ಕಡಬ :’ಪಾಂಡವರ ಗುಹೆ’ಯಲ್ಲಿ ಶಿಲಾಯುಗದ ಸಮಾಧಿ ಸ್ಥಳ’ ಪತ್ತೆ…!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ, ರಾಮಕುಂಜ ಗ್ರಾಮದ ಆತೂರು-ಕುಂಡಾಜೆಯ ಸರ್ಕಾರಿ ಗೇರುಬೀಜದ ಪ್ಲಾಂಟೇಶನ್‌ನಲ್ಲಿ ಅಪರೂಪದ ಬೃಹತ್ ಶಿಲಾಯುಗದ ಗುಹಾ ಸಮಾಧಿ ಪತ್ತೆಯಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯ ಆಧಾರದ ಮೇಲೆ, ತಜ್ಞರ ತಂಡವು ‘ಪಾಂಡವರ ಗುಹೆ’ ಎಂದು ಕರೆಯಲ್ಪಡುವ ಸ್ಥಳಕ್ಕೆ ಭೇಟಿ ನೀಡಿತು ಮತ್ತು ಕೆಲವು ಚಕಿತಗೊಳಿಸುವ ಲಕ್ಷಣಗಳನ್ನ ಹೊಂದಿರುವ ಬೃಹತ್ ಶಿಲಾಯುಗದ ಸ್ಥಳವನ್ನ … Continued

ಬಳ್ಳಾರಿ: ಡ್ರಾಮಾ ಜ್ಯೂನಿಯರ್ ನೋಡಲು ಮನೆ ಬಿಟ್ಟು ಬೆಂಗಳೂರಿಗೆ ಬಂದ 4 ಮಕ್ಕಳು

ಬಳ್ಳಾರಿ: ಖಾಸಗಿ ಮನೋರಂಜನಾ ವಾಹಿನಿಯಲ್ಲಿ ಬರುವ ‘ಡ್ರಾಮಾ ಜ್ಯೂನಿಯರ್’ ರಿಯಾಲಿಟಿ ಶೋ ನೋಡಲು ಮನೆ ಬಿಟ್ಟು ಬೆಂಗಳೂರಿನತ್ತ ಮಕ್ಕಳು ಬಂದ ಘಟನೆ ಬಳ್ಳಾರಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬೇಸಿಗೆ ರಜೆ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿಯ ಚಂದ್ರಶೇಕರ ಹಾಗೂ ವೀರೇಶ ಎಂಬವರ ನಾಲ್ಕು ಹೆಣ್ಣು ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದರು. ಆಟ ಆಡುವುದು ಬಿಟ್ಟು ಓದಿನ ಕಡೆ ಗಮನ … Continued

ಕಣ್ಣ ಮುಚ್ಚಾಲೆ ಆಟವಾಡುವಾಗ ಐಸ್‌ಕ್ರೀಂ ಫ್ರೀಜರ್‌ನಲ್ಲಿ ಅವಿತುಕೊಂಡ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವು

ನಂಜನಗೂಡು : ಕಣ್ಣ ಮುಚ್ಚಾಲೆ ಆಟವಾಡುವಾಗ ಐಸ್‌ಕ್ರೀಂ ಫ್ರೀಜರ್‌ನಲ್ಲಿ ಅವಿತುಕೊಳ್ಳಲು ಹೋಗಿ ಬಾಗಿಲು ಬಂದ್‌ ಆಗಿದ್ದರಿಂದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಾಲೂಕಿನ ಮಸಗೆ ಗ್ರಾಮದಲ್ಲಿ ಬುಧವಾರ ನಡೆದ ಬಗ್ಗೆ ವರದಿಯಾಗಿದೆ. ಮೃತ ಬಾಲಕಿಯರನ್ನು ಗ್ರಾಮದ ನಾಗರಾಜ ನಾಯಕ ಅವರ ಪುತ್ರಿ ಭಾಗ್ಯ (12) ಹಾಗೂ ರಾಜು ನಾಯಕ ಪುತ್ರಿ ಕಾವ್ಯಾ (5) ಎಂದು … Continued

ಅಮೆರಿಕದ ಆಪ್ ಸ್ಟೋರ್‌ನಲ್ಲಿ ಟ್ವಿಟರ್, ಟಿಕ್‌ ಟಾಕ್‌ ಹಿಂದಿಕ್ಕಿದ ಡೊನಾಲ್ಡ್ ಟ್ರಂಪ್‌ರ ಟ್ರುತ್‌ ಸೋಶಿಯಲ್‌ ಅಪ್ಲಿಕೇಶನ್..!

ಎಲೋನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ, ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ ಮರಳುತ್ತಾರೆ ಎಂದು ಹೆಚ್ಚಿನ ಜನರು ಭವಿಷ್ಯ ನುಡಿದರು. ಆದರೆ, ಟ್ರಂಪ್ ಅವರು ಮರಳಲು ಬಯಸುವುದಿಲ್ಲ ಎಂದು ಹೇಳಿದ್ದು, ಟ್ರುತ್‌ ಸೋಶಿಯಲ್‌ನಲ್ಲೇ ಇರಲು ಬಯಸುವುದಾಗಿ ಹೇಳಿದ್ದಾರೆ. ನಿರೀಕ್ಷೆಗಳು ಅಂತರ್ಜಾಲವನ್ನು ಕಲಕಿದ ಕಾರಣ, ಟ್ರುತ್‌ ಸೋಶಿಯಲ್‌ ಅಪ್ಲಿಕೇಶನ್ ಉತ್ತಮ ಪ್ರತಿಕ್ರಿಯೆ … Continued

ಉತ್ತರ ಪ್ರದೇಶದಲ್ಲಿ 6 ಸಾವಿರ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ತೆರವು, 30 ಸಾವಿರ ಧ್ವನಿವರ್ಧಕಗಳ ಶಬ್ದಗಳಿಗೆ ಮಿತಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಸುಮಾರು ಆರು ಸಾವಿರ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇತರ 30 ಸಾವಿರ ಧ್ವನಿವರ್ಧಕಗಳ ಶಬ್ದಗಳನ್ನು ಮಿತಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ಉತ್ತರ ಪ್ರದೇಶ ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಮತ್ತು ಶಬ್ದಗಳಲ್ಲಿ ಮಿತಿಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು … Continued

ಕರ್ನಾಟಕದಲ್ಲಿ ಬುಧವಾರ ಹೊಸದಾಗಿ 126 ಮಂದಿಗೆ ಕೊರೊನಾ ಸೋಂಕು, ಬೆಂಗಳೂರಿನಿಂದಲೇ ಬಹುತೇಕ ಪ್ರಕರಣಗಳು

ಬೆಂಗಳೂರು: ಕೋವಿಡ್ ಸೋಂಕು ನಿಧಾನವಾಗಿ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ (ಬುಧವಾರ) ಬೆಂಗಳೂರಿನಲ್ಲಿ 114 ಜನರಿಗೆ ಸೋಂಕು ಸೇರಿದಂತೆ ಕರ್ನಾಟಕದಲ್ಲಿ 126 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ. ಈ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ, ಧಾರವಾಡ, ಕೋಲಾರ ಮತ್ತು ತುಮಕೂರು ಜಿಲ್ಲೆಯಲ್ಲಿ … Continued

ಕೋವಿಡ್‌ ಲಸಿಕೆ ಎರಡನೇ ಡೋಸ್-ಮುನ್ನೆಚ್ಚರಿಕೆ ಡೋಸ್ ನಡುವಿನ ಅಂತರ ಆರು ತಿಂಗಳಿಗೆ ಇಳಿಕೆ ಸಾಧ್ಯತೆ

ನವದೆಹಲಿ: ಕೋವಿಡ್-19 ಲಸಿಕೆಯ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆಯ ಡೋಸ್ ನಡುವಿನ ಅಂತರವನ್ನು ಸರ್ಕಾರವು ಪ್ರಸ್ತುತ ಒಂಬತ್ತು ತಿಂಗಳಿಂದ ಆರು ತಿಂಗಳವರೆಗೆ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಏಪ್ರಿಲ್ 29 ರಂದು ಸಭೆ ನಡೆಸಲಿರುವ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಈ ಅಂತರವನ್ನು ಕಡಿಮೆ ಮಾಡುವ ಕುರಿತು ಶಿಫಾರಸು … Continued

