ಚಂದ್ರಯಾನ-3 ಬಾಹ್ಯಾಕಾಶ ನೌಕೆ ಲೂನಾರ್ ಮಾಡ್ಯೂಲ್-ಹಿಂದಿನ ಚಂದ್ರಯಾನ-2 ಆರ್ಬಿಟರ್ ನಡುವೆ ದ್ವಿಮುಖ ಸಂವಹನ ಆರಂಭ…!

ನವದೆಹಲಿ: ಭಾರತವು ತನ್ನ ಚಂದ್ರಯಾನ-3 ಮಿಷನ್‌ನೊಂದಿಗೆ ಇತಿಹಾಸವನ್ನು ನಿರ್ಮಿಸಲು ಸಿದ್ಧವಾಗಿದೆ, ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲು ಹಾಗೂ ಚಂದ್ರನ ಮೇಲಿರುವ ನೀರು ಮತ್ತು ಇತರ ಸಂಪನ್ಮೂಲಗಳ ಬಗ್ಗೆ ಅನ್ವೇಷಿಸಲು ಸಿದ್ಧವಾಗಿದೆ. ಈಗ ಚಂದ್ರಯಾನ-3 ಕಾರ್ಯಾಚರಣೆಯು ಈ ಹಿಂದೆ ಕಳುಹಿಸಿದ್ದ ಚಂದ್ರಯಾನ-2 ಬಾಹ್ಯಾಕಾಶ ನೌಕೆಯ ಆರ್ಬಿಟರ್‌ ಜೊತೆ ಸಂವಹನವನ್ನು ಸ್ಥಾಪಿಸಿದೆ. ಲ್ಯಾಂಡರ್ ಮತ್ತು ರೋವರ್ … Continued

ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮೊದಲೇ 115 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿಎಂ ಕೆಸಿಆರ್ ಪಕ್ಷ

ಹೈದರಾಬಾದ್‌ : 2023 ರ ಅಂತ್ಯದ ವೇಳೆಗೆ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮುಂಚಿತವಾಗಿ ಭಾರತ್ ರಾಷ್ಟ್ರ ಸಮಿತಿ (BRS) 119 ಕ್ಷೇತ್ರಗಳ ಪೈಕಿ 115 ಸ್ಥಾನಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೈದರಾಬಾದ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ತೆಲಂಗಾಣ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಆರ್‌ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ … Continued

ಏಷ್ಯಾಕಪ್‌-2023 : 17 ಆಟಗಾರರ ಭಾರತದ ಕ್ರಿಕೆಟ್‌ ತಂಡ ಪ್ರಕಟ

ನವದೆಹಲಿ: ಏಕದಿನ ಕ್ರಿಕೆಟ್‌ ಏಷ್ಯಾಕಪ್‌-2023ಕ್ಕಾಗಿ ಭಾರತ 17 ಮಂದಿಯ ತಂಡವನ್ನು ಪ್ರಕಟಿಸಲಾಗಿದೆ. ಗಾಐದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಬ್ಯಾಟರುಗಳಾದ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದಾರೆ. ತಿಲಕ್ ವರ್ಮಾ ಮೊದಲ ಬಾರಿಗೆ ಭಾರತದ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತ ತನ್ನ 17 ಸದಸ್ಯರ ಪ್ರವಾಸಿ ತಂಡವನ್ನು ಸೋಮವಾರ ಪ್ರಕಟಿಸಿತು, ನಂತರ ದೆಹಲಿಯಲ್ಲಿ ನಾಯಕ … Continued

ಕೇರಳದ ಈ ಗ್ರಾಮ ಏಷ್ಯಾದಲ್ಲೇ ಅತಿ ಹೆಚ್ಚು ಅವಳಿ ಮಕ್ಕಳನ್ನು ಹೊಂದಿರುವ ಗ್ರಾಮ… ವಿಜ್ಞಾನಕ್ಕೂ ಕಾರಣ ಗೊತ್ತಿಲ್ಲ…!

