ʼಶಕ್ತಿʼ ಯೋಜನೆಯಲ್ಲಿ ಉಚಿತ ಪ್ರಯಾಣ : ಬಸ್ಸಿನಲ್ಲೇ ಬಟ್ಟೆ ಒಣಗಲು ಹಾಕಿದ ಪ್ರಯಾಣಿಕರು..!

ಮಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿ ತಿಂಗಳು ಕಳೆದಿದೆ. ಇದೀಗ ವಾರಾಂತ್ಯದ ದಿನಗಳಲ್ಲಿ ಮಹಿಳೆಯರು ಗುಂಪು ಗುಂಪಾಗಿ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ, ದೇವರ ದರ್ಶನ ಪಡೆಯುತ್ತಿದ್ದಾರೆ. ಈಗ ವಾಯವ್ಯ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಮಹಿಳೆಯರು ಬಟ್ಟೆ ಒಣಗಲು ಹಾಕಿದ ವಿಡಿಯೋ ಭಾರೀ … Continued

ಪ್ರತಿಪಕ್ಷಗಳ ಧ್ಯೇಯವಾಕ್ಯ ಕುಟುಂಬದ-ಕುಟುಂಬದಿಂದ-ಕುಟುಂಬಕ್ಕಾಗಿ: ವಿರೋಧ ಪಕ್ಷಗಳ ಒಗ್ಗಟ್ಟಿನ ಸಭೆ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ : ಇಂದು, ಮಂಗಳವಾರ ಬೆಂಗಳೂರಿನಲ್ಲಿ ಭ್ರಷ್ಟರ ಸಭೆ ನಡೆಯುತ್ತಿದೆ. ಪ್ರತಿಪಕ್ಷಗಳ ಧ್ಯೇಯವಾಕ್ಯ “ಕುಟುಂಬ ಮೊದಲು ಮತ್ತು ಅವರಿಗೆ ರಾಷ್ಟ್ರ ಏನೂ ಅಲ್ಲ, ಅವರ ಗಮನ ಕುಟುಂದ ಮೇಲೆ ಇದೆಯೇ ಹೊರತು ರಾಷ್ಟ್ರದ ಮೇಲಲ್ಲ” ಎಂದು ಬೆಂಗಳೂರಲ್ಲಿ ಸಭೆ ನಡೆಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ … Continued

ಹೊಡೆಯಬೇಡಿ ಎಂದು ಅಂಗಲಾಚುತ್ತಿದ್ದರೂ ದೆಹಲಿ ಪ್ರವಾಸಿಗನ ಬೆನ್ನಟ್ಟಿ ದೊಣ್ಣೆಯಿಂದ ಮನಸೋಇಚ್ಛೆ ಥಳಿಸಿದ ಹಲ್ಲೊಕೋರರು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆಗ್ರಾದಲ್ಲಿ, ತಾಜ್‌ಮಹಲ್‌ಗೆ ಭೇಟಿ ನೀಡಲು ನವದೆಹಲಿಯಿಂದ ಬಂದ ಪ್ರವಾಸಿಗನ ಮೇಲೆ ಲಾಠಿ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಲಾಗಿದೆ. ಆತನ ಕಾರು ಹಲ್ಲೆ ಮಾಡಿದವರೊಬ್ಬರ ಕಾರನ್ನು ಟಚ್‌ ಮಾಡಿದ ನಂತರ ಆತನ ಬೆನ್ನಟ್ಟಿ ಲಾಠಿ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಟ್ವಿಟ್ಟರ್ ನಲ್ಲಿ ವೀಡಿಯೊ ವೈರಲ್ ಆಗಿದೆ. ಹಲವಾರು … Continued

ಬೆಂಗಳೂರು : ವಿರೋಧ ಪಕ್ಷಗಳ ಎರಡನೇ ಸಭೆಗೆ ಮುಂಚೆ ಬಿಹಾರ ಸಿಎಂ ನಿತೀಶಕುಮಾರ ವಿರುದ್ಧ ಪೋಸ್ಟರ್ ಪ್ರತ್ಯಕ್ಷ

ಬೆಂಗಳೂರು : ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕರ ಸಭೆಯ ಎರಡನೇ ದಿನವಾದ ಇಂದು, ಮಂಗಳವಾರ ನಡೆಯಲಿರುವ ಬೃಹತ್ ಅಧಿವೇಶನಕ್ಕೂ ಮುನ್ನ, ಬೆಂಗಳೂರಿನ ಚಾಲುಕ್ಯ ವೃತ್ತ, ವಿಂಡ್ಸರ್ ಮ್ಯಾನರ್ ಸೇತುವೆ ಮತ್ತು ಹೆಬ್ಬಾಳ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ವಿರುದ್ಧ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಲಾಗಿದೆ. ಒಂದು ಪೋಸ್ಟರ್‌ನಲ್ಲಿ, ‘ಸುಲ್ತಾನ್‌ಗಂಜ್ ಸೇತುವೆ ಕುಸಿತವು ಬಿಹಾರಕ್ಕೆ … Continued

ಮಾನನಷ್ಟ ಮೊಕದ್ದಮೆ : ರಾಹುಲ್ ಗಾಂಧಿ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ನವದೆಹಲಿ; ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಧಿಸಿದ ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಮೇಲ್ಮನವಿಯನ್ನು ಜುಲೈ 21 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ತುರ್ತು ಪಟ್ಟಿಯನ್ನು ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ ನೇತೃತ್ವದ … Continued

