ಅಫ್ಘಾನಿಸ್ತಾನ ದಾಳಿಗೆ ಹೆದರಿ ಓಡಿಹೋದ ಪಾಕ್ ಸೈನಿಕರು : ವೀಡಿಯೊ ವೈರಲ್‌

ಅಫ್ಘಾನಿಸ್ತಾನದ ಕಾಬೂಲ್ ಮೇಲಿನ ವಾಯುದಾಳಿಯಿಂದ ಭುಗಿಲೆದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಈಗ ಪೂರ್ಣ ಪ್ರಮಾಣದ ಯುದ್ಧವಾಗಿ ಪರಿವರ್ತನೆಯಾಗಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ.
ಪಾಕಿಸ್ತಾನವು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ತಾಲಿಬಾನ್ ನೇತೃತ್ವದ ಅಫ್ಘಾನ್ ಭದ್ರತಾ ಪಡೆಗಳು ಶನಿವಾರ ತಡರಾತ್ರಿ ಡುರಾಂಡ್ ಲೈನ್ (ಅಫ್ಘಾನ್-ಪಾಕಿಸ್ತಾನ ಗಡಿ) ದಾಟಿ ಪಾಕಿಸ್ತಾನಿ ಸೇನಾ ಔಟ್‌ಪೋಸ್ಟ್‌ಗಳ ಮೇಲೆ ದಾಳಿ ಮಾಡಿವೆ. ಇದುವರೆಗೂ ಪಾಕಿಸ್ತಾನದ 58 ಸೈನಿಕರನ್ನು ಕೊಂದಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
ಗಡಿ ಪ್ರಾಂತ್ಯಗಳಿಂದ ಅಫ್ಘಾನ್ ಪಡೆಗಳು ಏಕಕಾಲಕ್ಕೆ ಪಾಕ್ ಚೆಕ್ ಪೋಸ್ಟ್ ಗಳ ಮೇಲೆ ದಾಳಿ ಮಾಡಿದ್ದರಿಂದ ಏಳು ಪಾಕಿಸ್ತಾನಿ ಸೇನಾ ಔಟ್‌ಪೋಸ್ಟ್‌ಗಳು ನಾಶವಾಗಿದ್ದು ಹಲವು ಪೋಸ್ಟ್ ಗಳನ್ನು ಅಫ್ಘಾನ್ ಪಡೆಗಳು ವಶಪಡಿಸಿಕೊಂಡಿವೆ. ತಾಳಿಬಾನ್‌ ಪಡೆಗಳ ಅನಿರೀಕ್ಷತ ದಾಳಿಗೆ ಬೆದರಿದ ಪಾಕಿಸ್ತಾನದ ಪಡೆಗಳು ಸ್ಥಳದಿಂದ ಅಕ್ಷರಶಃ ಓಡಿ ಹೋಗಿರುವ ವೀಡಿಯೊಗಳು ವೈರಲ್‌ ಆಗಿವೆ.

ಅಫ್ಘಾನಿಸ್ತಾನ್ ದಾಳಿ ನಡೆಸಿದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಪ್ರಾರ್ಥನೆ ಮಾಡುತ್ತಾ ಭಯಪಡುತ್ತಿರುವುದನ್ನು ನೋಡಬಹುದು.. ಪಾಕಿಸ್ತಾನದ ಸೈನಿಕರ ಗುಂಪು ನಿಂತಿದ್ದ ಜಾಗಕ್ಕೆ ಅಫ್ಘಾನ್ ದಾಳಿ ನಡೆಸಿದೆ.
ಡ್ಯುರಾಂಡ್ ಲೈನ್ ಬಳಿಯ ಬೆಹರಾಂಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರತಿದಾಳಿಯ ನಂತರ ಪಾಕಿಸ್ತಾನಕ್ಕೆ ತೀವ್ರ ಎಚ್ಚರಿಕೆ ನೀಡಿರುವ ಮುಜಾಹಿದ್, “ಯಾವುದೇ ದಾಳಿಗೆ ನಾವು ಉತ್ತರ ನೀಡದೆ ಸುಮ್ಮನಿರುವುದಿಲ್ಲ” ಎಂದು ಘೋಷಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ ತನ್ನ ನೆಲದಲ್ಲಿ ಐಸಿಸ್ (ISIS) ಭಯೋತ್ಪಾದಕರಿಗೆ ಅಡಗಲು ಅವಕಾಶ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಜೆಪಿ ‘ಚಲೋ ಸಂಸತ್’ ಮೆರವಣಿಗೆಗೆ ತಡೆ: ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌

ಆಫ್ಘಾನ್ ಪಡೆಗಳ ದಾಳಿಯ ನಂತರ ಪಾಕಿಸ್ತಾನಿ ಸೈನಿಕರು ಔಟ್‌ಪೋಸ್ಟ್‌ ಬಿಟ್ಟು ಓಡಿಹೋದರು ಎಂದು ಹುರಿಯತ್ ರೇಡಿಯೋ ವರದಿ ಮಾಡಿದೆ. ಖೋಸ್ಟ್ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ತ್ಯಜಿಸಿದ ಶಸ್ತ್ರಾಸ್ತ್ರಗಳನ್ನು ಅಫ್ಘಾನ್ ಪಡೆಗಳು ಪರಿಶೀಲಿಸುತ್ತಿರುವ ವೀಡಿಯೊವನ್ನು ಹುರಿಯತ್ ರೇಡಿಯೋ ಪ್ರಸಾರ ಮಾಡಿದೆ. ಅಫ್ಘಾನ್ ಮಾಧ್ಯಮ ವರದಿಗಳ ಪ್ರಕಾರ, ಹೆಲ್ಮಂಡ್, ಕಂದಹಾರ್, ಜಬುಲ್, ಪಕ್ತಿಕಾ, ಖೋಸ್ಟ್, ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಪಾಕಿಸ್ತಾನಿ ನೆಲೆಗಳ ಮೇಲೆ ಅಫ್ಘಾನ್ ಪಡೆಗಳು ದಾಳಿ ಮಾಡಿದ್ದು, ಸೇನಾ ಕಾರ್ಯಾಚರಣೆ ಮಧ್ಯರಾತ್ರಿ 12 ಗಂಟೆಗೆ ಮುಕ್ತಾಯವಾಗಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ಇತ್ತೀಚಿನ ವರದಿಗಳು ಹೋರಾಟ ಇನ್ನೂ ಮುಂದುವರೆದಿದೆ ಎಂದು ಸೂಚಿಸುತ್ತವೆ. ಪಾಕಿಸ್ತಾನಿ ಸೇನೆಯು ನಿರಂತರವಾಗಿ ಮಾರ್ಟರ್‌ಗಳಿಂದ ಅಫ್ಘಾನಿಸ್ತಾನದ ಮೇಲೆ ಶೆಲ್ ದಾಳಿ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲು ಸಿದ್ಧ ಎಂದ ಪತ್ನಿ ; ಆದರೆ ಅದಕ್ಕೆ ಎರಡು ಷರತ್ತುಗಳು...

https://twitter.com/Drfaryal0/status/1977251071312753079?ref_src=twsrc%5Etfw%7Ctwcamp%5Etweetembed%7Ctwterm%5E1977251071312753079%7Ctwgr%5E833ceefa44bc38aa3fddd6d0e35f5311c4c4d49e%7Ctwcon%5Es1_&ref_url=https%3A%2F%2Fwww.kannadaprabha.com%2Fworld%2F2025%2FOct%2F12%2Fvideo-pakistani-soldiers-were-seen-flying-after-the-retaliatory-attack-of-the-afghan-taliban

ಅಫ್ಘಾನಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿಗೆ ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸುತ್ತಿದ್ದೇವೆ ಎಂದು ಪಾಕಿಸ್ತಾನಿ ಭದ್ರತಾ ಪಡೆಗಳ ಅಧಿಕಾರಿಗಳು ಹೇಳಿದ್ದಾರೆ. ಗಡಿಯುದ್ದಕ್ಕೂ 6ಕ್ಕೂ ಹೆಚ್ಚು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಅವರು ವರದಿ ಮಾಡಿದ್ದಾರೆ. ಮೂರು ಪಾಕಿಸ್ತಾನಿ ಗಡಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್ ಪಡೆಗಳು ಹೇಳಿವೆ ಎಂದು ಸಿಎನ್‌ಎನ್ ವರದಿ ಉಲ್ಲೇಖಿಸಿದೆ. ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಹಲವಾರು ಅಫ್ಘಾನ್ ಸ್ಥಾನಗಳನ್ನು ನಾಶಪಡಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement