10 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ ವಶಕ್ಕೆ

ವಿಜಯನಗರ: ಮೂರು ದಿನಗಳ ಹಿಂದೆ ವಿಜಯನಗರ ಪೊಲೀಸರು ಒಂದುವರೆ ಕೋಟಿ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದರು. ಪ್ರಕರಣದ ಬೆನ್ನುಹತ್ತಿದ ಅವರಿಗೆ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ (ಎಂಬರ್‌ ಗ್ರೀಸ್‌) ಸಿಕ್ಕಿದೆ. ಡಿಸೆಂಬರ್ 21ರಂದು ವಿಜಯನಗರ ಬಸ್ ನಿಲ್ದಾಣದ ಸುತ್ತ-ಮುತ್ತ ಇಬ್ಬರು ಅನುಮಾನಸ್ಪಾದವಾಗಿ ಓಡಾಡುತ್ತಿದ್ದರು. ಈ ಹಿನ್ನೆಲೆ ಖಚಿತ ಮಾಹಿತಿ ಪಡೆದುಕೊಂಡು ಇಬ್ಬರನ್ನೂ ಹೊಸಪೇಟೆ … Continued

ಪ್ರವಾದಿ ಮುಹಮ್ಮದ್‌ ಕುರಿತ ವಸೀಂ ರಿಜ್ವಿ ಬರೆದ ಪುಸ್ತಕ ನಿಷೇಧಿಸಲು ಕೋರಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಶಿಯಾ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿಯವರ ‘ಮುಹಮ್ಮದ್’ ಕೃತಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ನಿರ್ವಹಣೆಯ ಆಧಾರದಲ್ಲಿ ತಿರಸ್ಕರಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ತಿಳಿಸಿದೆ. ಇತ್ತೀಚೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಕೇಂದ್ರ ಶಿಯಾ ವಕ್ಫ್ ಮಂಡಳಿಯ ಮಾಜಿ ಸದಸ್ಯ ಮತ್ತು ಅಧ್ಯಕ್ಷರಾಗಿದ್ದ ರಿಜ್ವಿ, ಜಿತೇಂದ್ರ ನಾರಾಯಣ … Continued

60+, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್‌ ಡೋಸ್‌; 15-18 ವರ್ಷ ವಯಸ್ಸಿನವರಿಗೆ ಜನವರಿ 3ರಿಂದ ಲಸಿಕೆ : ಪ್ರಧಾನಿ ಮೋದಿ ಮಹತ್ವದ ಘೋಷಣೆ

ನವದೆಹಲಿ: 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3 (ಸೋಮವಾರ) ರಿಂದ ಲಸಿಕೆ ನೀಡಲಾಗುವುದು ಮತ್ತು ಆರೋಗ್ಯ ಮತ್ತು ಮುಂಚೂಣಿಯಲ್ಲಿರುವ ಕಾರ್ಯಕರ್ತರು ಮತ್ತು ಇತರ ಆರೋಗ್ಯ ಸಮಸ್ಯೆಗಳಿರುವ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್ಮಸ್‌ ದಿನವಾದ ಶನಿವಾರ ಘೋಷಿಸಿದ್ದಾರೆ. ಇಂದು ಮುಂಜಾನೆ, ಔಷಧ ನಿಯಂತ್ರಕದಿಂದ 12 … Continued

ಗೂಢಚಾರಿಕೆಗಾಗಿ ಪಾಕಿಸ್ತಾನದ ಜೈಲಿನಲ್ಲಿದ್ದು ಬಿಡುಗಡೆಯಾಗಿ 29 ವರ್ಷಗಳ ನಂತರ ಭಾರತಕ್ಕೆ ಬಂದ ಕುಲದೀಪ್ ಸಿಂಗ್

