ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಿ ಇಲ್ಲದಿದ್ದರೆ…. : ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ ಠಾಕ್ರೆ

ಮುಂಬೈ: ಮಸೀದಿಗಳಲ್ಲಿ ಹಾಕುವ ಧ್ವನಿ ವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್​ ಠಾಕ್ರೆ , ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಶಿವಾಜಿ ಪಾರ್ಕ್​​ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾನು ಪ್ರಾರ್ಥನೆಗಳನ್ನು ವಿರೋಧಿಸುವುದಿಲ್ಲ, ಯಾವುದೇ ಧರ್ಮದ ವಿರೋಧಿಯೂ ಅಲ್ಲ. ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಅಷ್ಟೆಲ್ಲ ದೊಡ್ಡದಾಗಿ ಯಾಕೆ ಹಾಕಬೇಕು? ಈ … Continued

ಶ್ರೀಲಂಕಾದಲ್ಲಿ ವಾಟ್ಸಾಪ್, ಫೇಸ್‌ಬುಕ್ ಟ್ವಿಟರ್ ಬಳಕೆಗೆ ನಿರ್ಬಂಧ

ಕೊಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಧಿಕಾರಿಗಳು ವಾರಾಂತ್ಯದಲ್ಲಿ ದೇಶದಾದ್ಯಂತ ಕರ್ಫ್ಯೂ ವಿಧಿಸಿದ ನಂತರ, ಭಾನುವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ಬಂಧ ವಿಧಿಸಿರುವುದಾಗಿ ವರದಿಯಾಗಿದೆ. ಶ್ರೀಲಂಕಾ ದೇಶದಾದ್ಯಂತ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ವೇದಿಕೆಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ’ ಎಂದು ಲಂಡನ್ … Continued

ಚೀನಾದಲ್ಲಿ 13,000 ದಾಟಿದ ದೈನಂದಿನ ಕೋವಿಡ್ -19 ಪ್ರಕರಣಗಳು..4ನೇ ಅಲೆ ಆತಂಕ..?!

ಬೀಜಿಂಗ್: ಚೀನಾ ಭಾನುವಾರ (ಏಪ್ರಿಲ್ 3) 13,146 ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಎರಡು ವರ್ಷಗಳ ಹಿಂದೆ ಮೊದಲ ಅಲೆಯ ಉತ್ತುಂಗದ ನಂತರ ಅತಿ ಹೆಚ್ಚು, ಒಮಿಕ್ರಾನ್ ರೂಪಾಂತರದ ಹೊಸ ಉಪಪ್ರಕಾರವನ್ನು ಗುರುತಿಸಲಾಗಿದೆ. ರೋಗ ಲಕ್ಷಣಗಳೊಂದಿಗೆ 1,455 ಪ್ರಕರಣಗಳು ಹಾಗೂ 11,691 ಲಕ್ಷಣರಹಿತ ಪ್ರಕರಣಗಳು ದಾಖಲಾಗಿದ್ದು, ಆದರೆ ಹೊಸ ಸಾವುಗಳು ವರದಿಯಾಗಿಲ್ಲ” ಎಂದು … Continued

ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಗೆ ವಿ.ಪಿ.ಸಿಂಗ್, ಮುಫ್ತಿ ಮೊಹಮ್ಮದ್‌ ಸಯೀದ್ ಕಾರಣ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಗೆ ಅಂದಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಲ್ಲ, ಆದರೆ ಆಗಿನ ಪ್ರಧಾನಿ ವಿ.ಪಿ. ಸಿಂಗ್ ಮತ್ತು ಅವರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಕಾರಣ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಶನಿವಾರ ಹೇಳಿದ್ದಾರೆ. ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆಯನ್ನು ಬಿಂಬಿಸುವ ದಿ ಕಾಶ್ಮೀರ್ ಫೈಲ್ಸ್ … Continued

ಯುಗಾದಿ ಮೆರವಣಿಗೆ ವೇಳೆ ಕಲ್ಲು ತೂರಾಟ: ನಾಲ್ವರು ಪೊಲೀಸ್‌ ಅಧಿಕಾರಿಗಳು ಸೇರಿ 42 ಜನರಿಗೆ ಗಾಯ

ಏಪ್ರಿಲ್ 2, ಶನಿವಾರದಂದು ರಾಜಸ್ಥಾನದ ಕರೌಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಭಾಗವಾಗಿ ನಡೆದ ಮೋಟಾರ್‌ ಸೈಕಲ್ ರ್ಯಾಲಿಯ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 42 ಜನರು ಗಾಯಗೊಂಡಿದ್ದಾರೆ. ಹಿಂದೂ ಹೊಸ ವರ್ಷದ ಮೊದಲ ದಿನವಾದ ‘ನವ ಸಂವತ್ಸರ’ ಯುಗಾದಿ ಸಂದರ್ಭದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಘಟನೆಯ ನಂತರ ಪೊಲೀಸರು … Continued

