ಕಲ್ಲಿದ್ದಲು ಸುಲಿಗೆ ಪ್ರಕರಣ: ಛತ್ತೀಸ್‌ಗಢ ಸಿಎಂ ಉಪಕಾರ್ಯದರ್ಶಿ ಬಂಧಿಸಿದ ಇ.ಡಿ.

ರಾಯ್ಪುರ: ಕಲ್ಲಿದ್ದಲು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಛತ್ತೀಸ್‌ಗಢದ ಉನ್ನತ ಅಧಿಕಾರಿಯೊಬ್ಬರನ್ನು ಬಂಧಿಸಿದೆ. ಅಧಿಕಾರಿಯನ್ನು ಸೌಮ್ಯಾ ಚೌರಾಸಿಯಾ ಎಂದು ಗುರುತಿಸಲಾಗಿದ್ದು, ಅವರನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಆಡಳಿತದಲ್ಲಿ ಉಪ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ವಿಶೇಷ ನ್ಯಾಯಾಲಯವು ಛತ್ತೀಸ್‌ಗಢದ ಉಪ ಕಾರ್ಯದರ್ಶಿಯನ್ನು ಪ್ರಶ್ನಿಸಲು ಇ.ಡಿ.ಗೆ 4 ದಿನಗಳ ಕಸ್ಟಡಿ ನೀಡಿದೆ. ಇ.ಡಿ. 14 ದಿನಗಳ ಕಸ್ಟಡಿಗೆ … Continued

ಈ ಸಂದರ್ಭದಲ್ಲಿ ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರುವುದು ಸೂಕ್ತವಲ್ಲ : ಸಿಎಂ ಬೊಮ್ಮಾಯಿ

ರಾಮದುರ್ಗ (ಬೆಳಗಾವಿ): ಎರಡು ರಾಜ್ಯಗಳ ಮಧ್ಯೆ ಇರುವ ಈ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಅವರು ಇಲ್ಲಿಗೆ ಬರಬಾರದು ಎಂಬ ಸಂದೇಶವನ್ನು ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು ಅಲ್ಲಿನ ಮುಖ್ಯ ಕಾರ್ಯದರ್ಶಿಗಳಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು, ಶುಕ್ರವಾರ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಮಾಧ್ಯಮದವರೊಂದಿಗೆ … Continued

ಡಿಸೆಂಬರ್ 5ರ ರಾತ್ರಿ 8 ಗಂಟೆಗೆ ನನ್ನ ತಾಯಿ ನಿಧನವಾಗಲಿದ್ದಾರೆ, ಎರಡು ದಿನ ರಜೆ ಕೊಡಿ…! : ಶಿಕ್ಷಕನ ಈ ವಿಲಕ್ಷಣ ರಜೆ ಅರ್ಜಿ ವೈರಲ್​

ಶಿಕ್ಷಕರ ಸಾಂದರ್ಭಿಕ ರಜೆಯ ಬೇಡಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಹೊಸ ಆದೇಶ ಹೊರಡಿಸಿದ ನಂತರ ಬಿಹಾರದಲ್ಲಿ ಶಿಕ್ಷಕರ ವಲಯದಲ್ಲಿ ಕೋಲಾಹಲ ಉಂಟಾಗಿದೆ. ಯಾಕೆಂದರೆ ಶಿಕ್ಷಕರು ಮೂರು ದಿನಗಳ ಮುಂಚಿತವಾಗಿ ಸಾಂದರ್ಭಿಕ ರಜೆಗೆ ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದರೆ ಅವರ ರಜೆಯನ್ನು ಸ್ವೀಕರಿಸುವುದಿಲ್ಲ ಎಂದು ಹೊಸ ಆದೇಶದಲ್ಲಿ ಹೇಳಲಾಗಿದೆ. ಬಿಹಾರದ ಮುಂಗೇರ್, ಭಾಗಲ್ಪುರ ಮತ್ತು ಬಂಕಾ ಜಿಲ್ಲೆಗಳಲ್ಲಿ ಆದೇಶ … Continued

