40 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣ : ಎಎಪಿ ಶಾಸಕನ ಬಂಧನ

ಚಂಡೀಗಢ: ₹ 40 ಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರನ್ನು ಸಾರ್ವಜನಿಕ ಸಭೆಯಿಂದಲೇ ತನಿಖಾ ಸಂಸ್ಥೆ ಅಧಿಕಾರಿಗಳು ಕರೆದೊಯ್ದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ ಸೋಮವಾರ ಅವರನ್ನು ಬಂಧಿಸಿದೆ. ಎಎಪಿ ಶಾಸಕರಿಗೆ ತನಿಖಾ ಸಂಸ್ಥೆಯು ಕನಿಷ್ಠ ಮೂರು ಬಾರಿ ಸಮನ್ಸ್‌ ನೀಡಿತ್ತು. ಆದರೆ ಅವರು … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಎರಡ್ಮೂರು ದಿನ ಮಳೆ ಮುನ್ಸೂಚನೆ ; ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿರುವುದರಿಂದ ಟ್ರಫ್‌ ನಿರ್ಮಾಣವಾಗಿದೆ. ಹೀಗಾಗಿ ಅದರ ಪ್ರಭಾವದಿಂದಾಗಿ ಮುಂದಿನ ಮೂರು ದಿನಗಳು ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಹಲವಡೆ ಜೋರಾಗಿ ಮಳೆಯಾಗಲಿದೆ ಎಂದು ತಿಳಿಸಲಾಗಿದ್ದು, ಯೆಲ್ಲೋ ಅಲರ್ಟ್‌ ನೀಡಲಾಗಿದೆ. … Continued

7ನೇ ವೇತನ ಆಯೋಗದ ಅವಧಿ ಮತ್ತೆ ವಿಸ್ತರಣೆ ಮಾಡಿದ ಸರ್ಕಾರ

ಬೆಂಗಳೂರು : 7ನೇ ರಾಜ್ಯ ವೇತನ ಆಯೋಗದ (7th State Pay Commission) ಕಾಲಾವಧಿಯನ್ನು ವಿಸ್ತರಿಸಲಾಗಿದೆ. 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್‌ 15ರ ವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಈ ಹಿಂದೆ ರಾಜ್ಯಪಾಲರ ಆದೇಶದಂತೆ ಮೇ 19ರಿಂದ 6 ತಿಂಗಳ ಕಾಲ ಆಯೋಗದ ಅವಧಿ ವಿಸ್ತರಣೆ … Continued

ಇಸ್ರೇಲ್-ಹಮಾಸ್ ಯುದ್ಧದ ಕುರಿತು ಚರ್ಚಿಸಲು ಇರಾನ್ ಅಧ್ಯಕ್ಷ ರೈಸಿಗೆ ಕರೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಉದ್ವಿಗ್ನತೆಯ ನಡುವೆ, ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರೊಂದಿಗೆ ಮಾತನಾಡಿದ್ದಾರೆ. ಅವರು ಮಧ್ಯಪ್ರಾಚ್ಯದಲ್ಲಿನ ಕಷ್ಟಕರ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಂಭಾಷಣೆಯ ಸಮಯದಲ್ಲಿ, ಭಯೋತ್ಪಾದಕ ಘಟನೆಗಳು, ಹಿಂಸಾಚಾರ ಮತ್ತು ನಾಗರಿಕರ ಜೀವಹಾನಿ ಗಂಭೀರ ಕಳವಳಕಾರಿಯಾಗಿದೆ. ಇದು ಶಾಂತಿ ಮತ್ತು ಸ್ಥಿರತೆಯ ಆರಂಭಿಕ … Continued

ಮಹಾರಾಷ್ಟ್ರ ಗ್ರಾಮ ಪಂಚಾಯತ ಚುನಾವಣೆ ಫಲಿತಾಂಶ : ಬಿಜೆಪಿ ಪ್ರಾಬಲ್ಯ

ಮಹಾರಾಷ್ಟ್ರ ಗ್ರಾಮ ಪಂಚಾಯತ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಗಮನಾರ್ಹ ಗೆಲುವು ಸಾಧಿಸಿದೆ. ಪ್ರಾಥಮಿಕ ಫಲಿತಾಂಶಗಳ ಪ್ರಕಾರ, ರಾಜ್ಯದ ಗ್ರಾಮ ಪಂಚಾಯಿತ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಈಗಾಗಲೇ 724 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯ ಜೊತೆಗೆ, ಅದರ ಮಿತ್ರಪಕ್ಷಗಳಾದ ಶಿವಸೇನೆಯ ಶಿಂಧೆ ಬಣ ಮತ್ತು ಎನ್‌ಸಿಪಿಯ ಅಜಿತ್ ಪವಾರ್‌ … Continued

ರೈತರ ಕೃಷಿ ಪಂಪ್ ಸೆಟ್ ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ನೀರಾವರಿ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಪ್ರತಿದಿನ ಏಳು ತಾಸು ವಿದ್ಯುತ್‌ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ ಸುಮಾರು 1500 ಕೋಟಿ ರೂ. ಅಗತ್ಯವಿದೆ … Continued

