ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿದ 2024 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (Corruption Perceptions Index) ಪ್ರಕಾರ ಭಾರತವು ವಿಶ್ವದ 100 ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಈ ವರ್ಷ, ಭಾರತವು 180 ದೇಶಗಳಲ್ಲಿ 96 ನೇ ಶ್ರೇಯಾಂಕದಲ್ಲಿದೆ.
, ಅದರ 2023 ರ ಶ್ರೇಯಾಂಕದಿಂದ ಮೂರು ಸ್ಥಾನಗಳಷ್ಟು ಕುಸಿದಿದೆ. ಭಾರತವು ಇತರ ಎರಡು ರಾಷ್ಟ್ರಗಳಾದ ಗ್ಯಾಂಬಿಯಾ ಮತ್ತು ಮಾಲ್ಡೀವ್ಸ್ ಜೊತೆ ತನ್ನ ಸ್ಥಾನವನ್ನು ಹಂಚಿಕೊಂಡಿದೆ.
ಸಾರ್ವಜನಿಕ ವಲಯದ ಭ್ರಷ್ಟಾಚಾರದ ಜಾಗತಿಕ ಮಾಪಕವಾಗಿ ಕಾರ್ಯನಿರ್ವಹಿಸುವ CPI, 0 (ಅತ್ಯಂತ ಭ್ರಷ್ಟ)ದಿಂದ 100 (ಅತ್ಯಂತ ಶುದ್ಧ) ವರೆಗಿನ ಪ್ರಮಾಣದಲ್ಲಿ ಅಂಕಗಳನ್ನು ನಿಯೋಜಿಸುತ್ತದೆ. ಸೂಚ್ಯಂಕವು 0 ಇದ್ದರೆ ಹೆಚ್ಚು ಭ್ರಷ್ಟವಾಗಿದೆ ಮತ್ತು 100 ಇದ್ದರೆ ತುಂಬಾ ಭ್ರಷ್ಟಾಚಾರ ರಹಿತ ಎಂದು ಅರ್ಥೈಸಲಾಗುತ್ತದೆ. 2024 ರಲ್ಲಿ, ಭಾರತವು ಒಟ್ಟಾರೆ 38 ಅಂಕಗಳನ್ನು ಪಡೆಯಿತು, 2023 ರಲ್ಲಿ 39 ಮತ್ತು 2022 ರಲ್ಲಿ 40 ಅಂಕ ಪಡೆದಿತ್ತು.
ಪಾಕಿಸ್ತಾನ 135ನೇ ಸ್ಥಾನದಲ್ಲಿ ಹಾಗೂ ಶ್ರೀಲಂಕಾ 121ನೇ ಸ್ಥಾನದಲ್ಲಿದೆ. ಪಕ್ಕದ ಬಾಂಗ್ಲಾದೇಶ 149ನೇ ಸ್ಥಾನದಲ್ಲಿದ್ದರೆ ಚೀನಾ 76ನೇ ಸ್ಥಾನದಲ್ಲಿದೆ.
