ಸಂಸತ್ತಿನಲ್ಲಿ ಭದ್ರತಾ ಲೋಪ : ಘಟನೆಯ ತನಿಖೆಗೆ ಗೃಹ ಸಚಿವಾಲಯ ಆದೇಶ, ಸಿಆರ್‌ಪಿಎಫ್ ಡಿಜಿ ತನಿಖಾ ಸಮಿತಿ ಮುಖ್ಯಸ್ಥ

ನವದೆಹಲಿ: ಲೋಕಸಭೆಯ ಸೆಕ್ರೆಟರಿಯೇಟ್‌ನ ಕೋರಿಕೆಯ ಮೇರೆಗೆ ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ತನಿಖೆಗೆ ಗೃಹ ಸಚಿವಾಲಯ (MHA) ಬುಧವಾರ ಆದೇಶಿಸಿದೆ. ಅಧಿಕಾರಿಗಳ ಪ್ರಕಾರ, ಸಿಆರ್‌ಪಿಎಫ್‌ನ ಡಿಜಿ ಅನೀಶ ದಯಾಳ ಸಿಂಗ್ ನೇತೃತ್ವದಲ್ಲಿ ಇತರ ಭದ್ರತಾ ಏಜೆನ್ಸಿಗಳ ಸದಸ್ಯರು ಮತ್ತು ತಜ್ಞರೊಂದಿಗೆ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಇಡೀ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ … Continued

ಸಂಸತ್ ಭದ್ರತಾ ಲೋಪದ ಘಟನೆ : ಲೋಕಸಭೆಯಲ್ಲಿ ಒಳನುಗ್ಗಿದ ಪ್ರಕರಣದಲ್ಲಿ ಆರು ಮಂದಿ ಭಾಗಿ, 5 ಮಂದಿ ಬಂಧನ, ಮತ್ತೊಬ್ಬನಿಗಾಗಿ ಶೋಧ

ನವದೆಹಲಿ : ಲೋಕಸಭೆಯ ಸಭಾಂಗಣದ ಒಳಗೆ ಭದ್ರತೆಯನ್ನು ಉಲ್ಲಂಘಿಸಿದ ಇಬ್ಬರು ಮತ್ತು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ನಾಲ್ವರು ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಗೊತ್ತಿರುವವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯೊಂದು ಹೇಳಿದೆ. ಪ್ರಮುಖ ಭದ್ರತಾ ಲೋಪದಲ್ಲಿ, ಲೋಕಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಸದನದ ಅಧಿವೇಶನ ನಡೆಯುತ್ತಿರುವಾಗ ಲೋಕಸಭೆಯ ಕೊಠಡಿಗೆ ಹಾರಿದ್ದಾರೆ. ಅವರು … Continued

ವೀಡಿಯೊ: ಲೋಕಸಭೆಗೆ ನುಗ್ಗಿದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಸದರು

ನವದೆಹಲಿ : ಹೊಗೆ ಡಬ್ಬಿ ಹಿಡಿದ ಇಬ್ಬರು ವ್ಯಕ್ತಿಗಳು ಲೋಕಸಭೆಗೆ ನುಗ್ಗಿದ ನಂತರ ಆಘಾತದಿಂದ ಚೇತರಿಸಿಕೊಂಡ ಸಂಸದರು, ಒಳನುಗ್ಗಿದ ಇಬ್ಬರಲ್ಲಿ ಒಬ್ಬನನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸುವ ಮೊದಲು ಆತನನ್ನು ಥಳಿಸಿದ್ದಾರೆ. ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೋರಂಜನ ಡಿ ಮತ್ತು ಸಾಗರ ಶರ್ಮಾ ಎಂಬವರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಹಾರಿದರು. ಸಾಗರ … Continued

ಸಮಾಜಸೇವಕ, ರಂಗ ಕಲಾವಿದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಡುಪಿ: ಖ್ಯಾತ ಸಮಾಜಸೇವಕ ಹಾಗೂ ರಂಗ ಕಲಾವಿದ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಮ್ಮ ಮನೆಯ ಪಕ್ಕಾಸಿಗೆ ಸೀರೆ ಬಿಗಿದು ಅದರ ಎರಡು ತುದಿಗೆ ದಂಪತಿ ನೇಣು ಬಿಗಿದುಕೊಂಎಉ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಲೀಲಾಧರ ಶೆಟ್ಟಿ (68) ಹಾಗೂ ಪತ್ನಿ ವಸುಂಧರಾ (58) … Continued

ಸಂಸತ್​ ಸದನದಲ್ಲಿ ಭಾರಿ ಭದ್ರತಾ ಲೋಪ: 4 ಮಂದಿ ಬಂಧನ, 2 ಘಟನೆ, ಮೈಸೂರಿನ ನಂಟು

ನವದೆಹಲಿ: ಬುಧವಾರ ಲೋಕಸಭೆಯಲ್ಲಿ ಪ್ರಮುಖ ಭದ್ರತಾ ಲೋಪ ಸಂಭವಿಸಿದ್ದು, ಭದ್ರತೆ ಉಲ್ಲಂಘನೆ ಮಾಡಿ ಕಲಾಪದ ವೇಳೆ ಸಂಸತ್ ಭವನಕ್ಕೆ ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಅಧಿಕಾರಿಗಳು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. … Continued

ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ಗಣಪತಿ ಭಟ್‌ ಹಾಸಣಗಿಗೆ ಪ್ರತಿಷ್ಠಿತ ‌ʼತಾನಸೇನ್‌ ಸಮ್ಮಾನ್ʼ ಪುರಸ್ಕಾರ

