ರಾತ್ರಿಯಲ್ಲಿ ಜಿಂಕೆ ಬೇಟೆಯಾಡಿದ ಕಪ್ಪು ಚಿರತೆಗೆ ಅಡ್ಡಿಯಾದ ಸ್ಪಾಟ್‌ಲೈಟ್‌ ಬೆಳಕು, ಮತ್ತೊಂದು ಚಿರತೆ ಪಾಲಾದ ಆಹಾರ | ವೀಕ್ಷಿಸಿ

ಕಪ್ಪು ಚಿರತೆ ಕಾಡಿನಲ್ಲಿ ಜಿಂಕೆಯನ್ನು ಬೇಟೆಯಾಡುತ್ತಿರುವ ದೃಶ್ಯವನ್ನು ತೋರಿಸುವ ವೀಡಿಯೊವು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, “ಒಂದು ಪರಿಪೂರ್ಣ ಸೆರೆಹಿಡಿಯುವಿಕೆ. ಚಿರತೆ ಮತ್ತು ವೀಡಿಯೊಗ್ರಾಫರ್ ಇಬ್ಬರೂ ಎಂದು ಅವರು ಶೀರ್ಷಿಕೆ ಬರೆದಿದ್ದಾರೆ. ಕ್ಲಿಪ್‌ನಲ್ಲಿ, ಜಿಂಕೆ ಮೃತದೇಹದ ಕುತ್ತಿಗೆಯನ್ನು ಕಪ್ಪು ಚಿರತೆ ದವಡೆಯಿಂದ … Continued

ಮೈಸೂರು: ಮನೆಯಲ್ಲಿದ್ದ ಶೂ ಒಳಗೆ ಹೆಡೆಬಿಚ್ಚಿ ನಿಂತ ನಾಗರಹಾವು..!-ವಿಡಿಯೋ ವೈರಲ್

ಮೈಸೂರು: ಮನೆಯೊಳಗೆ ಹಾವುಗಳು ಬಂದು ಅಡಗಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ನಾವು ದಿನನಿತ್ಯ ಧರಿಸುವ ಹಾಕುವ ಶೂ ಒಳಗೆ ಸೇರಿಕೊಂಡರೆ ಏನು ಮಾಡುವುದು..? ಇಂತಹದ್ದೇ ಒಂದು ಘಟನೆ ಮೈಸೂರಿನ ಮಹದೇವಪುರ ಗ್ರಾಮದಲ್ಲಿ ವರದಿಯಾಗಿದೆ. ಮನೆಯಲ್ಲಿಟ್ಟ ಶೂ ಒಳಗೆ ನಾಗರಹಾವೊಂದು ಸೇರಿಕೊಂಡು ಆತಂಕ ತಂದೊಡ್ಡಿತ್ತು. ಮನೆಯ ಹೊರಗೆ ಶೂಗಳನ್ನು ಇಟ್ಟಿದ್ದ ವ್ಯಕ್ತಿ ಶೂ ಹಾಕುಲು ಬಂದಾಗ, ಹೆಡೆ ಬಿಚ್ಚಿ … Continued

ಆರ್‌ಜೆಡಿ ಸಭೆಯಿಂದ ಮಧ್ಯದಲ್ಲೇ ಹೊರ ನಡೆದ ಲಾಲು ಯಾದವ್ ಪುತ್ರ ತೇಜ ಪ್ರತಾಪ್‌ : ಪಕ್ಷದ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಕ್ರೋಶ

ನವದೆಹಲಿ: ಲಾಲು ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರು ಭಾನುವಾರ ದೆಹಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ತಮ್ಮ ಸಹೋದ್ಯೋಗಿಯೊಬ್ಬರು “ನಿಂದನೆ” ಮಾಡಿದ್ದಾರೆ ಎಂದು ಆರೋಪಿಸಿ ಸಭೆ ಬಿಟ್ಟು ಮಧ್ಯದಲ್ಲಿಯೇ ಹೊರಬಂದಿದ್ದಾರೆ. ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಭೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೊರಬಂದ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಾಕ್ ವಿರುದ್ಧ … Continued

