ಮಹಾರಾಷ್ಟ್ರ: 6 ತಿಂಗಳಲ್ಲಿ ತಾಯಿಯಿಲ್ಲದ ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಸೇರಿದಂತೆ 400 ಮಂದಿಯಿಂದ ಅತ್ಯಾಚಾರ..!

ಔರಂಗಾಬಾದ್ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 16 ವರ್ಷದ ಬಾಲಕಿಯ ಮೇಲೆ 400 ಮಂದಿ ಅತ್ಯಾಚಾರವೆಸಗಿದ್ದಾರೆ. ಆಕೆ ದೂರು ದಾಖಲಿಸಲು ಪ್ರಯತ್ನಿಸಿದಾಗ ಪೋಲೀಸರೂ ಸಹ ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆಕೆ ಈಗ ಎರಡು ತಿಂಗಳ ಗರ್ಭಿಣಿ ಎಂದು ಹೇಳಲಾಗಿದೆ. ಈ ವಾರ ಆಕೆ ಪೊಲೀಸರಿಗೆ ದೂರು … Continued

ಸಚಿವ ಸಂಪುಟದ 77 ಸಚಿವರ 8 ಗುಂಪುಗಳಾಗಿ ವಿಂಗಡಿಸಿ, ಅವರಿಗೆ ಆಡಳಿತ ಸುಧಾರಣಾ ಕಾರ್ಯ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಸುಧಾರಿಸುವ ಪ್ರಯತ್ನದಲ್ಲಿ, ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ತಂಡಗಳಿಗೆ ನೇಮಕಾತಿಗಾಗಿ ವೃತ್ತಿಪರರ ಪೂಲ್ ರಚಿಸಲು ಕೇಂದ್ರವು ಇಡೀ ಸಚಿವ ಸಂಪುಟದ 77 ಸದಸ್ಯರನ್ನು ಎಂಟು ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯುವ ವೃತ್ತಿಪರರನ್ನು ಸೆಳೆಯಲು ಯೋಜಿಸುತ್ತಿದೆ, … Continued

ಬಂಟ್ವಾಳ: ಪಿಕ್‍ಅಪ್ ವಾಹನ ಮರಕ್ಕೆ ಡಿಕ್ಕಿ, ಇಬ್ಬರು ಸಾವು

posted in: ರಾಜ್ಯ | 0

ಬಂಟ್ವಾಳ: ಸಮಾರಂಭಕ್ಕೆ ಕ್ಯಾಟರಿಂಗ್ ಆಹಾರ ಸರಬರಾಜು ಮಾಡುತ್ತಿದ್ದ ಪಿಕಪ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಬ್ರಹ್ಮರಕೂಟ್ಟು ಸಮೀಪ ರಾಮಲ್ ಕಟ್ಟೆ ಬಳಿ ನಡೆದಿದೆ. ಮೃತರನ್ನು ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (25) ಮತ್ತು ಆಶೀತ್ (21) ಎಂದು ಗುರುತಿಸಲಾಗಿದ್ದು, ಸಿಂಚನ್ ಮತ್ತು ಸುದೀಪ ಎಂಬವರುಗಾಯಗೊಂಡಿದ್ದಾರೆ. ಕ್ಯಾಟರಿಂಗ್ ಕೆಲಸವನ್ನು ಮುಗಿಸಿ ಮಂಗಳೂರು … Continued

ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ 236 ಜನರಿಗೆ ಕೋವಿಡ್‌  ಸೋಂಕು

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ನವೆಂಬರ್ 14) ಹೊಸದಾಗಿ 236 ಜನರಿಗೆ ಕೋವಿಡ್‌  ಸೋಂಕು ದೃಢವಾಗಿದೆ. ಇದೇ ಸಮಯದಲ್ಲಿ ಸೋಂಕಿನಿಂದ 2 ಜನರ ಸಾವು ಸಂಭವಿಸಿದೆ. ಹಾಗೂ 264 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 29,91,850 ಕ್ಕೆ ಏರಿಕೆಯಾಗಿದೆ. ಒಟ್ಟು 29,45,679 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ … Continued

