ಚೀನಾದ ಟೆಲಿಕಾಂ ಸಂಸ್ಥೆ ಕ್ಸಿಯೋಮಿಯಿಂದ 5,551 ಕೋಟಿ ರೂ. ವಶಪಡಿಸಿಕೊಂಡ ಇಡಿ…?!

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ತನ್ನ ಅತಿದೊಡ್ಡ ಕಾರ್ಯಾಚರಣೆಯಲ್ಲಿ ಬೆಂಗಳೂರು ಮೂಲದ ಚೀನಾದ ಟೆಲಿಕಾಂ ಸಂಸ್ಥೆ Xiaomi ಟೆಕ್ನಾಲಜಿ ಇಂಡಿಯಾದಿಂದ 5,551.27 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ ಎಂದು  ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ. ವರದಿ ಪ್ರಕಾರ, ಸುದೀರ್ಘ ತನಿಖೆಯ ನಂತರ ವಶಪಡಿಸಿಕೊಳ್ಳಲಾಗಿದೆ.1999 ರ ನಿಬಂಧನೆಗಳ ಅಡಿಯಲ್ಲಿ Xiaomi ನ ನಾಲ್ಕು ಬ್ಯಾಂಕ್ ಖಾತೆಗಳಿಂದ ಹಣವನ್ನು … Continued

ಹೊನ್ನಾವರ: ಶಿಷ್ಯರು-ಅಭಿಮಾನಿಗಳಿಂದ ಇಂದು ಹಿಂದೂಸ್ಥಾನೀ ಗಾಯಕ ಡಾ.ಅಶೋಕ ಹುಗ್ಗಣ್ಣವರಿಗೆ ಅಭಿನಂದನೆ, ಪುಸ್ತಕ ಲೋಕಾರ್ಪಣೆ, ನಾದಾರಾಧನೆ

ಹೊನ್ನಾವರ: ಶಿಷ್ಯರು, ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಖ್ಯಾತ ಹಿಂದುಸ್ಥಾನೀ ಗಾಯಕ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ.ಅಶೋಕ ಹುಗ್ಗಣ್ಣವರ ಅವರಿಗೆ ಬೃಹತ್‌ ಅಭಿನಂದನೆ, ಚಂದ್ರಪ್ರಭಾ ಅಭಿನಂದನಾ ಗ್ರಂಥದ ಲೋಕಾರ್ಪಣೆ ಹಾಗೂ ನಾದಾಭಿನಂದನೆ ಕಾರ್ಯಕ್ರಮ ಹೊನ್ನಾವರದ ಕರ್ಕಿ ಸಮೀಪದ ಹವ್ಯಕ ಸಭಾಭವನದಲ್ಲಿ ಮೇ 1 ರಂದು ಅಪರಾಹ್ನ … Continued

ಹುಬ್ಬಳ್ಳಿ ಗಲಭೆ ಆರೋಪಿ ಜೈಲಿನೊಳಗೆ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ ಮೊಹಮ್ಮದ್ ಆರಿಫ್ ಜೈಲಿನೊಳಗೆ ಟರ್ಪಂಟೈನ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಆತನನ್ನುಕಿಮ್ಸ್‌   ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಒಂದು ವಾರದ ಹಿಂದೆ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಈತನನ್ನು ಬಂಧಿಸಲಾಗಿತ್ತು ಹಾಗೂ ಹಳೆಹುಬ್ಬಳ್ಳಿ ಠಾಣೆಯಲ್ಲಿ … Continued

ವರದಕ್ಷಿಣೆ ತಂದುಕೊಡದ ಪತ್ನಿಯ ಮೇಲೆ ತನ್ನ ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ ಪತಿರಾಯ…!