ಜಮ್ಮು: ಪಾಕಿಸ್ತಾನದ ಜೈಲಿನಲ್ಲಿ 29 ವರ್ಷಗಳನ್ನು ಕಳೆದ ನಂತರ, ಕಥುವಾ ನಿವಾಸಿ ಕುಲದೀಪ್ ಸಿಂಗ್ ಶುಕ್ರವಾರ ರಾತ್ರಿ ಇಲ್ಲಿ ತಮ್ಮ ತವರಿಗೆ ಆಗಮಿಸಿದಾಗ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ನಂತರ ಅವರು “ದೇಶಕ್ಕಾಗಿ ಯಾವುದೇ ತ್ಯಾಗದಿಂದ ಹಿಂದೆ ಸರಿಯಬೇಡಿ” ಎಂದು ಯುವಕರನ್ನು ಕೇಳಿದರು. ಔರಂಗಾಬಾದ್‌ನ ಮೊಹಮ್ಮದ್ ಗುಫ್ರಾನ್ ಅವರೊಂದಿಗೆ ಕಥುವಾ ನಿವಾಸಿ ಕುಲದೀಪ್ ಸಿಂಗ್ ಸಿಂಗ್ … Continued

ಓಮಿಕ್ರಾನ್ ಸಾಂಕ್ರಾಮಿಕ: ಆನ್‌ಲೈನ್‌ ವಿವಾಹಕ್ಕೆ ಅನುವು ಮಾಡಿಕೊಟ್ಟ ಕೇರಳ ಹೈಕೋರ್ಟ್

ಓಮಿಕ್ರಾನ್ ಸಾಂಕ್ರಾಮಿಕ ರೋಗದಿಂದಾಗಿ ವಿವಾಹವಾಗಲು ತೊಂದರೆ ಅನುಭವಿಸುತ್ತಿದ್ದ ದಂಪತಿಯ ನೆರವಿಗೆ ಕೇರಳ ಹೈಕೋರ್ಟ್ ಬಂದಿದೆ. ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದ ವಕೀಲ ಅನಂತ ಕೃಷ್ಣನ್‌ ಹರಿಕುಮಾರನ್‌ ನಾಯರ್‌ ಹಾಗೂ ಕೋಯಿಕ್ಕೋಡ್‌ ನಿವಾಸಿಯಾದ ವಕೀಲೆ ರಿಂಟು ಥಾಮಸ್‌ ಇದೇ ಡಿ. 23ರಂದು ವಿವಾಹವಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಅನಂತ ಕೃಷ್ಣನ್‌ ಅವರು ಡಿ. 22ರಂದು ವಿಮಾನದ ಟಿಕೆಟ್‌ ಬುಕ್‌ … Continued

ಜನವರಿ 1ರಿಂದ ಸರ್ಕಾರದ ಪ್ರಕರಣಗಳಲ್ಲೂ ಇ-ಫೈಲಿಂಗ್‌ ಕಡ್ಡಾಯಗೊಳಿಸಿದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಮುಂದಿನ ವರ್ಷದ ಜನವರಿ 1ರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಅವುಗಳಿಂದ ಮಾನ್ಯತೆ ಪಡೆದಿರುವ ಎಲ್ಲಾ ಕಚೇರಿಗಳು ತಮ್ಮ ಪ್ರಕರಣ/ಮನವಿಗಳು/ ಕೋರಿಕೆ ಮತ್ತು ದಾಖಲೆಗಳನ್ನು ಇ-ಫೈಲಿಂಗ್‌ ವ್ಯವಸ್ಥೆ ಮೂಲಕ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಎಲೆಕ್ಟ್ರಾನಿಕ್‌ ಫೈಲಿಂಗ್‌ (ಇ-ಫೈಲಿಂಗ್‌) ನಿಯಮಗಳು 2021 ಅಧಿಸೂಚನೆ ಹೊರಡಿಸುವವರೆಗೆ https://efiling.ecourts.gov.in ಮೂಲಕ … Continued

ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಜನಸಂಖ್ಯೆ ಕುಸಿತ ತಡೆಯಲು ಚೀನಾ ಪ್ರಾಂತ್ಯದ ನೂತನ ಯೋಜನೆ..!