ದತ್ತಾತ್ರೇಯ ವೈದ್ಯ ನಿಧನ

ಕುಮಟಾ : ಹೊನ್ನಾವರ ತಾಲೂಕಿನ ನವಿಲುಗೋಣದ ಭುವಿನಕೊಡ್ಲು ದತ್ತಾತ್ರೇಯ ವೈದ್ಯ (87) ಭಾನುವಾರ ಸಂಜೆ ನಿಧನರಾದರು. ಮೃತರು ಪುತ್ರ, ಆರು ಪುತ್ರಿಯರು  ಹಾಗೂ ಅಪಾರಬಂಧು ಬಳಗವನ್ನು ಅಗಲಿದ್ದಾರೆ. ಉತ್ತಮ ಕೃಷಿಕರು ಆಗಿದ್ದ ಅವರು ಸುಧೀರ್ಘ ಕಾಲದಿಂದ ಶ್ರೀ ಭುವನೇಶ್ವರ ಮತ್ತು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ ಕೊಂಡುಬಂದಿದ್ದರು. ನವಿಲುಗೋಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ದತ್ತಣ್ಣ … Continued

ನಮ್ಮ ಬಿಜೆಪಿ ಆಡಳಿತದಲ್ಲಿ ಟಿಪ್ಪು ಹೆಸರನ್ನು ಯಾವುದಕ್ಕೂ ಬಳಕೆ ಮಾಡುವುದಿಲ್ಲ: ಎನ್.ರವಿಕುಮಾರ

ರಾಯಚೂರು: ಬಿಜೆಪಿ (BJP) ಆಡಳಿತದಲ್ಲಿ ಬಸ್, ಟ್ರೈನ್ ಸೇರಿದಂತೆ ಯಾವುದಕ್ಕೂ ಟಿಪ್ಪು ಹೆಸರನ್ನು ಇಡುವುದಿಲ್ಲ. ಟಿಪ್ಪು ಒಬ್ಬ ಧರ್ಮಾಂಧ, ದೇವಸ್ಥಾನಗಳನ್ನು ನಾಶ ಮಾಡಿದಂತಹ ವ್ಯಕ್ತಿ ಎಂದು ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಟಿಪ್ಪು ಎಕ್ಸ್‌ಪ್ರೆಸ್ ಬದಲು ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಆಡಳಿತದ … Continued

ತುಳಿತಕ್ಕೊಳಗಾದವರಿಗೆ ಸಮಾನ ಅವಕಾಶ, ಆತ್ಮ ಗೌರವದ ಬದುಕು ಕಲ್ಪಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಬೆಂಗಳೂರು: ತುಳಿತಕ್ಕೊಳಗಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಮಾನ ಅವಕಾಶ ಹಾಗೂ ಆತ್ಮಗೌರವ-ಸ್ವಾಭಿಮಾನದ ಬದುಕು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಾಲ್ಮೀಕಿ ಜಯಂತಿಯ ಅಂಗವಾಗಿ ಇಂದು, ಭಾನುವಾರ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪರಿವರ್ತನೆಯ ಹರಿಕಾರ, ಶ್ರೇಷ್ಠ ಮಾನವತಾವಾದಿ, ರಾಮಾಯಣದ ರಚನಕಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು … Continued

ತ್ರಿಶೂಲ ಅಥವಾ ಉದಯಿಸುತ್ತಿರುವ ಸೂರ್ಯ: ಹೊಸ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಬಣದ ಆಯ್ಕೆ

ಮುಂಬೈ: ಶಿವಸೇನಾದ ಎರಡು ಬಣಗಳ ಕಿತ್ತಾಟದ ನಡುವೆ, ಪಕ್ಷದ ‘ಬಿಲ್ಲು-ಬಾಣ’ಗಳನ್ನು ಚುನಾವಣಾ ಆಯೋಗ ಎರಡೂ ಬಣಕ್ಕೂ ನಿರ್ಬಂಧಿಸಿದೆ. ಮುಂಬರಲಿರುವ ಮುಂಬೈ ಅಂಧೇರಿ ಪೂರ್ವ ಕ್ಷೇತ್ರದ ಉಪ ಚುನಾವಣೆಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಹೊಸ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಉದ್ಧವ್ ಠಾಕ್ರೆ ನೇತೃತ್ವದ ಬಣವು ಮೂರು ಹೊಸ ಹೆಸರು … Continued