ಮೀನುಗಾರಿಕೆ ಬಲೆಯಲ್ಲಿ ಸಿಲುಕಿದ್ದ ಡಾಲ್ಫಿನ್‌ಗಳನ್ನು ರಕ್ಷಿಸಿ ಸಮುದ್ರಕ್ಕೆ ಬಿಟ್ಟ ಮೀನುಗಾರರು | ವೀಕ್ಷಿಸಿ

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಡಾಲ್ಫಿನ್‌ಗಳನ್ನು ರಕ್ಷಿಸುತ್ತಿರುವ ಮೀನುಗಾರರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮೀನು ಬಲೆಯಲ್ಲಿ ಸಿಲುಕಿದ ಎರಡಲು ಡಾಲ್ಫಿನ್‌ಗಳಲ್ಲಿ ಒಂದನ್ನು ತಮಿಳುನಾಡು ಮೀನುಗಾರರು ಬಲೆಗಳಿಂದ ಬಿಚ್ಚುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ನಂತರ ಅವರು ಅದನ್ನು ಪುನಃ ಸಮುದ್ರಕ್ಕೇ ಒಯ್ದು ಬಿಡುತ್ತಾರೆ. ತಮಿಳುನಾಡು ಅರಣ್ಯ ತಂಡ ಮತ್ತು ಸ್ಥಳೀಯ ಮೀನುಗಾರರು ಇಂದು … Continued

ಇಸ್ರೋ ಬೇಹುಗಾರಿಕೆ ಪ್ರಕರಣ: ಆರೋಪಿಗಳಿಗೆ ಕೇರಳ ಹೈಕೋರ್ಟ್‌ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ; ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಸಿಲುಕಿಸುವ ಪಿತೂರಿ ಪ್ರಕರಣದಲ್ಲಿ ಗುಪ್ತಚರ ಇಲಾಖೆಯ ಪೊಲೀಸ್‌ ಅಧಿಕಾರಿಗಳಾದ ಆರ್‌. ಬಿ. ಶ್ರೀಕುಮಾರ, ಪಿ.ಎಸ್‌. ಜಯಪ್ರಕಾಶ, ಥಂಪಿ ಎಸ್‌ ದುರ್ಗಾದತ್‌ ಮತ್ತು ವಿಜಯನ್‌ ಅವರಿಗೆ ಕೇರಳ ಹೈಕೋರ್ಟ್‌ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಬದಿಗೆ ಸರಿಸಿದೆ. ಕೇರಳ ಹೈಕೋರ್ಟ್‌ … Continued

ಕೆಜಿಎಫ್‌ 2 ಹಾಡು ಬಳಕೆ : ಕಾಂಗ್ರೆಸ್‌ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲು ; ರಾಹುಲ್‌ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: ಕೃತಿ ಸ್ವಾಮ್ಯ ಉಲ್ಲಂಘಿಸಿ ಕಾಂಗ್ರೆಸ್‌ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿರುವ ಕೆಜಿಎಫ್‌-2 ಸಿನಿಮಾದ ಮುದ್ರಿತ ಸಂಗೀತವನ್ನು ತೆಗೆದುಹಾಕಲು ನಿರ್ದೇಶಿಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪಾಲಿಸಿಲ್ಲ ಎಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಪಕ್ಷದ ಮುಖಂಡರಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ. ಕಾಂಗ್ರೆಸ್‌ … Continued

ಮಾಜಿ ಕಾಂಗ್ರೆಸ್ ನಾಯಕರಿಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ: ಜೈವೀರ್ ಶೇರ್ಗಿಲ್ ಹೊಸ ವಕ್ತಾರ, ಕ್ಯಾಪ್ಟನ್‌ ಅಮರಿಂದರ್ ಸಿಂಗ್, ಸುನೀಲ್ ಜಾಖರಗೆ ಕಾರ್ಯಕಾರಿ ಸದಸ್ಯತ್ವ

