ವೀಡಿಯೊ: ನದಿಯಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುತ್ತಿರುವ ವೀಡಿಯೊ ವೈರಲ್

ಇಂಟರ್ನೆಟ್ ಆಶ್ಚರ್ಯಗಳ ಅಂತ್ಯವಿಲ್ಲದ ಮೂಲವಾಗಿದೆ ಮತ್ತು ಇತ್ತೀಚಿನ ವೈರಲ್ ವೀಡಿಯೊ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ವೀಡಿಯೊ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಮೋಟಾರ್‌ಸೈಕಲ್ ಅನ್ನು ನದಿಯೊಂದರಲ್ಲಿ ಓಡಿಸುತ್ತಿರುವುದನ್ನು ತೋರಿಸುತ್ತದೆ. ಈ ವೀಡಿಯೊ ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆದಿದೆ, ಅನೇಕರು ವ್ಯಕ್ತಿಯ ಸಾಹಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವೀಡಿಯೊವನ್ನು ಆರಂಭದಲ್ಲಿ ಟ್ವಿಟರ್‌ನಲ್ಲಿ ಮೋಟಾರ್ ಆಕ್ಟೇನ್ ಹಂಚಿಕೊಂಡಿದೆ ಮತ್ತು ನಂತರ ವೈರಲ್ … Continued

ಇಂಡಿಗೋ ವಿಮಾನದ ತುರ್ತು ನಿರ್ಗಮನದ ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ

ನವದೆಹಲಿ: ದೆಹಲಿ-ಬೆಂಗಳೂರು ಇಂಡಿಗೋ ವಿಮಾನದ ತುರ್ತು ಡೋರ್ ಫ್ಲಾಪ್ ಮಿಡ್‌ಏರ್ ತೆರೆಯಲು ಯತ್ನಿಸಿದ ಆರೋಪದ ಮೇಲೆ 40 ವರ್ಷದ ಪ್ರಯಾಣಿಕನ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿಮಾನಯಾನ ಸಂಸ್ಥೆಯು ಅಧಿಕೃತ ಹೇಳಿಕೆಯಲ್ಲಿ, ವ್ಯಕ್ತಿಯು ಮದ್ಯದ ಸ್ಥಿತಿಯಲ್ಲಿದ್ದ ಎಂದು ಅದು ಹೇಳಿದೆ. ಬಿಡುಗಡೆಯ ಪ್ರಕಾರ, ಈ ಘಟನೆ ಶುಕ್ರವಾರ ಬೆಳಿಗ್ಗೆ 7:56 ಕ್ಕೆ ವಿಮಾನ ಸಂಖ್ಯೆ 6E 308 … Continued

ಕ್ಲೇಮ್‌ ಮಾಡದ ₹17,000 ಹಣ ಮರಳಿ ಪಡೆಯಲು ಕ್ಯಾಲಿಫೋರ್ನಿಯಾ ವ್ಯಕ್ತಿಗೆ ಸಹಾಯ ಮಾಡಿದ ಚಾಟ್‌ಜಿಪಿಟಿ…! ಹೇಗಾಯ್ತು…ಇಲ್ಲಿದೆ…

2022ರಲ್ಲಿ ಪ್ರಾರಂಭವಾದಾಗಿನಿಂದ ಪ್ರಪಂಚದಾದ್ಯಂತ ಕೃತಕಬುದ್ದಿಮತ್ತೆ (AI) ಚಾಟ್‌ಬಾಟ್ (ChatGPT)ಯ ಜನಪ್ರಿಯತೆ ಬೆಳೆಯುತ್ತಿದೆ. ಇದು ಮೊದಲು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯಲ್ಲಿ ಎಂಬಿಎ (MBA) ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಯಿತು ಮತ್ತು ನಂತರ ಅಮೆರಿಕ ವೈದ್ಯಕೀಯ ಮತ್ತು ನಿರ್ವಹಣಾ ಪರೀಕ್ಷೆಗಳಲ್ಲಿ ತನ್ನ ಬುದ್ಧಿವಂತಿಕೆಯನ್ನು ಸಾಬೀತುಪಡಿಸಿತು. ಎಐ (AI) ಚಾಲಿತ ಚಾಟ್‌ಬಾಟ್ ತನ್ನ ಮುಂದೆ ಬಂದ ಬಹುತೇಕ ಎಲ್ಲ … Continued

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾಲಿಗೆ ಕತ್ತರಿಸ್ತೇನೆ: ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ…!

ಚೆನ್ನೈ: ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ 2019ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆಯನ್ನು ಕತ್ತರಿಸುವುದಾಗಿ ತಮಿಳುನಾಡಿನ ಕಾಂಗ್ರೆಸ್ ನಾಯಕರೊಬ್ಬರು ಬೆದರಿಕೆ ಹಾಕಿದ್ದಾರೆ. ಅವರ ಹೇಳಿಕೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್‌ನ ಎಸ್‌ಸಿ/ಎಸ್‌ಟಿ ವಿಭಾಗವು ತಮಿಳುನಾಡಿನ ದಿಂಡಿಗಲ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅನರ್ಹತೆ … Continued

ವೀಡಿಯೊ : ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ 150 ಗುಂಡು ಹಾರಿಸಿದ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪುತ್ರ, ಸಹೋದರ

