ಬೆಂಗಳೂರು: ಯುವ ವಿಜ್ಞಾನಿಯ ಕಾರುಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು ; ಪ್ರಕರಣ ದಾಖಲು

ಬೆಂಗಳೂರು: ಬೆಂಗಳೂರಿನಲ್ಲಿ ಯುವ ವಿಜ್ಞಾನಿಯೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರಿಗೆ ಕಲ್ಲೆಸೆದು ಹಲ್ಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜ್ಞಾನಿ ಅಶುತೋಷ್ ಸಿಂಗ್ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ವತಮ್ಮ ಕ್ವಿಡ್ ಕಾರಿನಲ್ಲಿ ರಾವತ್ತನಹಳ್ಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದಾಗ ಬೆಂಗಳೂರಿನ ರಾವತ್ತನಹಳ್ಳಿ … Continued

ಚಂದ್ರಯಾನ 3 : ಚಂದ್ರನ ದಕ್ಷಿಣ ಧ್ರುವದಲ್ಲಿ ಆಮ್ಲಜನಕ, ಗಂಧಕ ಪತ್ತೆ ಮಾಡಿದ ಪ್ರಗ್ಯಾನ್ ರೋವರ್ ; ಜಲಜನಕ ಪತ್ತೆಗೆ ಹುಡುಕಾಟ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಚಂದ್ರಯಾನ್-3ರ ಪ್ರಗ್ಯಾನ್ ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣ‌ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಧಾತುರೂಪದ ಸಂಯೋಜನೆಯ ಮೇಲೆ ತನ್ನ ಮೊದಲ ಇನ್-ಸಿಟು ಪ್ರಯೋಗಗಳನ್ನು ನಡೆಸಿದೆ ಎಂದು ಪ್ರಕಟಿಸಿದೆ. ಮೊದಲನೆಯದಾಗಿ, ಇನ್-ಸಿಟು ಮಾಪನಗಳು ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ (ಗಂಧಕ) ಇರುವಿಕೆಯನ್ನು ದೃಢಪಡಿಸಿದೆ. ಚಂದ್ರನ ದಕ್ಷಿಣ … Continued

ಕುಮಟಾ: ಹೆಗಡೆಯಲ್ಲಿ ಅತಿ ದೊಡ್ಡ ಬಿಳಿ ಹೆಬ್ಬಾವು ಪ್ರತ್ಯಕ್ಷ – ರಕ್ಷಣೆ

ಕುಮಟಾ : ಸಮೀಪದ ಹೆಗಡೆ ಗ್ರಾಮದ ಗಾಂಧಿ ನಗರದ ಮನೆಯಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ರಕ್ಷಣೆ ಮಾಡಲಾಗಿದೆ. ಆರ್ ಟಿ ಒ ಕಚೇರಿ ಹೋಮ್ ಗಾರ್ಡ್ ಗಣೇಶ ಮುಕ್ರಿ ಅವರ ಮನೆಯ ಅಂಗಳದಲ್ಲಿ ಕಾಣಿಸಕೊಂಡ ಹೆಬ್ಬಾವನ್ನು ಪವನ್ ನಾಯ್ಕ ರಕ್ಷಣೆ ಮಾಡಿದ್ದಾರೆ. ಗಣೇಶ ಮುಕ್ರಿ ಅವರು ಉರಗ ತಜ್ಞ ಪವನ್‌ ನಾಯ್ಕ ಅವರಿಗೆ ಮಾಹಿತಿ … Continued

ಅಡುಗೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಭಾರೀ ಇಳಿಕೆ ಮಾಡಿದ ಕೇಂದ್ರ

ನವದೆಹಲಿ: ಮಂಗಳವಾರ ಕೇಂದ್ರ ಸಚಿವ ಸಂಪುಟವು 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹200 ಕಡಿಮೆ ಮಾಡುವುದಾಗಿ ಪ್ರಕಟಿಸಿದೆ. ಪ್ರಸ್ತುತ, ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ₹1053, ಮುಂಬೈನಲ್ಲಿ ₹1052.50, ಚೆನ್ನೈನಲ್ಲಿ ₹1068.50 ಮತ್ತು ಕೋಲ್ಕತ್ತಾದಲ್ಲಿ ₹1079 ಇದೆ. ತೈಲ ಕಂಪನಿಗಳು ಜುಲೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹50 ಹೆಚ್ಚಿಸಿದ್ದವು. ಈ ಹಿಂದೆ … Continued

