ನಮಗೆ 3 ಹೆಂಡತಿಯರಿರ್ತಾರೆ ಮತ್ತು ಪ್ರತಿಯೊಬ್ಬರನ್ನೂ ಗೌರವಿಸ್ತೇವೆ, ಆದರೆ ಹಿಂದೂಗಳು…: ಎಐಎಂಐಎಂ ನಾಯಕನ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶ

ನವದೆಹಲಿ: ಉತ್ತರ ಪ್ರದೇಶದ ಎಐಎಂಐಎಂ ರಾಜ್ಯಾಧ್ಯಕ್ಷ ಶೌಕತ್ ಅಲಿ ಹಿಂದೂ ವಿವಾಹದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ನಮಗೆ ಮೂರು ಮದುವೆಗಳಿವೆ ಎಂದು ಜನರು ಹೇಳುತ್ತಾರೆ. ನಾವು ಎರಡು ಮದುವೆ ಮಾಡಿಕೊಂಡರೂ ಸಮಾಜದಲ್ಲಿ ಇಬ್ಬರ ಹೆಂಡಿರಿಗೂ ಗೌರವ ಕೊಡುತ್ತೇವೆ, ಆದರೆ ನೀವು (ಹಿಂದೂಗಳು) ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಹೊಂದಿರುತ್ತೀರಿ … Continued

ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ ಮುತಾಲಿಕ್ ಕರೆ

ಹುಬ್ಬಳ್ಳಿ: ‘ಪ್ರಸ್ತುತ ದೀಪಾವಳಿ ಸಂದರ್ಭದಲ್ಲಿ ಹಲಾಲ್ ಗುರುತು ಇರುವ ವಸ್ತುಗಳನ್ನು ನಿರಾಕರಿಸಿ ಹಲಾಲ್ ಮುಕ್ತ ದೀಪಾವಳಿ ಹಬ್ಬ ಆಚರಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್‌ ಹಿಂದೂ ಸಂಪ್ರದಾಯ, ಸಂಸ್ಕೃತಿಗೆ ವಿರೋಧ. ಹಿಂದೂ ವ್ಯಾಪಾರಸ್ಥರಿಂದಲೇ ಖರೀದಿಸಿ ಶಾಸ್ತ್ರೋಕ್ತವಾಗಿ ಹಬ್ಬ ಆಚರಿಸಬೇಕು ಎಂದು ಹೇಳಿದರು. ಹಲಾಲ್ … Continued

7ನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತದ ಮಹಿಳಾ ಕ್ರಿಕೆಟ್‌ ತಂಡ: ಶ್ರೀಲಂಕಾಕ್ಕೆ ಹೀನಾಯ ಸೋಲು

ಢಾಕಾ: ಮಹಿಳೆಯರ ಕ್ರಿಕೆಟ್‌ನಲ್ಲಿ ಫೈನಲ್‌ನಲ್ಲಿ ಭಾರತವು ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ 7 ನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬೌಲರ್‌ಗಳು ಗೆಲುವಿಗೆ ಕಾರಣವಾದರೆ, ಸ್ಮೃತಿ ಮಂಧಾನ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ಗೆಲುವನ್ನು ಪೂರ್ಣಗೊಳಿಸಿದರು. ಶ್ರೀಲಂಕಾ ನೀಡಿದ 66 ರನ್‍ಗಳ ಅಲ್ಪ ಮೊತ್ತದ ಗುರಿಪಡೆದ ಭಾರತ ಈ ಮೊತ್ತವನ್ನು … Continued

ಅರೇ…ʼಇಡ್ಲಿ ಎಟಿಎಂ…! ಬೆಂಗಳೂರಲ್ಲಿರುವ ಈ 24 ಗಂಟೆಗಳ ʼಇಡ್ಲಿ ಎಟಿಎಂʼ ಯಂತ್ರ ಕೇವಲ 55 ಸೆಕೆಂಡುಗಳಲ್ಲಿ ತಾಜಾ ಇಡ್ಲಿ ನೀಡುತ್ತದೆ…ವೀಕ್ಷಿಸಿ

