ಕಿಮೊಥೆರಪಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ಫುಟ್ಬಾಲ್‌ ದಂತಕಥೆ ಪೀಲೆ : ವರದಿ

ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ಪೀಲೆ ಕರುಳಿನ ಕ್ಯಾನ್ಸರ್‌ ಜೊತೆ ಹೋರಾಡುತ್ತಿದ್ದು, ಅವರು ಕಿಮೊಥೆರಪಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಪತ್ರಿಕೆ ಫೋಲ್ಹಾ ಡಿ ಎಸ್. ಪಾಲೊ ಶನಿವಾರ ವರದಿ ಮಾಡಿದೆ. ಈಗ ಕೀಮೋಥೆರಪಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಪೀಲೆ ಅವರು ಉಪಶಾಮಕ ಆರೈಕೆಯಲ್ಲಿದ್ದಾರೆ, ನೋವು ಮತ್ತು ಉಸಿರಾಟದ ತೊಂದರೆಯಂತಹ ರೋಗಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದೆ. ಪೀಲೆ, 82, … Continued

ಹೊನ್ನಾವರ : ಮನೆಯ ಬಾಗಿಲ ಮುಂದೆಯೇ ಪ್ರತ್ಯಕ್ಷವಾದ ಚಿರತೆ..!

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗೊಳಿಬೈಲ್ ಸಮೀಪದ ಮನೆಯೊಂದರ ಅಂಗಳಕ್ಕೆ ಶನಿವಾರ ನಸುಕಿನ ಜಾವ ಚಿರತೆಯೊಂದು ಮನೆಯ ಅಂಗಳಕ್ಕೇ ಬಂದಿದೆ. ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಹಿಡಿಯಲು ಹೊಂಚು ಹಾಕಿದ್ದ ಚಿರತೆ ದಾಳಿ ಮಾಡಿದ್ದು ಆದರೆ ಅದು ವಿಫಲವಾಗಿದೆ. ಗಣಪು ಪಿ. ಹೆಗಡೆ ಎಂಬವರ ಮನೆಯ ಅಂಗಳಕ್ಕೆ … Continued

ʼಬಿಜೆಪಿಗರೇ ನಾನೂ ರೌಡಿ, ನಂಗೂ ಪಕ್ಷದಲ್ಲಿ ಸ್ಥಾನ ಕೊಡಿ’ ಎಂದು ಬೋರ್ಡ್​ ಹಿಡಿದು ನಿಂತ ರೌಡಿ ಶೀಟರ್​ ಈಗ ಪೊಲೀಸ್​ ಅತಿಥಿ

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರೌಡಿ ಶೀಟರ್​ ಪಾಲಿಟಿಕ್ಸ್ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ನಗರದಲ್ಲಿ ವ್ಯಕ್ತಿಯೊಬ್ಬ ‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿಕೊಳ್ಳಿ’ ಎಂದು ಬೋರ್ಡ್​ ಹಿಡಿದು ನಿಂತುಕೊಂಡು ಎಲ್ಲರ ಗಮನ ಸೆಳೆದಿದ್ದಾನೆ. ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಮಂಜು ಅಲಿಯಾಸ್ ಪಾನಿಪುರಿ ಮಂಜು … Continued

ತತ್ಕಾಲ್ ಟಿಕೆಟ್‌ಗಾಗಿ ಸರದಿ ಬ್ರೇಕ್‌ ಮಾಡಿದ್ದನ್ನು ವಿರೋಧಿಸಿದವರ ಮೇಲೆ ರೈಲ್ವೇ ನಿಲ್ದಾಣದಲ್ಲಿ ಗುಂಡಿನ ದಾಳಿ

ಪಟ್ನಾ: ಭಾನುವಾರ ಪಾಟ್ನಾದ ಬಿಹ್ತಾ ರೈಲ್ವೇ ನಿಲ್ದಾಣದಲ್ಲಿ ತತ್ಕಾಲ್ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ಬರದೆ ಮುನ್ನುಗ್ಗಿದ್ದನ್ನು ವಿರೋಧಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ನಂತರ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಭಾನುವಾರದ ತತ್ಕಾಲ್ ಟಿಕೆಟ್‌ಗಾಗಿ ಬಿಹ್ತಾ ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಭಾರಿ ಜನಸಂದಣಿ ಇತ್ತು. ಈ ನಡುವೆ ಕೌಂಟರ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ವಿಚಾರದಲ್ಲಿ ಜನರ ನಡುವೆ … Continued

ನೀರಿನ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವು

ವಿಜಯಪುರ: ನೀರಿನ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಿಶ್ಯಾಳ ಪಿ ಬಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕರನ್ನು ರಮೇಶ (7), ಮಾಳಿಂಗರಾಯ (11) ಎಂದು ಗುರುತಿಸಲಾಗಿದೆ. ಈ ಇಬ್ಬರು ಬಾಲಕರು ಕೃಷಿ ಹೊಂಡದ ಹತ್ತಿರ ದನ ಮೇಯಿಸಲು ಹೋಗಿದ್ದ ವೇಳೆ, ನೀರು ಕುಡಿಯಲೆಂದು ಕೃಷಿ … Continued

ಬೇರೊಂದು ಧರ್ಮಕ್ಕೆ ಮತಾಂತರಗೊಂಡ ಬಳಿಕ ಜಾತಿಯಾಧಾರಿತ ಮೀಸಲಾತಿ ಬಯಸುವಂತಿಲ್ಲ: ಮದ್ರಾಸ್‌ ಹೈಕೋರ್ಟ್‌

