ವಯಸ್ಕರಿಗಿಂತ 2ರಿಂದ 18 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ ಎಂದ ಭಾರತ್ ಬಯೋಟೆಕ್

ಹೈದರಾಬಾದ್: ಕೋವಿಡ್‌ ವಿರೋಧಿ ಕೋವ್ಯಾಕ್ಸಿನ್ ವಯಸ್ಕರಿಗಿಂತ 2 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಉಂಟುಮಾಡಿ ಪರಿಣಾಮಕಾರಿಯಾಗಿ ಕೋವಿಡ್-19 ವಿರುದ್ಧ ಹೋರಾಡಲು ಶಕ್ತಿ ತುಂಬಿದೆ. ಮತ್ತು ಕೋವ್ಯಾಕ್ಸಿನ್ ತುಂಬಾ ಸುರಕ್ಷಿತ ಎಂದು ಭಾರತ್ ಬಯೋಟೆಕ್ ಹೇಳಿದೆ. 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ … Continued

ಅಚ್ಚರಿ ತರುವ ಪ್ರಾಣಿಗಳ ಬುದ್ಧಿವಂತಿಕೆ…ನಲ್ಲಿ ಬಿಟ್ಟುನೀರು ಕುಡಿದು ನಂತರ ನಳ ಬಂದ್‌ ಮಾಡುವ ಮಂಗ-ಹಸು..! ವೀಕ್ಷಿಸಿ

ನೀರು ಜೀವಜಲ ಅದೆಷ್ಟು ಅಮೂಲ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಒಂದಷ್ಟು ಸಂದರ್ಭದಲ್ಲಿ ನಾವು ಮನುಷ್ಯರು ನೀರನ್ನು ಪೋಲು ಮಾಡುತ್ತೇವೆ. ನೀರೆಂಬ ಅಮೃತವನ್ನು ಮಿತವಾಗಿ ಬಳಸಬೇಕು ಎಂದು ಗೊತ್ತಿದ್ದರೂ ಒಂದಷ್ಟು ಸಂದರ್ಭದಲ್ಲಿ ನೀರು ಪೋಲಾಗಿ ಹೋಗುತ್ತದೆ. ಹೀಗೆ ನೀರಿನ ಪ್ರಾಮುಖ್ಯತೆ ಗೊತ್ತಿದ್ದೂ ನೀರು ಪೋಲು ಮಾಡುವವರಿಗೆ ಈ ದೃಶ್ಯ ಒಂದು ಪಾಠವಾಗಿದೆ. ಪ್ರಾಣಿಗಳು ತೋರುವ ಬುದ್ಧಿವಂತಿಕೆ, … Continued

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣದಲ್ಲಿ ಭಾರೀ ಏರಿಕೆ..198 ಹೊಸ ಪ್ರಕರಣಗಳು ದಾಖಲು

ಮುಂಬೈ: ಮಹಾರಾಷ್ಟ್ರವು ಗುರುವಾರ ಓಮಿಕ್ರಾನ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ. ಹೊಸದಾಗಿ 198 ಪ್ರಕರಣಗಳು ದಾಖಲಾಗಿದೆ. ರಾಜ್ಯ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ ಈಗ 450ಕ್ಕೆ ಏರಿದೆ. ಮತ್ತೊಂದೆಡೆ, ಮುಂಬೈ 3,671 ತಾಜಾ ಸೋಂಕುಗಳನ್ನು ದಾಖಲಿಸಿದೆ, ಇದು ಡೇಟಾ ಪ್ರಕಾರ ನಿನ್ನೆಯ ಸಂಖ್ಯೆಗಳಿಗೆ ಹೋಲಿಸಿದರೆ 46% … Continued

ಕೌಶಲ್ಯಭರಿತ ತರಬೇತಿ ಇಂದಿನ ಅಗತ್ಯ:ಡಾ. ಅಜಿತ ಪ್ರಸಾದ

ಧಾರವಾಡ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಳ್ಳೆಯ ಉದ್ಯೋಗ ಅಥವಾ ಸ್ವ ಉದ್ಯೋಗ ಪ್ರಾರಂಭಿಸಬೇಕಾದರೆ ಕೌಶಲ್ಯಭರಿತ ತರಬೇತಿ ಅತಿ ಅವಶ್ಯವಾಗಿದೆ. ಎಲ್ಲ ರಂಗಗಳಲ್ಲೂ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದ್ದು, ತಂತ್ರಜ್ಞಾನ, ಮಾರುಕಟ್ಟೆ ಜ್ಞಾನ, ಸಾಮಾನ್ಯ ಜ್ಞಾನ ಮುಂತಾದವುಗಳ ಬಗ್ಗೆ ಮಾಹಿತಿ ಇದ್ದವರು ಮಾತ್ರ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯ ಎಂದು ಪ್ರಾಚಾರ್ಯರಾದ ಡಾ. ಅಜಿತ್ ಪ್ರಸಾದ ಹೇಳಿದರು. ಜೆ.ಎಸ್.ಎಸ್ … Continued

