ಸಿದ್ಧಗಂಗಾ ಮಠದ ಕಾರ್ಯಕ್ರಮದಲ್ಲಿ ಶೂ ಧರಿಸಿ ಇಬ್ಬರು ಶ್ರೀಗಳ ಮಧ್ಯೆ ಕುಳಿತ ಅಮಿತ್ ಶಾ-ಕಾಂಗ್ರೆಸ್‌ ಟೀಕೆ

ಬೆಂಗಳೂರು: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಗುರುವಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶೂ ಧರಿಸಿ ಕುಳಿತ ಭಂಗಿ ಈಗ ಟೀಕೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸುತ್ತೂರು ಶ್ರೀಗಳು ಮತ್ತು ಸಿದ್ದಗಂಗಾ ಮಠದ … Continued

ಐಟಿಐ-ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐಟಿಐನಲ್ಲಿ ಮೈಸೂರಿನ ಕೇನ್ಸ್‌ ಟೆಕ್ನೋಲಾಜಿಯವರು ದಿನಾಂಕ ಏಪ್ರಿಲ್‌ 11ರಂದು ಬೆಳಿಗ್ಗೆ 10 ಗಂಟೆಗೆ ಐಟಿಐ ಇಲೆಕ್ಟ್ರೀಶಿಯನ್, ಫಿಟ್ಟರ್, ಇಲೆಕ್ಟ್ರಾನಿಕ್ ಮೆಕಾನಿಕ್ ಉತ್ತೀರ್ಣರಾದ ಮತ್ತು ಡಿಪ್ಲೋಮಾ ಇಲೆಕ್ಟ್ರೀಶಿಯನ್ ಮತ್ತು ಇಲೆಕ್ಟ್ರಾನಿಕ್ಸ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಬಹುದಾಗಿದ್ದು, ಹೆಸರು ನೋಂದಣಿಗ ಹಾಗೂ ಹೆಚ್ಚಿನ … Continued

ಆರ್ಥಿಕ ಬಿಕ್ಕಟ್ಟಿನಿಂದ ದೇಶದಲ್ಲಿ ಅಶಾಂತಿ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಕೋಲಂಬೊ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಹೆಚ್ಚುತ್ತಿರುವ ಅಶಾಂತಿಯಿಂದಾಗಿ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಶುಕ್ರವಾರ ದೇಶದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ಅವರು ದ್ವೀಪ ರಾಷ್ಟ್ರದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಸಾಧಾರಣ ಗೆಜೆಟ್ ಅನ್ನು ಬಿಡುಗಡೆ ಮಾಡಿದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಸಾರ್ವಜನಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ … Continued

ರಷ್ಯಾದ ಬೆಲ್ಗೊರೊಡ್ ಇಂಧನ ಡಿಪೊದ ಮೇಲೆ ಉಕ್ರೇನಿಯನ್ ಹೆಲಿಕಾಪ್ಟರ್‌ಗಳಿಂದ ಬಾಂಬ್‌ ದಾಳಿ: ಇದೇ ಮೊದಲ ಬಾರಿಗೆ ಮಾಸ್ಕೋ ಆರೋಪ

ಎರಡು ಉಕ್ರೇನಿಯನ್ ಮಿಲಿಟರಿ ಹೆಲಿಕಾಪ್ಟರ್‌ಗಳು ರಷ್ಯಾದ ಪೂರ್ವ ನಗರವಾದ ಬೆಲ್ಗೊರೊಡ್‌ನಲ್ಲಿನ ಇಂಧನ ಡಿಪೋ ಮೇಲೆ ಬಾಂಬ್ ದಾಳಿ ನಡೆಸಿವೆ ಎಂದು ರಷ್ಯಾದ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ, ಇದು ದೃಢಪಟ್ಟರೆ, ಮಾಸ್ಕೋ ಉಕ್ರೇನ್‌ ಮೇಲೆ ಫೆಬ್ರವರಿ ಕೊನೆಯಲ್ಲಿ ಆಕ್ರಮಣ ಮಾಡಿದ ನಂತರ ರಷ್ಯಾದ ನೆಲದಲ್ಲಿ ಉಕ್ರೇನ್ ಪಡೆಗಳು ನಡೆಸಿದ ಮೊದಲ ವಾಯುದಾಳಿಯಾಗಿದೆ. ಶುಕ್ರವಾರ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಉದ್ದೇಶಿತ … Continued

ಯುಗಾದಿ ದಿನಂದು ಪೆಟ್ರೋಲ್‌-ಡೀಸೆಲ್‌ ಮತ್ತಷ್ಟು ದುಬಾರಿ

ನವದೆಹಲಿ: ಯುಗಾದಿ ಹಬ್ಬದ ದಿನವಾದ ಇಂದು, ಶನಿವಾರ ಕೂಡ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ 80 ಪೈಸೆ ಏರಿಕೆಯಾಗಿದೆ. ಕೇವಲ 12 ದಿನಗಳಲ್ಲೇ 10ನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು (ಏಪ್ರಿಲ್‌ 2) ಪೆಟ್ರೋಲ್ ಮತ್ತು ಡೀಸೆಲ್​ ಕ್ರಮವಾಗಿ 80​ ಪೈಸೆಯಷ್ಟು ಏರಿಕೆಯಾಗಿದ್ದು, ಕಳೆದ 12 ದಿನಗಳಲ್ಲಿ ಒಟ್ಟು 7.20 ರೂ. … Continued

