ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ಗಾಜಾ ಪಟ್ಟಿಯಲ್ಲಿ ಹಮಾಸ್ ಭಯೋತ್ಪಾದಕ ಗುಂಪಿನ ಹಿರಿಯ ಕಮಾಂಡ್ ನನ್ನು ರಾತ್ರಿಯ ವೈಮಾನಿಕ ದಾಳಿಯಲ್ಲಿ ಕೊಂದಿರುವುದಾಗಿ ಹೇಳಿದೆ ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇಸ್ರೇಲ್ ರಕ್ಷಣಾ ಪಡೆಗಳ ಪ್ರಕಾರ, ವೈಮಾನಿಕ ದಾಳಿಯ ವೇಳೆ ಹಮಾಸ್‌ನ ವೈಮಾನಿಕ ದಾಳಿಯ ಮುಖ್ಯಸ್ಥ ಮುರಾದ್ ಅಬು ಮುರಾದ್‌ನನ್ನು ಕೊಲ್ಲಲ್ಪಟ್ಟಿದ್ದಾನೆ. ಹಮಾಸ್ ಭಯೋತ್ಪಾದಕ ಗುಂಪು ತನ್ನ ವೈಮಾನಿಕ ಚಟುವಟಿಕೆಯ ನಿರ್ವಹಿಸುತ್ತಿದ್ದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
ಅಬು ಮುರಾದ್ ಕಳೆದ ವಾರಾಂತ್ಯದಲ್ಲಿ “ಇಸ್ರೇಲಿನಲ್ಲಿ ನಡೆದ ಹಮಾಸ್ ಹತ್ಯಾಕಾಂಡದ ಸಮಯದಲ್ಲಿ ಭಯೋತ್ಪಾದಕರನ್ನು ನಿರ್ದೇಶಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದ, ಇದರಲ್ಲಿ ಹ್ಯಾಂಗ್ ಗ್ಲೈಡರ್‌ಗಳ ಮೂಲಕ ಹಾರಿಕೊಂಡು ಬಂದು ಇಸ್ರೇಲ್‌ಗೆ ಪ್ರವೇಶಿಸಿದ ದಾಳಿಕೋರರು ಸೇರಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ಹೇಳಿದೆ.
ಅಕ್ಟೋಬರ್ 7 ರಂದು ಇಸ್ರೇಲ್‌ಗೆ ಒಳನುಸುಳುವಿಕೆಗೆ ಕಾರಣವಾದ ಹಮಾಸ್‌ನ ಕಮಾಂಡೋ ಪಡೆಗಳಿಗೆ ಸೇರಿದ ಡಜನ್ಗಟ್ಟಲೆ ಸೈಟ್‌ಗಳನ್ನು ರಾತ್ರಿಯ ಪ್ರತ್ಯೇಕ ದಾಳಿಗಳಲ್ಲಿ ನಾಶ ಮಾಡಲಾಗಿದೆ ಎಂದು IDF ಹೇಳಿದೆ.
ಹಮಾಸ್ ಕಳೆದ ಶನಿವಾರ ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿ, ನೂರಾರು ಜನರನ್ನು ಕೊಂದಿತು, ಇದು ದಶಕಗಳಲ್ಲಿ ಸಂಘರ್ಷದ ಅತಿದೊಡ್ಡ ಉಲ್ಬಣವಾಗಿದೆ. ಹಮಾಸ್ ದಾಳಿಯು ಇಸ್ರೇಲ್‌ನಲ್ಲಿ 1,300 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಮತ್ತು ಇದಕ್ಕೆ ಪ್ರತೀಕಾರವಾಗಿ ಇಸ್ರೇಲಿ ವೈಮಾನಿಕ ದಾಳಿಯು ಗಾಜಾದಲ್ಲಿ 1,530 ಕ್ಕೂ ಹೆಚ್ಚು ಜನರನ್ನು ಗಾಜಾದಲ್ಲಿ ಕೊಂದಿದೆ. ಇಸ್ರೇಲ್ ಗಡಿಯುದ್ದಕ್ಕೂ ಸುಮಾರು 1,500 ಹಮಾಸ್ ಉಗ್ರಗಾಮಿಗಳು ಕೊಲ್ಲಲ್ಪಟ್ಟರು ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಇಸ್ರೇಲ್ ತನ್ನ ಪ್ರಮುಖ ಮಿಲಿಟರಿ ಚಟುವಟಿಕೆಗಳನ್ನು ಗಾಜಾ ಪಟ್ಟಿಯ ಉತ್ತರದಲ್ಲಿರುವ ಗಾಜಾ ನಗರದ ಮೇಲೆ ಕೇಂದ್ರೀಕರಿಸುತ್ತಿದೆ. ಯಾಕೆಂದರೆ ಅಲ್ಲಿ ಹಮಾಸ್ ಹೆಚ್ಚಿನ ಕಮಾಂಡರ್‌ಗಳು ಇದ್ದಾರೆ ಎಂದು ಇಸ್ರೇಲ್ ಬಲವಾಗಿ ನಂಬಿದೆ.