ಮೂವರು ಐಪಿಎಸ್‌ ʼಅಧಿಕಾರಿ’ಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಡೈರೆಕ್ಟರೇಟ್ ಆಫ್‌ ಸಿವಿಲ್ ರೈಟ್ಸ್ ಎನ್ಫೋರ್ಸಮೆಂಟ್ ಎಸ್ಪಿಯಾಗಿದ್ದ ಜಿ.ಸಂಗೀತಾ ಅವರನ್ನು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಲೋಕೇಶ ಭರಮಪ್ಪ ಜಗಲಾಸರ ಅವರನ್ನು ಮೈಸೂರಿನ ಪೊಲೀಸ್ ಅಕಾಡೆಮಿಯ … Continued

ಕರ್ನಾಟಕಕ್ಕೆ ಶಾಕ್..: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ

ನವದೆಹಲಿ : ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯು ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಸೋಮವಾರ ನಡೆದ ಸಭೆಯ ನಂತರ ಈ ಸೂಚನೆ ನೀಡಲಾಗಿದೆ. ಮುಂದಿನ 15 ದಿನ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನದಿ … Continued

ವೀಡಿಯೊ : ಅತ್ಯಾಚಾರ ಆರೋಪಿ ಜೈಲಿನಿಂದ ತಪ್ಪಿಸಿಕೊಳ್ಳಲು 40 ಅಡಿ ಗೋಡೆ ಜಿಗಿದ ವೀಡಿಯೊ ವೈರಲ್ ; ನಂತರ ಆರೋಪಿಯ ಬಂಧನ

ಬೆಂಗಳೂರು: ಅತ್ಯಾಚಾರ ಆರೋಪಿಯೊಬ್ಬ 40 ಅಡಿ ಎತ್ತರದ ಜೈಲಿನ ಗೋಡೆ ಹಾರಿ ಪರಾರಿಯಾಗಿರುವ ಘಟನೆ ದಾವಣೆಗೆರೆ ಉಪಕಾರಾಗೃಹದಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಪೊಲೀಸರು ಆರೋಪಿಯನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿದ್ದಾರೆ. ದಾವಣಗೆರೆ ಉಪ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ವಸಂತ ಎಂಬ ಆಟೋ … Continued

ಚಂದ್ರಯಾನ-೩ : ಎದುರಾದ ಬೃಹತ್ ಕುಳಿ-ತನ್ನ ದಾರಿ ಬದಲಿಸಿಕೊಂಡು ಮುಂದೆ ಸಾಗಿದ ಪ್ರಗ್ಯಾನ್ ರೋವರ್

ನವದೆಹಲಿ: ಚಂದ್ರನ ಮೇಲ್ಮೈಯಲ್ಲಿ ನಾಲ್ಕು ಮೀಟರ್ ಕುಳಿ ಎದುರಿಗೆ ಕಂಡ ನಂತರ ಭಾರತದ ಚಂದ್ಯಾನ-೩ರ ಪ್ರಗ್ಯಾನ್ ರೋವರ್ ತನ್ನ ದಾರಿ ಬಸಲಿಸಿ ಮುಂದೆ ಸಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೋಮವಾರ ಮಧ್ಯಾಹ್ನ ಟ್ವೀಟ್ ಮಾಡಿ, ರೋವರ್ ಮೂರು ಮೀಟರ್ ದೂರದಲ್ಲಿ ಕುಳಿಯನ್ನು ಗುರುತಿಸಿದೆ ಮತ್ತು ಸುರಕ್ಷಿತ ಮಾರ್ಗಕ್ಕೆ ಹೋಗುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದೆ. ಆರು-ಚಕ್ರಗಳ, … Continued

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ಜಾವೆಲಿನ್ ಚಿನ್ನದ ಪದಕ ಗೆದ್ದ ನೀರಜ ಚೋಪ್ರಾ

2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಅವರು ಚಿನ್ನವನ್ನು ಗೆದ್ದಿದ್ದಾರೆ. ಜಾಗತಿಕ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನೀರಜ್ ಚೋಪ್ರಾ ಈಗ ಒಲಿಂಪಿಕ್ ಚಿನ್ನದ ಪದಕ, ಡೈಮಂಡ್ ಟ್ರೋಫಿ ಮತ್ತು ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕ ಸೇರಿದಂತೆ ಜಾಗತಿಕ ಪದಕಗಳ … Continued

ತಾಳಿ ಕಟ್ಟುವಾಗ ಮದುವೆ ನಿರಾಕರಿಸಿದ ಯುವತಿ

ತುಮಕೂರು : ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಭಾನುವಾರ ತಾಳಿ ಕಟ್ಟುವ ಸಮಯದಲ್ಲಿ ವಧುವು ಮದುವೆ ನಿರಾಕರಿಸಿ, ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಹೇಳಿ ಹಸಮಣೆಯಿಂದ ಎದ್ದು ಹೋದ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಯುವಕ ಮತ್ತು ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮದ ಯುವತಿ ಮದುವೆ ಭಾನುವಾರ ಕೋಳಾಲ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. … Continued