ವಿಧಾನ ಪರಿಷತ್ ಚುನಾವಣೆ: ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನಪರಿಷತ್​ ಚುನಾವಣೆ ಡಿಸೆಂಬರ್ 10 ರಂದು ನಡೆಯಲಿದೆ. ಈ ಹಿನ್ನೆಲೆ 25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಲಿ ಸದಸ್ಯರ ಪೈಕಿ ಕೊಡಗು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಹಾಲಿ ಎಂಎಲ್​ಸಿ ಸುನಿಲ್ ಸುಬ್ರಮಣಿ ಸೋದರನಿಗೆ ಟಿಕೆಟ್​ ನೀಡಲಾಗಿದೆ. ಸುನಿಲ್ ಸುಬ್ರಮಣಿ ಸಹೋದರ ಸುಜಾ ಕುಶಾಲಪ್ಪಗೆ ಟಿಕೆಟ್​ … Continued

ಭಾರತೀಯ ವಾಯುಪಡೆಗೆ ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್ ಹಸ್ತಾಂತರಿಸಿದ ಪ್ರಧಾನಿ ಮೋದಿ..ಅವಳಿ ಎಂಜಿನ್ ಹೆಲಿಕಾಪ್ಟರ್ ಬಗ್ಗೆ ಮಾಹಿತಿ

ನವದೆಹಲಿ: ಭಾರತಕ್ಕೆ ಹೆಮ್ಮೆಯ ಕ್ಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಭಾರತದ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುವ ‘ರಾಷ್ಟ್ರೀಯ ರಕ್ಷಾ ಸಮರ್ಪಣ್ ಪರ್ವ್’ ಆಚರಣೆಯ ಸಂದರ್ಭದಲ್ಲಿ ಭಾರತೀಯ ವಾಯುಪಡೆಗೆ ಎಚ್‌ಎಎಲ್‌ (HAL) ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ಹಸ್ತಾಂತರಿಸಿದರು. ಭಾರತೀಯ ವಾಯುಸೇನೆ (IAF) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ … Continued

ಡಿ.13ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ

ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣಸೌಧದಲ್ಲಿ ಡಿಸೆಂಬರ್ 13ರಿಂದ ನಡೆಯಲಿದೆ. ಡಿಸೆಂಬರ್ 13 ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ. ಮೂರು ವರ್ಷದ ನಂತರ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಡಿಸೆಂಬರ್ 13 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನ ಸಭೆಯನ್ನು ಸಮಾವೇಶಗೊಳಿಸಬೇಕೆಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಅಧಿಸೂಚನೆ ಹೊರಡಿಸಿದ್ದಾರೆ. … Continued

ಕಾರ್ತಿಕ ಮಾಸ ಮುಗಿಯವ ವರೆಗೂ ಮಳೆಗಾಲ ಇರಲಿದೆ: ಕೋಡಿಮಠದ ಶ್ರೀಗಳ ಭವಿಷ್ಯ

ಧಾರವಾಡ: ಕಾರ್ತಿಕ ಮಾಸ ಮುಗಿಯವರೆಗೂ ಮಳೆಗಾಲ ಮುಂದುವರಿಯಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ಇಂದು (ಶುಕ್ರವಾರ) ಮಾಧ್ಯದವರ ಜೊತೆ ಮಾತನಾಡಿದ ಅವರು, ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಕೃತಿ ವಿಕೋಪದಿಂದ ಮೆಳೆ ಹೆಚ್ಚಾಗುತ್ತಿದೆ. ಇನ್ನೂ ಅನಾಹುತವಾಗುವ ಸಾಧ್ಯತೆಯಿದೆ. ಮಳೆ ಕಡಿಮೆಯಾಗಲು ಮಕರ ಸಂಕ್ರಮಣದವರೆಗೂ ಕಾಯಬೇಕು ಎಂದು ಕೋಢಿಮಠದ ಶ್ರೀಗಳು ಹೇಳಿದರು. ದೈವ ಕೃಪೆಯಿಂದ … Continued

ಆಂಧ್ರದಲ್ಲಿ ಭೀಕರ ಮಳೆ..:ತಿರುಪತಿ ಬಳಿ ನೋಡುತ್ತಲೇ ಕುಸಿದುಬಿದ್ದ ಬೃಹತ್‌ ಮನೆ..ರಾಂಪುರ ಬಳಿ ಜೀವ ಉಳಿಸಿಕೊಳ್ಳಲು ಬಸ್‌ ಟಾಪ್‌ ಮೇಲೆ ಕುಳಿತ ಜನ..! ವೀಕ್ಷಿಸಿ

ಭಾರೀ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಶುಕ್ರವಾರ, ನವೆಂಬರ್ 19 ರಂದು ಮುಂದುವರೆರಿದಿದೆ. , ಅನೇಕ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಖ್ಯಾತ ಯಾತ್ರಾ ಸ್ಥಳ ತಿರುಪತಿ ಸಮೀಪದ ತಿರುಚನೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಎರಡು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಆಘಾತಕಾರಿ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ವಸುಂಧರಾ ನಗರದಲ್ಲಿ ಶುಕ್ರವಾರ … Continued

ಆಗ್ರಾ ಆಸ್ಪತ್ರೆಯಲ್ಲಿ ದೇವರಿಗೆ ಬ್ಯಾಂಡೇಜ್‌…!: ಗೋಳಾಡಿ ಕೃಷ್ಣನ ವಿಗ್ರಹದ ಮುರಿದ ಕೈಗೆ ವೈದ್ಯರಿಂದ ಬ್ಯಾಂಡೇಜ್ ಹಾಕಿಸಿಕೊಂಡ ಅರ್ಚಕ…!!