ಮುರೂರು ರಾಮಲೀಲಾ ಮೈದಾನದಲ್ಲಿ ಐದು ದಿನಗಳ ರಾಮಕಥೆಗೆ ಅದ್ಧೂರಿ ಚಾಲನೆ-ರಾಮನ ಸೀತಾ ಪ್ರೀತಿ ಪ್ರಶ್ನಾತೀತ: ರಾಘವೇಶ್ವರ ಶ್ರೀ

ಕುಮಟಾ: ಅಗ್ನಿಪರೀಕ್ಷೆ ಹಿನ್ನೆಲೆಯಲ್ಲಿ ಸೀತೆಯ ಬಗೆಗಿನ ರಾಮನ ಪ್ರೀತಿಯನ್ನು ಪ್ರಶ್ನಿಸುವವರಿದ್ದಾರೆ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ರಾಮಸೇತು ಉತ್ತರ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಬುಧವಾರ ಆರಂಭವಾದ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಮೊದಲ ದಿನದ ಪ್ರವಚನ … Continued

ಎಲಾನ್ ಮಸ್ಕ್ ಎಫೆಕ್ಟ್: ಟ್ವಟ್ಟರ್‌ ತೊರೆಯುತ್ತಿರುವ-ಖಾತೆ ನಿಷ್ಕ್ರಿಯಗೊಳಿಸುತ್ತಿರುವ ಲಕ್ಷಗಟ್ಟಲೆ ಬಳಕೆದಾರರು…!

ಎಲೋನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಅವರ ನಾಯಕತ್ವದಲ್ಲಿ ಈ ವೇದಿಕೆಯು ದ್ವೇಷದ ಭಾಷಣ ಮತ್ತು ತಪ್ಪು ಮಾಹಿತಿಯ ಸ್ಥಳವಾಗಿ ಬದಲಾಗಬಹುದು ಎಂಬ ಹಲವರು ಚಿಂತಿತರಾಗಿದ್ದಾರೆ. ಬಹಳಷ್ಟು ಬಳಕೆದಾರರು ಟ್ವಿಟರ್‌ನ ಭವಿಷ್ಯದ ಬಗ್ಗೆ ಯೋಚಿಸಿದ ನಂತರ ವೇದಿಕೆಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಟೆಸ್ಲಾದ ಸಿಇಒ ಎಲೋನ್ ಮಸ್ಕ್ ಜನಪ್ರಿಯ … Continued

ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದಾದ್ರೆ ಕನ್ನಡ ಸಿನೆಮಾ ಹಿಂದಿಗೆ ಯಾಕೆ ಡಬ್ ಮಾಡ್ತೀರಿ ಎಂದ ಅಜಯ್​ ದೇವಗನ್; ನಿಮ್ಮ ಟ್ವೀಟ್‌ಗೆ ನಾನು ಕನ್ನಡದಲ್ಲಿ ಉತ್ತರಿಸಿದ್ರೆ ಎಂದು ತಿರುಗೇಟು ಕೊಟ್ಟ ಸುದೀಪ್

ಬೆಂಗಳೂರು: ಕನ್ನಡ ನಟ, ಕಿಚ್ಚ ಸುದೀಪ್ ಇತ್ತೀಚೆಗೆ ನೀಡಿದ್ದ ಒಂದು ಸಂದರ್ಶನ ಈಗ ಇಬ್ಬರು ನಟರ ನಡುವೆ ಚರ್ಚೆಗೆ ಕಾರಣವಾಗಿದೆ. ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್, ‘’ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ’’ ಎಂದು ಹೇಳಿದ್ದರು. ಈ ಬಗ್ಗೆ ಅಜಯ ದೇವಗನ್ ಟ್ವೀಟ್ ಮಾಡಿ, ‘’ನನ್ನ ಸಹೋದರ ಕಿಚ್ಚ ಸುದೀಪ್ ಅವರೇ, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ … Continued