ಗುಜರಾತಿನ ಮೊಧೇರಾ ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ: ಪ್ರಧಾನಿ ಮೋದಿ ಘೋಷಣೆ

ಗುಜರಾತ್‌ನ ಮೊಹ್ಸಾನಾ ಜಿಲ್ಲೆಯ ಮೊಧೇರಾವನ್ನು ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. ಅಕ್ಟೋಬರ್ 9 ರಿಂದ 11ರ ವರೆಗೆ ಮೂರು ದಿನಗಳ ಕಾಲ ಪ್ರಧಾನಿ ಮೋದಿ ಗುಜರಾತ್ ಪ್ರವಾಸದಲ್ಲಿದ್ದು, ತಮ್ಮ ಮೊದಲ ದಿನದಲ್ಲಿ, ಪ್ರಧಾನಿ ಮೊಧೇರಾಕ್ಕೆ ಭೇಟಿ ನೀಡಿದರು ಮತ್ತು ನವೀಕರಿಸಬಹುದಾದ ಇಂಧನ ತಯಾರಿಸುವ ಭಾರತದ … Continued

ದೆಹಲಿ ಎಎಪಿ ಸರ್ಕಾರದ ಸಚಿವರಾಗಿ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಾದದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜೇಂದ್ರ ಪಾಲ್ ಗೌತಮ್

ನವದೆಹಲಿ: ಈ ವಾರದ ಆರಂಭದಲ್ಲಿ ನೂರಾರು ಜನರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ “ಸಾಮೂಹಿಕ ಧಾರ್ಮಿಕ ಮತಾಂತರ” ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯ ಬಗ್ಗೆ ಉಂಟಾದ ವಿವಾದದ ನಂತರ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಭಾನುವಾರ ಅರವಿಂದ್ ಕೇಜ್ರಿವಾಲ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯ ಸಮಾಜ ಕಲ್ಯಾಣ ಸಚಿವ ಗೌತಮ್‌ ಅವರು, ಭಾರತೀಯ … Continued

ಇರಾನ್‌ನಲ್ಲಿ ಸರ್ಕಾರಿ ಲೈವ್ ಟಿವಿ ಹ್ಯಾಕ್‌ ಮಾಡಿದ ಹಿಜಾಬ್ ವಿರೋಧಿ ಪ್ರತಿಭಟನಾಕಾರರು…!

ಇರಾನ್‌ನ ಸರ್ಕಾರಿ ಪ್ರಸಾರಕರು ನಡೆಸುತ್ತಿರುವ ಸುದ್ದಿ ಬುಲೆಟಿನ್ ಅನ್ನು ದೇಶದ ಹಿಜಾಬ್ ವಿರೋಧಿ ಪ್ರತಿಭಟನಾಕಾರರು ಶನಿವಾರ ಹ್ಯಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮನ್ನು “ಅದಾಲತ್ ಅಲಿ” ಅಥವಾ ಇಸ್ಲಾಮಿಕ್ ರಿಪಬ್ಲಿಕ್‌ನ ಸರ್ವೋಚ್ಚ ಅಧಿಕಾರದ ವಿರುದ್ಧ ದಂಗೆ ಏಳುವ ಅಲಿʼಸ್‌ ಜಸ್ಟೀಸ್‌ ಎಂದು ಗುರುತಿಸಿಕೊಂಡಿದ್ದಾರೆ. ಸುದ್ದಿ ವಿಭಾಗವು ವ್ಯಕ್ತಿಯ ಮುಖವಾಡದ ವೀಡಿಯೊವನ್ನು ಪ್ರಸಾರ ಮಾಡಿದೆ, ಅದರ … Continued