ಜೈಪುರ : ವರದಕ್ಷಿಣೆ ಕೊಡದ ಸಿಟ್ಟಿಗೆ ಪತಿಯೇ ತನ್ನ ಪತ್ನಿ ಮೇಲೆ ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ ಆತಂಕಕಾರಿ ಘಟನೆ ರಾಜಸ್ಥಾನದ ಭರತಪುರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಪತ್ನಿ ತವರು ಮನೆಯವರು1.5 ಲಕ್ಷ ರೂ. ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಪತಿ ಈ ದುಷ್ಕೃತ್ಯ ಎಸಗಿದ್ದಾನೆ. ಅಲ್ಲದೆ ಅತ್ಯಾಚಾರದ ವೀಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ … Continued

ಶಾಹಿದ್ ಅಫ್ರಿದಿ ಒಬ್ಬ ಚಾರಿತ್ರ್ಯಹೀನ, ನಕಲಿ ಮನುಷ್ಯ, ನಾನು ಹಿಂದೂ ಎಂಬ ಕಾರಣಕ್ಕೆ ಕೆಟ್ಟದಾಗಿ ನಡೆಸಿಕೊಂಡ: ಅಫ್ರಿದಿ ಮೇಲೆ ಪಾಕ್‌ ಕ್ರಿಕೆಟಿಗ ಕನೇರಿಯಾ ಸ್ಫೋಟಕ ಆರೋಪ

ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದನೀಶ ಕನೇರಿಯಾ ಅವರು ತಮ್ಮ ಮಾಜಿ ಸಹ ಆಟಗಾರ ಮತ್ತು ಮಾಜಿ ನಾಯಕ ಶಾಹಿದ್ ಅಫ್ರಿದಿ ತಾನು ಹಿಂದೂ ಎಂಬ ಕಾರಣಕ್ಕಾಗಿ ಕ್ರಿಕೆಟ್‌ ಆಡುವಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕನೇರಿಯಾ ಅಫ್ರಿದಿಯನ್ನು ಚಾರಿತ್ರ್ಯವಿಲ್ಲದ ನಕಲಿ ಮನುಷ್ಯ ಮತ್ತು ಸುಳ್ಳುಗಾರ ಎಂದು ಕರೆದಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ … Continued

ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 50ಕ್ಕೂ ಹೆಚ್ಚು ಜನರ ಸಾವು, ಅನೇಕರಿಗೆ ಗಾಯ

ಕಾಬೂಲ್:‌ ಕಾಬೂಲ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಪ್ರಬಲವಾದ ಬಾಂಬ್‌ ಸ್ಫೋಟದಿಂದ 50 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದು ರಂಜಾನ್ ಸಮಯದಲ್ಲಿ ಅಫ್ಘಾನಿಸ್ತಾನದಲ್ಲಿ ನಾಗರಿಕ ಗುರಿಗಳ ಮೇಲಿನ ಸರಣಿ ದಾಳಿಯ ಇತ್ತೀಚಿನ ದಾಳಿಯಾಗಿದೆ. ರಾಜಧಾನಿಯ ಪಶ್ಚಿಮದಲ್ಲಿರುವ ಖಲೀಫಾ ಸಾಹಿಬ್ ಮಸೀದಿಯಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿದೆ ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ಬೆಸ್ಮುಲ್ಲಾ ಹಬೀಬ್ … Continued

ಸೇನೆಯ ನೂತನ ಉಪ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಆಯ್ಕೆ

ನವದೆಹಲಿ: ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಮೇ 1ರಂದು ಸೇನಾ ಸಿಬ್ಬಂದಿಯ ಮುಂದಿನ ಉಪ ಮುಖ್ಯಸ್ಥರಾಗಿ (vice chief of the Army Staff ) ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಲೆಫ್ಟಿನೆಂಟ್ ಜನರಲ್ ರಾಜು ಅವರು ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರ ಉತ್ತರಾಧಿಕಾರಿಯಾಗಲಿದ್ದಾರೆ, ಅವರು ಶನಿವಾರ … Continued

ಸಾರ್ವಕಾಲಿಕ ಗರಿಷ್ಠ 2,07,111 ಮೆಗಾ ವ್ಯಾಟ್‌ ತಲುಪಿದ ಭಾರತದ ವಿದ್ಯುತ್ ಬೇಡಿಕೆ…!