ಬೆಂಗಳೂರು: ಇಡ್ಲಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದು. ಇದನ್ನು ಸಾಂಬಾರ್‌ನಲ್ಲಿ ಹಾಕಿ, ಅಥವಾ ಚಟ್ನಿಗಳೊಂದಿಗೆ ಸೇವಿಸಿದರೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೀಗ, ಸ್ಟಾರ್ಟ್‌ಅಪ್‌ವೊಂದು ನಿಮಿಷದಲ್ಲಿಯೇ ತಾಜಾ ಇಡ್ಲಿಗಳನ್ನು ತಲುಪಿಸಲು ಬೆಂಗಳೂರಿನಲ್ಲಿ ಸ್ವಯಂಚಾಲಿತ ಇಡ್ಲಿ ತಯಾರಿಸುವ ‘ಇಡ್ಲಿ ಎಟಿಎಂ’  ಯಂತ್ರವನ್ನು ಸ್ಥಾಪಿಸಿದೆ. ಇದರ ವಿಡಿಯೋ ಟ್ವಿಟರ್‌ನಲ್ಲಿ ಹರಿದಾಡಿದೆ. ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹಿರೇಮಠ್ … Continued

ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ರಿಂದ 107ನೇ ಸ್ಥಾನಕ್ಕೆ ಕುಸಿದ ಭಾರತ: ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಕೆಳಕ್ಕೆ…!

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ (GHI) 2022 ರಲ್ಲಿ 121 ದೇಶಗಳ ಪೈಕಿ ಭಾರತವು 107 ನೇ ಸ್ಥಾನಕ್ಕೆ ಕುಸಿದಿದೆ. ಭಾರತವು ತನ್ನ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಕೆಳಕ್ಕೆ ಕುಸಿದಿದೆ. ಇದು 2021ರಲ್ಲಿ 101ನೇ ಸ್ಥಾನದಲ್ಲಿತ್ತು. 2022 ರಲ್ಲಿ ಆರು ಸ್ಥಾನಗಳು ಕುಸಿದಿದೆ. ವರದಿಯ ಪ್ರಕಾರ, ಐರಿಶ್ ನೆರವು ಸಂಸ್ಥೆ ಕನ್ಸರ್ನ್ … Continued

ವಿಲಕ್ಷಣ ಬೆಳವಣಿಗೆಯಲ್ಲಿ ಟ್ವಿಟರ್‌ನಲ್ಲಿ ವಿರಾಟ್‌ ಕೊಹ್ಲಿ ಬಂಧಿಸಿ ಟ್ರೆಂಡಿಂಗ್ ಯಾಕಾಗುತ್ತಿದೆ ? ಮಾಹಿತಿ ಇಲ್ಲಿದೆ

ವಿಲಕ್ಷಣ ಬೆಳವಣಿಗೆಯೊಂದರಲ್ಲಿ, T20 ವಿಶ್ವಕಪ್‌ನಲ್ಲಿ ಭಾಗವಹಿಸಲು ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಬಂಧಿಸಬೇಕೆಂದು ಜನರು #ArrestKohli ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಖ್ಯಾತ ಕ್ರಿಕೆಟಿಗನನ್ನು ಬಂಧಿಸುವಂತೆ ನೆಟಿಜನ್‌ಗಳ ವಿಭಾಗ ಏಕೆ ಒತ್ತಾಯಿಸುತ್ತದೆ ಎಂದು ಅವರು ಆಶ್ಚರ್ಯ ಪಡುತ್ತಿರುವಾಗ ಹ್ಯಾಶ್‌ಟ್ಯಾಗ್ ಅನೇಕರನ್ನು ದಿಗ್ಭ್ರಮೆಗೊಳಿಸಿದೆ ಟ್ವಿಟರ್‌ನಲ್ಲಿ ಶನಿವಾರ ಬೆಳಿಗ್ಗೆ ‘#ArrestKohli’ ಎಂಬ ಹ್ಯಾಶ್‌ಟ್ಯಾಗ್ … Continued

ಮಸೂದೆ ವಿರೋಧಿಸಲು ಸದನದಲ್ಲಿಯೇ ತಮ್ಮ ಫೋನ್ ಅನ್ನು ಸುತ್ತಿಗೆಯಿಂದ ಬಡಿದು ಪುಡಿ ಮಾಡಿದ ಟರ್ಕಿ ಸಂಸದ | ವೀಕ್ಷಿಸಿ

