ರಾಜ್ಯದಲ್ಲಿ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಏರಿಕೆಗೆ ತಾತ್ಕಾಲಿಕ ತಡೆ

posted in: ರಾಜ್ಯ | 0

ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳ ತಿಂಡಿ ತಿನಿಸುಗಳ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ. ದರ ಏರಿಕೆ ಕುರಿತಂತೆ ಹೋಟೆಲ್ ಸಂಘ ನಿರ್ಧರಿಸಿದ್ದರೂ ಬಹುತೇಕ ಹೋಟೆಲ್‌ಗಳು ದರ ಏರಿಕೆ ಮಾಡಲು ಹಿಂದೇಟು ಹಾಕಿವೆ. ತಿಂಡಿ, ಊಟ ಸೇರಿದಂತೆ ಚಹಾ, ಕಾಫಿಗಳ ಬೆಲೆಯಲ್ಲಿ ಶೇ … Continued

ನವೆಂಬರ್‌ 11ಕ್ಕೆ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ಸರ್ಕಾರ ಆದೇಶ

posted in: ರಾಜ್ಯ | 0

ಬೆಂಗಳೂರು: ಒನಕೆ ಓಬವ್ವ ಜನ್ಮ ದಿನವಾದ ನವೆಂಬರ್ 11ರಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿಯನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ವೆಂಕಟೇಶಪ್ಪ ನಡಾವಳಿಗಳನ್ನು ಹೊರಡಿಸಿದ್ದು, ಒನಕೆ ಓಬವ್ವ ಹೆಸರು, ಚಿತ್ರದುರ್ಗ ಇತಿಹಾಸದಲ್ಲಿ ಮರೆಯಲಾಗದು. ಅವರನ್ನು ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, … Continued

ಕೆರೆಯಲ್ಲಿ ಸಿಲುಕಿದ್ದ ಪಕ್ಷಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

posted in: ರಾಜ್ಯ | 0

ಶಿವಮೊಗ್ಗ: ಕೆರೆಯ ಮಧ್ಯದಲ್ಲಿ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸಲು ಹೋಗಿ ಯುವಕನೊಬ್ಬ ಮೃತಪಟ್ಟ ಘಟನೆ ಇಲ್ಲಿನ ಬೊಮ್ಮನಕಟ್ಟೆ ಕೆರೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತ ಯುವಕನನ್ನು ಮಹದೇವ (23) ಎಂದು ಗುರುತಿಸಲಾಗಿದೆ. ಕೆರೆಯ ಸಮೀಪ ಹಾದು ಹೋಗುತ್ತಿದ್ದ ಮಹದೇವ ಕೆರೆಯ ಮಧ್ಯದಲ್ಲಿ ಪಕ್ಷಿಯೊಂದು ಸಿಲುಕಿಕೊಂಡಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ತನ್ನಿಬ್ಬರು ಸ್ನೇಹಿತರನ್ನು ಕರೆದು ಹಕ್ಕಿಯ ರಕ್ಷಣೆಗೆ ಕೆರೆಗೆ ಇಳಿದಿದ್ದಾನೆ. … Continued

ತುಳಸಿ ಗೌಡ ಪದ್ಮಶ್ರೀ ಪಡೆದ ಫೋಟೋ ರಿಟ್ವೀಟ್‌ ಮಾಡಿ ಇಂಥವರ ಮುಂದೆ ತಾನು ಪದ್ಮಭೂಷಣ ಪ್ರಶಸ್ತಿಗೆ ‘ಅನರ್ಹ’ ಎಂದ ಆನಂದ ಮಹೀಂದ್ರ..!

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ನಂತರ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಕೃತಜ್ಞತೆಯ ಟಿಪ್ಪಣಿ ಹಂಚಿಕೊಂಡಿದ್ದಾರೆ. ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ಭೂಷಣದೊಂದಿಗೆ ಆನಂದ ಮಹೀಂದ್ರಾ ಅವರನ್ನು ಸೋಮವಾರ ಗೌರವಿಸಲಾಯಿತು. ಆದಾಗ್ಯೂ, ಇತರ ಸ್ವೀಕರಿಸುವವರಿಗೆ ಹೋಲಿಸಿದರೆ ತಾವು “ನಿಜವಾಗಿಯೂ ಅನರ್ಹರು” … Continued

ಮೋದಿಯವ್ರ ಜೊತೆ ಮಾತಾಡ್ದೆ, ಆದ್ರೆ ಅವ್ರಿಗೆ ಕನ್ನಡ ಬರ್ತಿರಲಿಲ್ಲ.. ನಾನು ಗಿಡನೆಡ್ತೇನೆ ಎಂದು ಕೈಸನ್ನೆಯಲ್ಲಿ ಹೇಳ್ದೆ: ದೆಹಲಿ ಅನುಭವ ಹಂಚಿಕೊಂಡ ತುಳಸಿ ಗೌಡ

posted in: ರಾಜ್ಯ | 0

ನವದೆಹಲಿ : ವೃಕ್ಷದೇವತೆ ಎಂದೇ ಹೆಸರಾದ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪಡೆದು ಎಲ್ಲ ಹೃದಯ ಗೆದ್ದಿದ್ದಾರೆ. ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಎಂದಿನ ದಿರಿಸಿನಲ್ಲೇ ಪ್ರಶಸ್ತಿಯನ್ನು ಸ್ವೀಕರಿಸಿದರು. ದೆಹಲಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಲ್ಲಿ ಯಾರಿಗೂ ಕನ್ನಡ … Continued

