ರೈಲು ಹಳಿ ಮೇಲೆ ಪೊಲೀಸರು ಎಸೆದ ತನ್ನ ತೂಕದ ಮಾಪನ ಯಂತ್ರ ತರಲು ಹೋದಾಗ ರೈಲು ಡಿಕ್ಕಿ ಹೊಡೆದು ಕಾಲು ಕಳೆದುಕೊಂಡ ಯುವಕ

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ 18 ವರ್ಷದ ತರಕಾರಿ ಮಾರಾಟಗಾರನೊಬ್ಬ ಶುಕ್ರವಾರ ರೈಲಿಗೆ ಸಿಲುಕಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದು, ಪೊಲೀಸರು ರೈಲ್ವೆ ಹಳಿ ಮೇಲೆ ಎಸೆದ ತನ್ನ ತೂಕ ಮಾಪಕ ಯಂತ್ರವನ್ನು ತರಲು ಹೋದಾಗ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಕಾನ್ಪುರದ ರೈಲ್ವೆ ನಿಲ್ದಾಣದ ಬಳಿ ಹೆಚ್ಚಾಗಿ ತರಕಾರಿ ಮಾರಾಟಗಾರರು ಒತ್ತುವರಿ ಮಾಡಿಕೊಂಡಿರುವ ಅತಿಕ್ರಮಣಗಳನ್ನು … Continued

ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ, ಚಿರತೆ ದಾಳಿ ತಡೆಗೆ ವಿಶೇಷ ತಂಡ : ಸಿಎಂ ಬೊಮ್ಮಾಯಿ

ಬೆಂಗಳೂರು : ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ನೀಡಿದಂತೆ ಚಿರತೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೂ ಪರಿಹಾರ ನೀಡಲಾಗುವುದು. ಮೊದಲು ಕಾಡುಪಕ್ಕದಲ್ಲಿ ಆಗುತ್ತಿತ್ತು. ಈಗ ಬೆಂಗಳೂರಿನ ಆಸುಪಾಸಿನಲ್ಲಿ … Continued

ಭಾರತವು ನನ್ನ ಅವಿಭಾಜ್ಯ ಭಾಗವಾಗಿದೆ, ನಾನು ಎಲ್ಲಿಗೆ ಹೋದರೂ ಅದನ್ನು ನನ್ನೊಂದಿಗೆ ಒಯ್ಯುತ್ತೇನೆ: ಪದ್ಮಭೂಷಣ ಪುರಸ್ಕಾರ ಸ್ವೀಕರಿಸಿದ ಗೂಗಲ್‌ ಸಿಇಒ ಸುಂದರ್ ಪಿಚೈ

ವಾಷಿಂಗ್ಟನ್: “ಭಾರತವು ನನ್ನ ಭಾಗವಾಗಿದೆ ಮತ್ತು ನಾನು ಎಲ್ಲಿಗೆ ಹೋದರೂ ಅದನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ” ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ ಪಿಚೈ ಹೇಳಿದ್ದಾರೆ. ಅಮೆರಿಕದ ಭಾರತೀಯ ರಾಯಭಾರಿಯಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಹೇಳಿದ್ದಾರೆ. ಭಾರತೀಯ-ಅಮೆರಿಕನ್ ಸುಂದರ ಪಿಚೈ ಅವರಿಗೆ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿ 2022 ರ ಪದ್ಮಭೂಷಣ … Continued

ಡಿಸೆಂಬರ್‌ 6 ರಂದು ಬೆಳಗಾವಿಗೆ ಹೋಗಿಯೇ ಹೋಗುತ್ತೇವೆ: ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲ

ಮುಂಬೈ: ಡಿಸೆಂಬರ್ 6 ರಂದು ನಾವು ಬೆಳಗಾವಿಗೆ ಹೋಗಿಯೇ ಹೋಗುತ್ತೇವೆ ಎಂದು ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ ಹೇಳಿದ್ದಾರೆ. ಕರ್ನಾಟಕಕ್ಕೆ (Karnataka) ಭೇಟಿ ನೀಡದಂತೆ ಸಂದೇಶ ರವಾನಿಸಿದ್ದೇವೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದಅವರು, ಡಿಸೆಂಬರ್ 6 ರಂದು ನಾವು ಬೆಳಗಾವಿಗೆ ಹೋಗಿಯೇ ಹೋಗುತ್ತೇವೆ. ನನಗೆ … Continued

ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ:  ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಶುಕ್ರವಾರ ತಮಿಳುನಾಡಿನ ದೇವಾಲಯಗಳಲ್ಲಿ ಭಕ್ತರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಕೆಯನ್ನು ನಿಷೇಧಿಸಿದೆ. ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ಕ್ರಮವು ಪೂಜಾ ಸ್ಥಳಗಳ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವುದು ಎಂದು ನ್ಯಾಯಾಲಯ ಹೇಳಿದೆ. ಈ ಆದೇಶದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿ ಸಹ ನೇಮಿಸಬೇಕು ಎಂದು ಸೂಚಿಸಿದೆ. ಮೊಬೈಲ್‌ಗಳು … Continued