ನವದೆಹಲಿ: ಭಾರತದಾದ್ಯಂತ ತೀವ್ರ ಶಾಖದ ಅಲೆಯ ನಡುವೆ, ದೇಶದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಶುಕ್ರವಾರ ಸಾರ್ವಕಾಲಿಕ ಗರಿಷ್ಠ  2,07,111 ಮೆಗಾವ್ಯಾಟ್‌ಗೆ ತಲುಪಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ. ಗರಿಷ್ಠ ಅಖಿಲ ಭಾರತ ಬೇಡಿಕೆಯು ಇಂದು 14:50 ಗಂಟೆಗೆ 2,07,111 MW ಅನ್ನು ಮುಟ್ಟಿದೆ, ಇದುವರೆಗಿನ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ. ಈ … Continued

ಏಪ್ರಿಲ್‌ ತಿಂಗಳಲ್ಲಿ 72 ವರ್ಷಗಳಲ್ಲಿ ಎರಡನೇ ಅತ್ಯಂತ ಗರಿಷ್ಠ ತಾಪಮಾನ ಕಂಡ ದೆಹಲಿ…!

ನವದೆಹಲಿ: ಏಪ್ರಿಲ್‌ ತಿಂಗಳಲ್ಲಿ ಸುಮಾರು 72 ವರ್ಷಗಳಲ್ಲಿ ಎರಡನೇ ಅತಿ ಹೆಚ್ಚು ತಾಪಮಾನ ದಾಖಲಿಸಿರುವ ದೆಹಲಿಯಲ್ಲಿ ತೀವ್ರವಾದ ಶಾಖದ ಅಲೆ ಮೇಲುಗೈ ಸಾಧಿಸಿದೆ. 40.40 ಡಿಗ್ರಿ ಸೆಲ್ಸಿಯಸ್ ಸರಾಸರಿ ತಾಪಮಾನದೊಂದಿಗೆ 2010 ರಲ್ಲಿ ಈವರೆಗಿನ ಅತ್ಯಂತ ಬೆಚ್ಚಗಿನ ಏಪ್ರಿಲ್ ಆಗಿತ್ತು. ಈ ವರ್ಷ ಸರಾಸರಿ ಏಪ್ರಿಲ್‌ ಮಾಸಿಕ ಗರಿಷ್ಠ ತಾಪಮಾನ 40.20 ಡಿಗ್ರಿ ಸೆಲ್ಸಿಯಸ್ ಆಗಿದೆ. … Continued

ನಾಡಿಯಾ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ತಂದೆ, ಟಿಎಂಸಿ ಪಂಚಾಯತ್ ಸದಸ್ಯನ ಬಂಧಿಸಿದ ಸಿಬಿಐ

ಕೋಲ್ಕತ್ತಾ: ನಾಡಿಯಾ ಅತ್ಯಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ಶುಕ್ರವಾರ ಮತ್ತಿಬ್ಬರನ್ನು ಬಂಧಿಸಿದೆ. ಅವರಲ್ಲಿ ಒಬ್ಬರು ಟಿಎಂಸಿ ಪಂಚಾಯತ್ ಸದಸ್ಯ ಸಮರೇಂದ್ರ ಗೋಲಾ ಮತ್ತು ಇನ್ನೊಬ್ಬರು ಪಂಚಾಯತ ಸದಸ್ಯ ಪಿಜುಶ್ ಭಕ್ತ ಅವರ ಆಪ್ತರು. ಸಮರೇಂದ್ರ ಅವರ ಪುತ್ರ ಬ್ರಜ ಗೋಪಾಲ್ ಗೋಲಾ (21) ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಪಶ್ಚಿಮ ಬಂಗಾಳ ಪೊಲೀಸರು ಈ … Continued