ಅರೇಬಿಕ್ ಸಂದೇಶದಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು ಉತ್ತರ ಗಾಜಾ ಪಟ್ಟಿಯ ನಿವಾಸಿಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಸ್ಥಳಾಂತರ ಕಾರಿಡಾರ್‌ಗಳನ್ನು ಬಳಸಿಕೊಂಡು ಗಾಜಾ ದಕ್ಷಿಣ ಭಾಗಕ್ಕೆ ತೆರಳಿ ಎಂದು ಸೂಚನೆ ನೀಡಿದೆ. “ನಿಮ್ಮ ಬಗ್ಗೆ ಮತ್ತು ನಿಮ್ಮ ಪ್ರೀತಿಪಾತ್ರರ ಬಗ್ಗೆ ನೀವು ಕಾಳಜಿ ಇದ್ದರೆ, ನಮ್ಮ ಸೂಚನೆಯಂತೆ ದಕ್ಷಿಣಕ್ಕೆ ಹೋಗಿ” ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ”
ಕಳೆದ ವಾರಾಂತ್ಯದ ದಾಳಿಯಲ್ಲಿ 1,300 ಮಂದಿ ಇಸ್ರೇಲ್ ಜನರನ್ನು ಕೊಂದ ಹಮಾಸ್ ವಿರುದ್ಧ “ಅಭೂತಪೂರ್ವ” ದಾಳಿಗೆ ಇಸ್ರೇಲ್ ಸರ್ಕಾರ ಸಿದ್ಧವಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಪ್ರತೀಕಾರದ ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿ 1,500 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಲೆಬನಾನ್‌ನಿಂದ ಗಡಿ ದಾಟಲು ಯತ್ನಿಸುತ್ತಿದ್ದ ಹಲವಾರು “ಭಯೋತ್ಪಾದಕರನ್ನು” ಇಸ್ರೇಲಿ ಪಡೆಗಳು ಶನಿವಾರ ಕೊಂದಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. “ಲೆಬನಾನ್‌ನಿಂದ ಇಸ್ರೇಲಿ ಭೂಪ್ರದೇಶಕ್ಕೆ ನುಸುಳಲು ಪ್ರಯತ್ನಿಸಿದ ಭಯೋತ್ಪಾದಕ ಘಟಕವನ್ನು ಗುರುತಿಸಿದೆ” ಎಂದು ಇಸ್ರೇಲ್ ಮಿಲಿಟರಿ ವಕ್ತಾರರು ಹೇಳಿದರು, ಡ್ರೋನ್ ದಾಳಿಯು “ಭಯೋತ್ಪಾದಕ ಘಟಕವನ್ನು ಗುರಿಯಾಗಿಸಿ ಹಲವಾರು ಭಯೋತ್ಪಾದಕರನ್ನು ಕೊಂದಿತು” ಎಂದು ಹೇಳಿದರು.
