ಅಮೆರಿಕದಲ್ಲಿ 2,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು : 8,000 ವಿಮಾನಗಳ ಹಾರಾಟ ವಿಳಂಬ..!

ಎಬಿಸಿ ನ್ಯೂಸ್ ಪ್ರಕಾರ, ಅಮೆರಿಕದಾದ್ಯಂತ 2,600 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸುಮಾರು 8,000 ವಿಮಾನಗಳು ವಿಳಂಬವಾಗಿವೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ಈ ರದ್ದತಿ ಮತ್ತು ವಿಳಂಬಗಳಲ್ಲಿ ಹೆಚ್ಚಿನವು ಅಮೆರಿಕದ ಈಶಾನ್ಯ ಪ್ರದೇಶಗಳಲ್ಲಿ ವರದಿಯಾಗಿದೆ. ಇಲ್ಲಿ ವಿಮಾನ ನಿಲ್ದಾಣದಿಂದ 1320 ವಿಮಾನಗಳ ಹಾಋಾಟ ರದ್ದುಗೊಳಿಸಲಾಗಿದೆ. ಅವುಗಳಲ್ಲಿ ಕೇವಲ 350 ಕ್ಕೂ ಹೆಚ್ಚು … Continued

ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ ಅರ್ಪಿಸಿದ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿ

ತಿರುಮಲ(ಆಂಧ್ರಪ್ರದೇಶ): ಇನ್ಫೋಸಿಸ್ ಸಂಸ್ಥೆ ಮಾಜಿ ಮುಖ್ಯಸ್ಥ ನಾರಾಯಣಮೂರ್ತಿ (N.R.Narayanamurthy) ಹಾಗೂ ಸುಧಾಮೂರ್ತಿ (Sudhamurthy) ದಂಪತಿ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಸರಳ ಜೀವನ ನಡೆಸುತ್ತಿದ್ದಾರೆ. ಅವರ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ. ಈ ಸಂದರ್ಭದಲ್ಲಿ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ. ದಂಪತಿ ಚಿನ್ನದ ಅಭಿಷೇಕ … Continued

ಇದು ʼತಮಾಷೆʼ ಮಾಡುವ ವಿಷಯವಲ್ಲ..: ‘ತಮಾಷೆಗಾಗಿ’ ಶಾಲೆಯಲ್ಲಿ ಬಾಲಕಿಯರಿಗೆ ವಿದ್ಯುತ್‌ ಶಾಕ್‌ ; ಇಬ್ಬರು ಎಲೆಕ್ಟ್ರಿಷಿಯನ್‌ಗಳ ಬಂಧನ…!

ಅಮರಾವತಿ : ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹುಡುಗಾಟ ಮಾಡಲು ಹೋಗಿ ಅದು ವಿದ್ಯಾರ್ಥಿನಿಯರ ಜೀವಕ್ಕೇ ಆಪತ್ತು ತಂದೊಡ್ಡುವಂತಹ ಸನ್ನಿವೇಶ ನಿರ್ಮಾಣವಾದ ಕಾರಣಕ್ಕೆ ವಿಜಯವಾಡದಲ್ಲಿ ಇಬ್ಬರು ಎಲೆಕ್ಟ್ರಿಷಿಯನ್‌ಗಳನ್ನು ಬಂಧಿಸಲಾಗಿದೆ. ಬೆಂಚ್‌ ಮೇಲೆ ಕುಳಿತಾಕ್ಷಣ ವಿದ್ಯಾರ್ಥಿನಿಯರಿಗೆ ವಿದ್ಯುತ್‌ ಶಾಕ್‌ ಹೊಡೆಯುವ ನಿಗೂಢವನ್ನು ಬಯಲೆಗಳೆಯಲು ಪೊಲೀಸರೇ ಬರಬೇಕಾಯಿತು. ಆಂಧ್ರಪ್ರದೇಶದ ಈಡುಪುಗಲ್ಲು ಗ್ರಾಮದ ಜಿಲ್ಲಾ ಪರಿಷತ್‌ ಶಾಲೆಯಲ್ಲಿ ಈ … Continued

ಇಂದಿನಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಇಂದಿನಿಂದ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಜುಲೈ 17ರಿಂದ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಿದೆ. ಹಾಗೂ ಜುಲೈ 20ರಂದು ಆರೇಂಜ್‌ ಅಲರ್ಟ್‌ ಘೋಷಿಸಿದೆ. ಮುಂದಿನ ನಾಲ್ಕು ದಿನ … Continued

ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಜ್

ಲಂಡನ್‌: ಕಾರ್ಲೋಸ್ ಅಲ್ಕರಾಜ್ ಭಾನುವಾರ (ಜುಲೈ 16) ತಮ್ಮ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕಾರ್ಲೋಸ್ ಅಲ್ಕರಾಜ್ ಅವರು, ವಿಶ್ವದ ನಂ.1 ಆಟಗಾರ ಹಾಗೂ ಏಳು ಬಾರಿಯ ವಿಂಬಲ್ಡನ್‌ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು 4 ಗಂಟೆ 43 ನಿಮಿಷಗಳ ದೀರ್ಘ ಸೆಣಸಾಟದಲ್ಲಿ ಸೆಂಟರ್ ಕೋರ್ಟ್‌ನಲ್ಲಿ 1-6, 7-6, 6-1, 3-6, 6-4 ಸೆಟ್‌ಗಳಿಂದ ಸೋಲಿಸಿದರು. … Continued

ಇನ್ನು ಮುಂದೆ ಆಕೆ ಮುಸ್ಲಿಂ ಅಲ್ಲ; ಪಾಕಿಸ್ತಾನಕ್ಕೆ ವಾಪಸ್ ಬರುವುದು ಬೇಡ; ಸೀಮಾ ಹೈದರ್‌ ಕುಟುಂಬಸ್ಥರು

