ಮೂಗಿನ ಮೂಲಕ ಬಿಡುವ ಭಾರತದ ಮೊದಲ ಕೋವಿಡ್ ಲಸಿಕೆಯ ಪರೀಕ್ಷೆ ಯಶಸ್ವಿ : ಭಾರತ್ ಬಯೋಟೆಕ್

ಹೈದರಾಬಾದ್: ಬಿಬಿವಿ 154 ಇಂಟ್ರಾನಾಸಲ್ (ಮೂಗಿನ ಮೂಲಕ ಬಿಡುವ) ಕೋವಿಡ್ ಲಸಿಕೆಗಾಗಿ ಮೂರನೇ ಹಂತದ ಪ್ರಯೋಗಗಳು ಮತ್ತು ಬೂಸ್ಟರ್ ಡೋಸ್‌ಗಳ ಕ್ಲಿನಿಕಲ್ ಅಭಿವೃದ್ಧಿಯನ್ನು ಪೂರ್ಣಗೊಳಿಸಿರುವುದಾಗಿ ಭಾರತ್ ಬಯೋಟೆಕ್ ಸೋಮವಾರ ಪ್ರಕಟಿಸಿದೆ. ಅಡೆನೊವೈರಲ್ ಮೂಗಿನ ಮೂಲಕ ಬಿಡುವ ಲಸಿಕೆ BBV154 ಭಾರತದಲ್ಲಿ ಮಾನವ ಪ್ರಯೋಗಗಳಿಗೆ ಒಳಗಾಗುವ ಈ ರೀತಿಯ ಕೋವಿಡ್ -19 ಲಸಿಕೆಗಳಲ್ಲಿ ಮೊದಲನೆಯದು. “BBV154 ನಿಯಂತ್ರಿತ … Continued

ಮುಂದಿನ 6 ತಿಂಗಳಲ್ಲಿ ಭಾರತದಲ್ಲಿ ಓಮಿಕ್ರಾನ್ ವಿರುದ್ಧದ ನಿರ್ದಿಷ್ಟ ಕೋವಿಡ್ ಲಸಿಕೆ ನಿರೀಕ್ಷಿಸಬಹುದು: ಅದಾರ್ ಪೂನಾವಾಲಾ

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು ಇನ್ನು ಆರು ತಿಂಗಳಲ್ಲಿ ಭಾರತಕ್ಕೆ ಕೋವಿಡ್‌ ರೂಪಾಂತರಿ ಓಮಿಕ್ರಾನ್ ವಿರುದ್ಧದ ನಿರ್ದಿಷ್ಟ ಲಸಿಕೆ ನಿರೀಕ್ಷಿಸಬಹುದು ಎಂದು ಸೋಮವಾರ ಹೇಳಿದ್ದಾರೆ. NDTV ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಲಸಿಕೆಯು ಓಮಿಕ್ರಾನ್‌ನ BA5 ಉಪ-ರೂಪಾಂತರಕ್ಕೆ ನಿರ್ದಿಷ್ಟ ಡೋಸ್‌ ಆಗಿದೆ … Continued

ಶಿವಮೊಗ್ಗದಲ್ಲಿ ಗಲಭೆ: ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕೋಮು ಗಲಭೆಯ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ನಾಳೆ, ಮಂಗಳವಾರ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಕೋಮು ಗಲಭೆ ನಡೆದಿದೆ. ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ್ ಸಾವರ್ಕರ … Continued

ಕೋಲಾರ: ದೇಶದಲ್ಲೇ ಅತಿ ದೊಡ್ಡ ತ್ರಿವರ್ಣ ಧ್ವಜ ಅನಾವರಣ

ಕೋಲಾರ: ದೇಶ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕೋಲಾರ ದೇಶದಲ್ಲೇ ಬೃಹತ್ ಧ್ವಜ ಪ್ರದರ್ಶಿಸುವ ಮೂಲಕ ಲಿಮ್ಕಾ ದಾಖಲೆ ಸ್ಥಾಪಿಸಿದೆ. ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ತ್ರಿವರ್ಣಧ್ವಜ ಅನಾವರಣಗೊಳಿಸಲಾಯಿತು. ಈ ಬೃಹತ್ ತ್ರಿವರ್ಣ ಧ್ವಜಕ್ಕೆ ಸೇನಾ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಲಾಯಿತಿ. ಈ ದೃಶ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡಿದ್ದಾರೆ. ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದ್ದ … Continued

ಕಲಘಟಗಿ: 9 ಕಿಮೀ ಉದ್ದದ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಹೊತ್ತು ಸಾಗಿದ ಜನರು

ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಇಂದು ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ 9 ಕಿ.ಮೀ. ಉದ್ದದ ರಾಷ್ಟ್ರಧ್ವಜವನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಮೆರವಣಿಗೆಯಲ್ಲಿ  ಹೊತ್ತು ಸಾಗಿದರು. ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ಜಾಥಾ ತಾಲೂಕಿನ ದಾಸ್ತಿಕೊಪ್ಪದಿಂದ ಆರಂಭಗೊಂಡಿತು.ಸುಮಾರು 12 ಸಾವಿರ ಮಹಿಳೆಯರು ರಾಷ್ಟ್ರಧ್ವಜದೊಂದಿಗೆ ಪೂರ್ಣಕುಂಭ ಹೊತ್ತು … Continued

