ಮಧ್ಯರಾತ್ರಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡನೆ..!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಯಾವುದೇ ಮಾಹಿತಿ ನೀಡದೆ ಮಧ್ಯರಾತ್ರಿಯಲ್ಲಿ ೧೦,೪೮೦.೯೩ ಕೋಟಿ ರೂ. ಗಾತ್ರದ ವಾರ್ಷಿಕ ಬಜೆಟ್ ಮಂಡಿಸಲಾಗಿದೆ. ಇದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ ಕೆಲವೇ ತಾಸುಗಳ ಮೊದಲು ೨೦೨೨-೨೩ನೇ ಸಾಲಿನ ಆಯವ್ಯಯವನ್ನು ತರಾತುರಿಯಲ್ಲಿ ಮಂಡಿಸಿ, ಆಡಳಿತಾಧಿಕಾರಿಗಳ ಅನುಮೋದನೆ ಪಡೆದು ಬಳಿಕ ಬಜೆಟ್ ಪ್ರತಿಯನ್ನು … Continued

ಕರ್ನಾಟಕದ ಚುನಾವಣೆಯಲ್ಲಿ ಪಕ್ಷ 150ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲೇಬೇಕು. ಒಗ್ಗಟ್ಟಾಗಿ ಕೆಲಸ ಮಾಡಿ-ಕಾಂಗ್ರೆಸ್‌ ನಾಯಕರಿಗೆ ರಾಹುಲ್ ಗಾಂಧಿ ತಾಕೀತು

ಬೆಂಗಳೂರು: ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ತಲುಪಬೇಕು ಎಂದು ಎಐಸಿಸಿ ನಿಕಟ ಪೂರ್ವ ಅಧ್ಯಕ್ಷ ರಾಹುಲ್‍ ಗಾಂಧಿ ಕಾಂಗ್ರೆಸ್‌ ನಾಯಕರಿಗೆ ಕರೆ ನೀಡಿದ್ದಾರೆ. ಕೆಪಿಸಿಸಿ ನೂತನ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಮೊದಲಿನಿಂದಲೂ ಕಾಂಗ್ರೆಸ್ ರಾಜ್ಯವಾಗಿದೆ. ಈಗ ಇಲ್ಲಿ … Continued

20 ಕೆಜಿ ಆರ್‌ಡಿಎಕ್ಸ್‌, 20 ಸ್ಲೀಪರ್ ಸೆಲ್‌ಗಳಿವೆ : ಪ್ರಧಾನಿ ಮೋದಿ ಹತ್ಯೆಗೆ ಭಯೋತ್ಪಾದಕ ಗುಂಪುಗಳಿಂದ ಸ್ಕೆಚ್‌ ಎಂದು ಎನ್‌ಐಎಗೆ ಬೆದರಿಕೆ ಮೇಲ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಎನ್‌ಐಎಗೆ ಇ-ಮೇಲ್ ಬಂದ ನಂತರ ಭದ್ರತಾ ಏಜೆನ್ಸಿಗಳು tIvfr ಕಟ್ಟೆಚ್ಚರ ವಹಿಸಿವೆ. ಈ ಷಡ್ಯಂತ್ರ ಬಯಲಾಗಬಾರದು ಎಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಇಮೇಲ್ ಕಳುಹಿಸಿದ ಬೆದರಿಕೆ ಹಾಕಿದ್ದಾನೆ. ವರದಿಗಳ ಪ್ರಕಾರ, ಈ ಕೆಲಸಕ್ಕಾಗಿ ಕನಿಷ್ಠ 20 ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಸ್ಲೀಪರ್ ಸೆಲ್‌ಗಳು 20 ಕೆಜಿ … Continued

ಕರ್ಮ ಹಿಟ್ಸ್ ಬ್ಯಾಕ್…ರಸ್ತೆಯಲ್ಲಿ ಎಮ್ಮೆಗೆ ಹೊಡೆಯುತ್ತ ಸಾಗಿದ ಗುಂಪು, ಆದ್ರೆ ಎಮ್ಮೆ ಇವ್ರಿಗೆ ಕೊಟ್ಟ ಪ್ರತ್ಯುತ್ತರ ಹೇಗಿದೆ ನೋಡಿ

ಅನೇಕರು ಕರ್ಮದ ಪರಿಕಲ್ಪನೆಯನ್ನು ನಂಬುತ್ತಾರೆ ಮತ್ತು ಒಬ್ಬರ ಕ್ರಿಯೆಗಳ ಪರಿಣಾಮಗಳನ್ನು ಅಂತಿಮವಾಗಿ ಎದುರಿಸಬೇಕಾಗುತ್ತದೆ ಎಂದು ಎಂಬುದು ಕರ್ಮಫಲದ ಪರಿಕಲ್ಪನೆ. ಅಂತಹ ಒಂದು ಶೀಘ್ರವೇ ತಾವು ಮಾಡಿದ ಕರ್ಮಕ್ಕೆ ತಕ್ಷಣವೇ ಪ್ರತಿಕ್ರಿಯೆ ಸಿಕ್ಕಿದ ತಾಜಾ ನಿದರ್ಶನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ವೀಡಿಯೊ ಸಾಕ್ಷಿಯಾಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ … Continued

ಏ.1 ದಾಸೋಹ ದಿನ, ಕರ್ನಾಟಕದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀಗಳ ಹೆಸರು: ಸಿಎಂ ಬೊಮ್ಮಾಯಿ ಘೋಷಣೆ

