ರಾಜ್ಯದ ಪ್ರಭಾರ ಡಿಜಿ-ಐಜಿಪಿಯಾಗಿ ಡಾ.ಎಂ.ಎ. ಸಲೀಂ ನೇಮಕ

ಬೆಂಗಳೂರು : ರಾಜ್ಯ ಪ್ರಭಾರಿ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ)ರಾಗಿ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ನೇಮಕವಾಗಿದ್ದಾರೆ. ಅಲೋಕಮೋಹನ ಅವರ ನಿವೃತ್ತಿಯಿಂದ ತೆರವಾಗಲಿರುವ ಡಿಜಿ-ಐಜಿಪಿ ಹುದ್ದೆಗೆ ಪ್ರಭಾರಿಯಾಗಿ ಡಾ.ಎಂ.ಎ.ಸಲೀಂ ಅವರು ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ಸಮ್ಮತಿ ಬಳಿಕ ಅವರನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸೇವಾ ಹಿರಿತನ ಆಧಾರದ ಮೇರೆಗೆ ಡಿಜಿ-ಐಜಿಪಿ ಹುದ್ದೆಗೆ ಅಗ್ನಿಶಾಮಕ ದಳದ … Continued

ಬೆಂಗಳೂರು | ಸೂಟ್‌ಕೇಸ್‌ ನಲ್ಲಿ ಹುಡುಗಿಯ ಶವ ಪತ್ತೆ, ಚಲಿಸುತ್ತಿರುವ ರೈಲಿನಿಂದ ಎಸೆದಿರುವ ಶಂಕೆ

ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿರುವ ರೈಲ್ವೆ ಸೇತುವೆಯ ಬಳಿ ಬುಧವಾರ ಸೂಟ್‌ಕೇಸ್‌ನಲ್ಲಿ ಸುಮಾರು ಅಪರಿಚಿತ ಹುಡುಗಿಯ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆನೇಕಲ್ ತಾಲ್ಲೂಕಿನ ಹೊಸೂರು ಮುಖ್ಯ ರಸ್ತೆಯ ಬಳಿಯ ಹಳೆಯ ಚಂದಾಪುರ ರೈಲ್ವೆ ಸೇತುವೆಯ ಬಳಿ ಹರಿದ ನೀಲಿ ಬಣ್ಣದ ಸೂಟ್‌ಕೇಸ್ ಪತ್ತೆಯಾಗಿದ್ದು, ಅದರೊಳಗೆ ಹುಡುಗಿಯ ಶವ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶವವನ್ನು … Continued

ನಕ್ಸಲ್ ಕಮಾಂಡರ್ ಸೇರಿದಂತೆ 26 ಮಂದಿ ನಕ್ಸಲರನ್ನು ಎನ್‌ಕೌಂಟರಿನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

ನವದೆಹಲಿ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಮಾಡ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 26 ನಕ್ಸಲರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ದೃಢಪಡಿಸಿದ್ದಾರೆ. 2003 ರಲ್ಲಿ ಆಗಿನ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ನಡೆದ ಅಲಿಪಿರಿ ಬಾಂಬ್ ದಾಳಿಯ ಪ್ರಮುಖ ಸಂಚುಕೋರ ನಂಬಲ ಕೇಶವ ರಾವ್ ಅಲಿಯಾಸ್ ಬಸವ ರಾಜುನನ್ನು 50 … Continued

ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಮೇಲೆ ಇಡಿ ದಾಳಿ

ತುಮಕೂರು: ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ, ಮೇಲೆ ಜಾರಿ ನಿರ್ದೇಶನಾಲಯ(ED)ದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಹೆಗ್ಗೆರೆ ಬಳಿಯಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ತುಮಕೂರಿನ ಎಸ್ಎಸ್ಐಟಿ ಕಾಲೇಜು ಸೇರಿದಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಅಲ್ಲದೆ, ನೆಲಮಂಗಲದ … Continued

2024ರಲ್ಲಿ ಸತ್ಯ ನಾಡೆಲ್ಲಾ, ಪಿಚೈ ಹಿಂದಿಕ್ಕಿ ದಾಖಲೆಯ 1,157 ಕೋಟಿ ರೂ. ಪಡೆದ ಭಾರತೀಯ ಮೂಲದ ಟೆಸ್ಲಾ ಕಾರ್ಯನಿರ್ವಾಹಕ ಅಧಿಕಾರಿ…!

ಟೆಸ್ಲಾ ಕಂಪನಿಯ ಭಾರತೀಯ ಮೂಲದ ಮುಖ್ಯ ಹಣಕಾಸು ಅಧಿಕಾರಿ ವೈಭವ್ ತನೇಜಾ ಅವರು 2024 ರಲ್ಲಿ $139 ಮಿಲಿಯನ್ (ಸುಮಾರು ರೂ. 1,157 ಕೋಟಿ) ಪಡೆದಿದ್ದಾರೆ. 2023 ರ ಬಡ್ತಿಯ ನಂತರದ ಅವರ ವೇತನ ಪ್ಯಾಕೇಜ್, ಷೇರು ಆಯ್ಕೆಗಳು ಮತ್ತು ಇಕ್ವಿಟಿಗಳಿಂದಾಗಿ ಹೆಚ್ಚಿನ ಹಣ ಪಡೆದಿದ್ದಾರೆ. ಇದು ಹಲವಾರು ಉನ್ನತ ಟೆಕ್‌ಕಂಪನಿಗಳ ಸಿಇಒಗಳ ಗಳಿಕೆಯನ್ನು ಮೀರಿಸಿದೆ. … Continued

ಕನ್ನಡದ ಲೇಖಕಿ ಬಾನು ಮುಷ್ತಾಕ್‌ಗೆ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ಘೋಷಣೆ

ಬೆಂಗಳೂರು : ಕನ್ನಡದ ಸಾಹಿತಿ ಬಾನು ಮುಷ್ತಾಕ್ (Banu mushtaq) ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ (booker prize 2025)ಗೆ ಭಾಜನರಾಗಿದ್ದಾರೆ. ಬಾನು ಮುಷ್ತಾಕ್ ಅವರ ಕನ್ನಡದ ಕತೆಗಳ ಅನುವಾದ ʼಹಾರ್ಟ್ ಲ್ಯಾಂಪ್ʼ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು 57.34 ಲಕ್ಷ ನಗದನ್ನು ಒಳಗೊಂಡಿದೆ. ಮೇ 21ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಈ … Continued

ಬೆಚ್ಚಿ ಬೀಳಿಸುವ ವೀಡಿಯೊ..| ಬೆಂಗಳೂರು : ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿ ಬಿದ್ದ ಬಸ್‌ ; ಪೊಲೀಸ್‌ ಅಧಿಕಾರಿ ಸಾವು

ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಎರಡು ಮೋಟಾರ್‌ಸೈಕಲ್‌ಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆ ಬಳಿ ಸೋಮವಾರ ಬೆಳಿಗ್ಗೆ 10:30 ರ ಸುಮಾರಿಗೆ ಈ ಘಟನೆ … Continued