ಕಳೆದ ಮಾರ್ಚ್‌ನಲ್ಲಿ ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದ ಭಾರತದ ಇಂಧನ ಬೇಡಿಕೆ

ನವದೆಹಲಿ: ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಯೋಜನೆ ಮತ್ತು ವಿಶ್ಲೇಷಣಾ ಕೋಶ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಇಂಧನ ಬೇಡಿಕೆಯು ಮಾರ್ಚ್‌ನಲ್ಲಿ ಕಳೆದ ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಕಳೆದ ತಿಂಗಳು ಪೆಟ್ರೋಲ್ ಬಳಕೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು. ಮಾಹಿತಿಯ ಪ್ರಕಾರ, ತೈಲ ಬೇಡಿಕೆಯ ಪ್ರಾಕ್ಸಿಯಾದ ಇಂಧನ ಬಳಕೆ ಕಳೆದ ವರ್ಷ ಇದೇ ತಿಂಗಳಿಂದ … Continued

12 ಕೋಟಿ ರೂ. ಮೌಲ್ಯದ 600 ವರ್ಷಗಳಷ್ಟು ಪುರಾತನ ಹಿಂದೂ ದೇವತೆಗಳ ಲೋಹದ ವಿಗ್ರಹಗಳು ವಶಕ್ಕೆ

ಪುದುಚೇರಿ: ಪುರಾತನ ವಸ್ತುಗಳ ಮಾರಾಟಗಾರರೊಬ್ಬರ ಆವರಣದಿಂದ 12 ಕೋಟಿ ಮೌಲ್ಯದ ಮೂರು ಪುರಾತನ ವಿಗ್ರಹಗಳನ್ನು ವಶಪಡಿಸಿಕೊಂಡ ನಂತರ ತಮಿಳುನಾಡು ವಿಗ್ರಹ ವಿಭಾಗದ ಸಿಐಡಿ ತನ್ನ ವಿಚಾರಣೆಯನ್ನು ನೆರೆಯ ಪುದುಚೇರಿಗೆ ವಿಸ್ತರಿಸಿದೆ. ಪುದುಚೇರಿಯ ಆರ್ಟ್ ಗ್ಯಾಲರಿಯಲ್ಲಿ ಹಿಂದೂ ಪುರಾತನ ವಿಗ್ರಹಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿಯ ನಂತರ ವಿಭಾಗವು ದಾಳಿ ನಡೆಸಿತು. ಈ ಮೂರು ಶಿಲ್ಪಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ … Continued

ದೆಹಲಿಯ ಹನುಮ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಹಿಂಸಾಚಾರ

ನವದೆಹಲಿ: ಶನಿವಾರ (ಏಪ್ರಿಲ್ 16) ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ಹನುಮಾನ್ ಜಯಂತಿ ಮೆರವಣಿಗೆಯಲ್ಲಿ ಹಿಂಸಾಚಾರ ಸಂಭವಿಸಿದೆ. ಘಟನೆಯಲ್ಲಿ ಹಲವಾರು ವಾಹನಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸ್ಥಳದಲ್ಲೇ ಪರಿಸ್ಥಿತಿ ನಿಭಾಯಿಸಲು ಯತ್ನಿಸಿದಾಗ ಅವರ ಮೇಲೂ ದುಷ್ಕರ್ಮಿಗಳು … Continued

ಕುಮಟಾ: ಅದ್ಧೂರಿಯಾಗಿ ನಡೆದ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವ

ಕುಮಟಾ;ಉತ್ತರ ಕನ್ನಡ ಜಿಲ್ಲೆಯ ಹೆಸರುವಾಸಿ ಜಾತ್ರೆಗಳಲ್ಲೊಂದಾದ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವು ಶನಿವಾರ ನಡೆಯಿತು. ಇದು ಪ್ರತಿವರ್ಷ ಚೈತ್ರ ಶುದ್ಧ ಹುಣ್ಣಿಮೆ ದಿನದಂದು ನಡೆಯುತ್ತದೆ.ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ರಥೋತ್ಸವ ಸ್ಥಗಿತವಾಗಿತ್ತು.ಈ ವರ್ಷ ಯಾವುದೇ ಆತಂಕವಿಲ್ಲದೆ ರಥೋತ್ಸವ ಅದ್ಧೂರಿಯಾಗಿ ಸಂಪನ್ನವಾಯಿತು. ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀದೇವಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು. … Continued

ಐದು ಕ್ಷೇತ್ರಗಳಿಗೆ ಉಪಚುನಾವಣೆ: ಟಿಎಂಸಿ, ಕಾಂಗ್ರೆಸ್, ಆರ್‌ಜೆಡಿ ಗೆಲುವು; ಬಿಜೆಪಿ ಶೂನ್ಯ ಸಾಧನೆ

ನವದೆಹಲಿ: ತೃಣಮೂಲ ಕಾಂಗ್ರೆಸ್ ಶನಿವಾರ ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭೆ ಮತ್ತು ಬಾಲಿಗುಂಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಬಿಜೆಪಿಯೊಂದಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ತಲಾ ಒಂದು ಕ್ಷೇತ್ರವನ್ನು ಗೆದ್ದುಕೊಂಡಿವೆ. ಛತ್ತೀಸ್‌ಗಢದ ಖೈರಗಢ ವಿಧಾನಸಭಾ ಉಪಚುನಾವಣೆಯಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಶೋದಾ ವರ್ಮಾ ಅವರು ಬಿಜೆಪಿಯ … Continued

