ಫೆಡರೇಷನ್ ಕಪ್ ಕುಸ್ತಿ : ಧಾರವಾಡದ ಕುಸ್ತಿಪಟು ಮೊಹ್ಮದ್ ರಫೀಕ್ ಹೊಳಿಗೆ ಚಿನ್ನ

ಧಾರವಾಡ: ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಇತ್ತೀಚೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಸಿದ 2022ನೇ ಸಾಲಿನ ಫೆಡರೇಷನ್ ಕಪ್ (ಸೀನಿಯರ್) ಫ್ರೀಸ್ಟೈಲ್, ಗ್ರೀಕೋ ರೋಮನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಧಾರವಾಡ ಮೊಹ್ಮದ್ ರಫೀಕ್ ಹೊಳಿ ಚಿನ್ನದ ಪದಕ ಗೆದ್ದಿದ್ದಾರೆ. ಗ್ರೀಕೋ ರೋಮನ್ ವಿಭಾಗದಲ್ಲಿ ರಫೀಕ್ 77 ಕೆಜಿ ವರ್ಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯ್ಲಿ ರಫೀಕ್ … Continued

ಒಮಿಕ್ರಾನ್ ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ : ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ

ವಾಷಿಂಗ್ಟನ್‌ (ಅಮೆರಿಕ): ಕೊಲೊರಾಡೋ ವಿಶ್ವವಿದ್ಯಾನಿಲಯ, ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಕೊರೊನಾ ವೈರಸ್ ರೂಪಾಂತರದ ಒಮಿಕ್ರಾನ್ ಇತರ ಯಾವುದೇ ರೂಪಾಂತರಗಳಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಮೇಲ್ಭಾಗದ ಅಪ್ಪರ್​ ಏರ್​ ವೇ ಸೋಂಕನ್ನು (upper airway infection) ಉಂಟುಮಾಡುತ್ತದೆ. ಇದರಿಂದ ಮಕ್ಕಳಲ್ಲಿ ಹೃದಯಾಘಾತ ಮತ್ತು ಇತರ ತೀವ್ರ ತೊಡಕುಗಳ ಅಪಾಯ … Continued

ಪಿಎಸ್‌ಐ ಹುದ್ದೆ ಪ್ರವೇಶ ಪರೀಕ್ಷೆ ಹಗರಣ: ಬಿಜೆಪಿ ಮಾಜಿ ನಾಯಕಿಯ ಪತಿ ಬಂಧನ

ಕಲಬುರಗಿ: ಅಕ್ಟೋಬರ್ 3, 2021 ರಂದು ನಡೆದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಎಸ್‌ಐ ಸಿಇಟಿ) ಹಗರಣಕ್ಕೆ ಸಂಬಂಧಿಸಿದಂತೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಮೇಲೆ ಸೋಮವಾರ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿನ 524 ಪಿಎಸ್‌ಐ ಹುದ್ದೆಗಳನ್ನು ಅನ್ಯಾಯದ ರೀತಿಯಲ್ಲಿ ಭರ್ತಿ ಮಾಡಲು ನಡೆದ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಹಲವು ಅಭ್ಯರ್ಥಿಗಳು ಲಕ್ಷಗಟ್ಟಲೆ … Continued

4 ತಿಂಗಳ ಗರಿಷ್ಠ 14.55% ತಲುಪಿದ ಸಗಟು ಬೆಲೆ ಆಧಾರಿತ ಹಣದುಬ್ಬರ

ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರವು ಮಾರ್ಚ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟ 14.55%ಕ್ಕೆ ಏರಿದೆ, ತರಕಾರಿಗಳು ಬೆಲೆ ಒತ್ತಡವನ್ನು ಕಡಿಮೆಗೊಳಿಸಿದರೂ ಸಹ ಮುಖ್ಯವಾಗಿ ಕಚ್ಚಾ ತೈಲ ಮತ್ತು ಸರಕುಗಳ ಬೆಲೆಗಳು ಹೆಚ್ಚಳವಾಗಿರುವುದು ಈ ರೀತಿ ಹೆಚ್ಚಳಕ್ಕೆ ಕಾರಣವಾಗಿದೆ. ಸೋಮವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2021 ರಿಂದ ಪ್ರಾರಂಭವಾಗುವ ಸತತ 12 ನೇ … Continued

ಸರ್ಕಾರ ನೀಡಿದ ಅನುದಾನ ಪಡೆಯಲು ಮಠಗಳೂ ಅಧಿಕಾರಿಗಳಿಗೆ 30% ಕಮೀಷನ್​ ಕೊಡ್ಬೇಕು : ದಿಂಗಾಲೇಶ್ವರ ಶ್ರೀ

ಬಾಗಲಕೋಟೆ : ಮಠಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಿದೆ. ಇಲ್ಲವಾದಲ್ಲಿ ಹಣವೇ ಬಿಡುಗಡೆ ಆಗುವುದಿಲ್ಲ, ಭ್ರಷ್ಟಾಚಾರದ ಪರಿಸ್ಥಿತಿ ಇಷ್ಟರಮಟ್ಟಕ್ಕೆ ಬಂದು ನಿಂತಿದೆ ಎಂದು ಶಿರಹಟ್ಟಿ ಶ್ರೀ ಫಕ್ಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಕೃಷ್ಣಾ, ಮಹಾದಾಯಿ ಹಾಗೂ ನವಲಿ ನೀರಾವರಿ ಯೋಜನೆ ಜಾರಿಗಾಗಿ ಮಾಜಿ ಸಚಿವ ಎಸ್.ಆರ್.ಪಾಟೀಲ ಅವರ ನೇತೃತ್ವದಲ್ಲಿ ಐದು ದಿನಗಳ‌ … Continued

ಪಾಕಿಸ್ತಾನದಲ್ಲಿ ಕಲ್ಲಿದ್ದಲು ಖರೀದಿಗೆ ಹಣದ ಕೊರತೆ :ಅನಿಲ ಕೊರತೆ ನಡುವೆ ಮನೆಗಳು-ಉದ್ಯಮಗಳಿಗೆ ವಿದ್ಯುತ್ ಕಡಿತದ ಬರೆ

ನವದೆಹಲಿ: ಹಣದ ಕೊರತೆಯಿರುವ ದೇಶವು ತನ್ನ ವಿದ್ಯುತ್ ಸ್ಥಾವರಗಳಿಗೆ ಸಾಗರೋತ್ತರದಿಂದ ಕಲ್ಲಿದ್ದಲು ಅಥವಾ ನೈಸರ್ಗಿಕ ಅನಿಲವನ್ನು ಖರೀದಿಸಲು ಶಕ್ತವಾಗದ ಕಾರಣ ಪಾಕಿಸ್ತಾನವು ಮನೆಗಳು ಮತ್ತು ಉದ್ಯಮಗಳಿಗೆ ವಿದ್ಯುತ್ ಕಡಿತಗೊಳಿಸುತ್ತಿದೆ. ಉಕ್ರೇನ್‌ನಲ್ಲಿನ ಯುದ್ಧವು ಪೂರೈಕೆ ಕೊರತೆ ಉಲ್ಬಣಗೊಳಿಸಿದ್ದರಿಂದ ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ಬೆಲೆಗಳು ಕಳೆದ ತಿಂಗಳು ದಾಖಲೆ ಮಟ್ಟಕ್ಕೆ ಏರಿದ ನಂತರ ಪಾಕಿಸ್ತಾನವು ಸ್ಪಾಟ್ … Continued

ಮಲ್ಪೆ: ಸೆಲ್ಫಿ ತೆಗೆಯುಲು ಹೋಗಿ ನೀರುಪಾಲಾದ ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು

ಉಡುಪಿ: ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಫಿ ತೆಗೆಯುಲು ಹೋಗಿ ನೀರುಪಾಲಾದ ಘಟನೆ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನಿಂದ 68 ವಿದ್ಯಾರ್ಥಿಗಳು ಪ್ರವಾಸ ಬಂದಿದ್ದು, ಲೈಫ್ ಗಾರ್ಡ್ ಸಿಬ್ಬಂದಿ ಸೂಚನೆ ಮೀರಿ ಸೆಲ್ಫಿ ತೆಗೆಯಲು ಹೋಗಿ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ ಎಂದು … Continued

ಕೋಮು ಹಿಂಸಾಚಾರದ ಆರೋಪ ಹೊತ್ತಿರುವವರ ಮನೆಗಳು, ಅಂಗಡಿಗಳ ನೆಲಸಮದ ವಿರುದ್ಧ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿದ ಜಮಿಯತ್

ನವದೆಹಲಿ: ಶಿಕ್ಷಾರ್ಹ ಕ್ರಮದ ಭಾಗವಾಗಿ ಗಲಭೆಗಳಂತಹ ಅಪರಾಧ ಘಟನೆಗಳಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳ ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ನೆಲಸಮ ಮಾಡುವಂತಿಲ್ಲ ಎಂದು ನಿರ್ದೇಶನ ನೀಡುವಂತೆ ಕೋರಿ ಜಮಿಯತ್ ಉಲಮಾ-ಇ-ಹಿಂದ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಗಲಭೆಗಳಂತಹ ಅಪರಾಧ ಘಟನೆಗಳಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳ ಮನೆಗಳನ್ನು ಧ್ವಂಸಗೊಳಿಸಲು ಹಲವಾರು ರಾಜ್ಯಗಳಲ್ಲಿ ಆಡಳಿತವು ಬುಲ್ಡೋಜರ್‌ಗಳನ್ನು ಬಳಸುತ್ತಿದೆ ಎಂದು … Continued

ಪ್ರೇಯಸಿಗಾಗಿ ಟವರ್ ಏರಿ ಕಂಗಾಲು ಮಾಡಿದ ಯುವಕ…!

ಮಂಗಳೂರು: ಪ್ರೀತಿಸಿದ ಹುಡುಗಿ ಜೊತೆ ಮನಸ್ತಾಪದ ಕಾರಣಕ್ಕೆ ಯುವಕನೊಬ್ಬ ಮೊಬೈಲ್‌ ಟವರ್‌ ಏರಿ ಕುಳಿತು ಕೆಲಕಾಲ ಎಲ್ಲರಿಗೂ ಫಜೀತಿ ಸೃಷ್ಟಿಸಿದ್ದಾನೆ. ಮಂಗಳೂರು ಹೊರವಲಯದ ಅಡ್ಯಾರ್‌ ಎಂಬಲ್ಲಿ ಈ ಘಟನೆ ಸೋಮವಾರ ನಡೆದ ಬಗ್ಗೆ ವರದಿಯಾಗಿದೆ, ಕೊಡ್ಮಾಣ್‌ ಕಂಜಾರ ಎಂಬಲ್ಲಿನ ನಿವಾಸಿ ಸುಧೀರ್‌ ಎಂಬಾತ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪ … Continued

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ವಿಶೇಷ ಸಭೆ : ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನವದೆಹಲಿಯಲ್ಲಿ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಅಲ್ಲಿಯೇ ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದ ಬಗ್ಗೆ ದೆಹಲಿಯಲ್ಲಿ ವಿಶೇಷ ಸಭೆ‌ … Continued