ವಾಯು ಮಾಲಿನ್ಯದ ಬಿಕ್ಕಟ್ಟು: ದೆಹಲಿ ನಂತರ ಈಹ ಹರ್ಯಾಣದ 4 ಜಿಲ್ಲೆಗಳಲ್ಲಿ ನವೆಂಬರ್ 17 ರ ವರೆಗೆ ಶಾಲೆಗಳು ಬಂದ್‌

ನವದೆಹಲಿ: ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಿಕ್ಕಟ್ಟಿನ ಮಧ್ಯೆ, ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರಿಯಾಣ ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಭಾನುವಾರ ನಿರ್ಧರಿಸಿದೆ. ನವೆಂಬರ್ 17 ರ ವರೆಗೆ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲು ಸಹ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. … Continued

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ: ಪ್ರಿಯಾಂಕಾ ಗಾಂಧಿ ಘೋಷಣೆ

ನವದೆಹಲಿ: ಸದ್ಯಕ್ಕೆ ಎಸ್‌ಪಿ ಅಥವಾ ಬಿಎಸ್‌ಪಿಯೊಂದಿಗೆ ಯಾವುದೇ ಚುನಾವಣಾ ಪೂರ್ವ ಮೈತ್ರಿಯನ್ನು ತಳ್ಳಿಹಾಕಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಎಲ್ಲಾ 403 ಸ್ಥಾನಗಳಲ್ಲಿ ತನ್ನದೇ ಆದ ಕಾರ್ಯಕರ್ತರನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ. ಭಾನುವಾರ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಕಾಂಗ್ರೆಸ್ ಪಕ್ಷದ ‘ಪ್ರತಿಜ್ಞಾ ಸಮ್ಮೇಳನ-ಲಕ್ಷ್ಯ 2022’ … Continued

ಕುಟುಂಬಕ್ಕೆ ನಿಷ್ಠನಾಗಿದ್ದ ರಿಕ್ಷಾ ಎಳೆಯುವ ಬಡವನಿಗೆ ಕೋಟಿ ರೂಪಾಯಿ ಆಸ್ತಿ ದಾನ ಮಾಡಿದ ವಿಧವೆ…!

posted in: ರಾಜ್ಯ | 0

ಒಡಿಶಾದ ಹಿರಿಯ ಮಹಿಳೆಯೊಬ್ಬರು ತಮ್ಮ ಉದಾರತೆಯಿಂದ ಮುಂದಿನ ಹಲವು ತಲೆಮಾರುಗಳಿಗೆ ಮಾದರಿಯಾಗಿದ್ದಾರೆ. ಒಡಿಶಾದ ಕಟಕ್ ನಗರದ ಮಹಿಳೆ ತನ್ನ ಸಂಪೂರ್ಣ ಆಸ್ತಿಯನ್ನು ತನ್ನ ನಂಬಿಗಸ್ಥನಾದ ರಿಕ್ಷಾ ಚಾಲಕನಿಗೆ ನೀಡಿ ಅವನನ್ನು ಕೋಟ್ಯಾಧಿಪತಿಯನ್ನಾಗಿ ಮಾಡುವ ಮೂಲಕ ರಿಕ್ಷಾ ಚಾಲಕನ ಜೀವನವನ್ನು ಬದಲಾಯಿಸಲು ನಿರ್ಧರಿಸಿದ್ದಾರೆ..! ಒಡಿಶಾದ ಕಟಕ್ ನಗರದಲ್ಲಿ ವಾಸವಾಗಿರುವ 63 ವರ್ಷದ ವಿಧವೆ ಮಿನಾತಿ ಪಟ್ನಾಯಕ್ ಕಳೆದ … Continued

