ವಿಶ್ವದ ಪ್ರಮುಖ ಪತ್ರಿಕೆಗಳಲ್ಲಿ ಹೆಡ್‌ಲೈನ್ಸ್‌ ಪಡೆದ ಪ್ರಧಾನಿ ಮೋದಿ ತವರು ಗುಜರಾತ್‌ನಲ್ಲಿನ ಬಿಜೆಪಿ ಅಭೂತಪೂರ್ವ ಗೆಲುವು…! ಜಾಗತಿಕ ಮಾಧ್ಯಮಗಳ ಪ್ರತಿಕ್ರಿಯೆ ಇಲ್ಲಿದೆ

ನವದೆಹಲಿ : ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಯ ಅಭೂತಪೂರ್ವ ಗೆಲುವು ಭಾರತೀಯ ರಾಜಕೀಯ ವಲಯದಲ್ಲಿ ಸಂಚಲನವನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ ವಿಶ್ವದ ಪತ್ರೆಕೆಗಳಲ್ಲಿಯೂ ಹೆಡ್‌ಲೈನ್ಸ್‌ ಪಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ನೆಲವಾದ ಗುಜರಾತಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಜಯಗಳಿಸಿದೆ ಎಂದು ಜಾಗತಿಕ ಸುದ್ದಿವಾಹಿನಿಗಳು ವ್ಯಾಪಕವಾಗಿ … Continued

ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮದರಸಾಗಳ ಬಗ್ಗೆ ತನಿಖೆ ನಡೆಸಿ: ರಾಜ್ಯಗಳಿಗೆ ಎನ್‌ಸಿಪಿಸಿಆರ್‌ ಸೂಚನೆ

ನವದೆಹಲಿ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಶುಕ್ರವಾರ ಎಲ್ಲಾ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟೀಸ್ ಜಾರಿ ಮಾಡಿದ್ದು, ಸರ್ಕಾರದಿಂದ ಹಣ ಪಡೆಯುವ ಎಲ್ಲಾ ಮದರಸಾಗಳ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಸೂಚಿಸಿದೆ. ಅಂತಹ ಮದರಸಾಗಳಿಗೆ ಪ್ರವೇಶ ಪಡೆಯುತ್ತಿರುವ ಮುಸ್ಲಿಮೇತರ ಮಕ್ಕಳ ದಾಖಲೆಯನ್ನು ಇರಿಸಿಕೊಳ್ಳಲು ಮತ್ತು ಅಂತಹ ಎಲ್ಲಾ ಮಕ್ಕಳನ್ನು ವಿಚಾರಣೆಯ … Continued

ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ ಆಯೋಜನೆ ; ಮಹಾ ಸಿಎಂ ಶಿಂಧೆ, ಪವಾರ, ಠಾಕ್ರೆಗೆ ಅಹ್ವಾನ

ಬೆಳಗಾವಿ : ಬೆಳಗಾವಿಯಲ್ಲಿ ಡಿಸೆಂಬರ್ 19ರಿಂದ ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನ ಆರಂಭವಾಗಲಿದೆ. ಪ್ರತಿ ವರ್ಷದಂತೆ ಇದಕ್ಕೆ ಪ್ರತಿಯಾಗಿ ಅಧಿವೇಶನ ಸಮಯದಲ್ಲೇ ಎಂಇಎಸ್ ಮಹಾಮೇಳಾವನ್ನು ಡಿಸೆಂಬರ್ 19 ರಂದು ಆಯೋಜಿಸಿದೆ. ಈ ವರ್ಷ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಎಂಇಎಸ್ ಈ ಬಾರಿ ಮಹಾಮೇಳಾವವನ್ನು ಜೋರಾಗಿ ನಡೆಸಲು ತಯಾರಿ ನಡೆಸುತ್ತಿದೆ. ಡಿಸೆಂಬರ್ 19 … Continued

