ವೀಡಿಯೊ..| ಹಿಂದಿ ಸಿನೆಮಾದ ಕುಛ್‌ ಕುಛ್‌ ಹೋತಾ ಹೈ ಹಾಡನ್ನು ವಾದ್ಯ ಸಮೇತ ಹಾಡಿ ಸಂಭ್ರಮಿಸಿದ ಇಂಡೋನೇಷ್ಯಾದ ಅಧಿಕಾರಿಗಳ ನಿಯೋಗ…!

ನವದೆಹಲಿ: ಇಂದು (ಜನವರಿ 26) ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮಾಚರಣೆ ನಡೆದಿದೆ. ಈ ಬಾರಿ ಗಣರಾಜ್ಯೋತ್ಸವ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋ ಸುಬಿಯಂತೋ(Prabowo Subianto) ಆಗಮಿಸಿದ್ದಾರೆ. ಪ್ರಬೋ ಸುಬಿಯಂತೋ ಮತ್ತು ಅವರ ಜೊತೆಗಿದ್ದ ಅಧಿಕಾರಿಗಳ ನಿಯೋಗಕ್ಕೆ ರಾಷ್ಟ್ರಪತಿ ಭವನದಲ್ಲಿ ಶನಿವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅಧಿಕಾರಿಗಳ ತಂಡ ಬಾಲಿವುಡ್‌ನ ಜನಪ್ರಿಯ ಸಿನಿಮಾದ ಹಾಡೊಂದನ್ನು ಹಾಡಿದ್ದು, ಇದರ ವೀಡಿಯೊ ಈಗ ಭಾರಿ ವೈರಲ್‌ ಆಗಿದೆ.

ಕರಣ ಜೋಹರ್‌ ನಿರ್ದೇಶನದ 1998ರಲ್ಲಿ ಬಿಡುಗಡೆಯಾದ ಕುಛ್‌ ಕುಛ್‌ ಹೋತಾ ಹೇ ಸಿನಿಮಾದ ಹಾಡೊಂದನ್ನು ಇಂಡೋನೇಷ್ಯಾದ ಅಧಿಕಾರಿಗಳ ನಿಯೋಗ ವಾದ್ಯಗಳೊಂದಿಗೆ ಹಾಡಿ ಸಂಭ್ರಮಿಸಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕರಾದ ಉದಿತ್‌ ನಾರಾಯಣ್‌ ಮತ್ತು ಅಲ್ಕಾ ಯಾಗ್ನಿಕ್‌ ಹಾಡಿರುವ ಕುಛ್‌ ಕುಛ್‌ ಹೋತಾ ಹೈ ಹಾಡನ್ನು ಹಾಡಿದ್ದಾರೆ.
ಈ ವೀಡಿಯೊದಲ್ಲಿ, ನಿಯೋಗದವರು ಸೂಟ್‌ ಮತ್ತು ಸಾಂಪ್ರದಾಯಿಕ ಇಂಡೋನೇಷ್ಯಾದ ಶಿರಸ್ತ್ರಾಣವಾದ ಸಾಂಗ್‌ಕಾಕ್ ಅನ್ನು ಧರಿಸಿ, ಹಾಡನ್ನು ಹೇಳುತ್ತರುವದನ್ನು ಕಾಣಬಹುದಾಗಿದೆ.

ಶನಿವಾರ ಭಾರತಕ್ಕೆ ಆಗಮಿಸಿರುವ ಸುಬಿಯಾಂಟೊ ಮತ್ತು ಅವರ ನಿಯೋಗ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿರ್ಣಾಯಕ ಚರ್ಚೆಗಳನ್ನು ನಡೆಸಿದರು. ಮಾತುಕತೆಗಳು ಎರಡು ರಾಷ್ಟ್ರಗಳ ನಡುವಿನ ರಾಜಕೀಯ, ವ್ಯಾಪರ, ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಡೆದಿದೆ.

ಪ್ರಮುಖ ಸುದ್ದಿ :-   ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement