ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ : ಬೆಳಗಾವಿಯಿಂದ ಶಂಕಿತನನ್ನು ಕರೆದೊಯ್ದ ನಾಗ್ಪುರ ಪೊಲೀಸರು

ಬೆಳಗಾವಿ :ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಎರಡು ಸಲ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ನಾಗ್ಪುರ ಪೊಲೀಸರು ಬೆಳಗಾವಿ ಹಿಂಡಲಗಾ ಕೇಂದ್ರ ಜೈಲಿನಿಂದ ತಮ್ಮ ವಶಕ್ಕೆ ಪಡೆದು ನಾಗ್ಪುರಕ್ಕೆ ಕರೆದೊಯ್ದಿದ್ದಾರೆ. ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಹಾಕಿದ್ದ ಸಂಬಂಧ ಜಯೇಶ್ ಪೂಜಾರಿ ಉರುಫ್‌ ಜಯೇಶ ಕಾಂತ ಎಂಬವನ ವಿರುದ್ಧ ಪ್ರಕರಣ ದಾಖಲಾಗಿದ್ದು ಇಂದು ಮಂಗಳವಾರ … Continued

ಪ್ಯಾನ್ -ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಣೆ ಮಾಡಿದ ಸರ್ಕಾರ

ನವದೆಹಲಿ: ಸರ್ಕಾರವು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು ಜೂನ್ 30, 2023 ರವರೆಗೆ ವಿಸ್ತರಿಸಿದೆ. , ಆ ಮೂಲಕ ವ್ಯಕ್ತಿಗಳು ಯಾವುದೇ ಪರಿಣಾಮಗಳನ್ನು ಎದುರಿಸದೆ ತಮ್ಮ ಆಧಾರ್ ಅನ್ನು ಪ್ಯಾನ್-ಆಧಾರ್ ಲಿಂಕ್ ಮಾಡಲು ನಿಗದಿತ ಪ್ರಾಧಿಕಾರಕ್ಕೆ ತಿಳಿಸಬಹುದು.ಹಿಂದಿನ ಗಡುವು ಮಾರ್ಚ್ 31 ರಂದು ಕೊನೆಗೊಳ್ಳುತ್ತಿತ್ತು. ಜುಲೈ 1, 2023 ರಿಂದ, ಅಗತ್ಯವಿರುವಂತೆ ಪ್ಯಾನ್‌ … Continued

ಹಾವೇರಿ ಕಾಂಗ್ರೆಸ್​​​ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ.ಎಂ.ಹಿರೇಮಠ ರಾಜೀನಾಮೆ

ಹಾವೇರಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಾವೇರಿ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಹಾವೇರಿ ಜಿಲ್ಲಾ ಕಾಂಗ್ರೆಸ್​​ ಅಧ್ಯಕ್ಷ ಸ್ಥಾನಕ್ಕೆ ಎಂ.ಎಂ.ಹಿರೆಮಠ ಅವರು ರಾಜಿನಾಮೆ ನೀಡಿದ್ದಾರೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ತ್ಯಜಿಸಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ರವಾನಿಸಿದ್ದಾರೆ. ಈವರೆಗೂ ಪಕ್ಷ ನೀಡಿರುವ … Continued

ಬಿಜೆಪಿ ವಿರುದ್ಧ ರಣ ಕಹಳೆ ಮೊಳಗಿಸಲು ಏಪ್ರಿಲ್‌ 5ರಂದು ಕೋಲಾರಕ್ಕೆ ರಾಹುಲ್‌ ಗಾಂಧಿ ಆಗಮನ..?

