ಧಾರವಾಡದಲ್ಲಿ ರಾಷ್ಟ್ರೀಯ ಜೈವಿಕ ಸುರಕ್ಷತಾ ಹಂತ-3ರ ಪ್ರಯೋಗಾಲಯ ಸ್ಥಾಪನೆ : ಕೇಂದ್ರ ಸಚಿವ ಜೋಶಿ

ನವದೆಹಲಿ: ಕೋವಿಡ್ – 19 ಹಾಗೂ ಅದೇ ತರಹದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ಅವುಗಳ ಗಂಭೀರ ಪರಿಣಾಮಗಳನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಸಹಾಯವಾಗಬಲ್ಲ ಆಧುನಿಕ ಲಸಿಕೆಗಳನ್ನು ತಯಾರಿಸಲು ಅಗತ್ಯವಿರುವ ಜೈವಿಕ ಸುರಕ್ಷತಾ ಹಂತ-3ರ ಪ್ರಯೋಗಾಲಯ (Biosafety Level-3 (BSL-3)) ಸ್ಥಾಪನೆಯ ಕೇಂದ್ರವಾಗಿ ಧಾರವಾಡ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಪ್ರಧಾನಮಂತ್ರಿ … Continued

ಮಹತ್ವದ ಸಂಶೋಧನೆ-ನಮ್ಮ ಡಿಎನ್ಎ ಬಂದಿದ್ದು ಆಳವಾದ ಬಾಹ್ಯಾಕಾಶದಿಂದ…ಉಲ್ಕಾಶಿಲೆಗಳಿಂದ ಭೂಮಿ ಮೇಲೆ ಕಿಕ್‌ಸ್ಟಾರ್ಟ್ ಆಯ್ತು ಜೀವ…!?

ಬಾಹ್ಯಾಕಾಶದಿಂದ ಬಂದ ಉಲ್ಕೆಗಳಲ್ಲಿ ಭೂಮಿಯ ಮೇಲಿನ ಜೀವನವನ್ನು ಕಿಕ್‌ಸ್ಟಾರ್ಟ್ ಮಾಡಲು ಅಗತ್ಯವಾದ ರಾಸಾಯನಿಕ ಅಂಶಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಜೀವಕ್ಕೆ ಆಶ್ರಯ ನೀಡಬಲ್ಲ ಮತ್ತೊಂದು ಶಿಲೆಯನ್ನು ಹುಡುಕಲು ವಿಜ್ಞಾನಿಗಳು ಬ್ರಹ್ಮಾಂಡದ ಆಳಕ್ಕೆ ಹೋಗಿದ್ದು, ಭೂಮಿಯ ಮೇಲೆ ಜೀವನದ ಪ್ರಕ್ರಿಯೆಯು ಹೇಗೆ ಪ್ರಾರಂಭವಾಯಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈಗ ಉಲ್ಕಾಶಿಲೆಗಳ ವಿಶ್ಲೇಷಣೆಯು ಜೀವನದ ರಾಸಾಯನಿಕ ಪದಾರ್ಥಗಳು ಬಾಹ್ಯಾಕಾಶದ … Continued

ಕೇಂದ್ರೀಯ ವಿದ್ಯಾಲಯಗಳ ಪ್ರವೇಶಕ್ಕೆ ಇದ್ದ ಸಂಸದರು, ಜಿಲ್ಲಾಧಿಕಾರಿಗಳ ಕೋಟಾ ರದ್ದುಗೊಳಿಸಿದ ಕೇಂದ್ರ

ನವದೆಹಲಿ: ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ಹೊರಡಿಸಿದ ಇತ್ತೀಚಿನ ಸುತ್ತೋಲೆ ಪ್ರಕಾರ, ಶಿಕ್ಷಣ ಸಚಿವಾಲಯವು ಕೇಂದ್ರೀಯ ವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ ಸಂಸದ (ಸಂಸತ್‌ ಸದಸ್ಯರು) ಮತ್ತು ಜಿಲ್ಲಾಧಿಕಾರಿ (ಡಿಎಂ) ಸೇರಿದಂತೆ ಹಲವಾರು ವಿಭಾಗಗಳಲ್ಲಿನ ಕೋಟಾಗಳನ್ನು ರದ್ದುಗೊಳಿಸಿದೆ. ಈ ಹಿಂದೆ, ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ದೇಶಾದ್ಯಂತ ಕೇಂದ್ರೀಯ ವಿದ್ಯಾಲಯದ ಶಾಲೆಗಳಿಗೆ ಪ್ರವೇಶಕ್ಕಾಗಿ ಸಂಸದರ ಕೋಟಾ ಸೇರಿದಂತೆ ಎಲ್ಲಾ … Continued

