ಉಡುಪಿ: ನಮ್ಮ ದೇಶ ಎತ್ತ ಸಾಗುತ್ತಿದೆ -ಪರೀಕ್ಷೆಗೆ ಗೈರಾದ ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸ್ಸಾದಿ ಟ್ವೀಟ್

ಉಡುಪಿ: ನಮ್ಮ ದೇಶ ಎಲ್ಲಿಗೆ ಸಾಗುತ್ತಿದೆ? ಎಂದು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ನಿರಾಕರಿಸಿದ ನಂತರ ಹಿಜಾಬ್ ಗಾಗಿ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಾದ ಪೈಕಿ ಒಬ್ಬರಾದ ಅಲಿಯಾ ಅಸ್ಸಾದಿ ಅವರು ಟ್ವೀಟಿನಲ್ಲಿ ಪ್ರಶ್ನಿಸಿದ್ದಾರೆ. ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಆಲಿಯಾ ಅಸಾದಿ ಮತ್ತು ರೇಷಮ್ ಪ್ರವೇಶ ಪತ್ರ ಪಡೆದು … Continued

ಭಾರತದಲ್ಲಿ ಸತತ ನಾಲ್ಕನೇ ದಿನ 2,000ಕ್ಕಿಂತ ಹೆಚ್ಚು ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,527 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು 33 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ 2,000 ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕನ್ನು ದಾಖಲಿಸಿದ ಸತತ ನಾಲ್ಕನೇ ದಿನವಾಗಿದೆ. ಶನಿವಾರದ ಸಂಖ್ಯೆಗಳೊಂದಿಗೆ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ … Continued

ಶುಕ್ರವಾರದ ಪ್ರಾರ್ಥನೆ ವೇಳೆ ಅಫ್ಘಾನಿಸ್ತಾನ ಮಸೀದಿಯಲ್ಲಿ ಭಾರೀ ಸ್ಫೋಟ: 33 ಸಾವು, 40 ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್‌: ಶುಕ್ರವಾರ ಉತ್ತರ ಅಫ್ಘಾನಿಸ್ತಾನದ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 33 ಜನರು ಸಾವಿಗೀಡಾಗಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಯು ಅಫ್ಘಾನಿಸ್ತಾನದ ಕುಂದುಜ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ. ವರದಿಗಳ ಪ್ರಕಾರ, ಶುಕ್ರವಾರದ ಪ್ರಾರ್ಥನೆಯ ವೇಳೆ ಸ್ಫೋಟ ಸಂಭವಿಸಿದೆ. ಸತ್ತವರಲ್ಲಿ ಧಾರ್ಮಿಕ … Continued

ನೀತಿ ಆಯೋಗದ ಉಪಾಧ್ಯಕ್ಷ ಹುದ್ದೆಗೆ ರಾಜೀವಕುಮಾರ್ ರಾಜೀನಾಮೆ; ಸುಮನ್ ಬೆರಿ ನೂತನ ಉಪಾಧ್ಯಕ್ಷ

ನವದೆಹಲಿ: ರಾಜೀವಕುಮಾರ್ ಅವರ ಹಠಾತ್ ರಾಜೀನಾಮೆ ನಂತರ ಕೇಂದ್ರ ಸರ್ಕಾರ ಶುಕ್ರವಾರ ಸುಮನ್ ಕೆ, ಬೆರಿ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ರಾಜೀವಕುಮಾರ್ ಅವರ ಅಧಿಕಾರಾವಧಿ ಏಪ್ರಿಲ್ 30ಕ್ಕೆ ಕೊನೆಗೊಳ್ಳಲಿದೆ. ಬೆರಿ ಮೇ 1, 2022 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಆದೇಶ ತಿಳಿಸಿದೆ. ಖ್ಯಾತ ಅರ್ಥಶಾಸ್ತ್ರಜ್ಞರಾದ ರಾಜೀವಕುಮಾರ್ ಅವರು ಆಗಸ್ಟ್ 2017 … Continued

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: 8 ಆರೋಪಿಗಳ ಜಾಮೀನು ಅರ್ಜಿ ವಜಾ

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಎಂಟು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ಕಲಬುರಗಿ ಜೆ.ಎಮ್.ಸಿ ಕೋರ್ಟ್ ವಜಾಗೊಳಿಸಿದೆ. ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಬಿಜೆಪಿ ಮುಖಂಡರಾದ ದಿವ್ಯಾ ಹಾಗರಗಿಯ ಪತಿ ರಾಜೇಶ್​ ಹಾಗರಗಿ, ವೀರೇಶ್, ಅರುಣ, ಪ್ರವೀಣ, ಚೇತನ, … Continued