ಬಿಜೆಪಿ-ಆರ್‌ ಎಸ್‌ ಎಸ್‌ ನವರು ಜೈ ಸಿಯಾ ರಾಮ ಹೇಳೋಲ್ಲ, ಬದಲಿಗೆ ಜೈ ಶ್ರೀರಾಮ ಎಂದು ಘೋಷಣೆ ಕೂಗ್ತಾರೆ: ಇದಕ್ಕೆ ರಾಹುಲ್‌ ಗಾಂಧಿ ಕೊಟ್ಟ ಕಾರಣ ಇಲ್ಲಿದೆ | ವೀಕ್ಷಿಸಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅಗರ್‌ನಲ್ಲಿ ನಡೆದ ಸಭೆಯೊಂದರಲ್ಲಿ ಶುಕ್ರವಾರ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ‘ಜೈ ಸಿಯಾ ರಾಮ’ ಅಥವಾ ‘ಜೈ ಸೀತಾ ರಾಮ’ ಎಂದು ಸ್ತುತಿಯನ್ನು ಹೇಳುವುದಿಲ್ಲ ಮತ್ತು ಬದಲಾಗಿ ‘ಜೈ ಶ್ರೀ ರಾಮ’ ಎಂಬ ಸ್ತುತಿಯನ್ನು ಉದ್ಘೋಷಿಸುತ್ತಾರೆ. ಏಕೆಂದರೆ ಅವರ … Continued

ಚಾಲಕನಿಗೆ ಹೃದಯಾಘಾತ, ನಿಯಂತ್ರಣ ತಪ್ಪಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಬಸ್‌ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಜಬಲ್‌ಪುರ (ಮಧ್ಯಪ್ರದೇಶ): ಜಬಲ್‌ಪುರದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕ್ಯಾಮೆರಾದಲ್ಲಿ ಸೆರೆಹಿಡಿದ ನಾಟಕೀಯ ದೃಶ್ಯಗಳಲ್ಲಿ, ಸಿಟಿ ಬಸ್‌ನ ಚಾಲಕ ಹಠಾತ್ ಹೃದಯಾಘಾತದಿಂದ ಮೃತಪಟ್ಟ ನಂತರ ನಿಯಂತ್ರಣ ತಪ್ಪಿದ ಬಸ್‌ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ರಿಕ್ಷಾಗಳು ಮತ್ತು ಮೋಟರ್‌ ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇದು ಜನರಲ್ಲಿ ಒಬ್ಬರನ್ನು ಕೊಂದಿತು ಮತ್ತು ಹಲವರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. … Continued

ದೆಹಲಿ ಮದ್ಯ ನೀತಿ ಪ್ರಕರಣ: ಕೆಸಿಆರ್ ಪುತ್ರಿ ಕವಿತಾಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ ಸಿಬಿಐ

ಹೈದರಾಬಾದ್‌: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ (ಎಂಎಲ್‌ಸಿ) ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಕಲ್ವಕುಂಟ್ಲಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ಡಿಸೆಂಬರ್ 6 ರಂದು ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆ ತಿಳಿಸಿದೆ. ಭಾರತ … Continued

ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ., ಗಡಿಭಾಗದ ಜಿಲ್ಲೆಗಳ 1800 ಗ್ರಾಪಂಗಳ ಸಂಪೂರ್ಣ ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಬೆಳಗಾವಿ: ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ಧಿಗೆ ಬದ್ಧವಾಗಿದ್ದು, ಈ ರಾಜ್ಯದ ನಾಡು-ನುಡಿ ಅಭಿವೃದ್ಧಿಪಡಿಸುವುದು ಸರಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಗಡಿಯಾಚೆ ಇರುವವರು ನಮ್ಮವರು; ಅಲ್ಲಿನ ಕನ್ನಡ ಶಾಲೆಗಳನ್ನು ಅಲ್ಲಿನ ರಾಜ್ಯ ಸರಕಾರ ಕಡೆಗಣಿಸಿರುವುದರಿಂದ ಮೂಲಸೌಕರ್ಯ … Continued

ʼಹಿಂದೂಗಳ ವಿವಾಹ ವಯಸ್ಸು’ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್

ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್, ವಿವಾದಾತ್ಮಕ  ಮತ್ತು ಪ್ರತಿಗಾಮಿ ಹೇಳಿಕೆಯನ್ನು ನೀಡಿದ್ದಾರೆ. ಹಿಂದೂಗಳು ತಮ್ಮ ಹೆಣ್ಣುಮಕ್ಕಳನ್ನು 18 ನೇ ವಯಸ್ಸಿನಲ್ಲಿ ಮದುವೆಯಾಗುವ ಸೂತ್ರವನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಮುಸ್ಲಿಂ ಪುರುಷರು 20-22 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ ಮತ್ತು ಮುಸ್ಲಿಂ ಮಹಿಳೆಯರು ಸಹ ಸರ್ಕಾರದ ಅನುಮತಿ ವಯಸ್ಸಿನ ನಂತರ 18 … Continued