ಅಪಘಾತಕ್ಕೀಡಾದ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ

ಶಿವಮೊಗ್ಗ: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಭದ್ರಾವತಿ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದ್ದು, ಬೆಂಗಾವಲು ಜೀಪಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಗೃಹ ಸಚಿವರು ತುಮಕೂರಿನಿಂದ ತೀರ್ಥಹಳ್ಳಿಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರು ಬೆಂಗಳೂರು ಕಡೆಗೆ ಹೋಗುತ್ತಿತ್ತು. ಈ ಪರಿಣಾಮ, ಬೆಂಗಾವಲು ವಾಹನ ಜಖಂಗೊಂಡಿದೆ. … Continued

ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಎಂಬ ಹೇಳಿಕೆ ನಂತರ ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಫಾರೂಕ್ ಅಬ್ದುಲ್ಲಾ

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಶ್ರೀನಗರದ ಲೋಕಸಭಾ ಸಂಸದ ಫಾರೂಕ್ ಅಬ್ದುಲ್ಲಾ ಅವರು ‘ಹರ್ ಘರ್ ತಿರಂಗಾ ಅಭಿಯಾನ’ದ ಬಗ್ಗೆ ಅಸಮಾಧಾನ ಹೊರಹಾಕಿದ ವಾರಗಳ ನಂತರ ದೇಶದ 7 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಜುಲೈ 6 ರಂದು, ಕೇಂದ್ರದ ಅಭಿಯಾನದ ಕುರಿತಾದ ಪ್ರಶ್ನೆಯೊಂದಕ್ಕೆ ಕಿರಕಿರಿಗೊಂಡ ಫಾರೂಕ್ ಅಬ್ದುಲ್ಲಾ … Continued

ಕೋವಿಡ್‌ ಓಮಿಕ್ರಾನ್ ರೂಪಾಂತರಕ್ಕೆ ಲಸಿಕೆ ಅನುಮೋದಿಸಿದ ಮೊದಲ ದೇಶವಾದ ಬ್ರಿಟನ್‌

ಓಮಿಕ್ರಾನ್ ರೂಪಾಂತರವನ್ನು ಗುರಿಯಾಗಿಸುವ ಕೋವಿಡ್ -19 ಲಸಿಕೆಯನ್ನು ಅಧಿಕೃತಗೊಳಿಸಿದ ಮೊದಲ ದೇಶ ಬ್ರಿಟನ್ ಆಗಿದೆ. ಬ್ರಿಟನ್‌ ಮೆಡಿಸಿನ್ ರೆಗ್ಯುಲೇಟರ್ (MHRA) ವಯಸ್ಕರಿಗೆ ಬೂಸ್ಟರ್ ಆಗಿ ಮಾಡರ್ನಾ ತಯಾರಿಸಿದ ‘ಬೈವಲೆಂಟ್’ ಲಸಿಕೆಯನ್ನು ಅನುಮೋದಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಏಜೆನ್ಸಿಯ ನಿರ್ಧಾರವು ಕ್ಲಿನಿಕಲ್ ಟ್ರಯಲ್ ಡೇಟಾವನ್ನು ಆಧರಿಸಿದೆ, ಅದು ಬೂಸ್ಟರ್ ಒಮಿಕ್ರಾನ್ (BA.1) ಮತ್ತು ಮೂಲ 2020 … Continued

ಶಿವಮೊಗ್ಗದಲ್ಲಿ ಮತ್ತೆ ಭುಗಿಲೆದ್ದ ಫೋಟೋ ವಿವಾದ: ಇಬ್ಬರಿಗೆ ಚೂರಿ ಇರಿತ, ಉದ್ವಿಗ್ನ, ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ಜಾರಿ

ಶಿವಮೊಗ್ಗ: ವೀರ ಸಾವರ್ಕರ್ ಭಾವಚಿತ್ರ ವಿಚಾರದಲ್ಲಿ ಎರಡು ಕೋಮಿನ ನಡುವೆ ಜಟಾಪಟಿಯಾಗಿ  ಪ್ರಹಾರ ನಡೆದ ಘಟನೆ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸೋಮವಾರ ನಡೆದಿದೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಎರಡು ಕೋಮುಗಳ ನಡುವೆ ಗಲಾಟೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144, ನಿಷೇದಾಜ್ಞೆ ಜಾರಿ … Continued

ಸ್ವಾತಂತ್ರ್ಯೋತ್ಸವ- 2022: ತ್ರಿವರ್ಣ ಧ್ವಜಕ್ಕೆ ಆರತಿ ಮಾಡುವ ಮಹಿಳೆಯ ವೀಡಿಯೊ ವೈರಲ್

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಪ್ರವೇಶದ್ವಾರದಲ್ಲಿ ನಿಲ್ಲಿಸಿದ್ದ ರಾಷ್ಟ್ರ ಧ್ವಜಕ್ಕೆ ಆರತಿ (ಪ್ರಾರ್ಥನೆ) ಮಾಡಿ ಪ್ರಾರ್ಥಿಸಿ ಗೌರವ” ಸಲ್ಲಿಸಿದ ವೀಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವನೀಶ್ ಶರಣ್ ಅವರು ಈ ವೀಡಿಯೊ ಟ್ವಿಟ್ಟರ್‌ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು ಹರ್ ಘರ್ ತಿರಂಗ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದ್ದಾರೆ. ಕೇಂದ್ರ … Continued