ಶಿಕ್ಷಣದಲ್ಲಿ ರಾಜಕೀಯ ಯಾಕೆ ಬೆರೆಸುತ್ತಿದ್ದೀರಿ? : ಸರ್ಕಾರಕ್ಕೆ ವಿರುದ್ಧ ಹೈಕೋರ್ಟ್‌ ಪ್ರಶ್ನೆ

posted in: ರಾಜ್ಯ | 0

ಬೆಂಗಳೂರು: ಶಿಕ್ಷಣದಲ್ಲಿ ರಾಜಕೀಯವನ್ನು ಯಾಕೆ ಬೆರೆಸುತ್ತಿದ್ದೀರಿ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಪದವಿ ಕೋರ್ಸ್​ಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸ್ಕೃತ ಭಾರತ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು (ಗುರುವಾರ) ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದಲ್ಲಿ … Continued

ಮೃತ ಗರ್ಭಿಣಿಯ ದೇಹದಿಂದ ಮಗುವನ್ನು ಜೀವಂತವಾಗಿ ಹೊರತೆಗೆದ ವೈದ್ಯರು

posted in: ರಾಜ್ಯ | 0

ಗದಗ : ಮೃತ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗುವನ್ನ ಜೀವಂತವಾಗಿ ವೈದ್ಯರು ಹೊರ ತೆಗೆದಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿಯ ಅನ್ನಪೂರ್ಣ ಅಬ್ಬಿಗೇರಿ ಎಂಬ ಗರ್ಭಿಣಿಯೊಬ್ಬರನ್ನ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಲೋಬಿಪಿ ಕಾರಣದಿಂದ ಕರೆತರಲಾಗಿದೆ. ಅವರು ಮೂರ್ಛೆ ತಪ್ಪಿ ಹೋಗಿ ಮೃತಪಟ್ಟಿದ್ದಾರೆ. ಆದರೆ ಹೊಟ್ಟೆಯಲ್ಲಿದ್ದ ಮಗು ಜೀವಂತವಿರುವುದು ವೈದ್ಯರಿಗೆ ತಿಳಿದ ತಕ್ಷಣ, … Continued

ಗಡಿ ಪ್ರದೇಶದಲ್ಲಿ ಅಕ್ರಮ ಚೀನೀ ನಿರ್ಮಾಣ ಒಪ್ಪಿಕೊಳ್ಳುವುದಿಲ್ಲ: ಅಮೆರಿಕ ವರದಿ ನಂತರ ಭಾರತ ಹೇಳಿಕೆ

ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಚೀನಾದ ಕಡೆಯಿಂದ ನಿರ್ಮಾಣ ಚಟುವಟಿಕೆಗಳನ್ನು ಉಲ್ಲೇಖಿಸಿರುವ ಅಮೆರಿಕ ವರದಿಯನ್ನು ಗಮನಿಸಿರುವುದಾಗಿ ಭಾರತ ಗುರುವಾರ ಹೇಳಿದೆ. ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶದಲ್ಲಿ ಬೀಜಿಂಗ್ ದೊಡ್ಡ ಗ್ರಾಮವನ್ನು ನಿರ್ಮಿಸುತ್ತಿರುವ ಕುರಿತು ಪೆಂಟಗನ್ ವರದಿಗೆ ಪ್ರತಿಕ್ರಿಯಿಸಿದ ಭಾರತ, ಚೀನಾ ತನ್ನ ಭೂಪ್ರದೇಶವನ್ನು ಯಾವುದೇ ಅಕ್ರಮ ವಶಪಡಿಸಿಕೊಂಡಿರುವುದನ್ನು ಒಪ್ಪಿಕೊಂಡಿಲ್ಲ ಅಥವಾ ನ್ಯಾಯಸಮ್ಮತವಲ್ಲದ ಚೀನಾದ ಹಕ್ಕುಗಳನ್ನು ಒಪ್ಪಿಕೊಂಡಿಲ್ಲ … Continued

ಬೆಂಗಳೂರಲ್ಲಿ ಆಲಹಳ್ಳಿಯಲ್ಲಿ 100 ಕೋಟಿ ಮೌಲ್ಯದ ಆಸ್ತಿ ಸ್ವಾಧೀನ ಪಡಿಸಿಕೊಂಡ ಬಿಡಿಎ

posted in: ರಾಜ್ಯ | 0

ಬೆಂಗಳೂರು: ಭೂಕಬಳಿಕೆದಾರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಂದು (ಗುರುವಾರ) ಜೆಪಿ ನಗರದ ಆಲಹಳ್ಳಿಯಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ತನ್ನ ಆಸ್ತಿಯನ್ನು ಮರುವಶಕ್ಕೆ ಪಡೆದುಕೊಂಡಿದೆ. ಜೆಪಿ ನಗರ ಬಡಾವಣೆಯ ಆಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಸರ್ವೆ ಸಂಖ್ಯೆ 5/7, 6/1, 6/4, 6/5, 7/2, 3, 4 ಮತ್ತು 8 ರ … Continued

ಬೆಳಗಾವಿ: ಬೈಪಾಸ್‌ ರಸ್ತೆಗೆ ಜಮೀನು ವಶಕ್ಕೆ ವಿರೋಧಿಸಿ ಪ್ರತಿಭಟನೆ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ..!

posted in: ರಾಜ್ಯ | 0

ಬೆಳಗಾವಿ : ರೈತರ ತೀವ್ರ ವಿರೋಧದ ನಡುವೆಯೂ ಹಲಗಾ-ಮಚ್ಛೆ ಮಧ್ಯದ ಬೈಪಾಸ್ ಕಾಮಗಾರಿ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಕಾಮಗಾರಿ ವಿರೋಧಿಸಿದ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಲಗಾ-ಮಚ್ಛೆ ಮಧ್ಯೆ ಬೈಪಾಸ್ ಕಾಮಗಾರಿಯನ್ನು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ … Continued

