ಕೆಲವೇ ಗಂಟೆಗಳಲ್ಲಿ ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ ಮೈಚಾಂಗ್ ಚಂಡಮಾರುತ : ಚೆನ್ನೈನಲ್ಲಿ ಮಳೆಗೆ 8 ಮಂದಿ ಸಾವು

ನವದೆಹಲಿ/ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೈಚಾಂಗ್ ಚಂಡಮಾರುತವು ತಮಿಳುನಾಡಿನಲ್ಲಿ ಮಳೆಯ ಅನಾಹುತವನ್ನು ಸೃಷ್ಟಿಸಿದೆ. ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯ ಬಾಪಟ್ಲಾ ಬಳಿ ಭೂಕುಸಿತಕ್ಕೆ ಸಜ್ಜಾಗಿದೆ. ಈವರೆಗೆ ಚೆನ್ನೈನಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ. ಚಂಡಮಾರುತದಿಂದಾಗಿ ಸಮುದ್ರದ ಅಲೆಗಳು 1ರಿಂದ 1.5 ಮೀಟರ್‌ಗಳಷ್ಟು ದಕ್ಷಿಣ ಕರಾವಳಿ ಆಂಧ್ರಪ್ರದೇಶದ ತಗ್ಗು ಪ್ರದೇಶಗಳನ್ನು ಮುಳುಗಿಸುವ ನಿರೀಕ್ಷೆಯಿದೆ ಮತ್ತು ಚಂಡಮಾರುತದ … Continued

ವಿಜಯಪುರದಲ್ಲಿ ಮೆಕ್ಕೆಜೋಳ ಸಂಸ್ಕರಣೆ ಘಟಕ ಕುಸಿತ : ಐವರು ಕಾರ್ಮಿಕರ ಶವ ಹೊರಕ್ಕೆ

ವಿಜಯಪುರ: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಸಂಜೆ ಸಂಭವಿಸಿದ ಸಂಸ್ಕರಣಾ ಘಟಕ ಕುಸಿತ ದುರಂತದಲ್ಲಿ ಸಿಲುಕಿದ್ದ ಐವರು ಕಾರ್ಮಿಕರು ಮೃದೇಹಗಳನ್ನು ಹೊರತೆಗೆಯಲಾಗಿದೆ, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸೋಮವಾರ ಸಂಜೆ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಆಹಾರ ಸಂಸ್ಕರಣಾ ಘಟಕದಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಸೋಮವಾರ ಸಂಜೆ ಮೆಕ್ಕೆಜೋಳ ಸಂಸ್ಕರಣ ಘಟಕ ಕುಸಿದು ಕಾರ್ಮಿಕರು ಸಿಲುಕಿ … Continued

ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ಭವಾನಿ ರೇವಣ್ಣ ನಿಂದನೆ: ಎಚ್‌.ಡಿ. ರೇವಣ್ಣ, ಸೂರಜ್ ರೇವಣ್ಣ ಕ್ಷಮೆಯಾಚನೆ

ಬೆಳಗಾವಿ: ಕಾರಿಗೆ ಡಿಕ್ಕಿ ಹೊಡೆದ ಬೈಕ್‌ ಸವಾರನನ್ನು ಅಸಭ್ಯ ಶಬ್ದಗಳಿಂದ ನಿಂದಿಸಿದ ಪತ್ನಿ ಭವಾನಿ ಪರವಾಗಿ ಜೆಡಿಎಸ್‌ ಶಾಸಕ ಎಚ್‌. ಡಿ. ರೇವಣ್ಣ ಮತ್ತು ಮಗ, ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಕ್ಷಮೆಯಾಚಿಸಿದ್ದಾರೆ. ಸುವರ್ಣಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೇವಣ್ಣ, ‘ಪತ್ನಿಯ ವರ್ತನೆಯ ಬಗ್ಗೆ ಯಾರಿಗಾದರೂ ನೋವಾದರೆ ಕ್ಷಮೆ ಕೋರುತ್ತೇನೆ’ ಎಂದು ಹೇಳಿದ್ದಾರೆ. ‘ಬೈಕ್ … Continued

ಭಿಂದ್ರನ್‌ವಾಲೆ ಸೋದರಳಿಯ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಸಾವು : ಈತ ಯಾಕೆ ಭಾರತದಿಂದ ಓಡಿಹೋಗಿದ್ದ..?

ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ ಎಂದು ಅವರ ಸಹೋದರ ಜಸ್ಬೀರ್ ಸಿಂಗ್ ರೋಡ್ ಖಚಿತಪಡಿಸಿದ್ದಾರೆ. ನಿಷೇಧಿತ ಸಂಘಟನೆಗಳಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮತ್ತು ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್‌ನ ಸ್ವಯಂ-ಘೋಷಿತ ಮುಖ್ಯಸ್ಥ 72 ವರ್ಷದ ಲಖ್ಬೀರ್ ಸಿಂಗ್ ರೋಡ್ ಹಲವಾರು ವರ್ಷಗಳಿಂದ ಪಾಕಿಸ್ತಾನದಿಂದ ತನ್ನ ಕಾರ್ಯಾಚರಣೆ ನಡೆಸುತ್ತಿದ್ದ. … Continued

ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಜನವರಿ 23ಕ್ಕೆ ಮುಂದೂಡಿಕೆ : ಗೃಹ ಸಚಿವ ಡಾ.ಪರಮೇಶ್ವರ

ಬೆಳಗಾವಿ: ಇದೇ ತಿಂಗಳು ಡಿಸೆಂಬರ್‌ 23ರಂದು ನಡೆಸಲು ಉದ್ದೇಶಿಸಿದ್ದ 545 ಪಿಎಸ್‌ಐ ಹುದ್ದೆಗಳ ಮರು ಪರೀಕ್ಷೆಯನ್ನು ಸರ್ಕಾರ ಒಂದು ತಿಂಗಳ ಕಾಲ ಮುಂದೂಡಿದ್ದು, 2024ರ ಜನವರಿ 23ಕ್ಕೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ. ಪರಮೇಶ್ವರ ಪ್ರಕಟಿಸಿದ್ದಾರೆ. 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಹೈಕೋರ್ಟ್‌ … Continued

ಇಂದಿರಾ ಗಾಂಧಿ ಭದ್ರತಾ ಅಧಿಕಾರಿಯಾಗಿದ್ದ ಲಾಲ್ದುಹೋಮಾಗೆ ಈಗ ಮಿಜೋರಾಂ ಸಿಎಂ ಪಟ್ಟ…!

ಝೋರಾಮ್ಸ್ ಪೀಪಲ್ ಮೂವ್ಮೆಂಟ್ (ZPM) ಮಿಜೊರಾಂ ವಿಧಾನಸಭಾ ಚುನಾವಣೆಯಲ್ಲಿ ೪೦ರಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಝೋರಾಮ್ಸ್ ಪೀಪಲ್ ಮೂವ್ಮೆಂಟ್ (ZPM ಪ್ರಸ್ತುತ ಅಧಿಕಾರದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ ಅನ್ನು ಸೋಲಿಸಿದೆ. ಅದು 10 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ. ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡು ಸ್ಥಾನಗಳನ್ನು … Continued

ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯತಂತ್ರ ಮರುರೂಪಿಸಿ ಪಕ್ಷದ ಅಭೂತಪೂರ್ವ ಗೆಲುವಿನ ಹಿಂದಿನ ಸೂತ್ರದಾರ ಈ ವಿಷ್ಣುದತ್ತ ಶರ್ಮಾ…

ಮಧ್ಯಪ್ರದೇಶ ಚುನಾವಣೆಯಲ್ಲಿ ವಿಧಾನಸಭೆಯ 230 ಸ್ಥಾನಗಳಲ್ಲಿ ಬಿಜೆಪಿ 163 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮೂರನೇ ಎರಡರಷ್ಟು ಸ್ಥಾನ ಪಡೆಯುವ ಮೂಲಕ ಅಭೂತಪೂರ್ವ ಜಯಭೇರಿ ಬಾರಿಸಿದೆ. ಆಡಳಿತ ವಿರೋಧಿ ಅಲೆಯಿಂದಾಗಿ ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಅಥವಾ ಅತಂತ್ರ ವಿಧಾನಸಭೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ಈ ಫಲಿತಾಂಶ ಆಘಾತ ತಂದಿದೆ. ಬಿಜೆಪಿ ನಾಯಕರು ಈ ಗೆಲುವಿನ ಶ್ರೇಯಸ್ಸನ್ನು ಪ್ರಧಾನಿ … Continued

ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಜೊತೆ ಕಾದಾಟದಲ್ಲಿ 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು

ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ (63 ವರ್ಷ) ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ವೇಳೆ ಸಾವಿಗೀಡಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆಯಲ್ಲಿ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ವೇಳೆ ಅರ್ಜುನನ ಮೇಲೆ ಒಂಟಿಸಲಗ … Continued

ಎಂಎಲ್​ಸಿ ಸಿ.ಪಿ. ಯೋಗೇಶ್ವರ ಬಾವ ಮಹದೇವಯ್ಯ ಶವವಾಗಿ ಪತ್ತೆ

ಚಾಮರಾಜನಗರ: ಶುಕ್ರವಾರ ನಾಪತ್ತೆಯಾಗಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ ಬಾವ ಮಹದೇವಯ್ಯ ಅವರ ಶವ ಚಾಮರಾಜನಗರದ ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಅಲ್ಲಿನ ನಿರ್ಜನ ಪ್ರದೇಶದಲ್ಲಿ ಶವ ಸಿಕ್ಕಿದ್ದು, ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ ಅವರ ಬಾವ 62 ವರ್ಷದ ಮಹದೇವಯ್ಯ ಅವರು ಶುಕ್ರವಾರ … Continued

“ಇದು ಕಾಂಗ್ರೆಸ್ ಸೋಲು, ಜನರ ಸೋಲಲ್ಲ”: 3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು ಇತರ ಇಂಡಿಯಾ ಮೈತ್ರಿಕೂಟ ಸದಸ್ಯ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆಯ ಕೊರತೆಯೇ ಕಾರಣ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳೊಂದಿಗೆ ಕಾಂಗ್ರೆಸ್‌ ಸೀಟು ಹಂಚಿಕೆಯು ಮೂರು ರಾಜ್ಯಗಳಲ್ಲಿ ವಿಭಿನ್ನ ಫಲಿತಾಂಶವನ್ನು ಕಾಣಬಹುದಿತ್ತು … Continued