ಕೊರೊನಾ ಸೋಂಕು ತಡೆ: ಸದ್ಯಕ್ಕಂತೂ ಕಠಿಣ ನಿರ್ಬಂಧ ಜಾರಿಯಿಲ್ಲ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತಡೆಗೆ ಸದ್ಯಕ್ಕೆ ಕಠಿಣ ನಿಯಮಗಳನ್ನು ಜಾರಿ ಮಾಡುವ ಅಗತ್ಯವಿಲ್ಲ. ಮೂರು ಟಿ ಸೂತ್ರವನ್ನು ಅಳವಡಿಸಿಕೊಂಡು ಸೋಂಕು ನಿಯಂತ್ರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೋವಿಡ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಶ್ಯಕತೆ ಬಂದಾಗ … Continued

ಮಲಯಾಳಂ ನಟ ವಿಜಯ್ ಬಾಬು ಮೇಲೆ ಅತ್ಯಾಚಾರ ಪ್ರಕರಣ ದಾಖಲು, ಇದು ಸುಳ್ಳು ಆರೋಪ ಎಂದ ನಟ

ಮಲಯಾಳಂ ನಟ ವಿಜಯ್ ಬಾಬು ಅವರ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು, ಮಹಿಳೆಯೊಬ್ಬರು ನಟ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಜಯ್ ಬಾಬು ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ತನ್ನ ಮೇಲೆ ಸುಳ್ಳು ಆರೋಪ ಮಾಡಿದ “ಅವಳನ್ನು ಸುಲಭವಾಗಿ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ದೂರುದಾರರ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ವಿಜಯ … Continued

ಕೇಂದ್ರದ ಅಬಕಾರಿ ಸುಂಕ ಕಡಿತ ಮಾಡಿದ್ರೂ ಕೆಲವು ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲಿನ ಸ್ಥಳೀಯ ತೆರಿಗೆ ಕಡಿಮೆ ಮಾಡಿಲ್ಲ: ಪ್ರಧಾನಿ ಮೋದಿ

ನವದೆಹಲಿ: ಕಳೆದ ನವೆಂಬರ್‌ನಲ್ಲಿ ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡದೆ “ಅನ್ಯಾಯ” ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಮೋದಿ, ಜಾಗತಿಕ ಪರಿಸ್ಥಿತಿಯಿಂದಾಗಿ ಜನರು ಎದುರಿಸುತ್ತಿರುವ ಸವಾಲುಗಳ ಪ್ರತ್ಯೇಕ ವಿಷಯವನ್ನು ಈ … Continued

ಪಿಎಸ್‌ಐ ನೇಮಕಾತಿ ಪರೀಕ್ಷಾ ಹಗರಣ: ಅಭ್ಯರ್ಥಿಗಳಿಂದ ೬೦ ಲಕ್ಷ ರೂ. ವಸೂಲಿ, ಒಡಿಶಾದಲ್ಲಿ ಬ್ಲೂ ಟೂತ್‌ ಖರೀದಿ…!?

ಬೆಂಗಳೂರು: ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹುದ್ದೆಗಳ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು ತೀವ್ರ ಗೊಳಿಸಿರುವ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬಳಸುತ್ತಿದ್ದ ಬ್ಲೂ ಟೂತ್ ಅನ್ನು ಒಡಿಶಾದಲ್ಲಿ ಖರೀದಿಸಿರುವುದನ್ನು ಪತ್ತೆಹಚ್ಚಿದ್ದಾರೆ ಹಾಗೂ ಅಭ್ಯರ್ಥಿಗಳಿಗೆ ಮ್ಯಾಕ್ರೋ ಬ್ಲೂ ಟೂತ್, ಮೈಕ್ರೋ ಡಿವೈಸ್ ಬಳಸಿ ಉತ್ತರ ಹೇಳಲು ಆರೋಪಿಗಳು ನುರಿತ ತಂತ್ರಜ್ಞರ ತಂಡ ಬಳಕೆ ಮಾಡಿರುವುದನ್ನು ತನಿಖೆಯಲ್ಲಿ … Continued

