ಧಾರವಾಡ: ಟ್ಯಾಂಕರ್​ನಿಂದ ಅನಿಲ ಸೋರಿಕೆ: ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಬಂದ್‌, ವಿದ್ಯುತ್ ಸಂಪೂರ್ಣ ಕಡಿತ

ಧಾರವಾಡ: ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಎಲ್​ಪಿಜಿ ಟ್ಯಾಂಕರಿನಿಂದ ಗ್ಯಾಸ್ ಸೋರಿಕೆ ಆಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪೂರ್ಣ ಕಡಿತಗೊಳಿಸಿದ್ದಲ್ಲದೆ ಜನರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿದ್ದ ಗ್ಯಾಸ್‌ ಟ್ಯಾಂಕರ್‌ ಬೇಲೂರು ಬಳಿಯ ಅಂಡರ್​ಪಾಸ್​ನಲ್ಲಿ ಸಿಲುಕಿಕೊಂಡ ನಂತರ ಗ್ಯಾಸ್‌ ಸೋರಿಕೆಯ ಭೀತಿ ಎದುರಾಗಿದೆ. ಲಾರಿಯನ್ನು ಹೈಕೋರ್ಟ್ ಬಳಿಯ … Continued

ಧರ್ಮನಿಂದೆಯ ಆರೋಪ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಐದು ಚರ್ಚ್‌ಗಳು ಧ್ವಂಸ-ಬೆಂಕಿ ಹಚ್ಚಿದ ಜನರ ಗುಂಪು: ಕ್ರೈಸ್ತರ ವಸತಿಗಳ ಮೇಲೆ ದಾಳಿ

ಲಾಹೋರ್ : ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಲಾಗಿದೆ ಎಂಬ ಆರೋಪದ ಮೇಲೆ ಬುಧವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕೋಪಗೊಂಡ ಜನಸಮೂಹವು ಕನಿಷ್ಠ ಐದು ಚರ್ಚ್‌ಗಳನ್ನು ಧ್ವಂಸಗೊಳಿಸಿತು. ಕ್ರಿಶ್ಚಿಯನ್ ವ್ಯಕ್ತಿ ಮತ್ತು ಅವರ ಸಹೋದರಿ ಕುರಾನ್ ಅನ್ನು ಅಪವಿತ್ರಗೊಳಿಸಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿತು ಎಂಬ ಸುದ್ದಿ ಹರಡಿದ ನಂತರ ಈ ಘಟನೆಗಳು ನಡೆದಿವೆ ಎಂದು ಪೊಲೀಸರು … Continued

ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆ : 10,000 ಹೊಸ ಇ-ಬಸ್‌ಗಳಿಗಾಗಿ 57,613 ಕೋಟಿ ರೂ.ಗಳಿಗೆ ಸಂಪುಟ ಅನುಮೋದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಗೆ ಅನುಮೋದನೆ ನೀಡಿದೆ. ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಗೆ ಒಟ್ಟು 57,613 ಕೋಟಿ ರೂ. ಈ ಹಣಕಾಸು ನಿಬಂಧನೆಯಲ್ಲಿ ಕೇಂದ್ರ ಸರ್ಕಾರವು 20,000 … Continued

ತಿರುಪತಿ ಬೆನ್ನಲ್ಲೇ ಈಗ ಶ್ರೀಶೈಲಂನಲ್ಲೂ ಚಿರತೆ ಭೀತಿ

ಕರ್ನೂಲ್: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಚಿರತೆ ದಾಳಿಗೆ ಬಾಲಕಿ ಬಲಿಯಾದ ಬೆನ್ನಲ್ಲೇ ಈಗ ಆಂಧ್ರ ಪ್ರದೇಶದ ಮತ್ತೊಂದು ಯಾತ್ರಾತಾಣ ಶ್ರೀಶೈಲಂನಲ್ಲೂ ಚಿರತೆಯ ಆತಂಕ ಎದುರಾಗಿದೆ. ಶ್ರೀಶೈಲಂ ಹೊರವರ್ತುಲ ರಸ್ತೆಯ ಬಳಿ ಮಂಗಳವಾರ ಮುಖ್ಯ ದೇವಸ್ಥಾನದ ಸಮೀಪವಿರುವ ಕಾಟೇಜ್‌ಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದ್ದು, ನಗರದಲ್ಲಿ ಭೀತಿ ಆವರಿಸಿದೆ. ಸೋಮವಾರ ರಾತ್ರಿ ಸ್ಫೂರ್ತಿ ಕೇಂದ್ರದ ಸುತ್ತಮುತ್ತಲ … Continued

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಪುಟದ ಒಪ್ಪಿಗೆ: ಕುಶಲಕರ್ಮಿಗಳಿಗೆ 5% ಬಡ್ಡಿಯಲ್ಲಿ ಸಬ್ಸಿಡಿ ಸಾಲ, 30 ಲಕ್ಷ ಕುಟುಂಬ ಪ್ರಯೋಜನ ಪಡೆಯುವ ನಿರೀಕ್ಷೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ ಒಂದು ದಿನದ ನಂತರ, ಸಾಂಪ್ರದಾಯಿಕ ಕೌಶಲ್ಯಗಳಲ್ಲಿ ತೊಡಗಿರುವ ಜನರಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ಯೋಜನೆಯನ್ನು ಕೇಂದ್ರವು ಅನುಮೋದಿಸಿದೆ. ಈ ವಿಷಯ ಬುಧವಾರ ಪ್ರಕಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಇಂದು, ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಾಂಪ್ರದಾಯಿಕ … Continued