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕೊಡಿನ್ಹಿ ಎಂಬ ಗ್ರಾಮದಲ್ಲಿ ಅವಳಿ ಮಕ್ಕಳ ಜನನ ಪ್ರಮಾಣವು ಬಹುಶಃ ಭಾರತದಲ್ಲಿಯೇ ಅತ್ಯಧಿಕವಾಗಿದೆ. ಅನೇಕ ಬಾರಿ ವಿಜ್ಞಾನಿಗಳು ಈ ಅಪರೂಪದ ವಿದ್ಯಮಾನದ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸಿದ್ದಾರೆ, ಆದರೆ ಉತ್ತರ ಅವರಿಗೆ ಸಮರ್ಪಕ ಉತ್ತರ ಇನ್ನೂ ಸಿಕ್ಕಿಲ್ಲ. ಮೇಲ್ನೋಟಕ್ಕೆ ಕೇರಳದ ಇತರ ಅನೇಕ ಹಳ್ಳಿಗಳಂತೆ ಕೋಡಿನ್ಹಿ ಕೂಡ ಸಾಮಾನ್ಯ ಗ್ರಾಮದಂತೆ ಗೋಚರಿಸುತ್ತದೆ. … Continued

“ಮಾರ್ವೆಲ್ ಆಫ್ ಇಂಜಿನಿಯರಿಂಗ್” : ಭಾರತದ 1ನೇ ಎಂಟು ಪಥದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಪರಿಚಯಿಸಿದ ಸಚಿವ ನಿತಿನ್ ಗಡ್ಕರಿ | ವೀಕ್ಷಿಸಿ

ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು X ನಲ್ಲಿ ಹೊಸದಾಗಿ ನಿರ್ಮಿಸಲಾದ ದ್ವಾರಕಾ ಎಕ್ಸ್‌ಪ್ರೆಸ್‌ವೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಭಾರತದ ಮೊದಲ ಎಂಟು-ಲೇನ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಅನ್ನು ವೀಡಿಯೊದಲ್ಲಿ ಅನಾವರಣಗೊಳಿಸಲಾಗಿದೆ. ನಿತಿನ್ ಗಡ್ಕರಿ ಅವರು “ಮಾರ್ವೆಲ್ ಆಫ್ ಇಂಜಿನಿಯರಿಂಗ್: ದ್ವಾರಕಾ ಎಕ್ಸ್‌ಪ್ರೆಸ್‌ವೇ! ಎ ಸ್ಟೇಟ್-ಆಫ್-ದಿ-ಆರ್ಟ್ ಜರ್ನಿ ಇನ್ ದ ಫ್ಯೂಚರ್” ಎಂಬ ಶೀರ್ಷಿಕೆಯೊಂದಿಗೆ ಈ … Continued

ಶಿರಸಿ : ಟಿಎಸ್ಎಸ್ ಚುನಾವಣೆಯಲ್ಲಿ ಗೋಪಾಲಕೃಷ್ಣ ವೈದ್ಯ ಬಣಕ್ಕೆ ಪ್ರಚಂಡ ಗೆಲುವು

ಶಿರಸಿ : ಟಿಎಸ್ಎಸ್ ಸಂಸ್ಥೆಯ ಚುನಾವಣೆಯಲ್ಲಿ ಗೋಪಾಲಕೃಷ್ಣ ವೈದ್ಯರ ಬಣಕ್ಕೆ ಪ್ರಚಂಡ ಗೆಲುವು ಸಾಧಿಸಿದೆ. ಜನ ಬದಲಾವಣೆ ಬಯಸಿದ್ದರೂ ಸಹ ಹಾಲಿ ಅಧ್ಯಕ್ಷ ಕಡವೆ ರಾಮಕೃಷ್ಣ ಹೆಗಡೆ ಮಾತ್ರ ಗೆದ್ದಿದ್ದಾರೆ. ರಾಜ್ಯದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಶಿರಸಿಯ ಟಿಎಸ್ಎಸ್ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆ ನಡೆಯಿತು. ಆಡಳಿತ … Continued

ವೇದಿಕೆ ಮೇಲೆಯೇ ಕಾಂಗ್ರೆಸ್ ಶಾಸಕಿ ಮೇಲೆ ಚಾಕುವಿನಿಂದ ಹಲ್ಲೆ

ರಾಜನಂದಗಾಂವ್: ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ಭಾನುವಾರ ಕಾಂಗ್ರೆಸ್ಸಿನ ಮಹಿಳಾ ಶಾಸಕಿ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ ನಂತರ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಖಿಲೇಶ್ವರ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಖುಜ್ಜಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕಿ ಚನ್ನಿ ಚಂದು ಸಾಹು ಅವರು ಸಾರ್ವಜನಿಕ … Continued