ಸುಲಿಗೆ ಪ್ರಕರಣ: ಮಾಜಿ ಎಂಎಲ್‌ಸಿ ಶ್ರೀಕಾಂತ್ ಘೊಟ್ನೇಕರಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಬೆಂಗಳೂರು: ಸಿವಿಲ್ ಗುತ್ತಿಗೆದಾರರೊಬ್ಬರು ದಾಖಲಿಸಿರುವ ಸುಲಿಗೆ ಪ್ರಕರಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀಕಾಂತ್ ಘೊಟ್ನೇಕರ್‌ಗೆ ನಿರೀಕ್ಷಣಾ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ. ನಿರೀಕ್ಷಣಾ ಜಾಮೀನು ಕೋರಿ ಶ್ರೀಕಾಂತ್ ಎಲ್.ಘೊಟ್ನೇಕರ್ ಹಾಗೂ ಮತ್ತೊಬ್ಬ ಆರೋಪಿ ಅನಿಲ್ ಚೌವ್ಹಾಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್ ಯಾದವ್ ಅವರಿದ್ದ ಪೀಠ … Continued

ನವಜಾತ ಮೊಮ್ಮಗಳನ್ನು ಮನೆಗೆ ಕರೆತರಲು ಹೆಲಿಕಾಪ್ಟರ್ ಬಾಡಿಗೆಗೆ ತಂದ ರೈತ..!

ಪುಣೆ: ಮೊಮ್ಮಗಳ ಜನನದಿಂದ ಹರ್ಷಗೊಂಡ ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತನೊಬ್ಬ ಮೊಮ್ಮಗಳನ್ನು ಮಂಗಳವಾರ ಮನೆಗೆ ಕರೆತರಲು ಹೆಲಿಕಾಪ್ಟರ್‌ ಅನ್ನು ಬಾಡಿಗೆಗೆ ತಂದಿದ್ದಾರೆ…! ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕುಟುಂಬದ ಹೊಸ ಸದಸ್ಯಳಾದ ಕ್ರುಶಿಕಾ ಅವಳಿಗೆ ಭವ್ಯವಾದ ಸ್ವಾಗತವನ್ನು ನೀಡಲು ಅವಳನ್ನು ಹೆಲಿಕಾಪ್ಟರಿನಲ್ಲಿ ಕರೆತರಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ. … Continued

H3N8 ಹಕ್ಕಿ ಜ್ವರ ಮನುಷ್ಯನಿಗೆ ತಗುಲಿದ ಮೊದಲನೇ ಪ್ರಕರಣ ಚೀನಾದಲ್ಲಿ ಪತ್ತೆ…! : ಇದು ಕುದುರೆ, ನಾಯಿ, ಸೀಲುಗಳಲ್ಲಿ ಮಾತ್ರ ಕಾಣಿಸಿಕೊಂಡಿತ್ತು

ಬೀಜಿಂಗ್: ಹಕ್ಕಿ ಜ್ವರದ H3N8 ಸ್ಟ್ರೈನ್‌ನ ಮೊದಲ ಮಾನವ ಪ್ರಕರಣವನ್ನು ಚೀನಾ ದೃಢಪಡಿಸಿದೆ, ಆದರೆ ಜನರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. H3N8 ಉತ್ತರ ಅಮೆರಿಕಾದ ಜಲಪಕ್ಷಿಗಳಲ್ಲಿ ಮೊದಲು ಹೊರಹೊಮ್ಮಿದ ನಂತರ 2002 ರಿಂದ ಇದು ಪರಿಚಲನೆಗೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಇದು ಕೋಳಿಗಳು, ಬಾತುಕೋಳಿಗಳಲ್ಲದೆ ಕುದುರೆಗಳು, ನಾಯಿಗಳು ಮತ್ತು ಸೀಲುಗಳಿಗೆ … Continued