ಅಮೆರಿಕದ ಶಾಲೆಯ ಮೂಲಕ ಸುಂಟರಗಾಳಿ ಹಾದು ಹೋದ ಭಯಾನಕ ಕ್ಷಣ ಸಿಸಿಟಿವಿಯಲ್ಲಿ ಸೆರೆ | ವೀಕ್ಷಿಸಿ

ಕಳೆದ ಶುಕ್ರವಾರ ಸಂಜೆ ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಮಾರಣಾಂತಿಕ ಸುಂಟರಗಾಳಿ ಬೀಸಿದ ನಂತರ ಕನಿಷ್ಠ 26 ಜನರು ಸಾವಿಗೀಡಾಗಿದ್ದಾರೆ ಮತ್ತು ಅಅನೇಕರು ಗಾಯಗೊಂಡಿದ್ದಾರೆ. ಇದೀಗ, ಮಿಸ್ಸಿಸ್ಸಿಪ್ಪಿಯ ಶಾಲೆಯೊಂದರಲ್ಲಿ ಸುಂಟರಗಾಳಿ ಹೊಕ್ಕಿದ ಭಯಾನಕ ಕ್ಷಣವನ್ನು ಆಘಾತಕಾರಿ ಸಿಸಿಟಿವಿ ವೀಡಿಯೊ ಸೆರೆಹಿಡಿದಿದೆ. ಗಾಳಿಯ ಆರ್ಭಟದ ನಡುವೆ ಸುಂಟರಗಾಳಿಯು ಶಾಲೆಯ ಮೇಲ್ಛಾವಣಿಯನ್ನು ಹಾನಿಗೊಳಿಸುವುದನ್ನು ವೀಡಿಯೊ ತೋರಿಸುತ್ತದೆ. ಈ ಕ್ಲಿಪ್ ಅನ್ನು ಶಾಲೆಯ … Continued

ಕಳಪೆ ಔಷಧ ತಯಾರಿಸಿದ 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದುಗೊಳಿಸಿದ ಸರ್ಕಾರ

ನವದೆಹಲಿ: 20 ರಾಜ್ಯಗಳಾದ್ಯಂತ 76 ಕಂಪನಿಗಳ ತಪಾಸಣೆ ನಡೆಸಿದ  ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)  ಮಂಗಳವಾರ ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಗಳ ತಯಾರಿಕೆಗಾಗಿ 18 ಫಾರ್ಮಾ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದಲ್ಲದೇ ಹಿಮಾಚಲ ಪ್ರದೇಶದಲ್ಲಿ 70, ಉತ್ತರಾಖಂಡದಲ್ಲಿ 45 ಮತ್ತು ಮಧ್ಯಪ್ರದೇಶದಲ್ಲಿ 23 ಕಂಪನಿಗಳ ಮೇಲೆ … Continued

ಇಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ

ನವದೆಹಲಿ: ಭಾರತ ಚುನಾವಣಾ ಆಯೋಗವು ಇಂದು, ಬುಧವಾರ (ಮಾರ್ಚ್​ 29) ಬೆಳಿಗ್ಗೆ 11:30ಕ್ಕೆ ನವದೆಹಲಿಯ ವಿಜ್ಞಾನ ಭವನದ ಪ್ಲೆನರಿ ಹಾಲ್‌ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಿದೆ. ಈ ಉದ್ದೇಶಕ್ಕಾಗಿ ಚುನಾವಣಾ ಸಮಿತಿಯು ನವದೆಹಲಿಯಲ್ಲಿ ಬೆಳಿಗ್ಗೆ 11:30ಕ್ಕೆ ಪತ್ರಿಕಾಗೋಷ್ಠಿಯನ್ನು ಕರೆದಿದೆ. ಕರ್ನಾಟಕವು ಬೆಂಗಳೂರು, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ (ಹೈಕ), ಮುಂಬೈ-ಕರ್ನಾಟಕ ಮತ್ತು … Continued

ರಾಜ್ಯದಲ್ಲಿ 9 ನೂತನ ವಿಶ್ವ ವಿದ್ಯಾಲಗಳನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ

ಬೆಂಗಳೂರು: ನೂತನವಾಗಿ ಸ್ಥಾಪಿಸಲಾಗಿರುವ ೯ ವಿಶ್ವವಿದ್ಯಾಲಯಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವರ್ಚುವಲ್‌ ಮೂಲಕ ಲೋಕಾಪರ್ಣೆಗೊಳಿಸಿದ್ದಾರೆ. ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಒಂಬತ್ತು ವಿಶ್ವವಿದ್ಯಾಲಯಗಳನ್ನು ಬೊಮ್ಮಾಯಿ ಉದ್ಘಾಟಿಸಿದ್ದು, ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಮುರುಗೇಶ್ ನಿರಾಣಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು. ಆರಂಭಿಸಿರುವ … Continued

ವೀಡಿಯೊ: ಪ್ರಜಾಧ್ವನಿ ಯಾತ್ರೆ ವೇಳೆ ಬಸ್‌ ಮೇಲಿಂದ ಹಣ ಎಸೆದ ಡಿ.ಕೆ. ಶಿವಕುಮಾರ…!

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ರ್ಯಾಲಿಯಲ್ಲಿ ಜನರ ಮೇಲೆ ಹಣ ಎಸೆದಿದ್ದಾರೆ. ವಿಡಿಯೋದಲ್ಲಿ ಶಿವಕುಮಾರ ಅವರು ಮಂಡ್ಯ ತಾಲೂಕಿನ ಬೇವಿನಹಳ್ಳಿ ಬಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಬಸ್‌ ಮೇಲಿಂದ ಜಾನಪದ ಕಲಾವಿದರಿಗೆ ಹಣವನ್ನು ಎರಚುವುದು ಕಂಡುಬಂದಿದೆ. ಮಂಡ್ಯ ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೇವಿನಹಳ್ಳಿ ಗ್ರಾಮದಲ್ಲಿ ಮಂಗಳವಾರ … Continued

ಕಣ್ಣಿನ ಕಾಯಿಲೆ ಪತ್ತೆ ಹಚ್ಚಲು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧಾರಿತ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 10 ವರ್ಷದ ಕೇರಳ ಮೂಲದ ಬಾಲಕಿ…!

ಅಪ್ಲಿಕೇಶನ್ ಅನ್ನು ರಚಿಸುವ ಮೂಲಕ ಅತ್ಯಂತ ಕಿರಿಯ ಐಒಎಸ್ ಡೆವಲಪರ್ ಆಗಿರುವ ಹನಾ ರಫೀಕ್ ಎಂಬ 9 ವರ್ಷದ ಹುಡುಗಿ ನೆನಪಿದೆಯೇ? ನಂತರ ಅವಳು ಆಪಲ್ ಸಿಇಒ ಟಿಮ್ ಕುಕ್ ಅವರಿಂದ ಪ್ರಶಂಸೆ ಪಡೆದಳು. ಈಗ ಅವಳ ಸಹೋದರಿ ಲೀನಾ ರಫೀಕ್ ಕೂಡ ಸುದ್ದಿಯಾಗುತ್ತಿದ್ದಾಳೆ. ದುಬೈನಲ್ಲಿರುವ ಭಾರತದ ಕೇರಳ ಮೂಲದ ಈ ಹುಡುಗಿ ಕೇವಲ 10ನೇ … Continued

ಅಪಹರಣ ಪ್ರಕರಣ: ಗ್ಯಾಂಗ್‌ಸ್ಟರ್‌- ರಾಜಕಾರಣಿ ಅತೀಕ್ ಅಹ್ಮದ್ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

ಪ್ರಯಾಗ್‌ರಾಜ್: 2006ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಪ್ರಯಾಗ್‌ರಾಜ್‌ನ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿದ ನಂತರ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಅತೀಕ್ ಅಹ್ಮದ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಕೊಲೆ ಮತ್ತು ಅಪಹರಣ ಸೇರಿದಂತೆ ಕನಿಷ್ಠ 100 ಕ್ರಿಮಿನಲ್ … Continued

ವಿದ್ಯಾರ್ಥಿನಿ ಅಂಕಪಟ್ಟಿಯಲ್ಲಿ ಪ್ರಮಾದ..ಅವಳು ನಿಧನಳಾಗಿದ್ದಾಳೆ ಎಂದು ಬರೆದ ಶಿಕ್ಷಕ…!