ಕರಾಚಿ: ಆನ್‌ಲೈನ್ ಗೇಮ್ ಪ್ಲಾಟ್‌ಫಾರ್ಮ್ ಮೂಲಕ ಸ್ನೇಹಿತನಾದ ಹಿಂದೂ ವ್ಯಕ್ತಿಯೊಂದಿಗೆ ವಾಸಿಸಲು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ, ಪಾಕಿಸ್ತಾನದಲ್ಲಿ ಸಮಾಜದ ನಿಯಮಗಳನ್ನು ಧಿಕ್ಕರಿಸಿದ್ದಕ್ಕಾಗಿ ಮಹಿಳೆಯ ಕುಟುಂಬ ಮತ್ತು ನೆರೆಹೊರೆಯವರಿಂದ ಬಹಿಷ್ಕಾರಕ್ಕೊಳಗಾಗಿದ್ದಾಳೆ. 2019 ರಲ್ಲಿ PUBG ಆಡುವಾಗ ಸೀಮಾ ಗುಲಾಮ್ ಹೈದರ್ ಮತ್ತು ಸಚಿನ್ ಮೀನಾ ಪರಿಚಯವಾದರು. ನಂತರ 1,300 ಕಿಲೋಮೀಟರ್‌ಗಳಿಗಿಂತ ಹೆಚ್ಚು … Continued

ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂದೂ ದೇವಾಲಯದ ಮೇಲೆ ರಾಕೆಟ್ ಲಾಂಚರ್‌ಗಳಿಂದ ದಾಳಿ

ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರದೇಶದಲ್ಲಿ ಭಾನುವಾರ ಹಿಂದೂ ದೇವಾಲಯದ ಮೇಲೆ ಡಕಾಯಿತರ ಗ್ಯಾಂಗ್ ರಾಕೆಟ್ ಲಾಂಚರ್‌ಗಳಿಂದ ದಾಳಿ ಮಾಡಿದೆ. ಇದು ಎರಡು ದಿನಗಳೊಳಗೆ ಅಲ್ಪಸಂಖ್ಯಾತ ಸಮುದಾಯದ ಪೂಜಾ ಸ್ಥಳವನ್ನು ನಾಶಪಡಿಸಿದ ಎರಡನೇ ಘಟನೆಯಾಗಿದೆ. ಸಿಂಧ್ ಪ್ರಾಂತ್ಯದ ಕಾಶ್ಮೋರ್‌ ಜಿಲ್ಲೆಯಲ್ಲಿ, ಸ್ಥಳೀಯ ಹಿಂದೂ ಸಮುದಾಯದವರು ನಿರ್ಮಿಸಿದ ಸಣ್ಣ ದೇವಾಲಯ ಮತ್ತು ಅಲ್ಪಸಂಖ್ಯಾತ ಜನಸಂಖ್ಯೆಯ ಸದಸ್ಯರಿಗೆ ಸೇರಿದ ಹತ್ತಿರದ … Continued

ಉಯ್ಯಾಲೆಯಲ್ಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು

ಮಂಗಳೂರು : ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕನನ್ನು 8ನೇ ತರಗತಿ ವಿದ್ಯಾರ್ಥಿ ಶ್ರೀಷಾ (14) ಎಂದು ಗುರುತಿಸಲಾಗಿದೆ. ಭಾನುವಾರ ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿ ಉಯ್ಯಾಲೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಬಿಗಿದು … Continued

ಈ ವಾರ ಬಿಜೆಪಿ ನೇತೃತ್ವದ ಎನ್‌ಡಿ ಮೈತ್ರಿಕೂಟದ 30 ಪಕ್ಷಗಳು Vs 24 ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ

ನವದೆಹಲಿ : ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳು ಅಂಕಿ-ಅಂಶಗಳೊಂದಿಗೆ ಹೈ ವೋಲ್ಟೇಜ್ ರಾಜಕೀಯ ಹಣಾಹಣಿಗೆ ಸಿದ್ಧತೆ ನಡೆಸಿವೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮಂಗಳವಾರ ನವದೆಹಲಿಯಲ್ಲಿ ಬೃಹತ್‌ ಸಭೆ ಮಾಡುವ ಬಗ್ಗೆ ಘೋಷಿಸಿದ್ದು, ಇದಕ್ಕೆ ಸುಮಾರು 30 ಪಕ್ಷಗಳು ಮೈತ್ರಿಗೆ ಬೆಂಬಲವನ್ನು ಪುನರುಚ್ಚರಿಸುವ ನಿರೀಕ್ಷೆಯಿದೆ. ಇದೇವೇಳೆ ತಮ್ಮ … Continued

ಮೈಸೂರು : ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರು ಪಾಲು

ಮೈಸೂರು : ತಾಲೂಕಿನ ಮೀನಾಕ್ಷಿಪುರ ಬಳಿ ಕೆ.ಆರ್.ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳ ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತರು ವಿದ್ಯಾರ್ಥಿಗಳು ಮೈಸೂರಿನ ಸಂತ ಜೋಸೆಫ್ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮೃತ ವಿದ್ಯಾರ್ಥಿಗಳನ್ನು ಪಡುವಾರಹಳ್ಳಿಯ ಭರತ್(20), ರಾಮಕೃಷ್ಣ ನಗರದ ಪ್ರವೀಣ್ (20), ಹೆಬ್ಬಾಳಿನ ಸೂರ್ಯಬೇಕರಿಯ ವರುಣ್(21) ಮೃತರು. ಮತ್ತಿಬ್ಬರು ವಿದ್ಯಾರ್ಥಿಗಳಾದ … Continued