90 ಅಂಕಗಳೊಂದಿಗೆ ಡೆನ್ಮಾರ್ಕ್ ಅತಿ ಕಡಿಮೆ ಭ್ರಷ್ಟ ರಾಷ್ಟ್ರವಾಗಿ ಅಗ್ರಸ್ಥಾನದಲ್ಲಿದೆ, ಫಿನ್ಲ್ಯಾಂಡ್ (88), ಸಿಂಗಾಪುರ (84) ಮತ್ತು ನ್ಯೂಜಿಲೆಂಡ್ (83) ನಂತರದ ಸ್ಥಾನದಲ್ಲಿವೆ. ಲಕ್ಸೆಂಬರ್ಗ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ 81 ಅಂಕಗಳೊಂದಿಗೆ 5 ನೇ ಸ್ಥಾನವನ್ನು ಹಂಚಿಕೊಂಡರೆ, ಸ್ವೀಡನ್ (80) ಮತ್ತು ನೆದರ್ಲ್ಯಾಂಡ್ಸ್ (78) ಕ್ರಮವಾಗಿ ಅತಿ ಕಡಿಮೆ ಭ್ರಷ್ಟ ರಾಷ್ಟ್ರಗಳಲ್ಲಿ 8 ಮತ್ತು 9 ನೇ ಸ್ಥಾನ ಪಡೆದಿವೆ.. ಆಸ್ಟ್ರೇಲಿಯಾ, ಐಸ್‌ಲ್ಯಾಂಡ್ ಮತ್ತು ಐರ್ಲೆಂಡ್ 77 ಅಂಕ ಗಳಿಸಿ ಗಳಿಸಿ 10ನೇ ಸ್ಥಾನವನ್ನು ಹಂಚಿಕೊಂಡಿವೆ. ಅಮೆರಿಕವು 69 ಪಾಯಿಂಟ್‌ಗಳಿಂದ 65 ಕ್ಕೆ ಇಳಿದಿದೆ 2023ರಲ್ಲಿ 20 ಸ್ಥಾನದಲ್ಲಿ ಇದ್ದಿದ್ದು 2024ರಲ್ಲಿ 28 ನೇ ಸ್ಥಾನಕ್ಕೆ ಕುಸಿದಿದೆ.
ದಕ್ಷಿಣ ಸುಡಾನ್ 8 ಅಂಕಗಳೊಂದಿಗೆ ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರವಾಗಿ ಹೊರಹೊಮ್ಮಿದೆ. ಸೊಮಾಲಿಯಾ (ಸ್ಕೋರ್: 9), ವೆನೆಜುವೆಲಾ (10), ಸಿರಿಯಾ (12) ಕ್ರಮವಾಗಿ 179, 178 ಮತ್ತು 177 ನೇ ಸ್ಥಾನವನ್ನು ಪಡೆದುಕೊಂಡವು. ಸೊಮಾಲಿಯಾದ ನಂತರ ಸೊಮಾಲಿಯಾ (9), ವೆನೆಜುವೆಲಾ (10), ಸಿರಿಯಾ (12), ಯೆಮೆನ್ (13), ಲಿಬಿಯಾ (13), ಎರಿಟ್ರಿಯಾ (13), ಈಕ್ವಟೋರಿಯಲ್ ಗಿನಿಯಾ (13), ನಿಕರಾಗುವಾ (14), ಸುಡಾನ್ (15), ಮತ್ತು ಉತ್ತರ ಕೊರಿಯಾ (15) ಟಾಪ್ 10 ಭ್ರಷ್ಟ ದೇಶಗಳಾಗಿವೆ.
ಹವಾಮಾನ ಕ್ರಮಕ್ಕೆ ಭ್ರಷ್ಟಾಚಾರವು ಪ್ರಮುಖ ಬೆದರಿಕೆಯಾಗಿದೆ ಎಂದು ವರದಿಯು ಎತ್ತಿ ತೋರಿಸುತ್ತದೆ. “ಇದು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಪ್ರಗತಿಯನ್ನು ತಡೆಯುತ್ತದೆ ಎಂದು ವರದಿ ಹೇಳುತ್ತದೆ.
2012 ರಿಂದ 32 ದೇಶಗಳು ತಮ್ಮ ಭ್ರಷ್ಟಾಚಾರದ ಮಟ್ಟವನ್ನು ಗಣನೀಯವಾಗಿ ಕಡಿತಗೊಳಿಸಿದ್ದರೆ, ಅದೇ ಅವಧಿಯಲ್ಲಿ 148 ದೇಶಗಳು ಈ ಮಟ್ಟದಲ್ಲಿ ಸ್ಥಿರವಾಗಿವೆ ಅಥವಾ ಹದಗೆಟ್ಟಿವೆ. ಜಾಗತಿಕ ಸರಾಸರಿಯು 43 ರಷ್ಟಿದೆ, ಹಾಗೂ ಮೂರನೇ ಎರಡರಷ್ಟು ದೇಶಗಳು 50 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