ಮುಂಬೈ: ಮುಂಬೈ ಸಮೀಪದ ವಸಾಯಿ ಎಂಬಲ್ಲಿ ಕಾರೊಂದು ಢಿಕ್ಕಿ ಹೊಡೆದು 6 ವರ್ಷದ ಬಾಲಕ ಗಾಯಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವೀಡಿಯೊ ಕ್ಲಿಪ್ ಒಂದರಲ್ಲಿ ಕಾರು ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸುತ್ತದೆ. ಆತನನ್ನು ಸ್ವಲ್ಪದೂರ ಎಳೆದೊಯ್ದ ನಂತರ ಆತ ಕಾರಿನಿಂದ ಅಡಿಯಿಂದ ಹೊರಬೀಳುವುದು ಕಾಣುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಸಾಯಿ ಪೂರ್ವದ ವಾಲಿವ್‌ನಲ್ಲಿರುವ ನೈಪಾಡಾ ಗ್ರಾಮದ ದೃಶ್ಯಾವಳಿಗಳು ಬುಧವಾರದಂದು ಗೇಟ್ ಮತ್ತು ರಾಶಿಯ ಕಸದ ಬಳಿ ಕಾರು ನಿಂತಿತ್ತು. ವ್ಯಕ್ತಿಯೊಬ್ಬ ಕಾರು ಏರಿದ ನಂತರ ಕಾರು ಹೊರಡಲು ಸಿದ್ಧವಾಗುತ್ತದೆ. ಆ ವೇಳೆ ಪುಟ್ಟ ಹುಡುಗನೊಬ್ಬ ಕಾರಿನ ಮುಂದೆ ಓಡುತ್ತ ಕಸದ ರಾಶಿಯೊಂದರ ಬಳಿ ಆಟವಾಡಲು ಕೂತುಕೊಳ್ಳುತ್ತಾನೆ. ಕೆಲವು ಸೆಕೆಂಡುಗಳ ನಂತರ, ಚಾಲಕನು ಕಾರನ್ನು ಸ್ಟಾರ್ಟ್ ಮಾಡಿದ ನಂತರ ಅದು ಮುಂದಕ್ಕೆ ಚಲಿಸುತ್ತದೆ. ಅದು ಮುಂದೆ ಬಂದಾಗ ಹುಡುಗನಿಗೆ ಡಿಕ್ಕಿ ಹೊಡೆದ ನಂತರ ಆತ ಕಾರಿನ ಕೆಳಗೆ ಬೀಳುತ್ತಾನೆ. ನಂತರ ಹಿಂಬದಿಯ ಚಕ್ರವು ಆರು ವರ್ಷದ ಮಗುವಿನ ಮೇಲೆ ಹೋಗುತ್ತದೆ
ಆದರೆ ಅದರಿಂದ ಪಾರಾದ ಬಾಲಕ ಎದ್ದು ಇತರ ಇಬ್ಬರು ಮಕ್ಕಳ ಕಡೆಗೆ ದಿಗ್ಭ್ರಮೆಯಿಂದ ಬಾಲಕ ನಡೆದುಕೊಂಡು ಬಂದಿದ್ದಾನೆ. ಆದರೆ ಕಾರನ್ನು ನಿಲ್ಲಿಸದೆಯೇ ಚಾಲಕ ಚಲಾಯಿಸಿಕೊಂಡು ಹೋಗಿದ್ದಾನೆ.
ಆದರೆ ಸ್ವಲ್ಪಸಮಯದ ನಂತರ ಮಗು ನಡೆಯಲು ಕಷ್ಟಪಡುವುದು ಕಂಡುಬಂದಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