ಮತ್ತೆ ವೇಗವಾಗಿ ಏರುತ್ತಿದೆ ಕೊರೊನಾ: ಮುಂಬೈ-ದೆಹಲಿ -ಕೋಲ್ಕತ್ತಾದಲ್ಲಿ ಒಂದೇ ದಿನದಲ್ಲಿ ಸೋಂಕು ದ್ವಿಗುಣ, 6 ರಾಜ್ಯಗಳಲ್ಲಿ ಮೇ ಸ್ಥಿತಿಗೆ ಬಂದ ದೈನಂದಿನ ಸೋಂಕು..! ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಜಾರ್ಖಂಡ್ ಎಂಬ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಿನ ಏರಿಕೆಯನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಪ್ತಾಹಿಕ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯನ್ನು ಕಂಡಿವೆ ಮತ್ತು ಪ್ರಕರಣದ … Continued

ಆಮ್‌ ಆದ್ಮಿ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂತೋಷ ನರಗುಂದ ರಾಜೀನಾಮೆ

ಹುಬ್ಬಳ್ಳಿ: ಆಮ್‌ ಆದ್ಮಿ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂತೋಷ ನರಗುಂದ ಅವರು ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಜೊತೆ ಈ ಕುರಿತು ಮಾತನಾಡಿದ್ದು, ಇಂದಿನಿಂದ ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ಬಿಟ್ಟುಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಕಳೆದೆರಡು ವರ್ಷದ … Continued

ಕರ್ನಾಟಕದಲ್ಲಿ ಕೊರೊನಾ ಏರಿಕೆ: ಬೆಂಗಳೂರಲ್ಲಿ 565 ಸೇರಿ ಹೊಸದಾಗಿ ರಾಜ್ಯದಲ್ಲಿ 707 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಎರಡನೇ ದಿನವೂ ಏರಿಕೆ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 707 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 30,065,05ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮಹಾಮಾರಿ ಕೊರೊನಾದಿಂದ ಇಂದು, ಗುರುವಾರ ಮೂವರು ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 38,327ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ … Continued

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಬೀಗಿದ ಕಾಂಗ್ರೆಸ್ , ಮಂಕಾದ ಬಿಜೆಪಿ, ಎರಡಂಕಿಗೆ ಕುಸಿದ ಜೆಡಿಎಸ್

ಪಟ್ಟಣ ಪಂಚಾಯತಿ: ಒಟ್ಟು ಸ್ಥಾನಗಳು- 577; ಬಿಜೆಪಿ 194, ಕಾಂಗ್ರೆಸ್ 236, ಜೆಡಿಎಸ್​ 12, ಸ್ವತಂತ್ರ 135. ಪುರಸಭೆ: ಒಟ್ಟು ಸ್ಥಾನಗಳು- 441; ಬಿಜೆಪಿ 176, ಕಾಂಗ್ರೆಸ್​ 201, ಜೆಡಿಎಸ್​ 21, ಸ್ವತಂತ್ರ 43. ನಗರಸಭೆ: ಒಟ್ಟು ಸ್ಥಾನಗಳು- 166: ಬಿಜೆಪಿ-67: ಕಾಂಗ್ರೆಸ್​-61; ಜೆಡಿಎಸ್​-12; ಸ್ವತಂತ್ರ-26 ಬೆಂಗಳೂರು: ರಾಜ್ಯದ 58 ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ … Continued

ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ: ನಾಳೆ ಕರ್ನಾಟಕ ಬಂದ್‌ ಇಲ್ಲ

ಬೆಂಗಳೂರು: ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈಗ ಬಂದ್ ಕರೆಯನ್ನು ಹಿಂಪಡೆದಿದ್ದಾರೆ. ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡುವಂತೆ ಒತ್ತಾಯಿಸಿ ನಾಳೆ, ಡಿಸೆಂಬರ್ 31ರಂದು ಅವರು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ವಾಟಾಳ್ ನಾಗರಾಜ್ ಬಂದ್ ವಾಪಸ್ ಪಡೆದುಕೊಂಡಿದ್ದಾರೆ. … Continued

ರಾಯಚೂರು ಜಿಲ್ಲೆ ಪಟ್ಟಣ ಪಂಚಾಯತ ಫಲಿತಾಂಶ: ಬಿಜೆಪಿಗಿಂತ ಕಾಂಗ್ರೆಸ್‌ ಮುಂದೆ…ಕೇವಲ ಒಂದೇ ಮತದಿಂದ ಗೆದ್ದ ಬಿಜೆಪಿ ಅಭ್ಯರ್ಥಿ

ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತದ​ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಸಿರವಾರ ಪಟ್ಟಣದ 5ನೇ ವಾರ್ಡ್ ಮಹಿಳಾ ಅಭ್ಯರ್ಥಿ ಲಕ್ಷ್ಮಿ ಆದೆಪ್ಪ ಅವರೇ ಕೇವಲ ಒಂದೇ ಮತದಿಂದ ಗೆಲುವು ಸಾಧಿಸಿದವರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶೈಲಜಾ ಉಮಾಶಂಕರ ಕುಲಕರ್ಣಿ ಒಂದೇ ಒಂದು ಮತದಿಂದ … Continued