ಬಿಎಸ್‌ಎನ್‌ಎಲ್‌ 5 ರಿಂದ 7 ತಿಂಗಳಲ್ಲಿ 5Gಗೆ ಅಪ್‌ಗ್ರೇಡ್ ; 1.35 ಲಕ್ಷ ಟವರ್‌ಗಳಿಗೆ ಇದು ವಿಸ್ತರಣೆ : ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ (BSNL)ನ 4G ತಂತ್ರಜ್ಞಾನವನ್ನು 5-7 ತಿಂಗಳುಗಳಲ್ಲಿ 5Gಗೆ ಅಪ್‌ಗ್ರೇಡ್ ಮಾಡಲಾಗುವುದು ಮತ್ತು ಕಂಪನಿಯು ದೇಶದಲ್ಲಿ ಹೊಂದಿರುವ 1.35 ಲಕ್ಷ ಟೆಲಿಕಾಂ ಟವರ್‌ಗಳಲ್ಲಿ ಹೊರತರಲಾಗುವುದು ಎಂದು ಕೇಂದ್ರ ದೂರಸಂಪರ್ಕ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. ಸಿಐಐ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಸ್ಥಳೀಯ ಆವಿಷ್ಕಾರಗಳನ್ನು ಉತ್ತೇಜಿಸಲು ಟೆಲಿಕಾಂ ತಂತ್ರಜ್ಞಾನ … Continued

ಅದು ಪ್ರಾಣಿಯೇ ಅಥವಾ ವ್ಯಕ್ತಿಯೇ? ಬೆರಗುಗೊಳಿಸುತ್ತದೆ ಈ ವೀಡಿಯೋ | ವೀಕ್ಷಿಸಿ

ಪ್ರಪಂಚದಾದ್ಯಂತ ಜನರು ಪ್ರದರ್ಶಿಸುವ ಎಲ್ಲಾ ಪ್ರತಿಭೆಗಳನ್ನು ಹುಡುಕಲು ಇಂಟರ್ನೆಟ್ ಅತ್ಯುತ್ತಮ ಸ್ಥಳವಾಗಿದೆ. ಅವುಗಳಲ್ಲಿ ಕೆಲವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿದರೆ, ಇನ್ನು ಕೆಲವು ನಿಮ್ಮನ್ನು ವಿಸ್ಮಯಗೊಳಿಸುತ್ತವೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಅಂತಹ ಒಂದು ವೀಡಿಯೊ ಕ್ಲಿಪ್ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ವೀಕ್ಷಿಸುವಂತೆ ಮಾಡುತ್ತದೆ. ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್ ಟ್ಯಾಲೆಂಟ್ ಹಂಟ್ ಶೋನಲ್ಲಿ ಕೆಲವರು … Continued

ಮಂಗಳೂರು ಕಾಲೇಜಿನ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ 4 ವಿದ್ಯಾರ್ಥಿಗಳ ಅಮಾನತು

ಮಂಗಳೂರು: ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡುವಾಗ ಬುರ್ಖಾ ಧರಿಸಿ ಕಾಣಿಸಿಕೊಂಡಿದ್ದು, ನೃತ್ಯವು ಬುರ್ಖಾ ಮತ್ತು ಹಿಜಾಬ್ ಅನ್ನು ಅಣಕಿಸುತ್ತಿದೆ ಎಂಬ ಆರೋಪದ ನಂತರ ವಿವಾದಕ್ಕೆ ಕಾರಣವಾಗಿದೆ. ಘಟನೆ ಮಂಗಳೂರಿನ ವಾಮಂಜೂರು ಸೇಂಟ್‌ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಒಂದೇ ಸಮುದಾಯದವರಾಗಿದ್ದು, ನಾಲ್ವರು ವಿದ್ಯಾರ್ಥಿಗಳನ್ನು ಕಾಲೇಜು … Continued

ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಪುನರಾರಂಭ

ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿವಿವಾದ ಉಲ್ಬಣಗೊಂಡಿದ್ದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಬೆಳಗಾವಿ-ಮಹಾರಾಷ್ಟ್ರ ನಡುವಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಮತ್ತೆ ಆರಂಭವಾಗಿದೆ. ಬೆಳಗಾವಿ-ಮಹಾರಾಷ್ಟ್ರ ನಡುವೆ ಬೆಳಗಾವಿಯಿಂದ 400ಕ್ಕೂ ಹೆಚ್ಚು ಬಸ್ ಸಂಚರಿಸುತ್ತಿದ್ದು, ರಾಜ್ಯದಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಬಸ್ ಸಂಚಾರ ಆರಂಭಗೊಂಡಿದೆ. ಬೆಳಗಾವಿ ಹಾಗೂ ಇತರ ಭಾಗಗಳಿಂದ ಮಹಾರಾಷ್ಟ್ರದ ಕೊಲ್ಲಾಪುರ, ನಾಸಿಕ, ಮುಂಬೈ, ಪುಣೆ … Continued