ಆಗ್ರಾ: ಇತ್ತೀಚಿನ ದಿನಗಳಲ್ಲಿ ಕರಾಳ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಉತ್ತರ ಪ್ರದೇಶದಲ್ಲಿ ಈಗ ಚಿತ್ರವಿಚಿತ್ರ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಆಗ್ರಾದ ಜಿಲ್ಲಾ ಆಸ್ಪತ್ರೆಗೆ ಇಂದು (ಶುಕ್ರವಾರ) ಅರ್ಚಕರೊಬ್ಬರು ಕೃಷ್ಣನ ವಿಗ್ರಹವನ್ನು ಹೊತ್ತು ಬಂದಿದ್ದರು. ನನ್ನ ಕೃಷ್ಣನ ಕೈ ಮುರಿದು ಹೋಗಿದೆ. ಇದಕ್ಕೆ ಬ್ಯಾಂಡೇಜ್ ಹಾಕಿ ಎಂದು ವೈದ್ಯರ ಬಳಿ ಮನವಿ ಮಾಡಿದ್ದು, ಅವರ ಮಾತನ್ನು ಕೇಳಿದ … Continued

ರಾಜ್ಯಾದ್ಯಂತ ಮುಂದಿನ ಐದು ದಿನ ಭಾರೀ ಮಳೆ: ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನವೆಂಬರ್‌ 23 ರ ವರೆಗೆ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಅಲ್ಲದೇ ರಾಜ್ಯದ 11 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. … Continued

ಭಾರೀ ಮಳೆ: ನಾಳೆ ಧಾರವಾಡ ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಧಾರವಾಡ: ನಾಳೆ, ನವೆಂಬರ 20 ರಂದು ಧಾರವಾಡ ಜಿಲ್ಲೆಯ ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ನಾಳೆಯೂ ಮಳೆ ಮುಂದುವರಿಯುವುದಾಗಿ ಹವಾಮಾನ ಇಲಾಖೆ ವರದಿ ನೀಡಿದ್ದು, ಮುಂಜಾಗ್ರತೆಯಾಗಿ ನಾಳೆ, ನವೆಂಬರ 20 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಇಂದು (ಶುಕ್ರವಾರ) … Continued

ಪತ್ನಿಗೆ ಮಾಡಿದ ಅವಮಾನ ಸಹಿಸಲ್ಲ ..ಮತ್ತೆ ಸಿಎಂ ಆಗುವವರೆಗೂ ವಿಧಾಸಭೆಗೆ ಹೋಗಲ್ಲ ಎಂದು ಕಣ್ಣೀರು ಹಾಕಿದ ಚಂದ್ರಬಾಬು ನಾಯ್ಡು

ಅಮರಾವತಿ: ನವೆಂಬರ್ 19, ಶುಕ್ರವಾರದಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಮತ್ತೆ ಅಧಿಕಾರಕ್ಕೆ ಬಂದ ನಂತರವೇ ಆಂಧ್ರ ಪ್ರದೇಶ ವಿಧಾನಸಭೆಗೆ ಮತ್ತೆ ಕಾಲಿಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಎರಡನೇ ದಿನದಂದು, ಆಡಳಿತಾರೂಢ ವೈಎಸ್‌ಆರ್‌ಸಿಪಿ ಸದಸ್ಯರಿಂದ ತಾವು ಎದುರಿಸುತ್ತಿರುವ ನಿರಂತರ ಅವಮಾನದಿಂದ ನೋವಾಗಿದೆ … Continued

ತಿರುಪತಿಯಲ್ಲಿ ಅಭೂತಪೂರ್ವ ಮಳೆ-ಪ್ರವಾಹ: ಭಕ್ತರ ದರ್ಶನಕ್ಕೆ ವೆಂಕಟೇಶ್ವರ ದೇವಸ್ಥಾನ ಬಂದ್‌ ಮಾಡಿದ ಟಿಟಿಡಿ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ನವೆಂಬರ್ 19 ಶುಕ್ರವಾರದಂದು ಭಕ್ತರಿಗೆ ಮುಚ್ಚಲಾಗಿದೆ. ದೇವಾಲಯವು ಏಳು ಬೆಟ್ಟಗಳಿಂದ ಆವೃತವಾದ ತಿರುಪತಿ ಪಟ್ಟಣದಲ್ಲಿ ಅಭೂತಪೂರ್ವ ಭಾರೀ ಮಳೆಯ ನಂತರ ತಿರುಪತಿ ತುರುಮಲಾ ಟ್ರಸ್ಟ್‌ (ಟಿಟಿಡಿ) ಈ ನಿರ್ಧಾರ ಕೈಗೊಂಡಿದೆ. ವೆಂಕಟಾದ್ರಿಯ ಏಳನೇ ಬೆಟ್ಟದ ಶಿಖರದಲ್ಲಿ ದೇವಾಲಯವಿದ್ದು, ಭಾರೀ ಮಳೆಯಿಂದಾಗಿ ಮಳೆ ನೀರು … Continued