ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಲೇಖಕ ಸಲ್ಮಾನ್‌ ರಶ್ದಿಗೆ ವೆಂಟಿಲೇಟರ್‌ ತೆಗೆದಿದ್ದಾರೆ, ಈಗ ಮಾತನಾಡುತ್ತಿದ್ದಾರೆ

ನ್ಯೂಯಾರ್ಕ್‌: ಲೇಖಕ ಸಲ್ಮಾನ್ ರಶ್ದಿ ಅವರಿಗೆ ವೆಂಟಿಲೇಟರ್‌ ತೆಗೆಯಲಾಗಿದೆ ಮತ್ತು ಈಗ ಮಾತನಾಡಲು ಸಮರ್ಥರಾಗಿದ್ದಾರೆ. 75 ವರ್ಷದ ರಶ್ದಿ ಅವರಿಗೆ ಇರಿತದ ನಂತರ ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಸಹ ಲೇಖಕ ಆತಿಶ್ ತಸೀರ್ ಅವರು “ಭಾನುವಾರ ಅವರಿಗೆ ವೆಂಟಿಲೇಟರ್‌ ತೆಗೆಯಲಾಗಿದೆ ಮತ್ತು ಈಗ ಅವರು ಮಾತನಾಡುತ್ತಿದ್ದಾರೆ (ತಮಾಷೆ ಮಾಡುತ್ತಿದ್ದಾರೆ) ಎಂದು ಟ್ವೀಟ್ ಮಾಡಿದ್ದಾರೆ. … Continued

ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನದ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ಪದ್ಯದ ಸಾಲು ಉಲ್ಲೇಖಿಸಿ ಭಾರತಕ್ಕಾಗಿ ಸಂಪೂರ್ಣ ತ್ಯಾಗ ಮಾಡಲು ಕರೆ ನೀಡಿದ ರಾಷ್ಟ್ರಪತಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಕನ್ನಡದ ಅಪ್ರತಿಮ ಕವಿ ಕುವೆಂಪು ಅವರನ್ನು ಉಲ್ಲೇಖಿಸಿ ದೇಶವನ್ನು ಕಟ್ಟಲು ಉದ್ದೇಶಿಸಿರುವ ಯುವ ಸಮೂಹ ಮಾತೃಭೂಮಿ ಮತ್ತು ಸಹವರ್ತಿ ನಾಗರಿಕರ ಉನ್ನತಿಗಾಗಿ ಸಂಪೂರ್ಣ ತ್ಯಾಗ ಮಾಡುವಂತೆ ಕರೆ ನೀಡಿದ್ದಾರೆ. ಕನ್ನಡ ಭಾಷೆಯ ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ … Continued

ಹರ್ ಘರ್ ತಿರಂಗಾ: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಜಮ್ಮು-ಕಾಶ್ಮೀರದ ಭಯೋತ್ಪಾದಕರ ಕುಟುಂಬಗಳು…!

ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಪರ್ವತ ಪ್ರದೇಶವು ವಿಶಿಷ್ಟ ರೀತಿಯ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಸಾಕ್ಷಿಯಾಯಿತು, ತಲೆಮರೆಸಿಕೊಂಡಿರುವ ಭಯೋತ್ಪಾದಕರ ಕುಟುಂಬದ ಸದಸ್ಯರು ತಮ್ಮ ಮನೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಮೊದಲು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಮಿಲಿಟರಿ ಗುಪ್ತಚರದ ಪ್ರಕಾರ ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನೆಲೆಸಿರುವ ಅಥವಾ ಬೇರೆಡೆ ತಲೆಮರೆಸಿಕೊಂಡಿರುವ ಆದರೆ … Continued

ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಮಹಾರಾಷ್ಟ್ರ ಸಿಎಂ ಶಿಂಧೆ : ಡಿಸಿಎಂ ದೇವೇಂದ್ರ ಫಡ್ನವಿಸ್‌ಗೆ ಹಣಕಾಸು, ಗೃಹ ಖಾತೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಭಾನುವಾರ ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ (ಸಾರ್ವಜನಿಕ ಯೋಜನೆಗಳು) ಖಾತೆಗಳನ್ನು ಇಟ್ಟುಕೊಂಡು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ನಿರ್ಣಾಯಕ ಗೃಹ ಮತ್ತು ಹಣಕಾಸು ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಅವರ ಸಂಪುಟಕ್ಕೆ 18 ಸಚಿವರು ಸೇರ್ಪಡೆಗೊಂಡ ಐದು ದಿನಗಳ ನಂತರ ಮುಖ್ಯಮಂತ್ರಿ ಶಿಂಧೆ ಅವರು ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಶಿವಸೇನೆ … Continued

ಉದಯಿಸುತ್ತಿದೆ ನವ ಭಾರತ: ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ ರಾಷ್ಟ್ರಪತಿ ಮುರ್ಮು

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಹೊಸ ಭಾರತವು ಉದಯಿಸುತ್ತಿರುವುದನ್ನು ಜಗತ್ತು ನೋಡಿದೆ, ಅದರಲ್ಲಿಯೂ ವಿಶೇಷವಾಗಿ ಕೋವಿಡ್‌ ನಂತರ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಭಾನುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಆಗಸ್ಟ್ 14 ರ ದಿನವನ್ನು ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ಆಚರಿಸುವ ಉದ್ದೇಶ ಸಾಮಾಜಿಕ ಸಾಮರಸ್ಯ, ಮಾನವ … Continued

ದಾಂಡೇಲಿ: ಮೊಸಳೆ ಎಳೆದೊಯ್ದಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಿನ್ನೆ, ಶನಿವಾರ ಮೊಸಳೆಯ ಬಾಯಿಗೆ ಸಿಲುಕಿ ನಾಪತ್ತೆಯಾಗಿದ್ದ ವ್ಯಕ್ತಿ ಇಂದು, ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ದಾಂಡೇಲಿಯ ವಿನಾಯಕನಗರದ ಅಲೈಡ್ ಬಳಿ ಶನಿವಾರ ಈ ದುರ್ಘಟನೆ ನಡೆದಿತ್ತು.ಸುರೇಶ​ ವಸಂತ ತೇಲಿ (44) ಮೃತ ವ್ಯಕ್ತಿ. ಹೊಳೆದಂಡೆಯಲ್ಲಿ ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಮೊಸಳೆ ಎಳೆದುಕೊಂಡು ಹೋಗಿತ್ತು. ರಕ್ಷಣಾ ತಂಡದವರು ಮತ್ತು ಪೊಲೀಸರು … Continued

ಕೈರೋ ಕಾಪ್ಟಿಕ್ ಚರ್ಚ್‌ನಲ್ಲಿ ಪ್ರಾರ್ಥನೆ ವೇಳೆ ಬೆಂಕಿ ಅನಾಹುತ: 41 ಜನರು ಸಾವು, 14 ಮಂದಿಗೆ ಗಾಯ

ಕೈರೊ: ಭಾನುವಾರದ ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಗ್ರೇಟರ್ ಕೈರೊದ ಕಾರ್ಮಿಕ ವರ್ಗದ ಜಿಲ್ಲೆಯ ಕಾಪ್ಟಿಕ್ ಕ್ರೈಸ್ತ ಚರ್ಚ್‌ನಲ್ಲಿ ಬೆಂಕಿ ಅನಾಹುತದಲ್ಲಿ 40 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ. ಈಜಿಪ್ಟಿನ ಗೀಜಾ ಗವರ್ನರೇಟ್‌ನ ಭಾಗವಾದ ನೈಲ್ ನದಿಯ ಪಶ್ಚಿಮಕ್ಕೆ ಜನನಿಬಿಡ ಇಂಬಾಬಾ ಪಕ್ಕದಲ್ಲಿ ನೆಲೆಗೊಂಡಿರುವ ಅಬು ಸಿಫಿನ್ ಚರ್ಚ್‌ನಲ್ಲಿ ವಿದ್ಯುತ್ ದೋಷದಿಂದ … Continued

1984ರ ಆಪರೇಷನ್ ಮೇಘದೂತದ ವೇಳೆ ಹಿಮಕುಸಿತದಲ್ಲಿ ಹೂತು ಹೋಗಿದ್ದ ಸಿಯಾಚಿನ್ ವೀರನ ಪಾರ್ಥಿವ ಶರೀರ 38 ವರ್ಷಗಳ ನಂತರ ಪತ್ತೆ…!