ಚೆನ್ನೈ: ಯಾವುದೇ ವ್ಯಕ್ತಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡ ಬಳಿಕ ತನ್ನ ಹಿಂದಿನ ಧರ್ಮದಲ್ಲಿನ ಜಾತಿಯಾಧಾರಿತವಾದ ಮೀಸಲಾತಿ ಸವಲತ್ತು ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ಮತಾಂತರಗೊಂಡ ಬಳಿಕ ಆ ವ್ಯಕ್ತಿಯು ಜನ್ಮತಃ ಬಂದಿದ್ದ ಜಾತಿ ಅಥವಾ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಅವರು ಡಿಸೆಂಬರ್ 1 … Continued

ಕಾಂತಾರ: ಹೊಂಬಾಳೆ ಫಿಲ್ಮ್ಸ್‌ ವಿರುದ್ಧದ ಎರಡನೇ ಮೊಕದ್ದಮೆ ಹಿಂದಿರುಗಿಸಿದ ಕೇರಳ ಕೋರ್ಟ್; ಈಗ “ವರಾಹರೂಪಂ” ಹಾಡಿನ ಬಳಕೆ ವಿರುದ್ಧ ಯಾವುದೇ ಆದೇಶವಿಲ್ಲ

ಕಾಂತಾರ ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲಂಸ್ ವಿರುದ್ಧ ಮಾತೃಭೂಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಲಿಮಿಟೆಡ್ (ಎಂಪಿಪಿಸಿಎಲ್) ಸಲ್ಲಿಸಿದ್ದ ‘ವರಾಹ ರೂಪಂ’ ಹಾಡಿನ ಹಕ್ಕುಸ್ವಾಮ್ಯ ವಿವಾದಕ್ಕೆ ಸಂಬಂಧಿಸಿದಂತೆ ಕೇರಳದ ನ್ಯಾಯಾಲಯವು ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ಹಿಂದಿರುಗಿಸಿದೆ. ಪಲಕ್ಕಾಡ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಫಿರ್ಯಾದಿದಾರರ ನೋಂದಾಯಿತ ಕಚೇರಿಯಾದ ಎಂಪಿಪಿಸಿಎಲ್ ಕೋಝಿಕ್ಕೋಡ್‌ನಲ್ಲಿ ಇರುವುದರಿಂದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯವು … Continued

ಬಂಗಾಳದ ಟಿಎಂಸಿ ಬೂತ್ ಅಧ್ಯಕ್ಷರ ನಿವಾಸದಲ್ಲಿ ಸ್ಫೋಟ: ಇಬ್ಬರು ಸಾವು, ಇಬ್ಬರಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಭೂಪತಿನಗರ ಪ್ರದೇಶದ ಪುರ್ಬಾ ಮೇದಿನಿಪುರ ಜಿಲ್ಲೆಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೂತ್ ಅಧ್ಯಕ್ಷ ರಾಜಕುಮಾರ ಮನ್ನಾ ಅವರ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಸ್ಫೋಟದ ಪ್ರಭಾವ ಎಷ್ಟು ಪ್ರಬಲವಾಗಿದೆಯೆಂದರೆ, ಘಟನೆಯಲ್ಲಿ ಹುಲ್ಲಿನ ಛಾವಣಿಯ ಮಣ್ಣಿನ ಮನೆ ಹಾರಿಹೋಗಿದೆ. ಮೃತರ ಗುರುತು … Continued

ವಿಕಲಚೇತನರಿಗೆ ಆರೋಗ್ಯ ಸಿರಿ ವಿಶೇಷ ಯೋಜನೆ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಅಂಗವಿಕಲರಿಗಾಗಿ ರಾಜ್ಯ ಸರ್ಕಾರ ಆರೋಗ್ಯ ಸಿರಿ ವಿಶೇಷ ಯೋಜನೆ ಜಾರಿ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ರಾಜ್ಯದ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂಗವಿಕಲ ಮಕ್ಕಳಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆಯಾದ … Continued

ಏಲಿಯನ್ ದಾಳಿಯಿಂದ ಹಿಡಿದು ಸೌರ ಸುನಾಮಿ ವರೆಗೆ, ಬಾಬಾ ವಂಗಾ ಅವರ 2023ರ ಆಘಾತಕಾರಿ ಭವಿಷ್ಯವಾಣಿಗಳು…!

ನಾಸ್ಟ್ರಾಡಾಮಸ್ ಮಹಿಳೆ ಎಂದು ಕರೆಯಲ್ಪಡುವ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ನಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅವರು 5079 ರ ಹೊತ್ತಿಗಿನ ಭವಿಷ್ಯವನ್ನು ಊಹಿಸಿದ್ದಾರೆಂದು ನಂಬಲಾಗಿದೆ, ಅವರ ಅಭಿಪ್ರಾಯದಲ್ಲಿ, ಪ್ರಪಂಚಕ್ಕೆ ಅಂತ್ಯ ಎಂಬುದು ಇರುತ್ತದೆ. 2023ರ ವರ್ಷಕ್ಕೆ, ಭಯಾನಕ ಮುನ್ಸೂಚನೆಗಳು ಭೂಮಿಯ ಕಕ್ಷೆಯಲ್ಲಿ ಬದಲಾವಣೆಯನ್ನು ಒಳಗೊಂಡಿವೆ, ಇದು ಜಾಗತಿಕ ಪರಮಾಣು … Continued