ಮಾರ್ಕ್ಸ್‌ ಕಾರ್ಡ್‌ನಲ್ಲಿ ಶಿಕ್ಷಕರ ಕಾಮೆಂಟ್ ಅತ್ಯಗತ್ಯ. ಪಾಲಕರು ತಮ್ಮ ಮಗುವಿನ ಬಗ್ಗೆ ಶಿಕ್ಷಕರು ಏನು ಹೇಳುತ್ತಾರೆಂದು ತಿಳಿಯಲು ತುಂಬಾ ಉತ್ಸುಕರಾಗಿರುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕರೊಬ್ಬರು ಮಾಡಿದ ಪ್ರಮಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣಗೊಳಿಸುತ್ತಿದೆ. ಶಿಕ್ಷಕ ಅಂಕಪಟ್ಟಿಯಲ್ಲಿ ಬರೆದ ಟಿಪ್ಪಣಿಯ ಸ್ಕ್ರೀನ್‌ಶಾಟ್ ಈಗ ವೈರಲ್ ಆಗುತ್ತಿದೆ, ಅದರಲ್ಲಿ ಅವರು 2019ನೇ ವರ್ಷದ ಅಂಕಪಟ್ಟಿಯ ಮೇಲೆ ವಿದ್ಯಾರ್ಥಿನೊಯೊಬ್ಬಳು ಉತ್ತೀರ್ಣಳಾಗಿದ್ದಾಳೆ ಎಂದು … Continued

ಶಾಸಕ ಮಾಡಾಳು ವಿರೂಪಾಕ್ಷಪ್ಪ ಐದು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ : ನ್ಯಾಯಾಲಯ ಆದೇಶ

ಬೆಂಗಳೂರು : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು 5 ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಲೋಕಾಯುಕ್ತ ದಾಳಿ ವೇಳೆ ಪುತ್ರ ಪ್ರಶಾಂತ್ ಮಾಡಾಳು ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟಿನಲ್ಲಿ ನಿರೀಕ್ಷಣಾ … Continued

ಕ್ರಿಕೆಟ್‌ : ನಾನ್-ಸ್ಟ್ರೈಕರ್‌ನ ತುದಿಯಲ್ಲಿ ರನ್ ಔಟ್ ಆದ ನಂತರ ಸಿಟ್ಟಿನಿಂದ ಬ್ಯಾಟ್ ಎಸೆದ ಬ್ಯಾಟರ್‌ | ವೀಕ್ಷಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ ಎಷ್ಟೇ ಬಾರಿ ‘ನಾನ್-ಸ್ಟ್ರೈಕರ್ ರನ್-ಔಟ್’ ನಿಯಮದ ಪ್ರಕಾರ ಸರಿ ಎಂದು ನಿಯಮ ಮಾಡಿದರೂ ಕೆಲವರು ಇನ್ನೂ ಅದರ ವಿರುದ್ಧವಾಗಿಯೇ ಉಳಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಪಂದ್ಯವೊಂದರಲ್ಲಿ, ನಾನ್ ಸ್ಟ್ರೈಕರ್ ಬ್ಯಾಟರ್‌ ಅನ್ನು ಬೌಲರ್‌ ನಾನ್-ಸ್ಟ್ರೈಕರ್ ರನ್-ಔಟ್ ಮಾಡಿದರು. ಆದರೆ ನಂತರ ನಿಜಕ್ಕೂ ಅನಿರೀಕ್ಷಿತ ವಿದ್ಯಮಾನ ನಡೆಯಿತು. … Continued