ಸಿಎಲ್‌ಪಿ ಸಭೆಯಲ್ಲಿ ರಾಜೀನಾಮೆ ಪ್ರಸ್ತಾಪ ಮಾಡಿದ್ದು ನಿಜ: ಶಾಸಕ ಬಿ.ಆರ್. ಪಾಟೀಲ

ಕಲಬುರಗಿ: ಜುಲೈ 28ರಂದು ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ಪ್ರಸ್ತಾಪ ಮಾಡಿದ್ದು ನಿಜ ಎಂದು ಕಾಂಗ್ರೆಸ್ಸಿನ ಆಳಂದ ಶಾಸಕ ಬಿಆರ್ ಪಾಟೀಲ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಆತ್ಮಗೌರವಕ್ಕೆ ಧಕ್ಕೆ ಬರುವಂತೆ ನಡೆದುಕೊಂಡರೆ ರಾಜೀನಾಮೆ ನೀಡುವುದಾಗಿ ಹೇಳಿರುವುದು ನಿಜ. ಆದರೆ ನಿಖರವಾಗಿ ಏನು ಕಾರಣ ಎಂಬುದು ಸೇರಿದಂತೆ ಹಲವು ವಿಚಾರಗಳನ್ನು … Continued

ಮೂರು ವರ್ಷದಲ್ಲಿ 13 ಲಕ್ಷಕ್ಕೂ ಹೆಚ್ಚು ಹುಡುಗಿಯರು, ಮಹಿಳೆಯರು ನಾಪತ್ತೆ : ಸರ್ಕಾರಿ ಅಂಕಿಅಂಶ

ನವದೆಹಲಿ: 2019 ಮತ್ತು 2021 ರ ನಡುವಿನ ಮೂರು ವರ್ಷಗಳಲ್ಲಿ ದೇಶದಲ್ಲಿ 13.13 ಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶವು ತಿಳಿಸಿದೆ. ಮಧ್ಯಪ್ರದೇಶದಲ್ಲಿ ಸುಮಾರು ಎರಡು ಲಕ್ಷದಷ್ಟು ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಗಾಗಿದ್ದು ಪ್ರಥಮ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳವು ನಂತರದ ಸ್ಥಾನದಲ್ಲಿದೆ. ಅಂಕಿಅಂಶಗಳನ್ನು ಕಳೆದ ವಾರ … Continued

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಮಿತ್‌ ಶಾ ಪುತ್ರನಿಂದ ಆಶ್ಲೇಷ ಬಲಿ ಸೇವೆ

ಮಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಕುಟುಂಬಸ್ಥರೊಂದಿಗೆ ಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸ್ತಿದ್ಧಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಶ್ಲೇಷ ಬಲಿ ಸಮರ್ಪಣೆ ಮಾಡಿದರು. ಈ ವೇಳೆ ಅವರ ಪತ್ನಿ ರಿಷಿತಾ ಶಾ … Continued

ಪಾಕಿಸ್ತಾನದಲ್ಲಿ ರಾಜಕೀಯ ಸಭೆಯಲ್ಲಿ ಬಾಂಬ್‌ ಸ್ಫೋಟ : ಕನಿಷ್ಠ 40 ಮಂದಿ ಸಾವು, 130ಕ್ಕೂ ಹೆಚ್ಚು ಮಂದಿಗೆ ಗಾಯ

ಪೇಶಾವರ : ಭಾನುವಾರ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ರಾಜಕೀಯ ಪಕ್ಷದ ಸಭೆಯೊಂದರಲ್ಲಿ ಆತ್ಮಹತ್ಯಾ ಬಾಂಬರ್ ಪ್ರಬಲ ಬಾಂಬ್‌ ಸ್ಫೋಟಿಸಿದಾಗ ಕನಿಷ್ಠ 40 ಜನರು ಸಾವಿಗೀಡಾಗಿದ್ದಾರೆ ಮತ್ತು 130ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಬಜೌರ್‌ನ ಖಾರ್‌ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಅಲ್ಲಿ 400 … Continued

ಕೋಲಾರ: ಟೊಮೆಟೊ ಬೆಳೆದು 45 ದಿನಗಳಲ್ಲಿ 4 ಕೋಟಿ ರೂ. ಆದಾಯ ಪಡೆದ ರೈತ….!

ಕೋಲಾರ: ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ನಡುವೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತ ದಂಪತಿ 40,000 ಬಾಕ್ಸ್ ಟೊಮೆಟೊ ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ 3 ಕೋಟಿ ರೂ.ಲಾಭಗಳಿಸಿದ್ದಾರೆ. ಈತ ತನ್ನ ಬೆಳೆಯನ್ನು ಕರ್ನಾಟಕದ ಕೋಲಾರಕ್ಕೆ ತಂದು ಮಾರಾಟ ಮಾಡಿ ಭರ್ಜರಿ ಲಾಭ ಗಳಿಸಿದ್ದಾನೆ. 22 ಎಕರೆ ಕೃಷಿ ಭೂಮಿ ಹೊಂದಿರುವ ಟೊಮೆಟೊ ಕೃಷಿಕ ಚಂದ್ರಮೌಳಿ … Continued

ಅಫ್ಘಾನಿಸ್ತಾನದಲ್ಲಿ ಸಂಗೀತ ‘ಅನೈತಿಕ’ : ಸಂಗೀತ ವಾದ್ಯ-ಪರಿಕರಗಳಿಗೆ ಬೆಂಕಿ ಹಚ್ಚಿದ ತಾಲಿಬಾನಿಗಳು…!