ಕರ್ನಾಟಕದ ಹಲವು ಜಿಲ್ಲೆಗಳಿಗೆ ಇನ್ನೂ ನಾಲ್ಕು ದಿನ ಮಳೆ ಮುನ್ಸೂಚನೆ

ಬೆಂಗಳೂರು : ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಏಪ್ರಿಲ್ 6 ರ ವರೆಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಕೇಂದ್ರ ಬೆಂಗಳೂರಿನ ತಜ್ಞರಾದ ಸದಾನಂದ ಅಡಿಗ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ. ಏಪ್ರಿಲ್ 5 ಹಾಗೂ 6 ರಂದೂ ಕೂಡಾ … Continued

ಭಾರತದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 122 ವರ್ಷಗಳಲ್ಲೇ ಅತಿ ಹೆಚ್ಚು ಉಷ್ಣತೆ ದಾಖಲು…!

ನವದೆಹಲಿ: ಭಾರತದಲ್ಲಿ ದಾಖಲೆಯ ಸರಾಸರಿ ಉಷ್ಣಾಂಶ ದಾಖಲಾಗಿದ್ದು, ಅದರ ಪರಿಣಾಮ ಏಪ್ರಿಲ್​ನಲ್ಲೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಏಪ್ರಿಲ್​ನ ಮೊದಲ 10-15 ದಿನಗಳಲ್ಲಿ ಅತ್ಯಂತ ಉಷ್ಣಹವಾಮಾನ ಇರಲಿದ್ದು, ತೀವ್ರವಾದ ಶಾಖದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. 2022ರ ಈ ಮಾರ್ಚ್​ನಲ್ಲಿ ಮಾಸಿಕ ಸರಾಸರಿ ಉಷ್ಣಾಂಶ 122 ವರ್ಷಗಳಲ್ಲೇ … Continued

ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: ಮೃತರ ಸಂಖ್ಯೆ 12ಕ್ಕೆ ಏರಿಕೆ

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದ ಹೆರಾತ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆರಾತ್ ನಗರದ ಪಿಡಿ 12ರಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಘಟನೆ ನಡೆದ ದಿನದಂದು ಏಳು ಮಂದಿ ಸಾವನ್ನಪ್ಪಿದ್ದರು. ಶನಿವಾರ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿಗಳು … Continued

ಬಿಜೆಪಿಗೆ ದುರಹಂಕಾರ ಬಂದಿದೆ… ಗುಜರಾತ್‌ನಲ್ಲಿ ಆಪ್ ಗೆ ಅವಕಾಶ ಕೊಡಿ: ಅರವಿಂದ್ ಕೇಜ್ರಿವಾಲ್

ನವದೆಹಲಿ: ‘ಮಿಷನ್ ಗುಜರಾತ್’ ಅನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) “ಒಂದು ಅವಕಾಶ” ಕೋರಿ ಅಹಮದಾಬಾದ್ ನಗರದಲ್ಲಿ ಮೆಗಾ ರೋಡ್‌ ಶೋ ನಡೆಸಿದರು. ಈ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಎಎಪಿ ನಾಯಕರು ಎರಡು … Continued

ಕಣಿವೆಗೆ ಉರುಳಿ ಬಿದ್ದ ಟ್ರಕ್: 7 ಸಾವು, 14 ಮಂದಿಗೆ ಗಾಯ

ತಿರುಪತ್ತೂರ: ದೇವಸ್ಥಾನಕ್ಕೆ ತೆರಳುತ್ತಿದ್ದ ಟ್ರಕ್ ಕಣಿವೆಗೆ ಬಿದ್ದ ಪರಿಣಾಮ 7 ಮಂದಿ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಸೆಂಬರೈ ಗ್ರಾಮದಲ್ಲಿ ನಡೆದಿದೆ. ದೇವಾಲಯವು ಸೆಂಬರೈ ಗ್ರಾಮದ ಬೆಟ್ಟದ ಮೇಲಿದೆ. ಈ ದೇವಾಲಯಕ್ಕೆ ತೆರಳುವಾಗ ವಾಹನದ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಮಹಿಳೆಯರೂ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 14 … Continued