ಕರ್ನಾಟಕ ಹಿಜಾಬ್ ನಿಷೇಧ : ನಾಳೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟ ಸಾಧ್ಯತೆ

ನವದೆಹಲಿ: ಹಿಜಾಬ್ ನಿಷೇಧ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ತೀರ್ಪು ಗುರುವಾರ (ಅಕ್ಟೋಬರ್ 13) ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕರ್ನಾಟಕ ಸರ್ಕಾರವು ರಾಜ್ಯದ ಶಾಲೆ – ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಬಳಿಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್‌ … Continued

ಎಲ್‌ಪಿಜಿ ಮಾರಾಟದಲ್ಲಿ ನಷ್ಟ: 3 ತೈಲ ಮಾರಾಟ ಕಂಪನಿಗಳಿಗೆ ₹22,000 ಕೋಟಿ ಪರಿಹಾರ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಮಾರಾಟದಿಂದ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಗಳಿಗೆ ಉಂಟಾಗಿರುವ ನಷ್ಟ ಸರಿದೂಗಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳಿಗೆ 22,000 ಕೋಟಿ ರೂ.ಗಳನ್ನು ಒಂದು ಸಲದ ಅನುದಾನವಾಗಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ … Continued

ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಮುಂದೂಡಿಕೆ: ಈಗ ಹಾವೇರಿಯಲ್ಲಿ ಜನವರಿ 6, 7, 8ಕ್ಕೆ ನಡೆಸಲು ನಿರ್ಧಾರ

ಬೆಂಗಳೂರು: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6, 7, 8ರಂದು ನಡೆಯಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಚರ್ಚೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ಅವರು ಈಗ ದಿನಾಂಕ ಅಂತಿಮಗೊಳಿಸಿದ್ದಾರೆ. ಸಮ್ಮೇಳನಕ್ಕೆ 8 ರಿಂದ 10 ಲಕ್ಷ ಜನರು ಸೇರುವ ನಿರೀಕ್ಷೆ ಇದರುವುದರಿಂದ ಅಕ್ಟೋಬರ್‌ 20 ರಂದು ಈ … Continued

ವೈಟ್ ಹೌಸ್‌ನಲ್ಲಿ ದೀಪಾವಳಿ ಆಚರಿಸಲಿದ್ದಾರೆ ಅಮೆರಿಕ ಅಧ್ಯಕ್ಷ ಬೈಡನ್‌, ತಮ್ಮ ಫ್ಲೋರಿಡಾ ರೆಸಾರ್ಟ್‌ನಲ್ಲಿ ಆಚರಿಸಲಿದ್ದಾರೆ ಟ್ರಂಪ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಕ್ಟೋಬರ್ 24 ರಂದು ಶ್ವೇತಭವನದಲ್ಲಿ ದೀಪಾವಳಿ ಆಚರಿಸಲು ಯೋಜಿಸಿದ್ದಾರೆ, ಆದರೆ ಅವರ ಹಿಂದಿನ ಡೊನಾಲ್ಡ್ ಟ್ರಂಪ್ ಅಕ್ಟೋಬರ್ 21 ರಂದು ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲು ತಯಾರಿ ನಡೆಸಿದ್ದಾರೆ. ಜೋ ಬೈಡನ್‌ ಅವರು ಭಾರತೀಯ ಅಮೆರಿಕನ್ ಸಮುದಾಯದ ಪ್ರಖ್ಯಾತ ಸದಸ್ಯರು ಮತ್ತು ಅವರ ಆಡಳಿತದ … Continued

ಪ್ರವಾಹದಿಂದಾಗಿ ಹೆಚ್ಚುತ್ತಿರುವ ಮಲೇರಿಯಾ: ಭಾರತದಿಂದ 62 ಲಕ್ಷ ಸೊಳ್ಳೆ ಪರದೆಗಳ ಖರೀದಿಗೆ ಮುಂದಾದ ಪಾಕಿಸ್ತಾನ-ವರದಿ

ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನ ತೀವ್ರತೆಯ ಮಧ್ಯೆ, ಪಾಕಿಸ್ತಾನದ ಆರೋಗ್ಯ ಸಚಿವಾಲಯವು ಮಂಗಳವಾರ ಭಾರತದಿಂದ 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸಲು ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನದಲ್ಲಿ ಶತಮಾನದ ಪ್ರವಾಹದ ನಂತರ ಈಗ ಮಲೇರಿಯಾ ಸೋಂಕು ಹರಡುತ್ತಿದೆ. ಮಲೇರಿಯಾ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ರಸ್ತುತ ಪಾಕಿಸ್ತಾನಿಗಳಿಗೆ ಈಗ ಸೊಳ್ಳೆಗಳ ಕಾಟ ತಡೆಯುವುದು ದೊಡ್ಡ … Continued

50 ವರ್ಷಗಳ ಹಿಂದೆ ತಮಿಳುನಾಡು ದೇವಾಲಯದಿಂದ ಕಳುವಾದ ಎರಡು ಪುರಾತನ ವಿಗ್ರಹಗಳು ಅಮೆರಿಕದ ವಸ್ತುಸಂಗ್ರಹಾಲಯದಲ್ಲಿ ಪತ್ತೆ..!