ಕಾಶ್ಮೀರ: ಪೂಂಚ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನ ಸಿಂಧರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮಂಗಳವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ. ಮಾಹಿತಿಯ ಪ್ರಕಾರ, ಸೋಮವಾರ (ಜುಲೈ 17) ರಾತ್ರಿ 11:30 ರ ಸುಮಾರಿಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮೊದಲ ಮುಖಾಮುಖಿ ನಡೆದಿದ್ದು, ನಂತರ ಇತರ ರಾತ್ರಿ ಕಣ್ಗಾವಲು ಉಪಕರಣಗಳೊಂದಿಗೆ ಡ್ರೋನ್‌ಗಳನ್ನು … Continued

ಉಡುಪಿ: ಹಿಂಬದಿ ಡಂಪರ್‌‌ಗೆ ಸಿಲುಕಿದ ಕಾರನ್ನು 2 ಕಿಮೀ ಎಳೆದೊಯ್ದ ಟಿಪ್ಪರ್‌ | ವೀಕ್ಷಿಸಿ

ಉಡುಪಿ : ಟಿಪ್ಪರಿನ ಹಿಂಬದಿಯ ಡಂಪರ್‌‌ಗೆ ಸಿಲುಕಿದ ಸ್ಯಾಂಟ್ರೋ ಕಾರನ್ನು ಕಿಲೋಮೀಟರ್ ದೂರದ ವರೆಗೆ ಟಿಪ್ಪರ್ ಎಳೆದೊಯ್ದ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ. , ಕಾರನ್ನು ಎಳೆದೊಯ್ಯವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರು ಹಾಗೂ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ … Continued

ಪತ್ನಿ ಎದುರಲ್ಲೇ ಪತಿ ಹತ್ಯೆ ಪ್ರಕರಣ​ : ಭೀಮನ ಅಮಾವಾಸ್ಯೆ ದಿನ ದೇಗುಲದಲ್ಲಿ ಪ್ರೇಮಿಯಿಂದ ಗಂಡನ ಹತ್ಯೆ ಮಾಡಿಸಿದ ಪತ್ನಿ…!

 ಬೆಳಗಾವಿ : ವಡೇರಹಟ್ಟಿ ಗ್ರಾಮದಲ್ಲಿ ಹೆಂಡತಿ ಎದುರೇ ನಡೆದಿದ್ದ ಗಂಡನ ಭೀಕರ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಜಿಲ್ಲೆಯ ಮೂಡಲಗಿ ತಾಲೂಕು ವಡೇರಟ್ಟಿ ಗ್ರಾಮದಲ್ಲಿ ಸೋಮವಾರ ವ್ಯಕ್ತಿಯೊಬ್ಬನ ಹತ್ಯೆಯಿಂದಾಗಿ ಇಡೀ ಗ್ರಾಮವನ್ನೇ ತಲ್ಲಣಗೊಂಡಿದೆ. ಭೀಮನ ಅಮಾವಾಸ್ಯೆಯಾದ ಸೋಮವಾರ ಗಂಡನ ಪೂಜೆ ಮಾಡಿದರೆ ಆತನ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅದೇ … Continued

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ ಸೇವಾವಧಿ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಜಯದೇವ ನಿರ್ದೇಶಕರಾಗಿ ಡಾ.ಸಿ.ಎನ್.ಮಂಜುನಾಥ (Dr C.N. Manjunath)​ ಅವರು ಇನ್ನೂ 6 ತಿಂಗಳು ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬುಧವಾರ ಜುಲೈ 19ಕ್ಕೆ ಡಾ.ಸಿ.ಎನ್​.ಮಂಜುನಾಥ್ ಸೇವಾವಧಿ ಮುಕ್ತಾಯ ಆಗಬೇಕಿತ್ತು. ಆದರೆ ಕಲಬುರಗಿ ಜಯದೇವ ಆಸ್ಪತ್ರೆಯ ಕೆಲಸದ ಜವಾಬ್ದಾರಿ ಇರುವ ಹಿನ್ನೆಲೆಯಲ್ಲಿ ಜನವರಿ ತಿಂಗಳವರೆಗೆ ನಿರ್ದೇಶಕರಾಗಿ ಮುಂದುವರಿಯುವಂತೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ … Continued

ಕೋಳಿ ರಕ್ತ ಬಳಸಿ ಉದ್ಯಮಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ 3 ಕೋಟಿ ರೂ. ವಸೂಲಿ ಮಾಡಿದ ಮಹಿಳೆ

ಮುಂಬೈ : ಮಹಿಳೆಯೊಬ್ಬರು ಕೋಳಿ ರಕ್ತವನ್ನು ಬಳಸಿ 64 ವರ್ಷದ ಉದ್ಯಮಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಅವರಿಂದ 3.26 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಮುಂಬೈ ಪೊಲೀಸರು 2021ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಮಹಿಳೆ ಮೋನಿಕಾ ಭಗವಾನ್ ಅಲಿಯಾಸ್ ದೇವ್ ಚೌಧರಿ ಮತ್ತು … Continued