ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿಗೆ ಮೂರಂಕಿ ತಲುಪಿದ ಬಿಜೆಪಿ ಸದಸ್ಯರ ಬಲ

ನವದೆಹಲಿ: ಗುರುವಾರ ರಾಜ್ಯಸಭೆಗೆ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮೂರು ಅಂಕಿಗಳ ಸಂಖ್ಯೆಯನ್ನು ಪಡೆದುಕೊಂಡಿದೆ. ಈ ನಾಲ್ಕು ಸ್ಥಾನಗಳ ಸೇರ್ಪಡೆಯು 245 ಸದಸ್ಯರ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯೆಯನ್ನು 101 ಕ್ಕೆ ಹೆಚ್ಚಿಸಿದೆ, ಆದಾಗ್ಯೂ ಪಂಜಾಬ್ ಸಂಸದ ಶ್ವೈತ್ … Continued

ರಷ್ಯಾ-ಉಕ್ರೇನ್‌ ನಡುವೆ ಭಾರತವು ಮಧ್ಯಸ್ಥಿಕೆ ವಹಿಸಬಹುದು: ರಷ್ಯಾದ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ

ನವದೆಹಲಿ: ರಷ್ಯಾ ಮತ್ತು ಉಕ್ರೇನ್‌ ನಡುವೆ ಭಾರತವು ಮಧ್ಯವರ್ತಿ ಪಾತ್ರ ವಹಿಸಬಹುದು ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಶುಕ್ರವಾರ ತಮ್ಮ ಅಧಿಕೃತ ಭೇಟಿಯ ವೇಳೆ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತವು ಒಂದು ಪ್ರಮುಖ ದೇಶವಾಗಿದೆ. ಭಾರತವು ಸಮಸ್ಯೆಯ ಪರಿಹಾರವನ್ನು ಒದಗಿಸುವ ಆ ಪಾತ್ರವನ್ನು ವಹಿಸುತ್ತದೆ ಎಂದಾದರೆ, ಭಾರತವು ಅಂತಾರರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಯುತ ಮತ್ತು ತರ್ಕಬದ್ಧವಾದ … Continued

ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮಗನ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡ ಹರ್ಷ ಸಹೋದರಿ

ಚಿಕ್ಕಮಗಳೂರು: ಶಿವಮೊಗ್ಗದಲ್ಲಿ 2015ರಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಅವರ ಮಗ ಯಶಸ್ ನ ಓದಿನ ಜವಾಬ್ದಾರಿಯನ್ನು ಇತ್ತೀಚೆಗೆ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಸಹೋದರಿ ವಹಿಸಿಕೊಂಡಿದ್ದಾರೆ. ಯಶಸ್ ವಾಸವಿರುವ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಆತನ ಅಜ್ಜಿ ಮನೆಗೆ ಭೇಟಿ ನೀಡಿದ ಹರ್ಷ ಸಹೋದರಿ ಅಶ್ವಿನಿ, ಆತನ ಓದಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. … Continued

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಚಿವ ಸೋಮಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಜನಪ್ರತಿನಿಧಿಗಳ ನ್ಯಾಯಾಲಯ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ವಸತಿ ಸಚಿವ ವಿ. ಸೋಮಣ್ಣ ನಿರೀಕ್ಷಣಾ ಜಾಮೀನು ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಹೇಳಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮನವಿಯನ್ನು ವಜಾಗೊಳಿಸಿದೆ. ಸಚಿವ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯ ಬಗ್ಗೆ ಬುಧವಾರ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಬಿ ಜಯಂತ್‌ ಕುಮಾರ್ ಅವರು ಶುಕ್ರವಾರ … Continued

ಸಾಬರಮತಿ ಪುನರಾಭಿವೃದ್ಧಿ ಪ್ರಶ್ನಿಸಿ ಅರ್ಜಿ ವಿಚಾರಣೆ: ಹೊಸದಾಗಿ ಪ್ರಕರಣ ಆಲಿಸಲು ಗುಜರಾತ್‌ ಹೈಕೋರ್ಟ್‌ಗೆ ಸೂಚಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಪ್ರಸ್ತಾವಿತ ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ತವಾರ ಬದಿಗೆ ಸರಿಸಿದ್ದು , ಹೊಸದಾಗಿ ಪ್ರಕರಣವನ್ನು ಆಲಿಸುವಂತೆ ಸೂಚಿಸಿ ಪ್ರಕರಣವನ್ನು ಗುಜರಾತ್‌ ಹೈಕೋರ್ಟ್‌ಗೆ ಮರಳಿಸಿದೆ. ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ಯೋಜನೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮಹಾತ್ಮ ಗಾಂಧೀಜಿ ಮರಿ ಮೊಮ್ಮಗ ತುಷಾರ್‌ … Continued

ಫೆಮಾ ಅಡಿ ಮಂಗಳೂರು ಉದ್ಯಮಿಯ ಮನೆ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

ಮಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999 ರ ಅಡಿಯಲ್ಲಿ ಮಂಗಳೂರಿನ ಉದ್ಯಮಿಯೊಬ್ಬರು ಹೊಂದಿದ್ದ 8.3 ಕೋಟಿ ರೂಪಾಯಿ ಮೌಲ್ಯದ ನಗರದ ಅತ್ತಾವರದಲ್ಲಿ ನೆಲೆಸಿರುವ ವಸತಿ ಗೃಹದ ರೂಪದಲ್ಲಿದ್ದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ. ನಗರದ ನಿವಾಸಿ ಮತ್ತು ಇಕ್ಬಾಲ್ ಅಹ್ಮದ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಷರೀಫ್ ಮೆರೈನ್ … Continued

ಭಾರತದಲ್ಲಿ ಮಾತ್ರ…!? : ಹೊಲದಲ್ಲಿ ಕರಡಿ ವೇಷ ಹಾಕಿಕೊಂಡು ಓಡಾಡಿದ್ರೆ ತಿಂಗ್ಳಿಗೆ 15,000 ರೂ. ಸಂಬಳ…!