ಹುಬ್ಬಳ್ಳಿ ಹಿಂಸಾಚಾರದಲ್ಲಿ ಹಲವರ ಕೈವಾಡವಿದೆ, ಶೀಘ್ರವೇ ಎಲ್ಲರ ಬಂಧನ: ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಹುಬ್ಬಳ್ಳಿ ಹಿಂಸಾಚಾರ ಪ್ರಕರಣದ ಹಿಂದೆ ಹಲವು ಕಾಣದ ಕೈಗಳು ಕೆಲಸ ಮಾಡಿವೆ. ಪ್ರಕರಣದಲ್ಲಿ ಭಾಗಿಯಾದವರನ್ನು ಎಲ್ಲರನ್ನೂ ಬಂಧಿಸಿವ ಜಾವಾಬ್ದಾರಿ ನಿಭಾಯಿಸುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಸಾಮಾಜಿಕ ಸೌಹಾರ್ದತೆ ಕದಡುವ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವುದು ಹಾಗೂ ಅಂತಹ ಸಂಘಟನೆಗಳನ್ನು ನಿಷೇಧಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ. ಹುಬ್ಬಳ್ಳಿಯ ಘಟನೆಯಲ್ಲಿ ಭಾರಿ … Continued

ಉತ್ತರ ಪ್ರದೇಶ: ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕಾಗಿ ಆಗ್ರಾದಲ್ಲಿ 150 ಮಂದಿ ವಿರುದ್ಧ ಎಫ್‌ಐಆರ್ ದಾಖಲು

ನವದೆಹಲಿ: ಆಗ್ರಾದಲ್ಲಿ ಪೊಲೀಸರ ಅನುಮತಿಯಿಲ್ಲದೆ ಮಸೀದಿಯ ಮುಂಭಾಗದ ರಸ್ತೆಯಲ್ಲಿ ನಮಾಜ್ ಮಾಡಿದ 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಸ್ತೆಗಳಲ್ಲಿ ನಮಾಜ್‌ ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ಸಂಚಾರಕ್ಕೆ ಅಡ್ಡಿ ಉಂಟಾದರೆ ರಸ್ತೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಇದು ನಡೆದಿದೆ. ಸೆಕ್ಷನ್ … Continued

ನಾನು ಭಾರತೀಯ ಲಸಿಕೆ ತೆಗೆದುಕೊಂಡಿದ್ದೇನೆ, ಕೌಶಲ್ಯಪೂರ್ಣ ಭಾರತೀಯರು ಬ್ರಿಟನ್ನಿಗೆ ಸ್ವಾಗತ, ಭಾರತದಿಂದ ಪರಾರಿಯಾದವರಿಗೆ ಸ್ವಾಗತವಿಲ್ಲ : ಬೋರಿಸ್ ಜಾನ್ಸನ್

ನವದೆಹಲಿ: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ನೈಪುಣ್ಯ ಭಾರತೀಯರನ್ನು ಶ್ಲಾಘಿಸಿದ್ದಾರೆ ಮತ್ತು ಅವರು ಬ್ರಿಟನ್ನಿಗೆ ಬರುವುದನ್ನು ತಡೆಯುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿ ಬ್ರಿಟನ್‌ನ ಕಾನೂನು ವ್ಯವಸ್ಥೆಯನ್ನು ಬಳಸಿಕೊಳ್ಳಲು ಬಯಸುವವರನ್ನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸ್ವಾಗತಿಸುವುದಿಲ್ಲ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. … Continued

ಇಂಡೋ-ಪೆಸಿಫಿಕ್ ಸುರಕ್ಷತೆಗೆ ಒತ್ತು: ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ-ಜಾನ್ಸನ್

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಭಾರತದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಲು ಬ್ರಿಟನ್ ಮುಂದಾಗಿದ್ದು, ಶುದ್ಧ ಮತ್ತು ನವೀಕರಿಸಬಹುದಾದ ಇಂಧನದ ಭವಿಷ್ಯದ ಯೋಜನೆಗಳಲ್ಲಿ ಭಾರತದ ಹೊಸ ಸಹಕಾರವನ್ನು ಬಯಸಿದೆ. ಪ್ರಮುಖವಾಗಿ ಭಾರತ-ಇಂಗ್ಲೆಂಡ್ … Continued

ಪುಸ್ತಕಗಳಿವೆ ಬೇಕಷ್ಟು ಈ ಜಗದ ಉಗ್ರಾಣದಲಿ…ಕಾಯುತಿವೆ ಓದುಗನೇ ನೀ ಯಾವಾಗ ಬರುವೆಯೆಂದು…

(ಏಪ್ರಿಲ್ ೨೩ರಂದು ವಿಶ್ವ ಪುಸ್ತಕ ದಿನಾಚರಣೆಯಾಗಿದ್ದು, ಆ ನಿಮತ್ತ ಲೇಖನ) ಏಪ್ರಿಲ್ ೨೩ರಂದು ವಿಶ್ವ ಪುಸ್ತಕ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರಸಿದ್ಧ ನಾಟಕಕಾರ ವಿಲಿಯಮ್ ಷೇಕ್ಸಪಿಯರ್ ಜನ್ಮ ಮತ್ತು ನಿಧನದ, ಸ್ಪೇನ್ ದೇಶದ ಖ್ಯಾತ ಲೇಖಕ ಮೈಗುಯೇಲ್ ಡೆ. ಸರವೇಲ್ಲಾ, ಇಂಕಾ ಗ್ಯಾರಿಲಾಸೋ ಡೆ ಲಾವೇಗಾ ಮತ್ತು ಜೆಸೆಪ್‌ಪ್ಲಾ ಅವರ ಪುಣ್ಯತಿಥಿಯ ನೆನಪಿಗಾಗಿ ವಿಶ್ವದ ಎಲ್ಲ … Continued