ಅಕ್ಟೋಬರ್ 13, ಗುರುವಾರದಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಭಾಷಣ ಮಾಡುವಾಗ ಟರ್ಕಿಯ ಸಂಸದರೊಬ್ಬರು ತಮ್ಮ ಮೊಬೈಲ್ ಫೋನ್ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದಾರೆ. ಪ್ರತಿಪಕ್ಷದ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿಯ ಸದಸ್ಯ ಬುರಾಕ್ ಎರ್ಬೇ ಅವರು ಸರ್ಕಾರ ಪ್ರಸ್ತಾಪಿಸಿದ ಆನ್‌ಲೈನ್ “ತಪ್ಪು ಮಾಹಿತಿ ಮಸೂದೆಯನ್ನು ವಿರೋಧಿಸಲು ತಮ್ಮ ಫೋನ್ ಅನ್ನು ಅಸೆಂಬ್ಲಿಯಲ್ಲಿ ಸುತ್ತಿಗೆಯಿಂದ ಬಡಿದು ನಾಶಪಡಿಸಿದರು. ಮಸೂದೆಯು ಟರ್ಕಿಯಲ್ಲಿ … Continued

ವಾಣಿಜ್ಯಕ್ಕೆ ಪಾದಾರ್ಪಣೆ ಮಾಡಲಿರುವ ಇಸ್ರೋದ ಅತ್ಯಂತ ಭಾರದ ರಾಕೆಟ್ ಎಲ್‌ವಿಎಂ3: ಅಕ್ಟೋಬರ್ 23ರಂದು 36 ಉಪಗ್ರಹಗಳ ಉಡಾವಣೆ

ಬೆಂಗಳೂರು: ಇಸ್ರೋದ ಅತ್ಯಂತ ಭಾರದ ರಾಕೆಟ್ ಎಲ್‌ವಿಎಂ3 ಬ್ರಿಟಿಷ್ ಸ್ಟಾರ್ಟ್ ಅಪ್ ಒನ್‌ವೆಬ್‌ನ 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು ಅಕ್ಟೋಬರ್ 23 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಿದ್ದು, ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಮಾರುಕಟ್ಟೆಗೆ ಲಾಂಚರ್‌ನ ಪ್ರವೇಶವನ್ನು ಗುರುತಿಸುತ್ತದೆ. ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಎಲ್‌ವಿಎಂ3 (LVM3) ಅಥವಾ ಲಾಂಚ್ ವೆಹಿಕಲ್ ಮಾರ್ಕ್ … Continued

ಬೆಂಗಳೂರಿನಲ್ಲಿ ರಾತ್ರಿ 1 ಗಂಟೆ ವರೆಗೂ ಹೋಟೆಲ್‌ ಕಾರ್ಯಚಟುವಟಿಕೆಗೆ ಅನುಮತಿ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹೋಟೆಲ್‌ಗಳ ಕಾರ್ಯಚಟುವಟಿಕೆಗೆ ತಡರಾತ್ರಿ ಒಂದು ಗಂಟೆಯವರೆಗೂ ಅವಕಾಶ ನೀಡಿ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌. ಪ್ರತಾಪ್‌ ರೆಡ್ಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ/ ತಿನಿಸು ಮಾರಾಟ ಮಾಡುವ ಸ್ಥಳಗಳ ವ್ಯಾಪಾರ ಅವಧಿಯನ್ನು ಮಧ್ಯರಾತ್ರಿ 1 ಗಂಟೆವರೆಗೂ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ … Continued

ಭಾರೀಮಳೆಗೆ ಕೊಚ್ಚಿಹೋದ ಬ್ರಿಡ್ಜ್‌: ದೂಧ್‌ ಸಾಗರದಲ್ಲಿ ಸಿಲುಕಿದ್ದ 40 ಪ್ರವಾಸಿಗರ ರಕ್ಷಣೆ

ಪಣಜಿ: ಭಾರೀ ಮಳೆಯಿಂದ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದ ಮಾಂಡೋವಿ ನದಿಯ ಮೇಲಿನ ಸಣ್ಣ ಸೇತುವೆ ಕೊಚ್ಚಿಹೋದ ನಂತರ ದೂಧ್‌ ಸಾಗರ ಜಲಪಾತದ ಬಳಿ ಸಿಲುಕಿಕೊಂಡ ಕನಿಷ್ಠ 40 ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಜೀವರಕ್ಷಕರನ್ನು ಮುಖ್ಯಮಂತ್ರಿ … Continued