ಚೆನ್ನೈ: ತಮಿಳುನಾಡು ಐಡಲ್ ವಿಂಗ್ ಸಿಐಡಿಯು ತಮಿಳುನಾಡಿನಲ್ಲಿ ಕದ್ದ ಎರಡು ವಿಗ್ರಹಗಳನ್ನು ಅಮೆರಿಕದ ವಸ್ತುಸಂಗ್ರಹಾಲಯದಲ್ಲಿ ಪತ್ತೆಹಚ್ಚಿದೆ ಮತ್ತು ಅವುಗಳನ್ನು ದೇಶಕ್ಕೆ ಹಿಂದಿರುಗಿಸಲು ದಾಖಲೆಗಳನ್ನು ಸಲ್ಲಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ತಿರುವರೂರು ಜಿಲ್ಲೆಯ ಆಲತ್ತೂರಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಯೋಗನರಸಿಂಹ ಮತ್ತು ಗಣೇಶನ ಎರಡು ಪುರಾತನ ವಿಗ್ರಹಗಳನ್ನು ಅಮೆರಿಕದ ಮಿಸೌರಿ ಕಾನ್ಸಾಸ್‌ ನಗರದ … Continued

ಬಿಗ್‌ಬಾಸ್‌ ಮನೆಗೆ ಬಂದ ಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ನಂತರ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಅತ್ಯಾಚಾರದ ಬೆದರಿಕೆ

ನವದೆಹಲಿ: ಚಿತ್ರನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಬುಧವಾರ ಹೇಳಿದ್ದಾರೆ. ತನ್ನ Instagram DM ಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಅಧ್ಯಕ್ಷರು, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತನಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ ಎಂದು … Continued

ಮುಂದಿನ ತಿಂಗಳಿಂದ ಹುಬ್ಬಳ್ಳಿಯಿಂದ ದೆಹಲಿಗೆ ಪ್ರತಿದಿನ ವಿಮಾನ ಹಾರಾಟ

ಹುಬ್ಬಳ್ಳಿ: ಹುಬ್ಬಳ್ಳಿ – ದೆಹಲಿ ನಡುವೆ ಪ್ರತಿದಿನ ವಿಮಾನಯಾನ ನವೆಂಬರ್ 14ರಿಂದ ಆರಂಭವಾಗಲಿದೆ. ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿ ಅವರು ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ನಂತರ ಈ ಬೆಳವಣಿಗೆ ನಡೆದಿದೆ. ಇಂಡಿಗೋ ಏರ್‌ಲೈನ್ಸ್‌ ಅಧಿಕಾರಿಗಳು ಪ್ರತಿದಿನ ದೆಹಲಿ-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ-ದೆಹಲಿ ನಡುವೆ ವಿಮಾನಯಾನ ಆರಂಭಿಸಲಿದ್ದಾರೆ. ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ … Continued

ಕೇರಳದ ನರಬಲಿ ಪ್ರಕರಣದಲ್ಲಿ ಹೊರಬಿದ್ದ ಭಯಾನಕ ವಿವರಗಳು : ಯೌವನ ಕಾಪಾಡಿಕೊಳ್ಳಲು ಬಲಿಕೊಟ್ಟು ನಂತರ ಮಾಂಸ ಬೇಯಿಸಿ ತಿಂದಿದ್ದರಂತೆ ಆರೋಪಿ ದಂಪತಿ…!

ತಿರುವನಂತಪುರಂ: ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಗ್ರಾಮದಲ್ಲಿ ಮಾಟಮಂತ್ರದ ಭಾಗವಾಗಿ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟು ಅವರ ದೇಹದ ಭಾಗಗಳನ್ನು ತುಂಡುತುಂಡು ಮಾಡಿ ಹೂತಿಟ್ಟ ಪ್ರಕರಣದ ಇನ್ನಷ್ಟು ಆಘಾತಕಾರಿ ವಿವರಗಳು ಬೆಳಕಿಗೆ ಬಂದಿವೆ. ಈ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಬಂಧಿತ ವ್ಯಕ್ತಿಗಳನ್ನು ಸ್ಥಳೀಯ ಮಸಾಜ್ ಥೆರಪಿಸ್ಟ್ ಭಗವಲ್ ಸಿಂಗ್ ಎಂದು ಆತನ ಪತ್ನಿ ಲೈಲಾ … Continued

ಭಟ್ಕಳ: ಯಕ್ಷಗಾನ ವೇಷ ಧರಿಸಿ ಹೆಜ್ಜೆ ಹಾಕಿ ಸಂಭ್ರಮಿಸಿದ ಆರೋಗ್ಯ ಸಚಿವ ಡಾ.ಸುಧಾಕರ

ಭಟ್ಕಳ: ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರು ಕೆಲಕಾಲ ಯಕ್ಷಗಾನ ವೇಷಧಾರಿಯಾಗಿ ಸಂಭ್ರಮಿಸಿದ್ದಾರೆ. ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಸಂಬಂಧ ಈ ಬಗ್ಗೆ ಪರಿಶೀಲಿಸಲು ಜಿಲ್ಲೆಗೆ ಆರೋಗ್ಯ ಸಚಿವ ಡಾ.ಸುಧಾಕರ ಮಂಗಳವಾರ ಆಗಮಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಭಟ್ಕಳ‌ ಆಸ್ಪತ್ರೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ … Continued