ತನ್ನದೇ ಶೈಲಿಯಲ್ಲಿ ರಾಷ್ಟ್ರಪತಿ ಹರಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ತೃತೀಯಲಿಂಗಿ ಮಂಜಮ್ಮ ಜೋಗತಿ..ವೀಕ್ಷಿಸಿ

posted in: ರಾಜ್ಯ | 0

ಬೆಂಗಳೂರು: ತೃತೀಯಲಿಂಗಿ, ಜಾನಪದ ಕಲಾವಿದೆ ಬಿ ಮಂಜಮ್ಮ ಜೋಗತಿ ಅವರು ಮಂಗಳವಾರ ದೆಹಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜಾನಪದ ನೃತ್ಯ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆಗೆ ಜೋಗತಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕರ್ನಾಟಕದಲ್ಲಿ ಅವರನ್ನು ಮಂಜವ್ವ ಜೋಗತಿ ಎಂದು … Continued

ನ್ಯೂಜಿಲೆಂಡ್ ವಿರುದ್ಧ ಭಾರತದ ಟಿ 20 ತಂಡ ಪ್ರಕಟ:ಕೊಹ್ಲಿ ಬದಲಿಗೆ ಹೊಸ ನಾಯಕನ ಆಯ್ಕೆ ಮಾಡಿದ ಬಿಸಿಸಿಐ

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ನಡೆಯುವ ಟಿ 20 ಸರಣಿಗಾಗಿ 16 ಸದಸ್ಯರ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ಟೀಮ್ ಇಂಡಿಯಾ ಟಿ 20 ತಂಡದ ಹೊಸ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್‌ ಮುಖ್ಯ ಕೋಚ್ ಆಗಿ ತಂಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.ಉಪನಾಯಕನಾಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿ ವಿರಾಟ್ … Continued

ಬಾಹ್ಯಾಕಾಶದಲ್ಲಿ 200 ದಿನ ಕಳೆದ ನಂತರ ಭೂಮಿಗೆ ಬಂದಿಳಿದ ನಾಸಾದ ನಾಲ್ವರು ಗಗನಯಾತ್ರಿಗಳು…ವೀಕ್ಷಿಸಿ

ನವದೆಹಲಿ: ಬಾಹ್ಯಾಕಾಶ ನಿಲ್ದಾಣದ 200 ದಿನಗಳ ಕಾರ್ಯಾಚರಣೆ ಕೊನೆಗೊಳಿಸಿ ನಾಲ್ವರು ಗಗನಯಾತ್ರಿಗಳು ಮಂಗಳವಾರ ಬೆಳಿಗ್ಗೆ ಫ್ಲೋರಿಡಾದ ಕರಾವಳಿಯಲ್ಲಿ SpaceX ನೊಂದಿಗೆ ಮರಳಿ ಭೂಮಿಗೆ ಬಂದಿಳಿದರು. ಕ್ರ್ಯೂ ಡ್ರ್ಯಾಗನ್‌ನಲ್ಲಿ ನಾಸಾ ಗಗನಯಾತ್ರಿಗಳಾದ ಶೇನ್ ಕಿಂಬ್ರೋ ಮತ್ತು ಮೇಗನ್ ಮ್ಯಾಕ್‌ಆರ್ಥರ್, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿಯ ಗಗನಯಾತ್ರಿ ಅಕಿಹಿಕೊ ಹೊಶೈಡ್ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಗಗನಯಾತ್ರಿ ಥಾಮಸ್ … Continued

ಕರ್ನಾಟಕದ ವಿಧಾನ ಪರಿಷತ್ 25 ಕ್ಷೇತ್ರಗಳಿಗೆ ಡಿ. 10ಕ್ಕೆ ಚುನಾವಣೆ; ಚುನಾವಣೆ ನಡೆಯಲಿರುವ ಸ್ಥಾನಗಳ ವಿವರ

posted in: ರಾಜ್ಯ | 0

ಬೆಂಗಳೂರು: ಮುಂದಿನ ಜನವರಿ 5ಕ್ಕೆ ತೆರವಾಗುವ ಕರ್ನಾಟಕದ ವಿಧಾನ ಪರಿಷತ್​​ನ 25 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ 10ರಂದು ಮತದಾನ ನಡೆಯಲಿದೆ ಎಂದು ಪ್ರಕಟಿಸಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 16ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ … Continued

ಮುಂಬೈ ಸ್ಫೋಟದ ಆರೋಪಿ, ದಾವೂದ್‌ ಬಂಟರೊಂದಿಗೆ ಸಚಿವ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರ: ಫಡ್ನವೀಸ್‌

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು 1993 ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಸರ್ದಾರ್ ಶಾವಾಲಿ ಖಾನ್ ಮತ್ತು ದಾವೂದ್ ಇಬ್ರಾಹಿಂ ಅವರ ಸಹೋದರಿ ಹಸೀನಾ ಪಾರ್ಕರ್ ಅವರ ಜೊತೆಯಲ್ಲಿದ್ದ ಮೊಹಮ್ಮದ್ ಸಲೀಂ ಇಶಾಕ್ ಪಟೇಲ್ ಅವರೊಂದಿಗೆ ಆಸ್ತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ … Continued