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆಗಿದ್ದು, ಜೈಲಿನಲ್ಲಿರುವ ಗ್ಯಾಂಗ್‌ ಸ್ಟರ್‌-ರಾಜಕಾರಣಿ ಅತಿಕ್ ಅಹ್ಮದ್ ಕುಟುಂಬ ಸದಸ್ಯರು, ಹಾಗೂ ಕೆಲವು ಜನರು ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ 150 ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ. ದಿನಾಂಕ ನಿಗದಿ ಮಾಡದ ಎರಡೂವರೆ ನಿಮಿಷದ ವೀಡಿಯೊದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದ ಸಮಾರಂಭದಲ್ಲಿ ಕೆಲವರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು … Continued

ದೇವಸ್ಥಾನದ ಆಸ್ತಿಗಳನ್ನು ಅಕ್ರಮವಾಗಿ ಭೋಗ್ಯಕ್ಕೆ ಪಡೆದ ಆರೋಪದ ಬಗ್ಗೆ ಎಸ್‌ಐಟಿ ತನಿಖೆಗೆ ಆದೇಶಿಸಿದ ಜಮ್ಮು-ಕಾಶ್ಮೀರ ಸರ್ಕಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಣಿವೆಯಲ್ಲಿನ ದೇವಸ್ಥಾನದ ಆಸ್ತಿಗಳನ್ನು ಅಕ್ರಮವಾಗಿ ಭೋಗ್ಯಕ್ಕೆ ಪಡೆದಿರುವ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವಾರದೊಳಗೆ ನವೀಕರಿಸಿದ ಮಾಹಿತಿ ಒದಗಿಸುವಂತೆ ಅಧಿಕಾರಿಗಳು ಡೆಪ್ಯೂಟಿ ಕಮಿಷನರ್‌ಗಳಿಗೆ (ಡಿಸಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಶ್ಮೀರ ವಿಭಾಗೀಯ ಆಯುಕ್ತರ ಕಚೇರಿಯು ಕಾಶ್ಮೀರದ ಎಲ್ಲಾ … Continued

ʼಟಾರ್ಗೆಟ್‌ ಮಾಡಿದಂತೆ ತೋರುತ್ತಿದೆ ‘: ಅದಾನಿ ಬಗ್ಗೆ ಹಿಂಡೆನ್‌ಬರ್ಗ್‌ ವರದಿ ಕುರಿತು ಜೆಪಿಸಿ ಬೇಡಿಕೆಗೆ ಶರದ್ ಪವಾರ್ ಅಸಮ್ಮತಿ

ನವದೆಹಲಿ: ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್‌ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯ ಬೇಡಿಕೆಯ ಬಗ್ಗೆ ತಮ್ಮ ಮಿತ್ರಪಕ್ಷ ಕಾಂಗ್ರೆಸ್‌ನ ಅಭಿಪ್ರಾಯಗಳನ್ನು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) … Continued

ಅಳಿಯನಿಗೆ ತಪ್ಪಿದ ಕೈ ಟಿಕೆಟ್: ಕಾಂಗ್ರೆಸ್ಸಿಗೆ ಮಾಜಿ ಶಾಸಕ ಶಫಿ ಅಹ್ಮದ್‌ ಗುಡ್‌ ಬೈ

ತುಮಕೂರು: ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಪಕ್ಷದಲ್ಲಿ ಬಂಡಾಯ ಸ್ಫೋಟಗೊಂಡಿದೆ. ತುಮಕೂರು​ ನಗರ ಕಾಂಗ್ರೆಸ್​ ಪಾಳಯದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ತಮ್ಮ ಅಳಿಯ ಎಸ್.ರಫೀಕ್ ಅಹ್ಮದ್​ಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಶಾಸಕ ಶಫಿ ಅಹ್ಮದ್ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಯುವ ಮುಖಂಡ ಇಕ್ಬಾಲ್ ಅಹ್ಮದ್​ಗೆ ಟಿಕೆಟ್ … Continued

ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ : ವೆಂಕಟೇಶ ಹೆಗಡೆ ಹೊಸಬಾಳೆ ಘೋಷಣೆ

ಶಿರಸಿ: ರಾಜ್ಯ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಬಂಡಾಯದ ಭೀತಿ ಎದುರಾಗಿದೆ. ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿದ್ದ ವೆಂಕಟೇಶ್ ಹೆಗಡೆ ಹೊಸಬಾಳೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿಯಾಗಿದ್ದೆ. ಆದರೆ ನಾಲ್ಕು ಸಲ ಸೋತ … Continued

ಪತಿ ಚಾಕಲೇಟ್ ತಂದುಕೊಟ್ಟಿಲ್ಲವೆಂದು ನೊಂದು ಪತ್ನಿ ಆತ್ಮಹತ್ಯೆ…!

ಬೆಂಗಳೂರು: ಪತಿ ಚಾಕಲೇಟ್ ತಂದುಕೊಟ್ಟಿಲ್ಲವೆಂದು ನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವರದಿಯಾಗಿದೆ. ಸೊಣ್ಣಪ್ಪ ಲೇಔಟ್ ನಿವಾಸಿ ನಂದಿನಿ(30) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಸೊಣ್ಣಪ್ಪ ಲೇಔಟ್‍ನಲ್ಲಿ ನಂದಿನಿ ಅವರು ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಪತಿ ಸೆಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿಯು ಎಂದಿನಂತೆ ಕೆಲಸಕ್ಕೆ … Continued