ರಷ್ಯಾದ ವಿದೇಶಾಂಗ ಸಚಿವರ ಭೇಟಿ ಮಾಡಿದ ಪ್ರಧಾನಿ: ಹಿಂಸಾಚಾರ ನಿಲ್ಲಿಸಲು” ಕರೆ, ಶಾಂತಿ ಪ್ರಯತ್ನಕ್ಕೆ ಸಹಕರಿಸಲು ಸಿದ್ಧ ಎಂದ ಮೋದಿ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರ ದೀರ್ಘಾ ಕಾಲದ ಮಿತ್ರ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಶುಕ್ರವಾರ ಅಧಿಕೃತ ಭೇಟಿಗಾಗಿ ನವದೆಹಲಿಗೆ ಬಂದಿದ್ದು, ಉಕ್ರೇನ್ ಆಕ್ರಮಣದ ಬಗ್ಗೆ ರಷ್ಯಾ ವ್ಯಾಪಕ ಟೀಕೆಗಳನ್ನು ಸ್ವೀಕರಿಸುತ್ತಿರುವ ಸಮಯದಲ್ಲಿ ಈ ಭೇಟಿ ನಡೆದಿದೆ. ತಮ್ಮ ಭೇಟಿಯ ಸಂದರ್ಭದಲ್ಲಿ, ಲಾವ್ರೊವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು … Continued

ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆಗೊಂಡ ನಂತರ ಅಧಿಕಾರ ವಹಿಸಿಕೊಳ್ಳಲು 294 ಕಿಮೀ ಸೈಕಲ್‌ ತುಳಿದ ಮಹಾರಾಷ್ಟ್ರ ಅರಣ್ಯಾಧಿಕಾರಿ

ಮುಂಬೈ: ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಹೊಸ ಪೋಸ್ಟಿಂಗ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲು ಪುಣೆಯಿಂದ ಕೊಲ್ಲಾಪುರಕ್ಕೆ ಹೋಗಲು 294 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಮೂಲಕ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೆ 59 ನೇ ವರ್ಷಕ್ಕೆ ಕಾಲಿಟ್ಟ ನಾನಾಸಾಹೇಬ್ ಲಾಡ್ಕಟ್ ಎಂಬ ಅಧಿಕಾರಿ ಬುಧವಾರದಂದು ಸೈಕಲ್ ತುಳಿದು, ಬೇಸಿಗೆಯ … Continued

ಭಾಸ್ಕರ ರಾವ್ ಸ್ವಯಂ ನಿವೃತ್ತಿ ಮನವಿ ಅರ್ಜಿ ಅಂಗೀಕರಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ ರಾವ್ ಅವರು ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಕಳೆದ 7 ತಿಂಗಳಿಂದ ಕೇಂದ್ರ ಅದಕ್ಕೆ ಸಮ್ಮತಿ ನೀಡಿರಲಿಲ್ಲ. ಈಗ ಅನುಮೋದನೆ ನೀಡಿದೆ. 2021 ಸೆಪ್ಟೆಂಬರ್‌ನಲ್ಲಿ ಸ್ವಯಂನಿವೃತ್ತಿಗೆ ಅರ್ಜಿ ಸಲ್ಲಿಸಿದ್ದ ಭಾಸ್ಕರ್ ರಾವ್, ಅದನ್ನು ತಕ್ಷಣ ಪರಿಗಣಿಸುವಂತೆ ಮನವಿ ಮಾಡಿದ್ದರು. ಭಾಸ್ಕರ್ ರಾವ್ 1990ರ … Continued

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಬೇಕಾದ ನೀಲನಕ್ಷೆ ಸಿದ್ಧಪಡಿಸಿ ಕೊಡಿ: ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಸೂಚನೆ

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಗೆಲ್ಲಲು ಬೇಕಾದ ನೀಲನಕ್ಷೆಯನ್ನು ಏಪ್ರಿಲ್ 16 ರೊಳಗೆ ಸಿದ್ಧಪಡಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. ಶುಕ್ರವಾರ ಅಮಿತ್ ಶಾ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಕಾರ್ಯತಂತ್ರ … Continued

ಈ ಮಾರ್ಚ್‌ನಲ್ಲಿ 1.42 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾರ್ವಕಾಲಿಕವಾಗಿ ಹೆಚ್ಚು ಜಿಎಸ್‌ಟಿ ಸಂಗ್ರಹ…!

ನವದೆಹಲಿ: ಮಾರ್ಚ್‌ನಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸಾರ್ವಕಾಲಿಕ ಗರಿಷ್ಠ 1.42 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ (ಏಪ್ರಿಲ್ 1) ತಿಳಿಸಿದೆ. ಮಾರ್ಚ್ 2022ರಲ್ಲಿ ಒಟ್ಟು ಜಿಎಸ್‌ಟಿ (GST) ಆದಾಯವು 1,42,095 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ (CGST) 25,830 ಕೋಟಿ ರೂ., ಎಸ್‌ಜಿಎಸ್‌ಟಿ (SGST) … Continued