ಗ್ರಾಹಕರಿಗೆ ಮತ್ತೊಂದು ಶಾಕ್‌; ನಂದಿನಿ ಹಾಲಿನ ಬೆನ್ನಲ್ಲೇ ಮೊಸರಿನ ಬೆಲೆಯಲ್ಲೂ ಭಾರಿ ಹೆಚ್ಚಳ

ಬೆಂಗಳೂರು: ರಾಜ್ಯದ ಜನತೆಗೆ ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಈಗ ನಂದಿನಿ ಮೊಸರಿನ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ. ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಶುಕ್ರವಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರಗಳು ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ. ಹೊಸ ದರದ ಪ್ರಕಾರ, ಅರ್ಧ ಲೀಟರ್ … Continued

ಸ್ಟಿಂಗ್ ಆಪರೇಶನ್‌ ಪ್ರಕರಣ : ಕಾಂಗ್ರೆಸ್‌ನಿಂದ ಕೃಪಾ ಆಳ್ವ ಉಚ್ಚಾಟನೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲ ವಿಕೆಟ್ ಪತನವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡಿ ನಡೆಸಲಾಗಿದೆ ಎನ್ನಲಾದ ಸ್ಟಿಂಗ್‌ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೃಪ ಆಳ್ವ ಅವರ ಹೆಸರನ್ನು ಬಹಿರಂಗವಾಗಿ ಪ್ರಸ್ತಾಪಿಸಿದ್ದರು. ನಂತರ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧದ … Continued

ಇಸ್ರೋದಿಂದ ಎನ್‌ವಿಎಸ್‌-03 ಉಪಗ್ರಹ ಉಡಾವಣೆ ಯಶಸ್ವಿ ; ಭಾರತದ ಸ್ವಂತ ಜಿಪಿಎಸ್‌ ವ್ಯವಸ್ಥೆ ‘ನಾವಿಕ್’ಗೆ ಬಲ

ನವದೆಹಲಿ: ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾದ ‘ನಾವಿಕ್’ (NavIC), ಶುಕ್ರವಾರದಂದು ತನ್ನ ಕನಿಷ್ಠ ಕಾರ್ಯಾಚರಣಾ ಸಂರಚನೆಯಾದ ನಾಲ್ಕು ಉಪಗ್ರಹಗಳ ಇರುವಿಕೆಯ ಸ್ಥಿತಿಯನ್ನು ಮರಳಿ ಪಡೆದುಕೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಎನ್‌ವಿಎಸ್‌-03 (NVS-03) ನ್ಯಾವಿಗೇಷನ್ ಉಪಗ್ರಹವನ್ನು ಜಿಎಸ್‌ಎಲ್‌ವಿ (GSLV) ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಇದರಿಂದ ನಾವಿಕ್ ವ್ಯವಸ್ಥೆಯ … Continued

ಕಾರವಾರ: ಮೀನುಗಾರಿಕಾ ಬೋಟ್‌ನಲ್ಲಿ ಉಸಿರುಗಟ್ಟಿ ಇಬ್ಬರು ಮೀನುಗಾರರು ಸಾವು

ಕಾರವಾರ: ಮೀನುಗಾರಿಕಾ ಬೋಟ್‌ನಲ್ಲಿ ಹಿಡಿದ ಮೀನುಗಳಿಂದ ಹೊರಸೂಸಿದ ವಿಷಾನಿಲ ಸೇವನೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮುದಗಾ ಬಂದರಿನಲ್ಲಿ ಸಂಭವಿಸಿದೆ. ಅಂಕೋಲಾ ತಾಲೂಕಿನ ಬೇಲೆಕೇರಿಗೆ ಸೇರಿದ ಮೂಕಾಂಬಿಕಾ ಮೀನುಗಾರಿಕಾ ಬೋಟ್‌ನಲ್ಲಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೋಟ್‌ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. … Continued

ವಿಡಿಯೋ | ಕಾರವಾರ : ಶಾಲಾ ಆವರಣದಲ್ಲಿ ಬೃಹತ್ ಹೆಬ್ಬಾವು ಸೆರೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ನಂದನಗದ್ದಾ ಭಾಗದಲ್ಲಿರುವ ತೇಲಂಗ ರಸ್ತೆಯ ಕನ್ನಡ ಶಾಲೆಯ ಆವರಣದಲ್ಲಿ ಬೃಹತ್‌ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶಾಲೆಯ ಆವರಣದಲ್ಲಿ ಹೆಬ್ಬಾವು ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಶಾಲೆಯ ಆವರಣದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು. ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಯವರ ಗಮನಕ್ಕೆ … Continued