3ನೇ ದಿನ ಸೋನಿಯಾ ಗಾಂಧಿಗೆ 3 ಗಂಟೆಗಳ ಕಾಲ ಇ.ಡಿ ವಿಚಾರಣೆ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೂರನೇ ದಿನದ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಕ್ತಾಯಗೊಳಿಸಿದೆ. ಸೋನಿಯಾ ಗಾಂಧಿ ಅವರನ್ನು ಇಂದು, ಬುಧವಾರ ಜಾರಿ ನಿರ್ದೇಶನಲಾಯ ( ಇ.ಡಿ) ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಸದ್ಯಕ್ಕೆ ಸೋನಿಯಾ ಗಾಂಧಿ ಅವರಿಗೆ … Continued

ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿಯ ಸಹಾಯಕಿ ಮನೆಯಲ್ಲಿ ಮತ್ತೆ ಹೆಚ್ಚಿನ ನಗದು ಪತ್ತೆ, ನೋಟು ಎಣಿಕೆ ಯಂತ್ರ ಒಯ್ದ ಇ.ಡಿ

ಕೋಲ್ಕತ್ತಾ: ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ 21 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡ ಕೆಲವು ದಿನಗಳ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೆಚ್ಚಿನ ಹಣವನ್ನು ಪತ್ತೆ ಮಾಡಿದ್ದಾರೆ. ಅರ್ಪಿತಾ ಅಪಾರ್ಟ್‌ಮೆಂಟ್‌ಗೆ ಅಧಿಕಾರಿಗಳು ನಗದು ಎಣಿಕೆ ಯಂತ್ರವನ್ನು ತೆಗೆದುಕೊಂಡು ಹೋಗಿದ್ದು, ಮಧ್ಯಾಹ್ನದಿಂದ ಶೋಧ ನಡೆಸಲಾಗುತ್ತಿದೆ. ಕಳೆದ … Continued

ರೋಶನಿ ನಾಡರ್ ಭಾರತದ ಶ್ರೀಮಂತ ಮಹಿಳೆ; ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆಯರಲ್ಲಿ ಫಲ್ಗುಣಿ ನಾಯರ್‌ಗೆ ಅಗ್ರಸ್ಥಾನ: ವರದಿ

ನವದೆಹಲಿ: ಎಚ್‌ಸಿಎಲ್‌ (HCL) ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡರ್ ಮಲ್ಹೋತ್ರಾ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ, 2021 ರಲ್ಲಿ ಅವರ ನಿವ್ವಳ ಮೌಲ್ಯ 54 ಪ್ರತಿಶತದಷ್ಟು ಜಿಗಿದು 84,330 ಕೋಟಿ ರೂ.ಗಳಾಗಿದೆ. ಸುಮಾರು ಒಂದು ದಶಕದ ಹಿಂದೆ ಸೌಂದರ್ಯ-ಕೇಂದ್ರಿತ ಬ್ರಾಂಡ್ ನೈಕಾ ಪ್ರಾರಂಭಿಸಲು ತನ್ನ ಹೂಡಿಕೆಯ ಬ್ಯಾಂಕಿಂಗ್ ವೃತ್ತಿಯನ್ನು ತೊರೆದ … Continued

38 ತೃಣಮೂಲ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಹೊಸ ಬಾಂಬ್‌ ಸಿಡಿಸಿದ ಮಿಥುನ್ ಚಕ್ರವರ್ತಿ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ ಮೂರು ಡಜನ್‌ಗಿಂತಲೂ ಹೆಚ್ಚು ಬಂಗಾಳದ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಟ ಮಿಥುನ್ ಚಕ್ರವರ್ತಿ ಹೇಳಿದ್ದಾರೆ. ಶಿಕ್ಷಕರ ನೇಮಕಾತಿ ದೊಡ್ಡ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷದ ಸಚಿವರು ಮತ್ತು ಅವರ ಸಹಾಯಕಿ ಬಂಧನದಿಂದ ಪಕ್ಷದೊಳಗೆ ಭಾರೀ ಅಸಮಾಧಾನ ಉಂಟಾಗಿದೆ ಎಂದು ಹೇಳಿದ್ದಾರೆ. “ನಾನು ನಿಮಗೆ ಎಲ್ಲಾ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ. ಈ … Continued

ಹಿಂದೂ ಕಾರ್ಯಕರ್ತರ ಹತ್ಯೆ; ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ರಾಜೀನಾಮೆ ನೀಡುವೆ ಎಂದ ರೇಣುಕಾಚಾರ್ಯ

ಬೆಂಗಳೂರು: ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಕಾರ್ಯಕರ್ತನನ್ನು ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ ಕೆಲವೇ ಗಂಟೆಗಳ ನಂತರ, ರಾಜ್ಯವು ಹತ್ಯೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜೀನಾಮೆ ನೀಡುವುದಾಗಿ ರಾಜ್ಯ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ … Continued

ಪ್ರವೀಣ ಹತ್ಯೆ ಪ್ರಕರಣ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು

ಪುತ್ತೂರು: ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ನೆಟ್ಟಾರ ಅವರ ಅಂತಿಮ ದರ್ಶನದ ಮೇಳೆ ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸದ್ಯ ಬೆಳ್ಳಾರೆ ಪರಿಸರದಲ್ಲಿ ಸ್ಥಿತಿ ಬಿಗುವಿನಿಂದ ಕೂಡಿದೆ. ಪ್ರವೀಣ್ ನೆಟ್ಟಾರು ಅವರ ಮನೆಗೆ … Continued

ಯಾವುದೇ ಸುರಕ್ಷತಾ ಸಲಕರಣೆಯಿಲ್ಲದೆ ಸರಸರನೆ ಕಡಿದಾದ ಪರ್ವತ ಏರುವ ಸನ್ಯಾಸಿ: ಬೆರಾಗದ ಇಂಟರ್ನೆಟ್ | ವೀಕ್ಷಿಸಿ

ಸನ್ಯಾಸಿಯೊಬ್ಬರು ಕಡಿದಾದ ಪರ್ವತವನ್ನು ಏರುತ್ತಿರುವ ಹಳೆಯ ವೀಡಿಯೊ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಆಶ್ಚರ್ಯವೇನಿದೆ ಎಂದು ಅನ್ನಿಸಬಹುದು. ಆದರೆ ಸನ್ಯಾಸಿಯು ಯಾವುದೇ ಸುರಕ್ಷತಾ ಸರಂಜಾಮು ಇಲ್ಲದೆ ಕಡಿದಾದ  ಪರ್ವತವನ್ನು ಏರುವುದನ್ನು ನೋಡಬಹುದು ಮತ್ತು ಸಲೀಸಾಗಿ ಹಾಗೂ ಸಹಜವಾಗಿ ಕಡಿದಾದ ದಾರಿಯಲ್ಲಿ ಸನ್ಯಾಸಿ ಸಾಗುತ್ತಾನೆ. ಈ ವೀಡಿಯೊವನ್ನು ತನ್ಸು ಯೆಗೆನ್ ಟ್ವಿಟ್ಟರ್ ನಲ್ಲಿ ಪೋಸ್ಟ್ … Continued

ದಂಪತಿಗಳಿಗಾಗಿ ಇದ್ದ ‘ಟ್ಯೂನ್ಡ್’ ಆ್ಯಪ್​ಗೆ ವಿದಾಯ ಹೇಳಲಿರುವ ಫೇಸ್​ಬುಕ್

ನವದೆಹಲಿ: ಪ್ರಾರಂಭವಾದ ಎರಡು ವರ್ಷಗಳ ನಂತರ, ಟೆಕ್ ದೈತ್ಯ ಮೆಟಾ ದಂಪತಿಗಳಿಗಾಗಿ `ಟ್ಯೂನ್ಡ್` ಎಂಬ ಸಾಮಾಜಿಕ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಬಳಕೆದಾರರು ಕಳೆದ ವಾರ ಶೀಘ್ರವೇ ಸ್ಥಗಿತಗೊಳಿಸುವ ಕುರಿತು ಅಧಿಸೂಚನೆಯನ್ನು ಸ್ವೀಕರಿಸಲು ಪ್ರಾರಂಭಿಸಿದರು, ಸೆಪ್ಟೆಂಬರ್ 19 ರ ಮೊದಲು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಲು ಸಲಹೆ ನೀಡಲಾಗಿದೆ, ಅಪ್ಲಿಕೇಶನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಟೆಕ್‌ರೆಂಚ್‌ … Continued

ಆಪ್ಟಿಕಲ್ ಇಲ್ಯೂಷನ್: ಈ ಮರದ ದಿಮ್ಮಿಗಳ ರಾಶಿಯಲ್ಲಿ ಮಲಗಿರುವ ಬೆಕ್ಕನ್ನು ಗುರುತಿಸುವಿರಾ..?

ನಾವೆಲ್ಲರೂ ಒಗಟು ಬಿಡಿಸುವುದನ್ನು ಇಷ್ಟಪಡುತ್ತೇವೆ. ಆಪ್ಟಿಕಲ್ ಭ್ರಮೆಗಳು ಮತ್ತು ಚಿತ್ರದ ಒಗಟುಗಳು ಸಾಮಾನ್ಯವಾಗಿ ವೈರಲ್ ಆಗುತ್ತವೆ ಮತ್ತು ತಕ್ಷಣವೇ ಎಲ್ಲರ ಗಮನವನ್ನು ಸೆಳೆಯುತ್ತವೆ ಏಕೆಂದರೆ ಅವುಗಳನ್ನು ಕಂಡುಹಿಡಿಯಲು ವಿನೋದಮಯ ಆಗಿರುತ್ತವೆ. ಕೆಲವು ವಿಷಯಗಳು ನಮ್ಮ ಮುಂದೆ ಹೇಗೆ ಇವೆ ಎಂಬುದನ್ನು ಗಮನಿಸುವುದು ಆಸಕ್ತಿದಾಯಕವಾಗುತ್ತದೆ. ಆದರೂ ಅವುಗಳನ್ನು ಗುರುತಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈಗ, ಸಾಮಾಜಿಕ ಮಾಧ್ಯಮದಲ್ಲಿ … Continued

ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ 12ನೇ ತರಗತಿ ಪರೀಕ್ಷೆಯಲ್ಲಿ 97.75% ಅಂಕ ಪಡೆದ ಈ ವಿದ್ಯಾರ್ಥಿನಿ…!

ಲಕ್ನೋ: ಕ್ಯಾನ್ಸರ್‌ನಿಂದ ಬಳಲುತ್ತಿರುವ 17 ವರ್ಷದ ಬಾಲಕಿ ಈ ವರ್ಷ ಐಎಸ್‌ಸಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ.97.75 ಅಂಕ ಗಳಿಸಿದ್ದಾಳೆ. ಉತ್ತರ ಪ್ರದೇಶದ ಲಕ್ನೋ ಮೂಲದ ಪ್ರಮಿತಾ ತಿವಾರಿಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಕ್ಯೂಟ್ ಮೈನರ್ ಲ್ಯುಕೇಮಿಯಾ ಇರುವುದು ಪತ್ತೆಯಾಗಿತ್ತು. ಬಹುತೇಕರು ಅವಳ ಭವಿಷ್ಯವು ಕತ್ತಲೆಯಾಗುತ್ತದೆ ಎಂದು ಭಾವಿಸಿದ್ದರು. ಆದರೆ ಈ ಹುಡುಗಿ ಕೆಚ್ಚೆದೆಯ ಹೋರಾಟ … Continued