ಹುಬ್ಬಳ್ಳಿ: ಮಧ್ಯಪ್ರದೇಶ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ʼತಾನಸೇನ್‌ʼ ಸಮ್ಮಾನ ಪುರಸ್ಕಾರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಉತ್ತ ಕನ್ನಡ ಜಿಲ್ಲೆಯ ಪಂಡಿತ ಗಣಪತಿ ಭಟ್‌ ಹಾಸಣಗಿ ಆಯ್ಕೆಯಾಗಿದ್ದಾರೆ. ಇದೇ ಡಿಸೆಂಬರ್ 24ರಂದು ಗ್ವಾಲಿಯರ್‌ನಲ್ಲಿ ನಡೆಯಲಿರುವ ತಾನ್‌ಸೇನ್‌ ಸಂಗೀತ ಸಮಾರೋಹ ಕಾರ್ಯಕ್ರಮದಲ್ಲಿ ಅವರು ಪುರಸ್ಕಾರ ಸ್ವೀಕರಿಸಲಿದ್ದಾರೆ. ಪ್ರಶಸ್ತಿ ನನಗೆ ಸಂತೋಷ ತಂದಿದೆ…. ಪಂಡಿತ ಗಣಪತಿ ಭಟ್‌ ಹಾಸಣಗಿ ಅವರು … Continued

ಸಂಸತ್ತಿನ ಮೇಲೆ ನಡೆದ ದಾಳಿಯ 22ನೇ ವಾರ್ಷಿಕ ದಿನವೇ ಲೋಕಸಭೆಯಲ್ಲಿ ಭದ್ರತಾ ಲೋಪ : ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಗೆ ನುಗ್ಗಿದ ಇಬ್ಬರು ವ್ಯಕ್ತಿಗಳು

ನವದೆಹಲಿ: ಸಂಸತ್ತಿನ ದಾಳಿಯ 22ನೇ  ವಾರ್ಷಿಕ ದಿನ  ಬುಧವಾರ ಲೋಕಸಭೆಯಲ್ಲಿ ನಡೆದ ಪ್ರಮುಖ ಭದ್ರತಾ ಲೋಪದಲ್ಲಿ ಇಬ್ಬರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆ ಸದನಕ್ಕೆ ಜಿಗಿದು ಸದನದ ಸುತ್ತಲೂ ಓಡಲು ಪ್ರಾರಂಭಿಸಿದ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ಸದನದ ಕೊಠಡಿಗೆ ಜಿಗಿದ ನಂತರ ಲೋಕಸಭೆಯಲ್ಲಿ ಗದ್ದಲ ಉಂಟಾಯಿತು. ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ಗ್ಯಾಸ್ … Continued

ಬೆಂಗಳೂರಿನ 6 ಕಡೆ ಎನ್ ಐಎ ದಾಳಿ

ಬೆಂಗಳೂರು: ರಾಜಧಾನಿಯ ಒಟ್ಟು 6 ಕಡೆಗಳಲ್ಲಿ ಇಂದು, ಬುಧವಾರ ಬೆಳ್ಳಂಬೆಳಿಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಂಕಿತ ಉಗ್ರ ನಸೀರ್ ಎಂಬಾತ ನೀಡಿರುವ ಮಾಹಿತಿ ಮೇರೆಗೆ ಎನ್ಐಎ ಈ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಈ ಹಿಂದೆ ಹೆಬ್ಬಾಳದಲ್ಲಿ ಗ್ರೇನೇಡ್ ದೊರೆತ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ಆರ್‌ಟಿ ನಗರದ ಮನೆಯೊಂದರಲ್ಲಿ … Continued

ಕಾಂಗ್ರೆಸ್‌ 5ನೇ ಗ್ಯಾರಂಟಿ ʼಯುವನಿಧಿʼ ಯೋಜನೆಗೆ ಡಿಸೆಂಬರ್‌ 21ರಿಂದ ನೋಂದಣಿ ಪ್ರಕ್ರಿಯೆ ಆರಂಭ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ ಚಾಲನೆ ನೀಡಲು ಮುಹೂರ್ತ ಫಿಕ್ಸ್ ಆಗಿದೆ. ಪದವೀಧರರು ಮತ್ತು ಡಿಪ್ಲೋಮಾ ಹೋಲ್ಡರ್‌ಗಳಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗೆ ಇದೇ ಡಿಸೆಂಬರ್ 21ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜನವರಿಯಲ್ಲಿ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ. ಈ ವಿಚಾರವನ್ನು ವೈದ್ಯಕೀಯ … Continued

ದುಬೈನಲ್ಲಿ ಮಹದೇವ ಬೆಟ್ಟಿಂಗ್ ಆಪ್ ಮಾಲೀಕನ ಬಂಧನ : ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭ

ನವದೆಹಲಿ : ಮಹಾದೇವ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಮತ್ತು ಮಹಾದೇವ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ ಮಾಲೀಕ ರವಿ ಉಪ್ಪಲ್ ಅವರನ್ನು ಸ್ಥಳೀಯ ಅಧಿಕಾರಿಗಳು ದುಬೈನಲ್ಲಿ ಬಂಧಿಸಿದ್ದಾರೆ. ಇಂಟರ್‌ಪೋಲ್ ಮೂಲಕ ಜಾರಿ ನಿರ್ದೇಶನಾಲಯ ನೀಡಿದ ರೆಡ್ ಕಾರ್ನರ್ ನೋಟಿಸ್ ಆಧರಿಸಿ ಆತನನ್ನು , ಯುನೈಟೆಡ್ ಅರಬ್ ಎಮಿರೇಟ್ಸ್‌ ಅಧಿಕಾರಿಗಳು ದುಬೈನಲ್ಲಿ ಬಂಧಿಸಿದ್ದಾರೆ. ಕಳೆದ … Continued