ಹೆರಾತ್ : ಅಫ್ಘಾನಿಸ್ತಾನದ ಉಪ ಸಚಿವಾಲಯದ ಅಧಿಕಾರಿಗಳು ವಾರಾಂತ್ಯದಲ್ಲಿ ಹೆರಾತ್ ಪ್ರಾಂತ್ಯದಲ್ಲಿ ಸಂಗೀತವನ್ನು ಅನೈತಿಕವೆಂದು ಪರಿಗಣಿಸಿ ವಶಪಡಿಸಿಕೊಂಡ ಸಂಗೀತ ಉಪಕರಣಗಳು ಮತ್ತು ಸಲಕರಣೆಗಳ ಬೆಂಕಿ ಹಚ್ಚಿದ್ದಾರೆ. ಸಂಗೀತವನ್ನು ಪ್ರಚಾರ ಮಾಡುವುದು ನೈತಿಕ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಮತ್ತು ಅದನ್ನು ನುಡಿಸುವುದರಿಂದ ಯುವಕರು ದಾರಿ ತಪ್ಪುತ್ತಾರೆ” ಎಂದು ಸದ್ಗುಣ ಪ್ರಚಾರದ ಸಚಿವಾಲಯದ ಹೆರಾತ್ ವಿಭಾಗದ ಮುಖ್ಯಸ್ಥ ಅಜೀಜ್ ಅಲ್-ರಹಮಾನ್ … Continued

ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ : ಸಿ.ಟಿ. ರವಿ

ಬೆಂಗಳೂರು : ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿ ಇಂದು, ಭಾನುವಾರ ಮಾತನಾಡಿದ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿದ್ದಾರೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಈಗ ನಾನು … Continued

ಟೊಮೆಟೊ ತುಂಬಿಕೊಂಡು ಕೋಲಾರದಿಂದ ರಾಜಸ್ಥಾನಕ್ಕೆ ಹೊರಟಿದ್ದ ಲಾರಿ ನಾಪತ್ತೆ

ಕೋಲಾರ : ಇಡೀ ದೇಶದಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಬಂದ ಬೆನ್ನಿಗೇ ಈಗ ಟೊಮೆಟೊ ಕಳ್ಳತನ ಜಾಸ್ತಿಯಾಗಿದೆ. ಈಗ ಕೋಲಾರದಿಂದ ರಾಜಸ್ಥಾನಕ್ಕೆ 21 ಲಕ್ಷ ರೂ. ಮೌಲ್ಯದ ಟೊಮೆಟೊ ಲೋಡ್‌ ಮಾಡಿಕೊಂಡು ಹೊರಟಿದ್ದ ಲಾರಿ ಮಾರ್ಗ ಮಧ್ಯದಲ್ಲಿಯೇ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪೊಲೀಸ್‌ ದೂರು ದಾಖಲಾಗಿದೆ. ಕೋಲಾರ ಮಾರುಕಟ್ಟೆಯಿಂದ ರಾಜಸ್ಥಾನ ರಾಜ್ಯದ ಜೈಪುರ … Continued

‘ಕ್ಷಮಿಸು ಮಗಳೇ’: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಂದ ನಂತರ ಕೇರಳ ಪೊಲೀಸರ ಕ್ಷಮೆಯಾಚನೆ

ಎರ್ನಾಕುಲಂ : ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕತ್ತು ಹಿಸುಕಿ ಕೊಂದ ನಂತರ ಕೇರಳ ಪೊಲೀಸರು ಶನಿವಾರ ಎಕ್ಸ್‌ (ಹಳೆಯ ಟ್ವಿಟರ್‌)ನಲ್ಲಿ ಕ್ಷಮೆಯಾಚಿಸಿದ್ದಾರೆ. ಶುಕ್ರವಾರ ಬಾಲಕಿ ನಾಪತ್ತೆಯಾಗಿದ್ದು, ರಾತ್ರಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸಮೀಪದ ಆಲುವಾದಲ್ಲಿನ ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಜವುಗು ಪ್ರದೇಶದಲ್ಲಿ ಗೋಣಿಚೀಲದಲ್ಲಿ ಎಸೆದಿದ್ದ ಐದು … Continued

ಕೊಲೆ ಸಾಕ್ಷಿ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ವಕೀಲನನ್ನು ಬಂಧಿಸಿದ ಪೊಲೀಸರು

ನವದೆಹಲಿ : ದೇಶಾದ್ಯಂತ ಬಿಎಸ್‌ಪಿ ಮಾಜಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ ಪಾಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೀಡಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ವಕೀಲರನ್ನು ಉತ್ತರ ಪ್ರದೇಶ ಪೊಲೀಸರು ಇಂದು, ಭಾನುವಾರ ಬಂಧಿಸಿದ್ದಾರೆ. ಶೂಟರ್ ಉಮೇಶ್ ಪಾಲ್ ಇರುವ ಸ್ಥಳದ ಮಾಹಿತಿಯನ್ನು ವಕೀಲ ವಿಜಯ ಮಿಶ್ರಾ ನೀಡಿದ್ದರು ಎಂದು ಪೊಲೀಸ್ … Continued