ಬೆಂಗಳೂರು:  ಕೋಲಾರದಲ್ಲಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿ ಲೋಕಸಭಾ ಸದಸ್ಯತ್ವ ಕಳೆದುಕೊಂಡಿದ್ದ ರಾಹುಲ್‌ ಗಾಂಧಿ ಈಗ ಮತ್ತೆ ಕೋಲಾರ ಕ್ಷೇತ್ರಕ್ಕೆ ಏಪ್ರಿಲ್‌ 5ರಂದು ಆಗಮಿಸಿ ಭಾಷಣ ಮಾಡಲಿದ್ದಾರೆ ಎಂದು ವರದಿಯಾಗಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮುದಾಯ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪದ ಮೇಲೆ ರಾಹುಲ್‌ ಗಾಂಧಿಗೆ ಸೂರತ್‌ … Continued

ಉಪಕುಲಪತಿ ಕೊಠಡಿಗೆ ನುಗ್ಗಿ ಪ್ರಧಾನಿ ಫೋಟೋ ಹರಿದು ಹಾಕಿದ್ದ ಶಾಸಕನಿಗೆ ₹ 99 ದಂಡ..

ನವಸಾರಿ (ಗುಜರಾತ್‌) : 2017ರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕೊಠಡಿಗೆ ಅಕ್ರಮವಾಗಿ ನುಗ್ಗಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಹರಿದು ಹಾಕಿದ ಆರೋಪದಡಿ ಕಾಂಗ್ರೆಸ್ ಶಾಸಕ ಅನಂತ ಪಟೇಲ್ ಅವರಿಗೆ ಗುಜರಾತಿನ ನವಸಾರಿ ನ್ಯಾಯಾಲಯ 99 ರೂಪಾಯಿ ದಂಡ ವಿಧಿಸಿದೆ. ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ವಿ.ಎ. ಧಧಲ್ ಅವರ ನ್ಯಾಯಾಲಯವು … Continued

2022-23ಕ್ಕೆ ಇಪಿಎಫ್‌ ಬಡ್ಡಿ ದರದಲ್ಲಿ ಏರಿಕೆ

ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) ಮಂಗಳವಾರ ನಡೆದ ಸಭೆಯಲ್ಲಿ 2022-23ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಶೇ.8.15 ಬಡ್ಡಿ ದರವನ್ನು ನಿಗದಿಪಡಿಸಿದೆ. ಮಾರ್ಚ್ 2022 ರಲ್ಲಿ, ಇಪಿಎಫ್‌ಒ (EPFO) ತನ್ನ ಸುಮಾರು ಐದು ಕೋಟಿ ಚಂದಾದಾರರಿಗೆ 2020-21 ರಲ್ಲಿ ಶೇಕಡಾ 8.5 ರಿಂದ 2021-22 ರ EPF ಮೇಲಿನ ಬಡ್ಡಿಯನ್ನು … Continued

ಜಿಯೋ ಫೈಬರಿನಿಂದ ಹೊಸ ಬ್ರಾಡ್‌ಬ್ಯಾಂಡ್ ಬ್ಯಾಕ್-ಅಪ್ ಪ್ಲಾನ್ ಬಿಡುಗಡೆ

ಮುಂಬೈ : ಹೊಸ ಹೋಮ್ ಬ್ರಾಡ್‌ಬ್ಯಾಂಡ್ “ಬ್ಯಾಕ್-ಅಪ್ ಪ್ಲಾನ್” ಅನ್ನು ಜಿಯೋ ಘೋಷಿಸಿದೆ. ಈ ಬ್ಯಾಕಪ್ ಬ್ರಾಡ್‌ಬ್ಯಾಂಡ್ ಸಂಪರ್ಕವು ಲೈವ್ ಸ್ಪೋರ್ಟ್ಸ್ ಸೇರಿದಂತೆ ಇತರ ವಿಷಯಗಳ ಜೊತೆಗೆ ಮುಂಬರುವ ಟಾಟಾ ಐಪಿಎಲ್ ಪಂದ್ಯಾವಳಿಯ ತಡೆರಹಿತ ಸ್ಟ್ರೀಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಬಳಕೆದಾರರು ಒಂದು ಬಟನ್‌ನ ಕ್ಲಿಕ್‌ನಲ್ಲಿ 1/2/7 ದಿನದ ಆಯ್ಕೆಗಳೊಂದಿಗೆ ಮತ್ತು ಅಗತ್ಯವಿರುವಾಗ ವೇಗವನ್ನು (10 MBPS … Continued