ಹೈದರಾಬಾದ್: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ರೈತರು ತಮ್ಮ ಬೆಳೆಯನ್ನು ಮಂಗಗಳು ಮತ್ತು ಕಾಡುಹಂದಿಗಳಿಂದ ರಕ್ಷಿಸಿಕೊಳ್ಳಲು ಒಂದು ವಿಶಿಷ್ಟ ಉಪಾಯವನ್ನು ಕಂಡುಕೊಂಡಿದ್ದಾರೆ. ಜನರಿಗೇ ಕರಡಿಯ ವೇಷ ಹಾಕಿಸಿ ತಮ್ಮ ಹೊಲದಲ್ಲಿ ನಿಲ್ಲಿಸುವ ಮೂಲಕ ಅವರು ತಮ್ಮ ಹೊಲಕ್ಕೆ ಕೋತಿಗಳು ಬರದಂತೆ ತಡೆಯುತ್ತಿದ್ದಾರೆ. ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಅವರು ಹೊಲಕ್ಕೆ ದಾಳಿ ಇಟ್ಟು ಬೆಲಳೆಗಳಿಗೆ ಹಾನಿ … Continued

ಭಾರತವು ನಮ್ಮಿಂದ ಯಾವುದನ್ನೇ ಖರೀದಿಸಲು ಬಯಸಿದರೂ ಅದರ ಬಗ್ಗೆ ಮಾತುಕತೆಗೆ ನಾವು ಸಿದ್ಧ: ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್

ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರೊಂದಿಗೆ ಮಾತುಕತೆ ನಡೆಸಿದ ನಂತರ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಶುಕ್ರವಾರ, ಮಾಸ್ಕೋ ಭಾರತದಿಂದ ಕಚ್ಚಾ ತೈಲವನ್ನು ಖರೀದಿಸಲು ಬಯಸಿದರೆ, ಭಾರತದ ಅಗತ್ಯತೆಯ ಬಗ್ಗೆ ಚರ್ಚಿಸಲು ಸಿದ್ಧ ಎಂದು ಹೇಳಿದ್ದಾರೆ. ಭಾರತವು ಹೆಚ್ಚಿನ ಪ್ರಮಾಣದ ರಿಯಾಯಿತಿಯ ರಷ್ಯಾದ ತೈಲವನ್ನು ಖರೀದಿಸಬಹುದು ಎಂಬ ಸೂಚನೆಗಳ ಹಿನ್ನೆಲೆಯಲ್ಲಿ ಉನ್ನತ … Continued

ಹೊಸ ಟೋಲ್‌ಗಳ ಶುಲ್ಕ ಸೇರಿ ಟಿಕೆಟ್‌ ದರಗಳು ಅನ್ವಯ: ರಿಯಾಯಿತಿ ಮಾಸಿಕ ಬಸ್‌ ಪಾಸ್‌ ಸೌಲಭ್ಯ ಪಡೆದುಕೊಳ್ಳಲು ಕೋರಿಕೆ

ಹುಬ್ಬಳ್ಳಿ: ಕೆಲವು ಮಾರ್ಗಗಳಲ್ಲಿ ಹೊಸದಾಗಿ ಟೋಲ್‌ಗಳು ಪ್ರಾರಂಭವಾಗಿರುವುದರಿಂದ ಟಿಕೆಟ್ ಪಡೆದು ಪ್ರಯಾಣ ಮಾಡುವವರಿಗೆ ಟೋಲ್ ಶುಲ್ಕ ಸೇರಿ ಟಿಕೆಟ್‌ ದರಗಳು ಅನ್ವಯವಾಗುತ್ತದೆ. ಆದರೆ ಮಾಸಿಕ ರಿಯಾಯಿತಿ ಬಸ್‌ ಪಾಸ್‌ ಪಡೆದು ಪ್ರಯಾಣಿಸಿದರೆ ವೆಚ್ಚ ಬಹಳ ಕಡಿಮೆಯಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೇಳಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಈಗಾಗಲೇ … Continued

ಏಪ್ರಿಲ್‌ 3ರಂದು ಸಭಾಪತಿ ಹೊರಟ್ಟಿ ಕುರಿತ ಪುಸ್ತಕ ‘ಬಸವರಾಜ ಪಥ’ ಬಿಡುಗಡೆ

ಹುಬ್ಬಳ್ಳಿ: ರಾಜ್ಯ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರ 45 ವರ್ಷಗಳ ಸುದೀರ್ಘ ಹೋರಾಟ ವಿಧಾನ ಪರಿಷತ್ತಿನ ಸದಸ್ಯರಾಗಿ 42 ವರ್ಷ ಪೂರೈಸಿದ ಸಾರ್ಥಕ ಸೇವೆ ಕುರಿತ ಕಿರು ಹೊತ್ತಿಗೆ ‘ಬಸವರಾಜ ಪಥ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏಪ್ರಿಲ್‌ 3ರಂದು ಬೆಳಿಗ್ಗೆ 10:30 ಗಂಟೆಗೆ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ನಾಲಜಿ ಅಡಿಟೋರಿಯಂನಲ್ಲಿ ನಡೆಯಲಿದೆ. ಕರ್ನಾಟಕ … Continued