ವೇಗವಾಗಿ ಕುಗ್ಗುತ್ತಿರುವುದರಿಂದ ಚೀನಾದ ಪ್ರಾಂತ್ಯವು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸಲು ವಿಶೇಷ ಸಾಲ ಯೊಜನೆಗಳನ್ನು ಜಾರಿಗೆ ತರುತ್ತಿದೆ, ಏಕೆಂದರೆ ವೇಗವಾಗಿ ವಯಸ್ಸಾಗುತ್ತಿರುವ ದೇಶದಲ್ಲಿ ಜನನಗಳಲ್ಲಿನ ಕುಸಿತ ತಡೆಯಲು ವಿವಿಧ ಯೋಜನೆಗಳನ್ನು ಪ್ರಕಟಿಸಲಾಗುತ್ತಿದೆ. ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸುವ ನೀತಿಗಳ ಅಧಿಕೃತ ನೀಲನಕ್ಷೆಯ ಪ್ರಕಾರ, ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯವು ವಿವಾಹಿತ ದಂಪತಿಗಳಿಗೆ 2,00,000 ಯುವಾನ್ ​ … Continued

ಗೆಲಕ್ಸಿಗಳು, ದೂರದ ಪ್ರಪಂಚ ನೋಡಲು ವಿಶ್ವದ ಅತ್ಯಂತ ದೊಡ್ಡ, ಪ್ರಭಾವಶಾಲಿ ದೂರದರ್ಶಕ ಜೇಮ್ಸ್​ ವೆಬ್​​ ಉಡಾವಣೆ ಮಾಡಿದ ನಾಸಾ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇಂದು, ( ಶನಿವಾರ) ಸಂಜೆ 5:50ರ ಹೊತ್ತಿಗೆ ಜೇಮ್ಸ್​ ವೆಬ್​ ಬಾಹ್ಯಾಕಾಶ ದೂರದರ್ಶಕ (JWST-James Webb Space Telescope)ವನ್ನು ಫ್ರಾನ್ಸ್​ನ ಫ್ರೆಂಚ್​ ಗಯಾನಾದಿಂದ ಉಡಾವಣೆ ಮಾಡಿದೆ. ನಾಸಾ ಇದುವರೆಗೆ ನಿರ್ಮಿಸಿದ ಅತ್ಯಂತ ದೊಡ್ಡ ಟೆಲಿಸ್ಕೋಮ್​ ಎಂದು ತಿಳಿಸಲಾಗಿದ್ದು, ಕ್ರಿಸ್​ಮಸ್​ ದಿನವೇ ಉಡಾವಣೆಗೊಳಿಸಲಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪ್​ ಇದಾಗಿದ್ದು, 1990ರ … Continued

ಕಾಶ್ಮೀರದಲ್ಲಿ 2 ಪ್ರತ್ಯೇಕ ಎನ್‌ಕೌಂಟರ್‌: ನಾಲ್ವರು ಉಗ್ರರ ಹೊಡೆದುರುಳಿಸಿದ ಸೇನೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಪಿಯಾನ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಹೊಡೆದುರುಳಿಸಿದರೆ, ಪುಲ್ವಾಮಾದಲ್ಲಿ ಇಬ್ಬರು ಗುರುತು ಪತ್ತೆಯಾಗದ ಉಗ್ರರನ್ನು ಕೊಲ್ಲಲಾಗಿದೆ. ಶೋಪಿಯಾನ್‌ನ ಚೌಗಮ್ ಗ್ರಾಮ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ … Continued

ಗಾಳಿಪಟ ಹಾರಿಸುವಾಗ ಪಟದೊಂದಿಗೆ ಗಾಳಿಯಲ್ಲಿ ಹಾರಿಹೋದ ವ್ಯಕ್ತಿ…! ವೀಕ್ಷಿಸಿ

ವ್ಯಕ್ತಿಯೊಬ್ಬರು ಗಾಳಿಪಟದ ದಾರದೊಂದಿಗೆ ಹಾರಿಹೋಗಿ ಕೆಲ ಸಮಯ ಗಾಳಿಯಲ್ಲಿ ಹಾರಾಡಿ ನಂತರ ನೆಲಕ್ಕೆ ಬಿದ್ದ ವಿಡಿಯೋ ವೈರಲ್​ ಅಗಿದೆ. ವ್ಯಕ್ತಿ ಗಾಳಿಪಟ ಹಾರಿಸುತ್ತಿದ್ದಾಗ ಸೆಣಬಿನ ದಾರ ಹಿಡಿದುಕೊಂಡಿದ್ದ. ಆದರೆ ಗಾಳಿ ಬಲವಾಗಿ ಬೀಸಿದ ಕಾರಣ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಹಾರಿಹೋದ ವಿಚಿತ್ರ ಘಟನೆ ನಡೆದಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದ್ದು, ಈ ಉಸಿರು ಬಿಗಿಹಿಡಿಯುವ … Continued