ಚಂದ್ರನ ಮೇಲೆ ಇಳಿಯುವ ಮೊದಲು ಚಂದ್ರನ ದಕ್ಷಿಣ ಧ್ರುವ ಭಾಗದ ಚಿತ್ರಗಳನ್ನು ಸೆರೆಹಿಡಿದ ʻಚಂದ್ರಯಾನ-3ʼ

ನವದೆಹಲಿ: ಚಂದ್ರಯಾನ-3ರ ಲ್ಯಾಂಡರ್ ತೆಗೆದ ಚಂದ್ರನ ಇತ್ತೀಚಿನ ಚಿತ್ರಗಳು ಅದರ ದೂರದ ಭಾಗದಲ್ಲಿ ಕೆಲವು ಪ್ರಮುಖ ಕುಳಿಗಳನ್ನು ಗುರುತಿಸಿವೆ. ಬುಧವಾರ ಸಂಜೆ ಇನ್ನೂ ಯಾರೂ ಅನ್ವೇಷಿಸದ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಐತಿಹಾಸಿಕ ಲ್ಯಾಂಡಿಂಗ್‌ಗೆ ಮುಂಚಿತವಾಗಿ ವಿಕ್ರಂ ಲ್ಯಾಂಡರ್ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಕಂಡುಹಿಡಿಯಲು ಸಹಾಯ ಮಾಡಲು ಕೆಲಸ ಮಾಡಿದ ಕ್ಯಾಮರಾದಿಂದ ಈ ಚಿತ್ರಗಳನ್ನು ತೆಗೆಯಲಾಗಿದೆ. … Continued

ಮುಂಬೈ ಸಭೆ ವೇಳೆ ʼಇಂಡಿಯಾʼ ಮೈತ್ರಿಕೂಟದ ಲೋಗೋ ಅನಾವರಣ

ಮುಂಬೈ: ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯುವ ವಿಪಕ್ಷಗಳ ಒಕ್ಕೂಟ-ಇಂಡಿಯಾದ ಸಭೆಯಲ್ಲಿ ಅದರ ಲೋಗೋವನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಹಣಕಾಸು ರಾಜಧಾನಿಯಾದ ಮುಂಬೈನಲ್ಲಿ ವಿಪಕ್ಷಗಳ ಮೈತ್ರಿಕೂಟದ ಮೂರನೇ ಸಭೆಯಲ್ಲಿ 26 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಸರಿಸುಮಾರು 80 ನಾಯಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಪ್ರಸ್ತುತ, … Continued

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆ : ಡ್ರೈವರ್‌ ರಹಿತ ಬಸ್ ಸರ್ವಿಸ್‌ ಆರಂಭಿಸಿದ ಸ್ಯಾನ್ ಫ್ರಾನ್ಸಿಸ್ಕೋ …!

ಸ್ಯಾನ್ ಫ್ರಾನ್ಸಿಸ್ಕೋ : ಜನನಿಬಿಡ ರಸ್ತೆಗಳಲ್ಲಿ ಸಾಗುವ ಬಸ್, ಜನರು ಬರುವಾಗ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ. ಬಸ್ ಹತ್ತಿದ ನಂತರ ತಾನೇ ಮುಂದಕ್ಕೆ ಚಲಿಸುತ್ತದೆ. ಈ ಬಸ್ಸಿನಲ್ಲಿ ಡ್ರೈವರ್ ಇಲ್ಲ.. ಸ್ಟೀರಿಂಗ್ ಕೂಡ ಇಲ್ಲ. ಆದರೂ ಬಸ್ ಸಲೀಸಾಗಿ ತನ್ನಷ್ಟಕ್ಕೆ ಚಲಿಸುತ್ತದೆ. ರೋಬೋಟ್ಯಾಕ್ಸಿಗಳು ಮೊದಲು ಬಂತು. ಈಗ ಚಾಲಕ ರಹಿತ ಬಸ್‌ಗಳು ಬಂದಿವೆ.ಈಗ ಅಮೆರಿಕದ ಸ್ಯಾನ್ … Continued