ಬಾಲಿವುಡ್‌ ನಟಿ ಕಂಗನಾ ರಣಾವತ್ ವಿರುದ್ಧ ದೂರು ದಾಖಲು

ಮುಂಬೈ: ಭಾರತಕ್ಕೆ 2014ರಿಂದ ನಿಜವಾದ ಸ್ವಾತಂತ್ರ್ಯ ಬಂದಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂಬ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೆ ವಿರುದ್ಧ ಮುಂಬೈ ನಲ್ಲಿ ದೂರು ದಾಖಲಾಗಿದೆ. ನಟಿ ಕಂಗನಾ ರಣಾವತ್ ಅವರು ದೇಶದ್ರೋಹದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷೆ ಪ್ರೀತಿ ಮೆನನ್ ದೂರು ದಾಖಲು ಮಾಡಿದ್ದಾರೆ‌ … Continued

ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣ ದಿಢೀರ್‌ ಹೆಚ್ಚಳ: ಮಾಲ್ ಗಳು ಬಂದ್, ಮತ್ತೆ ಲಾಕ್ಡೌನ್ ಜಾರಿ

ಬೀಜಿಂಗ್: ಚೀನಾದಲ್ಲಿ ರಾಜಧಾನಿ ಬೀಜಿಂಗ್‌ ಸೇರಿದಂತೆ ಹಲವೆಡೆ ಮತ್ತೆ ದಿಢೀರನೆ ಕೋವಿಡ್ ಪ್ರಕರಣಗಳು ಹೆಚ್ಚಾದ ಪರಿಣಾಮ ಅಧಿಕಾರಿಗಳು ಮಾಲ್ ಗಳನ್ನು ಬಂದ್ ಮಾಡಿಸಿದ್ದು, ಹಲವಾರು ಮಳಿಗೆಗಳನ್ನು ಲಾಕ್ ಡೌನ್ ಮಾಡಿರುವುದಾಗಿ ವರದಿಗಳು ಹೇಳಿವೆ. ಬೀಜಿಂಗ್ ಕೇಂದ್ರ ಜಿಲ್ಲೆಗಳಾದ ಚೋಯಾಂಗ್ ಮತ್ತು ಹೈಡಿಯನ್ ನಲ್ಲಿ ಗುರುವಾರ ಬೆಳಗ್ಗೆ ಆರು ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸ್ಥಳೀಯ … Continued

ವಿಶ್ವದ ಮೊದಲ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ ಜೂನ್‌ನಲ್ಲಿ ಭಾರತದಲ್ಲಿ ಆಯೋಜನೆ

ನವದೆಹಲಿ: ಭಾರತವು ಮುಂದಿನ ವರ್ಷ ಜೂನ್‌ನಲ್ಲಿ ಮೊಟ್ಟಮೊದಲ ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಆಯೋಜಿಸಲಿದೆ. ಭುವನೇಶ್ವರದಲ್ಲಿ ಭಾರತದ ಮೊದಲ ದೈಹಿಕ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ (NYSF) ಅಧ್ಯಕ್ಷ ಉದಿತ್ ಸೇತ್‌ “ಭಾರತದ ಮೊದಲ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ ಅನ್ನು ಜೂನ್ 2022 ರಲ್ಲಿ ಭಾರತವು … Continued

ಕೋವಿಡ್ -19ರ ಡೆಲ್ಟಾ ಕಾಳಜಿಯ ಮುಖ್ಯ ಕೋವಿಡ್ ರೂಪಾಂತರವಾಗಿ ಉಳಿದಿದೆ: ಐಎನ್‌ಎಸ್‌ಎಸಿಒಜಿ

ನವದೆಹಲಿ: ಕೋವಿಡ್ -19ರ ಡೆಲ್ಟಾ ರೂಪಾಂತರವು ಕಾಳಜಿಯ ಮುಖ್ಯ ರೂಪಾಂತರವಾಗಿ ಮುಂದುವರೆದಿದೆ ಮತ್ತು ಆಸಕ್ತಿ ಅಥವಾ ಕಾಳಜಿಯ ಇತರ ರೂಪಾಂತರಗಳು ಈಗ ಭಾರತದಿಂದ ಡೇಟಾ ಅನುಕ್ರಮಗೊಳಿಸುವುದರಲ್ಲಿ ನಗಣ್ಯವಾಗಿವೆ ಎಂದು ಇಂಡಿಯನ್ ಸಾರ್ಸ್-ಕೋವಿ -2 ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ಹೇಳಿದೆ. ಐಎನ್‌ಎಸ್‌ಎಸಿಒಜಿ ಬುಲೆಟಿನ್‌ನಲ್ಲಿ, ಜಾಗತಿಕ ಸನ್ನಿವೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ. B.1.617.2 (AY) ಮತ್ತು … Continued

ಇಂದು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಬಹುಮಾನ ವಿತರಣೆ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಡಿ.ಆರ್.ಹೆಚ್ ಸಭಾಭವನದಲ್ಲಿ ನವೆಂಬರ್‌ ೧೨ರಂದು ಬೆಳಿಗ್ಗೆ ೧೦.೩೦ ಕ್ಕೆ ಧಾರವಾಡ ಶಹರ ಅಟೋ ಚಾಲಕರ/ಮಾಲಿಕರ ಸಂಘ (ರಿ) ಹಾಗೂ ಜನತಾ ಶಿಕ್ಷಣ ಸಮಿತಿ, ವಿದ್ಯಾಗಿರಿ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ. ಜೆ.ಎಸ್.ಎಸ್.ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ … Continued