ಶಕ್ತಿ ಯೋಜನೆ ಸ್ಥಗಿತದ ಊಹಾಪೋಹ: ಸ್ಪಷ್ಟನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಮುಂದುವರಿಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ರದ್ದತಿ ಬಗ್ಗೆ ನಕಲಿ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಮಂಡ್ಯದಲ್ಲಿ ನಡೆದ … Continued

ಭಗವಾನ್‌ ಶಿವನನ್ನು ಮೆಚ್ಚಿಸಲು ಮರ ಕಡಿಯುವ ಯಂತ್ರ ಬಳಸಿ ತಲೆಯನ್ನೇ ಕತ್ತರಿಸಿಕೊಂಡು ಅರ್ಪಿಸಲು ಮುಂದಾದ ಭಕ್ತ..!

ಲಕ್ನೋ: ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ 28 ವರ್ಷದ ವ್ಯಕ್ತಿಯೊಬ್ಬರು ಶಿವನಿಗೆ ನೈವೇದ್ಯವಾಗಿ ಅರ್ಪಿಸಲು ಮರ ಕಡಿಯುವ ಯಂತ್ರವನ್ನು ಬಳಸಿ ತನ್ನ ತಲೆಯನ್ನು ತಾನೇ ಕತ್ತರಿಸಿಕೊಳ್ಳಲು ಯತ್ನಿಸಿ ತೀವ್ರವಾಗಿ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ಸದರ್ ಕೊತ್ವಾಲಿ ವ್ಯಾಪ್ತಿಯ ರಘುನಾಥಪುರ ಗ್ರಾಮದ ನಿವಾಸಿ … Continued

ಈಗ ಸೂರ್ಯನತ್ತ ʼಇಸ್ರೋʼ ದೃಷ್ಟಿ: ಸೂರ್ಯನತ್ತ ಕಳುಹಿಸುವ ಆದಿತ್ಯ-ಎಲ್‌1 ಉಪಗ್ರಹದ ಮೊದಲ ಚಿತ್ರ ಬಿಡುಗಡೆ :ಆದಿತ್ಯ-L1 ಬಗ್ಗೆ ತಿಳಿದುಕೊಳ್ಳಬೇಕಾದದ್ದು…

ನವದೆಹಲಿ: ಚಂದ್ರನ ಮೇಲೆ ದೃಷ್ಟಿ ಇಟ್ಟಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಸೂರ್ಯನತ್ತ ಮುಖ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋ ಕಳುಹಿಸಲಿರುವ ತನ್ನ ಉಪಗ್ರಹದ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ, ಇದು ಸೂರ್ಯನ ಕಡೆಗೆ ಭಾರತದ ಮೊದಲ ಯಾನವಾಗಲಿದೆ. ಇಸ್ರೋ ಸೂರ್ಯನನ್ನು ಅಧ್ಯಯನ ಮಾಡಲು ಕಳುಹಿಸಲು ಉದ್ದೇಶಿಸಿರುವ ಉಪಗ್ರಹದ ಮೊದಲ ಚಿತ್ರಗಳನ್ನು … Continued

ಭಟ್ಕಳ : ಚಾಕೊಲೇಟ್​​ ಎಂದು ಭಾವಿಸಿ ಪ್ಯಾಂಟ್ ಬಟನ್​ ನುಂಗಿದ ಹಸುಳೆ

ಕಾರವಾರ: ಎರಡು ತಿಂಗಳ ಮಗುವೊಂದು ಪ್ಯಾಂಟ್‌ ಬಟನ್‌ ನುಂಗಿ ಅಸ್ವಸ್ಥಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಭಟ್ಕಳ ನಗರದ ರಂಗೀಕಟ್ಟೆ ಬಳಿ ವಾಸವಿರುವ ಬಿಹಾರ ಮೂಲದ, ಕಳೆದ 12-13 ವರ್ಷಗಳಿಂದ ಭಟ್ಕಳ ರಂಗೀಕಟ್ಟೆಯಲ್ಲಿ ವಾಸಿಸುತ್ತಿರುವ ಬಿಹಾರ ಮೂಲದ ಕಮಲ ಕಿಶೋರ ಅವರ ಪುತ್ರಿ ಎರಡು ತಿಂಗ ಅಮೃತ ಬಟನ್​ ನುಂಗಿದ್ದ … Continued

ಹೈಟೆಕ್ ಹನಿಟ್ರ್ಯಾಪ್ ಪ್ರಕರಣ: ಮುಂಬೈ ಮಾಡೆಲ್ ಬಿಕಿನಿ ಸುಂದರಿಯ ಬಂಧನ

ಬೆಂಗಳೂರು : ಹನಿಟ್ರ್ಯಾಪ್​ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಸುಲಿಗೆ ಮಾಡುತ್ತಿದ್ದ ಮುಂಬೈ ಮೂಲದ ಮಾಡೆಲ್​ ಒಬ್ಬಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ನೇಹಾ ಅಲಿಯಾಸ್​ ಮೆಹರ್ ಎಂದು ಗುರುತಿಸಲಾಗಿದೆ. ಈಕೆಯನ್ನು ಮುಂಬೈನಲ್ಲಿ ಬಂಧಿಸಿರುವ ಪುಟ್ಟೇನಹಳ್ಳಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ … Continued