ಸಾವರ್ಕರ್‌ ಕ್ಷಮೆಯಾಚಿಸಿದ್ದರ ಬಗ್ಗೆ ಪುರಾವೆ ತೋರಿಸಿ: ರಾಹುಲ್ ಗಾಂಧಿಗೆ ಸಾವರ್ಕರ್ ಮೊಮ್ಮಗನ ಸವಾಲು

ಮುಂಬೈ: ವೀರ್‌ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಸೋಮವಾರ ಸಾವರ್ಕರ್ ಅವರು ಬ್ರಿಟಿಷ್ ಅಧಿಕಾರಿಗಳ ಬಳಿ ಕ್ಷಮೆಯಾಚಿಸಿದ್ದಾರೆ ಎಂಬುದಕ್ಕೆ ಪುರಾವೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿಯವರು ಸಾವರ್ಕರ್‌ ಬಗ್ಗೆ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ರಂಜಿತ್ ಸಾವರ್ಕರ್, ರಾಹುಲ್‌ ಗಾಂಧಿ ಏನು ಮಾಡುತ್ತಾರೋ ಅವೆಲ್ಲವೂ “ಬಾಲಿಶವಾದದ್ದು” ಎಂದು … Continued

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕುಖ್ಯಾತ ದಂತಚೋರ ವೀರಪ್ಪನ್ ಪುತ್ರಿ

ದಂತಚೋರ ಹಾಗೂ ಗ್ಯಾಂಗಸ್ಟರ್‌ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀ ವೀರಪ್ಪನ್ ಈಗ ತಮಿಳಿನಲ್ಲಿ ನಿರ್ಮಾಣವಾದ ಮಾವೀರನ್ ಪಿಳ್ಳೈ ಸಿನೆಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಅದು ಕನ್ನಡಕ್ಕೂ ಡಬ್ ಆಗಲಿದೆ ಎಂದು ಹೇಳಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗಾಗಿ ಎದುರು ನೋಡುತ್ತಿರುವ ನಿರ್ಮಾಕರು ಇತ್ತೀಚೆಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಮತ್ತು ಚಿತ್ರರಂಗದ ಇತರರ ಸಮ್ಮುಖದಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆ … Continued

ಭೂಮಿಯತ್ತ ನೇರವಾಗಿ ಮುಖ ಮಾಡಿದ ಬೃಹತ್‌ ಗಾತ್ರದ ಬ್ಲ್ಯಾಕ್‌ಹೋಲ್ : ಇದು ಶಕ್ತಿಯುತ ವಿಕಿರಣ ಕಳುಹಿಸುತ್ತದೆ-ವಿಜ್ಞಾನಿಗಳು

ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ವಿಜ್ಞಾನಿಗಳು ಖಗೋಳಶಾಸ್ತ್ರದ ಅದ್ಭುತ ಆವಿಷ್ಕಾರ ಮಾಡಿದ್ದಾರೆ. PBC J2333.9-2343 ನಕ್ಷತ್ರಪುಂಜದಲ್ಲಿ 657 ಮಿಲಿಯನ್ ಜ್ಯೋತಿರ್ವರ್ಷಗಳ ದೂರದಲ್ಲಿ ನೆಲೆಗೊಂಡಿರುವ ಒಂದು ಬೃಹತ್‌ ಕಪ್ಪು ಕುಳಿಯು (black hole) ತನ್ನ ದಿಕ್ಕನ್ನು ಬದಲಿಸಿದೆ ಮತ್ತು ಈಗ ಭೂಮಿಯತ್ತ ಮುಖಮಾಡಿದೆ ಹಾಗೂ ಶಕ್ತಿಯುತ ವಿಕಿರಣವನ್ನು ಕಳುಹಿಸುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಬ್ಲೇಜರ್‌ಗಳು ಹೆಚ್ಚಿನ ಶಕ್ತಿಯ ವಸ್ತುಗಳಾಗಿವೆ ಮತ್ತು … Continued