ನವದೆಹಲಿ: ಗಾಂಧಿಗಳ ವಿರುದ್ಧ ಕಟು ಟೀಕೆಯ ನಂತರ ಕಾಂಗ್ರೆಸ್‌ನಿಂದ ಹೊರನಡೆದ ಮೂರು ತಿಂಗಳ ನಂತರ, ಜೈವೀರ್ ಶೇರ್ಗಿಲ್ ಅವರನ್ನು ಶುಕ್ರವಾರ ಬಿಜೆಪಿಯು ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿದೆ, ಇದು ಹಳೆಯ ಪಕ್ಷದಿಂದ ಬದಲಾಗಿರುವ ಹಲವಾರು ಪ್ರಮುಖ ನಾಯಕರಿಗೆ ಹೊಸ ಪಾತ್ರಗಳನ್ನು ಘೋಷಿಸಿದೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್‌ನ ಮಾಜಿ … Continued

ಕುಮಟಾ : ಡಿಸೆಂಬರ್‌ 4ರಿಂದ ಡಾ. ಬಾಳಿಗಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ

ಕುಮಟಾ : ರಾಜ್ಯ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದ ಫ್ಲೋರ್ ಬಾಲ್ ಪಂದ್ಯಾಟವು ಡಿಸೆಂಬರ್‌ 4, ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ. ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ರಾಜ್ಯದ ಒಟ್ಟು 25 ತಂಡದ 450 ವಿದ್ಯಾರ್ಥಿಗಳು ಹಾಗೂ ತಂಡಗಳ ವ್ಯವಸ್ಥಾಪಕರಾಗಿ 50 ಉಪನ್ಯಾಸಕರು ಭಾಗವಹಿಸಲಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ … Continued

ಆಸ್ಟ್ರೇಲಿಯ-ವೆಸ್ಟ್ ಇಂಡೀಸ್ ಟೆಸ್ಟ್‌ನ ಮೂರನೇ ದಿನದ ವೀಕ್ಷಕ ವಿವರಣೆ ವೇಳೆ ಅಸ್ವಸ್ಥ : ಆಸ್ಟ್ರೇಲಿಯ ದಿಗ್ಗಜ ಬ್ಯಾಟರ್‌ ರಿಕಿ ಪಾಂಟಿಂಗ್ ಆಸ್ಪತ್ರೆಗೆ ದಾಖಲು

ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು ವೀಕ್ಷಕ ವಿವರಣೆ ಮಾಡುತ್ತಿರವಾಗ ಅಸ್ವಸ್ಥತೆ ಅನುಭವಿಸಿದ ಕ್ರಿಕೆಟ್‌ ದಿಗ್ಗಜ ಬ್ಯಾಟರ್ ರಿಕಿ ಪಾಂಟಿಂಗ್ ಅವರನ್ನು ಶುಕ್ರವಾರ ಪರ್ತ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಫಾಕ್ಸ್ ಸ್ಪೋರ್ಟ್ಸ್‌ನ ವರದಿಯ ಪ್ರಕಾರ, ಚಾನೆಲ್ 7ಕ್ಕೆ ವೀಕ್ಷಕ ವಿವರಣೆ ನೀಡುತ್ತಿದ್ದ ಪಾಂಟಿಂಗ್, ಮೂರನೇ ದಿನದ … Continued

ಬೆಳಗಾವಿ: ಕನ್ನಡ ಬಾವುಟ ಹಾರಿಸಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ, ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ: ಕನ್ನಡ ಬಾವುಟ (Kannada Flag) ಹಾರಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ ನಡೆದಿರುವ ಘಟನೆ ಬೆಳಗಾವಿಯ ಕಾಲೇಜೊಂದರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಮೂರು ವಿದ್ಯಾರ್ಥಿಗಳು ಅಪ್ರಾಪ್ತರು ಎಂದು ಪೊಲೀಸರು ತಿಳಿಸಿದ್ದಾರೆ. ಟಿಳಕವಾಡಿಯ ಕಾಲೇಜಿನಲ್ಲಿ ಸಂಜೆ 7:30ರ ಸುಮಾರಿಗೆ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಿಡಿದು ವಿದ್ಯಾರ್ಥಿ … Continued