ಹಮಾಸ್ ಗುಂಪು 9/11 ದಾಳಿಯ ಹಿಂದಿನ ಭಯೋತ್ಪಾದಕ ಅಲ್-ಖೈದಾಕ್ಕಿಂತ ಕೆಟ್ಟದ್ದಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ, ಅಮೆರಿಕವು ಇಸ್ರೇಲ್ ಜೊತೆ ನಿಂತಿದೆ ಎಂದು ಅವರು ಪುನರುಚ್ಚರಿಸಿದ್ದಾರೆ. ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ದಾಳಿಯಲ್ಲಿ ಕನಿಷ್ಠ 27 ಅಮೆರಿಕ ನಾಗರಿಕರು ಮೃತಪಟ್ಟಿದ್ದಾರೆ ಮತ್ತು 14 ಮಂದಿ ಪತ್ತೆಯಾಗಿಲ್ಲ.
ಶುಕ್ರವಾರ ದಕ್ಷಿಣ ಲೆಬನಾನ್‌ನ ಗಡಿಯಲ್ಲಿ ನಡೆದ ಘರ್ಷಣೆಗಳನ್ನು ವರದಿ ಮಾಡುವ ಅಂತರರಾಷ್ಟ್ರೀಯ ಪತ್ರಕರ್ತರ ಸಭೆಯ ಮೇಲೆ ಇಸ್ರೇಲಿ ಶೆಲ್ ಬಿದ್ದ ನಂತರ ಪತ್ರಕರ್ತರೊಬ್ಬರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ತನ್ನ ವೀಡಿಯೋಗ್ರಾಫರ್ ಇಸ್ಸಾಮ್ ಅಬ್ದುಲ್ಲಾ ಕೊಲ್ಲಲ್ಪಟ್ಟಿದ್ದಾನೆ ಎಂದು ರಾಯಿಟರ್ಸ್ ಖಚಿತಪಡಿಸಿದೆ. ಏತನ್ಮಧ್ಯೆ, ಟೆಲ್ ಅವಿವ್‌ನಲ್ಲಿ ಇಸ್ರೇಲಿ ಪೊಲೀಸರು ತಡೆದ ನಂತರ ತನ್ನ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಯಿತು ಮತ್ತು ಬಂದೂಕು ತೋರಿಸಿ ಬಂಧಿಸಲಾಯಿತು ಎಂದು ಬಿಬಿಸಿ ಹೇಳಿದೆ.
ಹಮಾಸ್ ದಕ್ಷಿಣ ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿಯ ಸಮಯದಲ್ಲಿ ಒತ್ತೆಯಾಳುಗಳಾಗಿದ್ದ ಇಸ್ರೇಲಿ ಮಕ್ಕಳ ತುಣುಕನ್ನು ಬಿಡುಗಡೆ ಮಾಡಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಹಮಾಸ್ ಗುಂಪು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.
ಫ್ರಾನ್ಸ್ ನಲ್ಲಿ ಇಸ್ಲಾಮಿಸ್ಟ್ ದಾಳಿಯಲ್ಲಿ ಶಿಕ್ಷಕನೊಬ್ಬನನ್ನು ಇರಿದು ಕೊಂದ ಒಂದು ದಿನದ ನಂತರ, ಹೆಚ್ಚಿನ ಭದ್ರತಾ ಗಸ್ತುಗಾಗಿ 7,000 ಸೈನಿಕರನ್ನು ಸಜ್ಜುಗೊಳಿಸುವಂತೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆದೇಶಿಸಿದ್ದಾರೆ ಎಂದು ಅವರ ಕಚೇರಿ ಶನಿವಾರ ತಿಳಿಸಿದೆ. ಉತ್ತರ ಫ್ರಾನ್ಸ್‌ನ ಅರಾಸ್ ನಗರದ ಶಾಲೆಯೊಂದರ ದಾಳಿಯಲ್ಲಿ 20 ವರ್ಷದ ವ್ಯಕ್ತಿಯೊಬ್ಬ ಶಿಕ್ಷಕನನ್ನು ಮಾರಣಾಂತಿಕವಾಗಿ ಇರಿದ ಮತ್ತು ಇತರ ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದ ನಂತರ ಫ್ರಾನ್ಸ್ ನಲ್ಲಿ ಶುಕ್ರವಾರ ಹೆಚ್ಚಿನ ಭದ್ರತಾ ಎಚ್ಚರಿಕೆಯನ್ನು ನೀಡಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