ನವದೆಹಲಿ: ರಾಷ್ಟ್ರವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ ಮತ್ತು ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದವರ ತ್ಯಾಗವನ್ನು ಸ್ಮರಿಸುತ್ತಿರುವಾಗ ಭಾರತದ ಯೋಧರೊಬ್ಬರ ಪಾರ್ಥಿವ ಶರೀರ 38 ವರ್ಷಗಳ ಬಳಿಕ ಪತ್ತೆಯಾಗಿದೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿನ ಕುಟುಂಬಕ್ಕೆ 38 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಸಿಕ್ಕಿದೆ. ಸಿಯಾಚಿನ್‌ನಲ್ಲಿ 1984ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಮೇಘದೂತದ ಭಾಗವಾಗಿದ್ದ ಲ್ಯಾನ್ಸ್ ನಾಯಕ್ ಚಂದ್ರ … Continued

ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆ: ಕರ್ನಾಟಕದ 18 ಪೊಲೀಸ್​ ಅಧಿಕಾರಿಗಳಿಗೆ ಮೆರಿಟೋರಿಯಸ್​ ಅವಾರ್ಡ್​

ನವದೆಹಲಿ: ಪೊಲೀಸ್​ ಇಲಾಖೆಗೆ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರತಿವರ್ಷ ನೀಡಲಾಗುವ ವಿವಿಧ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಬಾರಿ ದೇಶದ ಒಟ್ಟು 1,082 ಪೊಲೀಸ್ ಸಿಬ್ಬಂದಿಯನ್ನು ಸ್ವಾತಂತ್ರ್ಯ ದಿನಾಚರಣೆಯ ಪದಕಗಳಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ 18 ಮಂದಿ ಪೊಲೀಸ್​ ಅಧಿಕಾರಿ ಹಾಗೂ ಪೊಲೀಸ್​ ಸಿಬ್ಬಂದಿಯನ್ನು ಮೆರಿಟೋರಿಸ್​ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಪದಕಗಳಿಗೆ … Continued

ಅಟಲ್​ ಪಿಂಚಣಿ ಯೋಜನೆಯಲ್ಲಿ ಬದಲಾವಣೆ: ಅಕ್ಟೋಬರ್‌ 1ರಿಂದ ಇವರಿಗೆ ಈ ಯೋಜನೆಗೆ ಸೇರಲು ಸಾಧ್ಯವಾಗುವುದಿಲ್ಲ

ನವದೆಹಲಿ: ಯೋಜನೆಯ ಪ್ರಯೋಜನಗಳು ಬಡವರು ಮತ್ತು ಹಿಂದುಳಿದವರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಆದಾಯ ತೆರಿಗೆದಾರರು ಈ ವರ್ಷದ ಅಕ್ಟೋಬರ್ 1ರಿಂದ ಅಟಲ್ ಪಿಂಚಣಿ ಯೋಜನೆ (ಎಪಿವೈ) ಪಡೆದುಕೊಳ್ಳುವುದನ್ನು ಕೇಂದ್ರ ಸರ್ಕಾರವು ನಿರ್ಬಂಧಿಸುತ್ತದೆ. ಆದಾಯ ತೆರಿಗೆ ಪಾವತಿಸುವ ವ್ಯಕ್ತಿಯು ಅಕ್ಟೋಬರ್ 1, 2022 ರಿಂದ ಅಟಲ್ ಪಿಂಚಣಿ ಯೋಜನೆ (ಎಪಿವೈ) ಖಾತೆಯನ್ನು ತೆರೆಯಲು ಅರ್ಹರಾಗಿರುವುದಿಲ್ಲ ಎಂದು ಹಣಕಾಸು ಸಚಿವಾಲಯ … Continued