ಅಸ್ಸಾಂನಲ್ಲಿ ಅಲ್-ಖೈದಾ ನೆಟ್‌ವರ್ಕ್ ಸಂಪರ್ಕ ಹೊಂದಿರುವ ಆರು ಶಂಕಿತ ಉಗ್ರರ ಬಂಧನ

ಬಾರ್ಪೇಟಾ: ಬಾಂಗ್ಲಾದೇಶದಲ್ಲಿ ಅಲ್-ಖೈದಾ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರು ಶಂಕಿತ ಭಯೋತ್ಪಾದಕರನ್ನು ಅಸ್ಸಾಂನ ಬಾರ್ಪೇಟಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಭಾರತೀಯ ಉಪಖಂಡದಲ್ಲಿ ಅಲ್-ಖೈದಾ’ (AQIS) ನೊಂದಿಗೆ ಸಂಪರ್ಕ ಹೊಂದಿರುವ ಆರು ಶಂಕಿತರನ್ನು ಶುಕ್ರವಾರ ಹೌಲಿಯಲ್ಲಿರುವ ಮದರಸಾದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತವ ಸಿನ್ಹಾ ತಿಳಿಸಿದ್ದಾರೆ. ಮಾರ್ಚ್ 4 ರಂದು ಬಂಧಿತನಾಗಿದ್ದ … Continued

ಹನುಮ ಜಯಂತಿ ದಿನವೇ ಹುಬ್ಬಳ್ಳಿ ಬುಡರಸಿಂಗಿ ಆಂಜನೇಯ ಮೂರ್ತಿ ಕಣ್ಣಿಂದ ಅನೇಕ ಬಾರಿ ಜಿನುಗಿದ ನೀರು…!: ಭಕ್ತರಿಗೆ ಅಚ್ಚರಿ…ವೀಕ್ಷಿಸಿ

ಹುಬ್ಬಳ್ಳಿ: ಹನುಮ ಜಯಂತಿ ದಿನವೇ ಧಾರಾವಾಡ ಜಿಲ್ಲೆಯ ಬುಡರಸಿಂಗಿy ಆಂಜನೇಯ ಮೂರ್ತಿಯಲ್ಲಿನ ಕಣ್ಣಿನಿಂದ ನೀರು ಬಿದ್ದ ಅಚ್ಚರಿಯ ಘಟನೆ ನಡೆದ ವರದಿಯಾಗಿದೆ. ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಹುನುಮ ಜಯಂತಿ ದಿನವೇ ಹನುಮಂತನ ಮೂರ್ತಿ ಕಣ್ಣಿಂದ ನೀರು ಬರುತ್ತಿದ್ದು ಜನರ ಅಚ್ಚರಿಗೆ ಕಾರಣವಾಗಿದೆ. ಈ ಆಂಜನೇಯ ದೇವಸ್ಥಾನ ಸುಮಾರು 700 ವರ್ಷಗಳ ಇತಿಹಾಸವಿದ್ದು, ಈ … Continued

ಮದ್ಯಪಾನ ಮಾಡಿ ಗುರುದ್ವಾರ ಪ್ರವೇಶ ಮಾಡಿದ್ದಾರೆಂದು ಆರೋಪಿಸಿ ಪಂಜಾಬ್‌ ಸಿಎಂ ವಿರುದ್ಧ ದೂರು ದಾಖಲು

ಚಂಡೀಗಡ: ಮದ್ಯಪಾನ ಮಾಡಿ ಗುರುದ್ವಾರ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ. ಗುರುದ್ವಾರವು ಭಕ್ತಿ ಪ್ರಧಾನವಾದ ಸ್ಥಳವಾಗಿದೆ. ಇಲ್ಲಿಗೆ ಮದ್ಯಪಾನ ಮಾಡಿ ಬರುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿಯಾಗಿ ನಡೆದುಕೊಂಡಿರುವುದು ಶೋಭೆ ತರುವುದಿಲ್ಲ. … Continued

ಸಂತೋಷ ಪಾಟೀಲ ಸಾವಿನ ಪ್ರಕರಣ: ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖೆಗೆ 7 ತಂಡಗಳ ರಚನೆ

ಉಡುಪಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆಗೆ ಏಳು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ನಾನು ಈ ತನಿಖಾ ತಂಡಗಳ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದೇನೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದರು. ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಸಂಬಂಧ ಶನಿವಾರ ಎಸ್‌ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ … Continued

ಅಫ್ಘಾನಿಸ್ತಾನದ ಖೋಸ್ಟ್, ಕುನಾರ್ ಪ್ರಾಂತ್ಯದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿ: ಕನಿಷ್ಠ 30 ಮಂದಿ ಸಾವು

ನವದೆಹಲಿ: ಏಪ್ರಿಲ್ 15 ರ ಶುಕ್ರವಾರ ರಾತ್ರಿ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದ ಮೇಲೆ ಪಾಕಿಸ್ತಾನಿ ವಿಮಾನಗಳು ವೈಮಾನಿಕ ದಾಳಿ ನಡೆಸಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ಥಳೀಯ ಅಧಿಕಾರಿಗಳು ಶನಿವಾರ ಖಚಿತಪಡಿಸಿದ್ದಾರೆ. ಅಫ್ಘಾನಿಸ್ತಾನದ ಸ್ಥಳೀಯ ಅಧಿಕಾರಿಗಳು ಶುಕ್ರವಾರ ರಾತ್ರಿ, ಏಪ್ರಿಲ್ 15 ರಂದು ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದ … Continued