿಕೆಯ ಆರನೇ ಡೋಸ್‌ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದ ಬ್ರೆಜಿಲ್ ವ್ಯಕ್ತಿ ..!

ರಿಯೊ ಡಿ ಜನೈರೊ: ಬ್ರೆಜಿಲ್‌ನ ರಿಯೊ ಡಿ ಜನೈರೊ ನಗರದ ನಿವಾಸಿ 10 ವಾರಗಳಲ್ಲಿ ಕೊರೊನಾ ವೈರಸ್ ವಿರುದ್ಧ ವಿವಿಧ ಲಸಿಕೆಗಳ ಐದು ಡೋಸುಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅವರು ಆರನೇ ಡೋಸು ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ. ರಿಯೊ ಡಿ ಜನೈರೊ ನಗರದ ಆರೋಗ್ಯ ಕಾರ್ಯಾಲಯವು ಈಗಾಗಲೇ ಶಂಕಿತನನ್ನು ಗುರುತಿಸಿದೆ ಮತ್ತು ಆತ ಮೇ 12 ರಿಂದ ಜುಲೈ … Continued

ಮಲೇಷಿಯಾದಿಂದ ತಿರುಚಿಗೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ 36 ವರ್ಷದ ವ್ಯಕ್ತಿ ಸಾವು

ತಿರುಚಿ: ಮಲೇಷಿಯಾದಿಂದ ತಿರುಚಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ 36 ವರ್ಷದ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ವಿಮಾನ ನಿಲ್ದಾಣದಿಂದ 60 ನಾಟಿಕಲ್ ಮೈಲುಗಳಲ್ಲಿದ್ದಾಗ ವೈದ್ಯಕೀಯ ನೆರವು ಕೋರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳು ಹೇಳುವಂತೆ ಪ್ರಯಾಣಿಕ, ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿತ್ತಿದ್ದರು. ವಿಮಾನ ನಿಲ್ದಾಣವು ವೈದ್ಯಕೀಯ ಸಹಾಯಕ್ಕಾಗಿ ವಿನಂತಿಯನ್ನು … Continued

ಕರ್ನಾಟಕದ ಎಲ್ಲರಿಗೂ ನವೆಂಬರ್ ಒಳಗೆ ಮೊದಲ ಡೋಸ್ ಕೋವಿಡ್‌ ಲಸಿಕೆ, ಎಲ್ಲ ಸಾರ್ವಜನಿಕ ವ್ಯವಸ್ಥೆ ಡಿಜಿಟಲೀಕರಣ: ಸಿಎಂ ಬೊಮ್ಮಾಯಿ

ಹಾವೇರಿ:ನವೆಂಬರ್ ತಿಂಗಳ ಒಳಗಡೆ ಕರ್ನಾಟಕದ ಎಲ್ಲರಿಗೂ ಕೊವಿಡ್ ಮೊದಲ ಡೋಸ್ (Covid Vaccine) ನೀಡಲಾಗುವುದು ಹಾಗೂ ಶೇಕಡಾ 60ರಷ್ಟು ಜನರಿಗೆ 2ನೇ ಡೋಸ್ ಲಸಿಕೆಯನ್ನೂ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿ ಮೆಗಾ ಡೈರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಸಾರ್ವಜನಿಕ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡುವ … Continued

ಉಕ್ರೇನ್‌ನಲ್ಲಿ ಜೋಸೆಫ್ ಸ್ಟಾಲಿನ್ ವಿರೋಧೀಗಳ ಬೃಹತ್ ಸಮಾಧಿಯಲ್ಲಿ 8000 ಜನರ ಮೂಳೆಗಳು ಪತ್ತೆ..!

ಕೀವ್: ಸ್ಟಾಲಿನ್ ಭಯೋತ್ಪಾದನೆಗೆ ಬಲಿಯಾದವರು ಎಂದು ನಂಬಲಾದ ಸಾವಿರಾರು ಜನರ ಅವಶೇಷಗಳನ್ನು ಉಕ್ರೇನ್‌ನ ದಕ್ಷಿಣ ನಗರ ಒಡೆಸ್ಸಾದಲ್ಲಿ ಪತ್ತೆ ಮಾಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 5,000 ರಿಂದ 8,000 ಜನರ ಮೂಳೆಗಳು ಒಡೆಸ್ಸಾ ವಿಮಾನ ನಿಲ್ದಾಣದ ಸಮೀಪವಿರುವ ಎರಡು ಡಜನ್‌ಗಿಂತಲೂ ಹೆಚ್ಚು ಸಮಾಧಿಗಳಲ್ಲಿ ಪತ್ತೆಯಾಗಿದ್ದು, ಇದು ಉಕ್ರೇನ್‌ನಲ್ಲಿ ಪತ್ತೆಯಾದ ಅತಿದೊಡ್ಡ ಸಾಮೂಹಿಕ ಸಮಾಧಿಗಳಲ್ಲಿ ಒಂದಾಗಿದೆ. … Continued

ನಿಮ್ಮ ಕಚೇರಿಗಳಿಂದ ಸ್ಟಾಲಿನ್ ಭಾವಚಿತ್ರ ತೆಗೆದುಹಾಕಿ:ಉಕ್ರೇನ್‌ನಲ್ಲಿ ಸಾಮೂಹಿಕ ಸಮಾಧಿ ಪತ್ತೆ ಮಾಡಿದ ನಂತರ ಸಿಪಿಐ (ಎಂ)ಗೆ ಕಾಂಗ್ರೆಸ್ ನಾಯಕನ ಒತ್ತಾಯ

ನವದೆಹಲಿ: ಕೇರಳದ ಸಿಪಿಐ (ಎಂ) ನಾಯಕರು ತಮ್ಮ ಪಕ್ಷದ ಕಚೇರಿಗಳು ಮತ್ತು ಇತರ ಸ್ಥಳಗಳಿಂದ ಜೋಸೆಫ್ ಸ್ಟಾಲಿನ್ ಅವರ ಭಾವಚಿತ್ರಗಳನ್ನು ತೆಗೆದುಹಾಕಬೇಕು ಎಂದು ಹಿರಿಯ ಕಾಂಗ್ರೆಸ್ ಶಾಸಕ ವಿ.ಡಿ ಸತೀಸನ್ ಒತ್ತಾಯಿಸಿದ್ದಾರೆ. ಉಕ್ರೇನ್‌ನ ದಕ್ಷಿಣ ನಗರ ಒಡೆಸ್ಸಾದಲ್ಲಿ ಸೋವಿಯತ್ ಸರ್ವಾಧಿಕಾರಿ ಭಯೋತ್ಪಾದನೆಗೆ ಬಲಿಯಾದವರು ಎಂದು ನಂಬಲಾದ ಸಾವಿರಾರು ಜನರ ಅವಶೇಷಗಳನ್ನು ಪತ್ತೆಹಚ್ಚಿದ ನಂತರ ಅವರ ಈ … Continued