ತುಮಕೂರು: ಎಲ್ಲಾ ಸಮುದಾಯದವರನ್ನು ಸೇರಿಸಿ ತ್ರಿವಿಧ ದಾಸೋಹ ಮಾಡಿದ ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಏಪ್ರಿಲ್‌ 1ರ ದಿನವನ್ನು ದಾಸೋಹ ದಿನವೆಂದು ಘೋಷಿಸಲಾಗುತ್ತದೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಬಿಸಿಯೂಟ ಯೋಜನೆ ಎಂದು ಹೆಸರಿಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ … Continued

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ 115ನೇ ಜಯಂತಿ: ಟ್ವೀಟ್‌ ಮೂಲಕ ಗೌರವ ನಮನ ಸಲ್ಲಿಸಿದ ಮೋದಿ

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯ 115ನೇ ಜಯಂತಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ‘ಪೂಜನೀಯರಾದ ಗೌರವಾನ್ವಿತ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ನಾನು ನನ್ನ ಗೌರವ ನಮನ ಸಲ್ಲಿಸುವೆ. ಅವರ ಅಪ್ರತಿಮ ಸಮುದಾಯ ಸೇವೆ ಮತ್ತು ಆರೋಗ್ಯ ಮತ್ತು … Continued

ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು, 1,742 ಚಾರ್ಜಿಂಗ್ ಕೇಂದ್ರಗಳಿವೆ: ಲೋಕಸಭೆಗೆ ತಿಳಿಸಿದ ನಿತಿನ್‌ ಗಡ್ಕರಿ

ನವದೆಹಲಿ: ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 1,700 ಚಾರ್ಜಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುವುದರೊಂದಿಗೆ ಭಾರತದಲ್ಲಿ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹತ್ತು ಲಕ್ಷವನ್ನು ತಲುಪಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ವಾಹನ್ 4 ಡೇಟಾ ಪ್ರಕಾರ, ಈ ವರ್ಷದ ಮಾರ್ಚ್ 25 ರ ಹೊತ್ತಿಗೆ, ಬ್ಯೂರೋ ಆಫ್ ಎನರ್ಜಿ … Continued

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಬೀದಿಗಿಳಿದ ಜನತೆ: ಶ್ರೀಲಂಕಾದ ಅಧ್ಯಕ್ಷರ ಭವನದ ಬಳಿ ಸಾವಿರಾರು ಜನರ ಪ್ರತಿಭಟನೆ, ಸೇನಾ ಬಸ್‌ಗೆ ಬೆಂಕಿ

ಕೊಲಂಬೊ: ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದು, ಜನರು ಬೀದಿಗೆ ಬಂದಿದ್ದಾರೆ. ಗುರುವಾರ ಶ್ರೀಲಂಕಾದ ಅಧ್ಯಕ್ಷರ ಖಾಸಗಿ ನಿವಾಸದ ಬಳಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಅಧ್ಯಕ್ಷರ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಜನರನ್ನು ಚದುರಿಸಲು ಶ್ರೀಲಂಕಾ ಪೊಲೀಸರು ಅಶ್ರುವಾಯು ಮತ್ತು ಜಲ ಕ್ಯಾನನ್ ಅನ್ನು ಬಳಸಬೇಕಾಯಿತು. ಪ್ರತಿಭಟನೆಗಳು … Continued

ಉಕ್ರೇನಿಯನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ಅನ್ನು ರಚಿಸಿದ 15 ವರ್ಷದ ಭಾರತೀಯ ಹುಡುಗ..!

ರಷ್ಯಾ ಮತ್ತು ಉಕ್ರೇನ್ ನಡುವೆ ಒಂದು ತಿಂಗಳಿಂದಲೂ ಹೆಚ್ಚುದಿನಗಳಿಂದ ಯುದ್ಧ ನಡೆಯುತ್ತಿದೆ. ಯುದ್ಧದಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿ ಬೇರೆ ದೇಶಗಳಿಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದಾರೆ. ಈಗ ನಿರಾಶ್ರಿತರಿಗೆ ಸಹಾಯ ಮಾಡಲು, 15 ವರ್ಷದ ಭಾರತೀಯ ಹುಡುಗನೊಬ್ಬ ಆ್ಯಪ್ ಅನ್ನು ವಿನ್ಯಾಸಗೊಳಿಸಿದ್ದು, ಉಕ್ರೇನಿಯನ್ ನಿರಾಶ್ರಿತರು ಅಗತ್ಯವಿರುವ ಸಹಾಯವನ್ನು ಪಡೆಯಲು ಇದನ್ನು ಬಳಸಬಹುದಾಗಿದೆ. ಈ ಆ್ಯಪ್ ಅನ್ನು … Continued

ಕರ್ನಾಟಕದಲ್ಲಿ ರಸ್ತೆ ನಿರ್ಮಾಣಕ್ಕಾಗಿ 4 ವರ್ಷಗಳಲ್ಲಿ 1 ಲಕ್ಷ ಮರಗಳ ಕಡಿತ

ಬೆಂಗಳೂರು: ಕರ್ನಾಟಕ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಪ್ರಕಾರ, ರಸ್ತೆಗಳು ಮತ್ತು ಹೆದ್ದಾರಿಗಳನ್ನು ನಿರ್ಮಿಸಲು 2018 ರಿಂದ 2021 ರ ವರೆಗೆ ರಾಜ್ಯಾದ್ಯಂತ 1 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ. ಈ ಹಸಿರು ಹೊದಿಕೆಯ ಬಹುಪಾಲು ಮರಗಳನ್ನು ಅಂದರೆ 56,629 ಮರಗಳು – ಬೆಂಗಳೂರು-ಮೈಸೂರು ಹೆದ್ದಾರಿಯ ಭಾಗವಾದ ಬೆಂಗಳೂರು-ನಿಡಘಟ್ಟ ಯೋಜನೆಗಾಗಿ 2018-19 ರಲ್ಲಿ 11,078 ರಷ್ಟು ದೊಡ್ಡ … Continued