ಹಿಮಾಚಲ ಪ್ರದೇಶ ಚುನಾವಣೆ : ಕಾಂಗ್ರೆಸ್‌- ಬಿಜೆಪಿ ನಡುವಿನ ಮತದ ಅಂತರ ಕೇವಲ ಶೇ.0.9ರಷ್ಟು ಮಾತ್ರ…

ನವದೆಹಲಿ: 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಗಳಿಸಿದೆ. ಹಿಂದಿನ ವಿಧಾನಸಭೆಯಲ್ಲಿ 44 ಸ್ಥಾನಗಳನ್ನು ಗೆದ್ದಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ಬಾರಿ 25 ಶಾಸಕರೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಿಮಾಚಲ ಪ್ರದೇಶದ ಈ ಚುನಾವಣೆಯ ಫಲಿತಾಂಶದಲ್ಲಿನ ಕುತೂಹಲಕಾರಿ ಸಂಗತಿಯೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ … Continued

ಇಂಗ್ಲೆಂಡಿನ ಸಮಾಧಿ ಸ್ಥಳದಲ್ಲಿ ಪತ್ತೆಯಾದ 1300 ವರ್ಷಗಳಷ್ಟು ಹಳೆಯದಾದ ‘ಅದ್ಭುತ’ ಚಿನ್ನದ ನೆಕ್ಲೇಸ್‌…!

ಮಧ್ಯ ಇಂಗ್ಲೆಂಡ್‌ನ ಆರಂಭಿಕ ಆಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ 1,300 ವರ್ಷಗಳ ಹಿಂದಿನ ಚಿನ್ನ ಮತ್ತು ಅಮೂಲ್ಯ ಮಣಿಗಳಿಂದ ಮಾಡಿದ ಹಾರವೊಂದು ಪತ್ತೆಯಾಗಿದೆ. ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಜಿಯ ಅಧಿಕೃತ ವೆಬ್‌ಸೈಟ್ (MOLA) ಇದು 630 AD ಮತ್ತು 670 AD ನಡುವಿನ ಕಾಲದ್ದಾಗಿದೆ ಎಂದು ಹೇಳಿದೆ. ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಜಿ (MOLA) ಪ್ರಕಾರ, … Continued

ನಿಲ್ದಾಣದಲ್ಲಿ ರೈಲ್ವೇ ಅಧಿಕಾರಿ ಮೇಲೆ ಬಿದ್ದ ವಿದ್ಯುತ್‌ ತಂತಿ, ಅಧಿಕಾರಿಗೆ ವಿದ್ಯುತ್‌ ಶಾಕ್‌ನಿಂದ ಗಾಯ, ಆಸ್ಪತ್ರೆಗೆ ದಾಖಲು | ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಶ್ಚಿಮ ಬಂಗಾಳದ ಖರಗ್‌ಪುರ ರೈಲು ನಿಲ್ದಾಣದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ವಿದ್ಯುತ್ ತಂತಿ ಮೈಮೇಲೆ ಬಿದ್ದು ರೈಲ್ವೇ ಅಧಿಕಾರಿಯೊಬ್ಬರು ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲೆಗೆ ಒಳಗಾಗಿದ್ದಾರೆ. ಪ್ರಯಾಣಿಕ ಟಿಕೆಟ್ ಪರೀಕ್ಷಕ (ಟಿಟಿಇ) ಅಧಿಕಾರಿಯೊಬ್ಬರು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದಾಗ ಅವರ ತಲೆಯ ಮೇಲೆ ಹೈ-ವೋಲ್ಟೇಜ್ ತಂತಿಯೊಂದು ತುಂಡಾಗಿ ಬಿದ್ದ ನಂತರ ಅವರು ಗಾಯಗೊಂಡರು. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಜನ್ … Continued