ಪ್ರತಿಮಾ ಕೊಲೆ ಪ್ರಕರಣ: ಆರೋಪಿ ಕಿರಣ್ ನವೆಂಬರ್ 15 ರವರೆಗೆ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಆರೋಪಿ ಕಿರಣನನ್ನು ಬೆಂಗಳೂರಿನ 2ನೇ ಎಸಿಎಂಎಂ (ACMM) ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್‌ ಆರೋಪಿಯನ್ನು ನವೆಂಬರ್ 15ರ ವರೆಗೆ ಪೊಲೀಸ್ ಕಸ್ಟಡಿ ನೀಡಿ ಆದೇಶಿಸಿದೆ. ಪ್ರತಿಮಾ ಅವರ ಮಾಜಿ ಕಾರು ಚಾಲಕ ಕಿರಣನನ್ನು ಬೆಂಗಳೂರು ಪೊಲೀಸರು ಬಂಧಿಸಿ … Continued

ಒಂದೇ ಒಂದು ಎಸೆತ ಎದುರಿಸದೆ ಶ್ರೀಲಂಕಾದ ಬ್ಯಾಟರ್‌ ಏಂಜಲೋ ಮಾಥ್ಯೂಸ್ ಟೈಮ್ಡ್‌ ಔಟ್‌: ಚರ್ಚೆಗೆ ಕಾರಣವಾದ ಈ ಟೈಮ್ಡ್‌ ಔಟ್‌ ನಿಯಮ ಏನು ಹೇಳುತ್ತದೆ…?

ನವದೆಹಲಿ: ಸೋಮವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ವಿಶ್ವಕಪ್ 2023 ರ ಪಂದ್ಯದಲ್ಲಿ ಶ್ರೀಲಂಕಾದ ಅನುಭವಿ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಒಂದೇ ಒಂದು ಎಸೆತವನ್ನು ಎದುರಿಸದೆ ಔಟಾಗಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಪಂದ್ಯದ ಅಂಪೈರ್ ಮರೈಸ್ ಎರಾಸ್ಮಸ್ ಅವರು ಬಾಂಗ್ಲಾದೇಶವು ಸಮಯ ಮೀರಿದ ಅವಧಿ(ಟೈಮ್ಡ್‌ ಔಟ್‌)ಗೆ ಮಾಡಿದ ಮನವಿಯ ನಂತರ ಮ್ಯಾಥ್ಯೂಸ್ … Continued

ರಷ್ಯಾ ಅಧ್ಯಕ್ಷ ಪುತಿನ್ ಹತ್ಯೆ ಯತ್ನದಿಂದ ಹಿಡಿದು ʼಭಯಾನಕ ಹವಾಮಾನ ಘಟನೆʼಗಳ ವರೆಗೆ : 2024ರ ಬಗ್ಗೆ ಬಾಬಾ ವಂಗಾ ನುಡಿದ ಭಯಾನಕ ಭವಿಷ್ಯವಾಣಿಗಳು…

ಸಾಮಾನ್ಯವಾಗಿ ಬಾಬಾ ವಂಗಾ ಎಂದು ಕರೆಯಲ್ಪಡುವ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಅವರು 26 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ, ಆದರೆ ಅವರ ಭವಿಷ್ಯವಾಣಿಗಳು ಅನೇಕ ನಿಜವಾಗುತ್ತ ಬಂದಿದೆ ಎಂದು ಹೇಳಲಾಗುತ್ತದೆ, ಆದರೂ ಇದನ್ನು ಪರಿಶೀಲಿಸಲು ಯಾವುದೇ ಪುರಾವೆಗಳಿಲ್ಲ. ವಂಗಾ ಭವಿಷ್ಯವನ್ನು ಊಹಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದರು ಎಂದು ನಂಬಲಾಗಿದೆ, ಅವರನ್ನು “ನಾಸ್ಟ್ರಾಡಾಮಸ್ ಆಫ್ … Continued

ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ ಸಮರಿಯಾ ಅಧಿಕಾರ ಸ್ವೀಕಾರ : ಈ ಸ್ಥಾನ ವಹಿಸಿಕೊಂಡ ಮೊದಲ ದಲಿತ ವ್ಯಕ್ತಿ

ನವದೆಹಲಿ: ಮಾಹಿತಿ ಅಧಿಕಾರಿ ಹೀರಾಲಾಲ ಸಮರಿಯಾ ಅವರು ಸೋಮವಾರ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಮುಖ್ಯಸ್ಥರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಅವರು ಈ ಸ್ಥಾನವನ್ನು ವಹಿಸಿಕೊಂಡ ಮೊದಲ ದಲಿತ ವ್ಯಕ್ತಿಯಾಗಿದ್ದಾರೆ. ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೀರಾಲಾಲ್ ಸಮರಿಯಾ ಅವರಿಗೆ ಪ್ರಮಾಣ ವಚನ … Continued