ಸೇನೆಗೆ ಮತ್ತಷ್ಟು ಬಲ..ರಷ್ಯಾದಿಂದ ಭಾರತಕ್ಕೆ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಪೂರೈಕೆ ಆರಂಭ: ಎಸ್​-400 ಸಾಮರ್ಥ್ಯದ ಮಾಹಿತಿ ಇಲ್ಲಿದೆ

ನವದೆಹಲಿ: ಶತ್ರುದೇಶಗಳಿಂದ ಬರುವ ಯುದ್ಧವಿಮಾನಗಳು ಮತ್ತು ಕ್ರೂಸ್​ ಕ್ಷಿಪಣಿಗಳನ್ನು ಮುಂಚಿತವಾಗಿಯೇ ಗುರುತಿಸಿ ಹೊಡೆದುರುಳಿಸಬಲ್ಲ ಭೂಮಿಯಿಂದ ಆಗಸಕ್ಕೆ ಹಾರುವ ಎಸ್​-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಈ ಮೊದಲಿನ ಒಪ್ಪಂದದಂತೆಯೇ ಭಾರತಕ್ಕೆ ರಷ್ಯಾ ಪೂರೈಸುತ್ತಿದೆ. ಮೊದಲ ಹಂತದ ಉಪಕರಣಗಳು ಭಾರತ ತಲುಪಿವೆ ಎಂದು ಮಿಲಿಟರಿ ಟೆಕ್ನಿಕಲ್ ಕೊಆಪರೇಷನ್ ಸಂಸ್ಥೆಯ ನಿರ್ದೇಶಕ ಡ್ಮಿತ್ರಿ ಶುಗೇವ್ ದುಬೈ ಏರ್​ಶೋನಲ್ಲಿ ಹೇಳಿದ್ದಾರೆ. ಶತ್ರುದೇಶಗಳಿಂದ … Continued

ಗಡ್ಚಿರೋಲಿ ಎನ್‌ಕೌಂಟರ್‌ನಲ್ಲಿ 26 ನಕ್ಸಲರ ಜೊತೆ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಕೂಡ ಹತ

ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ 26 ನಕ್ಸಲರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯೂ ಆಗಿರುವ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಕೂಡ ಸೇರಿದ್ದಾರೆ ಎಂದು ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಭಾನುವಾರ ಖಚಿತಪಡಿಸಿದ್ದಾರೆ. ನಿನ್ನೆ ಗಡ್‌ಚಿರೋಲಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 26 ನಕ್ಸಲರು ಮೃತಪಟ್ಟಿದ್ದಾರೆ – ಇದರಲ್ಲಿ 20 … Continued

ರಾಯಚೂರಿನ ಹಚ್ಚಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ

posted in: ರಾಜ್ಯ | 0

ರಾಯಚೂರು: ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸ್ಕ್ರ್ಯಾಪ್ ಯಾರ್ಡಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದ ವಾಯು ಮಾಲಿನ್ಯ ಉಂಟಾಗಿದೆ. ಸಮೀಪದಲ್ಲಿ ಹಾ ಕಸಕ್ಕೆ ಬೆಂಕಿ ಹಚ್ಚಿದ್ದು ಇದಕ್ಕೆ ತಗುಲಿದೆ ಎನ್ನಲಾಗಿದೆ. ಚಿನ್ನದ ಗಣಿಗೆ ಸಮೀಪದಲ್ಲಿನ ಟೈರ್‌ಗಳಿಗೂ ಬೆಂಕಿ ತಗುಲಿ, ಧಗಧಗಿಸಿ ಹೊತ್ತಿ ಉರಿಯುತ್ತಿದೆ. ಕಳೆದ ಎರಡು ಗಂಟೆಯಿಂದ ಟೈರ್ ಗೆ ತಗುಲಿರುವಂತ ಬೆಂಕಿ … Continued